ಕ್ಷೇತ್ರ ಪರಿಚಯ : ಕಾರಂಜಾ ನದಿ ತಟದ ಕ್ಷೇತ್ರ ಭಾಲ್ಕಿ

Posted By: Gururaj
Subscribe to Oneindia Kannada

ಬೀದರ್ ಜಿಲ್ಲೆಯ ತಾಲೂಕು ಕೇಂದ್ರ ಭಾಲ್ಕಿ. ಕಾರಂಜಾ ನದಿಯ ತಟದಲ್ಲಿರುವ ಕ್ಷೇತ್ರವಿದು. ಭಾಲ್ಕೇಶ್ವರ ದೇವಾಲಯ, ಖಡಕೇಶ್ವರ, ಹಿರೇಮಠ ಸಂಸ್ಥಾನಗಳಿಂದಾಗಿ ಕ್ಷೇತ್ರ ಗಮನ ಸೆಳೆಯುತ್ತದೆ.

ಜಿಲ್ಲಾ ಕೇಂದ್ರ ಬೀದರ್‌ನಿಂದ 35 ಕಿ.ಮೀ. ದೂರದಲ್ಲಿದೆ ಭಾಲ್ಕಿ. ಇಲ್ಲಿನ ಆಡಳಿತ ಭಾಷೆ ಕನ್ನಡ. ಆದರೆ, ಹಿಂದಿ, ಮರಾಠಿ, ಉರ್ದು ಭಾಷೆಯನ್ನು ಮಾತನಾಡುವ ಜನರು ಇಲ್ಲಿ ಸಿಗುತ್ತಾರೆ.

ಕ್ಷೇತ್ರ ಪರಿಚಯ : 'ನೈಸ್' ಮುಖ್ಯಸ್ಥರನ್ನು ಗೆಲ್ಲಿಸಿದ ಕ್ಷೇತ್ರವಿದು!

ಲಿಂಗಾಯತ ಸಮುದಾಯಕ್ಕೆ ಸೇರಿದ ಖಂಡ್ರೆ ಅವರ ಕುಟುಂಬದವರೇ ಇಲ್ಲಿ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ವಿಸ್ತರಣೆ ಮಾಡುವ ಸಮಯದಲ್ಲಿ ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿದು ಬಂದಿದೆ.

Karnataka Assembly Election 2018 : Bhalki constituency profile

ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾಗಿರುವ ಈಶ್ವರ ಖಂಡ್ರೆ ಕ್ಷೇತ್ರದ ಶಾಸಕರು. ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಪ್ರಕಾಶ ಖಂಡ್ರೆ ಅವರು ಬಿಜೆಪಿ ಅಭ್ಯರ್ಥಿ ಎಂದು ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಈಶ್ವರ ಖಂಡ್ರೆ ಅವರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವುದರಲ್ಲಿ ಅನುಮಾನವೇ ಇಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ನಡುವಿನ ಮತ ವಿಭಜನೆ ಕಾರಣದಿಂದ ಸುಲಭವಾಗಿ ಗೆಲುವು ಕಂಡವರು ಈಶ್ವರ ಖಂಡ್ರೆ. ಈಗ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಆದ್ದರಿಂದ, ಸೋಲಿಸರು ವಿರೋಧ ಪಕ್ಷಗಳು ಹೆಚ್ಚು ಶ್ರಮ ಪಡಬೇಕು.

ಈಶ್ವರ ಖಂಡ್ರೆ ಅವರು 2013ರ ಚುನಾವಣೆಯಲ್ಲಿ 58,012 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕೆಜೆಪಿ-ಬಿಜೆಪಿ ಎರಡೂ ಪಕ್ಷಗಳು ವಿಲೀನವಾಗಿವೆ. ಆದ್ದರಿಂದ, ಬಿಜೆಪಿ-ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾಲ್ಕಿ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಗಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ? ಎಂದು ಕಾದು ನೋಡಬೇಕಿದೆ.

2013ರ ಚುನಾವಣೆಯಲ್ಲಿ ಈಶ್ವರ ಖಂಡ್ರೆ 58,012 ಮತಗಳನ್ನು ಪಡೆದಿದ್ದರು. ಬಿಜೆಪಿಯ ಪ್ರಕಾಶ ಖಂಡ್ರೆ 29,694 ಮತ, ಜೆಡಿಎಸ್‌ನ ಜನಾರ್ದನ 2,255 ಮತಗಳನ್ನು ಪಡೆದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018 : Read all about Bhalki constituency of Bidar district. Get election news from Bhalki. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ