ಕ್ಷೇತ್ರ ಪರಿಚಯ: ಕಲಬುರಗಿ ದಕ್ಷಿಣದಲ್ಲಿ ಬಿಜೆಪಿ ಗೆಲುವು ನಿಚ್ಛಳ

2008ರಲ್ಲಿ ಈ ಕ್ಷೇತ್ರವನ್ನು ಹೊಸದಾಗಿ ಸೃಷ್ಟಿ ಮಾಡಲಾಯಿತು. ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹಳೆಯ ಗುಲ್ಬರ್ಗಾ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದ ಬಿಜೆಪಿಯ ಚಂದ್ರಶೇಖರ್ ಪಾಟೀಲ್ ರೇವೂರ ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ಬಂದು ಬಿಜೆಪಿಯಿಂದ ಸ್ಪರ್ಧಿಸಿ ಜಯ ಸಾಧಿಸಿದರು.

2010ರಲ್ಲಿ ಅವರು ಸಾವನ್ನಪ್ಪಿದ್ದರಿಂದ ಮರು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿಯ ಶಶೀಲ್ ಜಿ. ನಮೋಜಿಯವರಿಗೆ ಟಿಕೆಟ್ ನೀಡಿದರೆ ಜೆಡಿಎಸ್ ಚಂದ್ರಶೇಖರ್ ಪಾಟೀಲ್ ಪತ್ನಿ ಅರುಣಾ ಪಾಟೀಲ್ ಗೆ ಟಿಕೆಟ್ ನೀಡಿ ಅನುಕಂಪದ ಅಲೆಯಲ್ಲಿ ಗೆಲುವಿನ ಬಾವುಟ ಹಾರಿಸಿತು.

2013ರ ಹೊತ್ತಿಗೆ ರಾಜ್ಯವ್ಯಾಪಿ ಆಡಳಿತ ವಿರೋಧಿ ಅಲೆ ಬಲವಾಗಿ ಬೀಸುತ್ತಿದ್ದರೂ ಮರಳಿ ಕಲಬುರಗಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.

Karnataka Assembly Election 2018: Kalaburagi (Gulbarga) Dakshin Constituency Profile

ಈ ಚುನಾವಣೆಯಲ್ಲಿ ಜೆಡಿಎಸ್ ಅರುಣಾ ಪಾಟೀಲ್ ಪುತ್ರ ದತ್ತಾತ್ರೇಯ ಪಾಟೀಲ್ ರೇವೂರಗೆ ಟಿಕೆಟ್ ನೀಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಗೆ ಕೈ ಕೊಟ್ಟು ದತ್ತಾತ್ರೇಯ ಪಾಟೀಲ್ ರೇವೂರ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿಯ ಹಳೆ ಹುಲಿ ಶಶೀಲ್ ಜಿ. ನಮೋಶಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದರು. ಆದರೆ ಅವರು 10 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು ಕಾಣಬೇಕಾಯಿತು.

ಹಾಗೆ ನೋಡಿದರೆ ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿ ಹಿಡಿತ ಹೊಂದಿರುವ ಏಕೈಕ ಕ್ಷೇತ್ರ ಕಲಬುರಗಿ ದಕ್ಷಿಣ. ಕಳೆದ ಬಾರಿ ಇಲ್ಲಿ ಹಿರಿಯ ರಾಜಕಾರಣಿ ಎಸ್.ಕೆ ಕಾಂತ ಕೆಜೆಪಿಯಿಂದ ಕಣಕ್ಕಿಳಿದು 22 ಸಾವಿರ ಮತ ಪಡೆದಾಗಲೂ ಬಿಜೆಪಿ ಅಭ್ಯರ್ಥಿ ಇಲ್ಲಿ ಗೆದ್ದಿದ್ದೇ ಇದಕ್ಕೆ ಸಾಕ್ಷಿ.

ಜತೆಗೆ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ರಾಜಕಾರಣಿಗಳಾದ ಮಲ್ಲಿಕಾರ್ಜುನ್ ಖರ್ಗೆ ಮತ್ತು ದಿವಂಗತ ಧರಂ ಸಿಂಗ್ ಇಮೇಜ್ ನ ಮಧ್ಯೆಯೂ ಕಾಂಗ್ರೆಸ್ ಗೆ ಇಲ್ಲಿ ಒಮ್ಮೆಯೂ ಗೆದ್ದಿಲ್ಲ ಎನ್ನುವುದೂ ಅಷ್ಟೇ ಸತ್ಯ.

ಸದ್ಯ ಶಶೀಲ್ ಜಿ. ನಮೋಜಿ ಬಿಜೆಪಿಗೆ ಮರಳಿದ್ದಾರೆ. ಕೆಜೆಪಿ-ಬಿಜೆಪಿ ಒಂದಾಗಿದೆ. ಇನ್ನೊಂದು ಕಡೆ ಶಶೀಲ್ ಜಿ. ನಮೋಶಿ ನಿರ್ಗಮನದಿಂದ ಜೆಡಿಎಸ್ ಕೂಡ ಅಭ್ಯರ್ಥಿ ಕಳೆದುಕೊಂಡು ಇಲ್ಲಿ ದುರ್ಬಲವಾಗಿದೆ.

ಹೀಗೆ ಎಲ್ಲಾ ಕೋನಗಳಿಂದ ನೋಡಿದರೂ ಇಲ್ಲಿ ಈ ಬಾರಿಯೂ ಬಿಜೆಪಿ ಗೆಲುವಿನ ಬಾವುಟ ಹಾರಿಸುವ ಸಾಧ್ಯತೆಗಳೇ ಹೆಚ್ಚಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+