ಕ್ಷೇತ್ರ: ಬರದ ನಾಡಿನ ವೈವಿಧ್ಯಮಯ ಕ್ಷೇತ್ರ ಹಿರಿಯೂರು
ವೇದಾವತಿ ನದಿ ದಂಡೆಯ ಹಿರಿಯೂರು ಕ್ಷೇತ್ರದಲ್ಲಿ ಮಾರಿಕಣಿವೆಯ ಬೆಟ್ಟ ಗುಡ್ಡಗಳ ಸಾಲು, ವಾಣಿ ವಿಲಾಸ ಸಾಗರವಿದೆ. ಖನಿಜ ಭೂಮಿ, ಅರಣ ಪ್ರದೇಶ, ನಾಲೆಗಳ ನೆರವಿನಿಂದ ಕಬ್ಬು, ಹತ್ತಿ,ಜೋಳ, ರಾಗಿ, ಬತ್ತ, ತೊಗರಿ, ಕಬ್ಬು, ಹತ್ತಿ, ತೈಲಬೀಜಗಳು, ಅಡಕೆ, ಸೂರ್ಯಕಾಂತಿ ಬೆಳೆ ತೆಗೆಯುತ್ತಾರೆ.
ಈ ಹಿಂದೆ ಇಲ್ಲಿದ್ದ ಸಕ್ಕರೆ ಕಾರ್ಖಾನೆ ಈಗ ಇಲ್ಲ. ತೇರುಮಲ್ಲೇಶ್ವರ ಸ್ವಾಮಿ, ರಂಗನಾಥ ಸ್ವಾಮಿ, ವೀರಭದ್ರ ಸ್ವಾಮಿ, ಮಾರಮ್ಮ ಹೀಗೆ ಅನೇಕ ದೇವರಿಗೆ ಇಲ್ಲಿನ ಜನ ನಡೆದುಕೊಳ್ಳುತ್ತಾರೆ.
ಚಳ್ಳಕೆರೆಯ ಒಂದು ಕಾಲದ ಶಾಸಕ ಜಯಣ್ಣ ಅವರ ಪುತ್ರರಾದ ಸುಧಾಕರ್, ಮಾಜಿ ಸಚಿವರೂ ಹೌದು. ಅವರೇ ಈಗ ಹಿರಿಯೂರು ಕ್ಷೇತ್ರದ ಶಾಸಕ. ಈ ಜಿಲ್ಲೆಯಲ್ಲಿ ಕುರುಬರ ಕೈ ಮೇಲಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಹಾಗಾಗಿ, ಕಳೆದ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಅವರ ಬೆಂಬಲ ಹುಟ್ಟಿಕೊಂಡಿತ್ತು. ಹಾಗಾಗಿ, ಕಾಂಗ್ರೆಸ್ ಪರ ಚುನಾವಣೆಗಿಳಿದ ಸುಧಾಕರ್ ಚುನಾವಣೆ ಗೆದ್ದಿದ್ದರು.

ವೇದಾವತಿ ನದಿ ದಂಡೆಯ ಹಿರಿಯೂರು ಕ್ಷೇತ್ರ
ವೇದಾವತಿ ನದಿ ದಂಡೆಯ ಹಿರಿಯೂರು ಕ್ಷೇತ್ರದಲ್ಲಿ ಮಾರಿಕಣಿವೆಯ ಬೆಟ್ಟ ಗುಡ್ಡಗಳ ಸಾಲು, ವಾಣಿ ವಿಲಾಸ ಸಾಗರವಿದೆ. ಖನಿಜ ಭೂಮಿ, ಅರಣ ಪ್ರದೇಶ, ನಾಲೆಗಳ ನೆರವಿನಿಂದ ಕಬ್ಬು, ಹತ್ತಿ,ಜೋಳ, ರಾಗಿ, ಬತ್ತ, ತೊಗರಿ, ಕಬ್ಬು, ಹತ್ತಿ, ತೈಲಬೀಜಗಳು, ಅಡಕೆ, ಸೂರ್ಯಕಾಂತಿ ಬೆಳೆ ತೆಗೆಯುತ್ತಾರೆ.
ಈ ಹಿಂದೆ ಇಲ್ಲಿದ್ದ ಸಕ್ಕರೆ ಕಾರ್ಖಾನೆ ಈಗ ಇಲ್ಲ. ತೇರುಮಲ್ಲೇಶ್ವರ ಸ್ವಾಮಿ, ರಂಗನಾಥ ಸ್ವಾಮಿ, ವೀರಭದ್ರ ಸ್ವಾಮಿ, ಮಾರಮ್ಮ ಹೀಗೆ ಅನೇಕ ದೇವರಿಗೆ ಇಲ್ಲಿನ ಜನ ನಡೆದುಕೊಳ್ಳುತ್ತಾರೆ.

ಸುಧಾಕರ್ 'ಕೈ' ಹಿಡಿಯಲು ಸಾಧ್ಯವಿಲ್ಲ?
ಈ ಬಾರಿಯೂ ಅಲ್ಲಿ ಕುರುಬರು, ಕಾಂಗ್ರೆಸ್ ಗೆ ಸ್ನೇಹ ಹಸ್ತ ಚಾಚಲು ಸಿದ್ಧರಿದ್ದರೂ, ಸುಧಾಕರ್ 'ಕೈ' ಹಿಡಿಯಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಏಕೆಂದರೆ, ಅವರ ಗೆಲುವಿನ ಹೊರತಾಗಿಯೂ ಸುಧಾಕರ್ ಅಲ್ಲಿ ಕುರುಬರಿಗಾಗಿ ಏನನ್ನೂ ಮಾಡಲಿಲ್ಲ ಎಂಬ ಆರೋಪ ಅವರ ಮೇಲಿದೆ. ಹಾಗಾಗಿ, ಈಗ ಕಾಂಗ್ರೆಸ್, ಯಾರನ್ನು ಅಲ್ಲಿ ಕಣಕ್ಕಿಳಿಸಲಿದೆ ಎಂದು ಕಾದು ನೋಡಬೇಕಿದೆ. ಹಾಗೊಂದು ವೇಳೆ, ಸುಧಾಕರ್ ಅವರು ಕಣಕ್ಕಿಳಿದರೆ ಅವರಿಗೆ ಈ ಬಾರಿ ದೊಡ್ಡ ಪ್ರತಿಸ್ಪರ್ಧಿಗಳು ಇರಲಿದ್ದಾರೆ.

ತಿಪ್ಪಾರೆಡ್ಡಿ ಕಣಕ್ಕಿಳಿಯಲು ಪ್ರಯತ್ನಿಸುತ್ತಿದ್ದಾರೆ
ಬಿಜೆಪಿ ಪರವಾಗಿ, ಹಾಲಿ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಕಣಕ್ಕಿಳಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರನ್ನು ಬಿಟ್ಟು ಮಾಜಿ ಸಚಿವ ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ ಅಥವಾ ಅವರ ಪತಿ ಶ್ರೀನಿವಾಸ್ ಅವರಿಗೆ ಸಿಗಬಹುದು ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಕುರುಬರು, ಒಕ್ಕಲಿಗರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಯಾದವ ಸಮುದಾಯದ ಬೆಂಬಲ ಪೂರ್ಣಿಮಾ ಕುಟುಂಬಕ್ಕಿದೆ. ಇದು ಬಿಜೆಪಿ ಕೇಂದ್ರ ಕಚೇರಿಗೂ ಗೊತ್ತು.
ಇನ್ನು, ಸಂಖ್ಯೆಯಲ್ಲಿ ಕ್ಷೇತ್ರದ ಮೂರನೇ ಸ್ಥಾನದಲ್ಲಿರುವ ಒಕ್ಕಲಿಗರು ಜೆಡಿಎಸ್ ಕಡೆ ಒಲವು ಹೊಂದಿದ್ದು, ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.

2013ರ ಫಲಿತಾಂಶ
ಇನ್ನು, ಕ್ಷೇತ್ರದ ಪ್ರಭಾವಿ ವ್ಯಕ್ತಿ, ಕುಂಚಿಟಿಗ ಸಮುದಾಯದ ನಾಯಕ ಬಿ.ಎಲ್. ಗೌಡ, ಚುನಾವಣೆಗೆ ಧುಮುಕಲು ಸಿದ್ಧವಾಗಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಅವರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆಂಬುದು ತಿಳಿದಿಲ್ಲ.
2013ರ ಫಲಿತಾಂಶ: 2013ರಲ್ಲಿ ಶೇ 74.25ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ಸಿನ ಡಿ. ಸುಧಾಕರ್ ಅವರು 71,661 ಮತಗಳನ್ನು ಗಳಿಸಿ ಜಯ ಗಳಿಸಿದ್ದರು. ಜೆಡಿಎಸ್ ನ ಅಭ್ಯರ್ಥಿ ಎ. ಕೃಷ್ಣಪ್ಪ ಅವರು 70,456 ಮತಗಳನ್ನು ಗಳಿಸಿ, 1205 ಮತಗಳ(ಶೇ 0.75 ರಷ್ಟು) ಕಡಿಮೆ ಅಂತರದಿಂದ ಸೋಲು ಕಂಡಿದ್ದರು.












Click it and Unblock the Notifications