ಕ್ಷೇತ್ರ ಪರಿಚಯ : 'ಜಯಸಿಂಹ' ನಗರದಲ್ಲಿ ಯಾರಿಗೆ ಜಯ?
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿಗೆ ಹಿಂದೆ ಜಯಸಿಂಹ ನಗರ ಎಂಬ ಹೆಸರೂ ಇತ್ತು. ಆದರೆ, ನಿಜಾಮನ ಕಾಲದಿಂದ ಬಂದ ಹುಮ್ನಾಬಾದ್ ಹೆಸರು ಈಗಲೂ ಚಾಲ್ತಿಯಲ್ಲಿದೆ. ಲಿಂಗಾಯತ ಮತ್ತು ಮುಸ್ಲಿಂ ಸಮುದಾಯದವರು ಪ್ರಬಲವಾಗಿದ್ದು, ಚುನಾಣೆಯಲ್ಲಿ ನಿರ್ಣಾಯಕರು.
ಪಟ್ಟಣದ ಮೂಲಕ ಹೈದರಾಬಾದ್-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ, ಕಲಬುರಗಿ-ಬೀದರ್ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಆದ್ದರಿಂದ, ವ್ಯಾಪಾರ ಚಟುವಟಿಕೆಗಳು ಜೋರಾಗಿವೆ.

ಬೀದರ್ ಜಿಲ್ಲೆಯ ದಕ್ಷಿಣ ದಿಕ್ಕಿನಲ್ಲಿದೆ ಹುಮ್ನಾಬಾದ್. ಇಲ್ಲಿನ ಒಟ್ಟು ಮತದಾರರು 1,96, 202. ಲಿಂಗಾಯತ ಮತ್ತು ಮುಸ್ಲಿಂ ಸಮುದಾಯದವರು ಯಾರು ಶಾಸಕರು ಆಗಬೇಕು? ಎಂದು ನಿರ್ಧರಿಸುತ್ತಾರೆ.
ಹುಮ್ನಾಬಾದ್ ತಾಲೂಕಿನಲ್ಲಿ ಹೈದರಾಬಾದ್-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ, ಕಲಬುರಗಿ-ಬೀದರ್ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಕೆಂಪು ಮಿಶ್ರಿತ ಮಣ್ಣಿನ ಭೂಮಿಯನ್ನು ತಾಲೂಕು ಹೊಂದಿದೆ. ಶೇಂಗಾ, ಜೋಳ, ಗೋಧಿ, ಕಡಲೆ, ಕಬ್ಬು, ತೊಗರಿ ಮುಂತಾದವುಗಳನ್ನು ಇಲ್ಲಿ ಬೆಳೆಯಲಾಗುತ್ತದೆ.
ಎಲ್ಲಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿರುವ ಕ್ಷೇತ್ರ ಹುಮ್ನಾಬಾದ್. ಈ ಬಾರಿಯ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರವಿದು. 2013ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಏಳು ಸಾವಿರಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿರಲಿಲ್ಲ.
ಸಿಪಿಐ, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಹೀಗೆ ಎಲ್ಲಾ ಪಕ್ಷದ ಅಭ್ಯರ್ಥಿಗಳನ್ನು ಕ್ಷೇತ್ರ ಗೆಲ್ಲಿಸಿದೆ. ಯಡಿಯೂರಪ್ಪ ಅವರ ವರ್ಚಸ್ಸು, ಮೋದಿ ಅಲೆ ಕೆಲಸ ಮಾಡಿದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಬಹುದಾಗಿದೆ.
ಹಾಲಿ ಶಾಸಕ ರಾಜಶೇಖರ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಖಚಿತವಾಗಿದ್ದು, ಬಿಜೆಪಿ ಅಭ್ಯರ್ಥಿ ಯಾರು? ಎನ್ನುವುದರ ಮೇಲೆ ಪೈಪೋಟಿ ನಿರ್ಧಾರವಾಗಲಿದೆ.
2103ರ ಚುನಾವಣೆಯಲ್ಲಿ ರಾಜಶೇಖರ ಬಸವರಾಜ ಪಾಟೀಲ್ 64,694 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಎಂ.ನಸೀವುದ್ದೀನ್ ಪಟೇಲ್ 40,194, ಬಿಜೆಪಿಯ ಪದ್ಮಾಕರ ಪಾಟೀಲ್ 6,604.












Click it and Unblock the Notifications