ಸರ್ವಜ್ಞನಗರ ಕ್ಷೇತ್ರ ಪರಿಚಯ: ಜಾರ್ಜ್ ಹ್ಯಾಟ್ರಿಕ್ ಕನಸಿಗೆ ಬೀಳುತ್ತಾ ಕಡಿವಾಣ?
ಕನ್ನಡದ ಮಹಾಕವಿ ಸರ್ವಜ್ಞನ ಹೆಸರನ್ನು ಹೊಂದಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ವಿರಳ. ನೆರೆಯ ರಾಜ್ಯಗಳಿಂದ ವಲಸೆ ಬಂದ ಜನರೇ ಇಲ್ಲಿನ ನಿವಾಸಿಗಳು. ತಮಿಳು ಮತ್ತು ಉರ್ದು ಭಾಷಿಕರು ಇಲ್ಲಿ ಹೆಚ್ಚಿದ್ದಾರೆ. ಆಧುನಿಕತೆಯ ಬೆಡಗು ಮತ್ತು ಬಡತನದ ಕೊರಗು ಎರಡಕ್ಕೂ ಸಮ ಪ್ರಮಾಣದಲ್ಲಿ ಜಾಗ ಕಲ್ಪಿಸಿರುವ ಸರ್ವಜ್ಞನಗರ ಕ್ಷೇತ್ರ, ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ಕೆಲ ಸಮಯದಿಂದ ಚರ್ಚೆಯಲ್ಲಿದೆ.
ಇಲ್ಲಿಂದ ಸತತ ಎರಡು ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಸಚಿವ ಕೆ.ಜೆ. ಜಾರ್ಜ್, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ವಿವಾದ ಸೇರಿದಂತೆ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಜಾರ್ಜ್ ವಿರುದ್ಧದ ಹೋರಾಟವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ, ಈ ಬಾರಿ ಅವರನ್ನು ಸೋಲಿಸಲೇಬೇಕೆಂಬ ಪಣತೊಟ್ಟಿದೆ. ಆದರೆ, ಅಲ್ಪಸಂಖ್ಯಾತರು ಮತ್ತು ಕಾಂಗ್ರೆಸ್ ಮತಗಳು ಹೆಚ್ಚಿರುವ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವುದು ಬಿಜೆಪಿಗೆ ಸುಲಭವಲ್ಲ.
ವಾರ್ಡ್‌ಗಳು: ನಾಗವಾರ, ಎಚ್‌ಬಿಆರ್ ಲೇಔಟ್, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ ಮತ್ತು ಮಾರುತಿ ಸೇವಾನಗರ ಈ ವಿಧಾನಸಭಾ ಕ್ಷೇತ್ರದಲ್ಲಿರುವ ವಾರ್ಡ್‌ಗಳಾಗಿವೆ. ಎಂಟು 4ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ನಾಲ್ಕು ವಾರ್ಡ್‌ಗಳಲ್ಲಿ ಅಧಿಕಾರದಲ್ಲಿವೆ. ಹೀಗಾಗಿ ಎರಡು ಪಕ್ಷಗಳ ನಡುವೆ ಪೈಪೋಟಿ ನಿರೀಕ್ಷಿಸಬಹುದು.

2013ರಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ನ ಅನ್ವರ್ ಷರೀಫ್ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಎಎಪಿಯ ಪೃಥ್ವಿ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಪದ್ಮನಾಭ ರೆಡ್ಡಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಬಯಸಿದ್ದರೂ, ಅವರು ಸ್ಪರ್ಧಿಸಲು ನಿರಾಕರಿಸಿದ್ದಾರೆ.
ಸಮಸ್ಯೆಗಳು:
ಕಮ್ಮನಹಳ್ಳಿ, ಮಾರುತಿಸೇವಾನಗರ, ಬಾಣಸವಾಡಿ, ಎಚ್‌ಬಿಆರ್ ಲೇಔಟ್ ಮುಂತಾದವುಗಳಲ್ಲಿ ಸಿರಿವಂತರು ಹಾಗೂ ಮಧ್ಯಮವರ್ಗದ ಜನರು ಹೆಚ್ಚಿದ್ದಾರೆ. ದೊಡ್ಡಮಟ್ಟದ ವ್ಯಾಪಾರ ವಹಿವಾಟು ಈ ಪ್ರದೇಶಗಳಲ್ಲಿ ನಡೆಯುತ್ತದೆ. ಈಗಲೂ ನೆರೆಯ ರಾಜ್ಯಗಳಿಂದ ಕೆಲಸ ಅರಸಿ ಬರುವ ಹೆಚ್ಚಿನ ಮಂದಿ ಆಶ್ರಯ ಪಡೆದುಕೊಳ್ಳುವುದು ಈ ಭಾಗದಲ್ಲಿಯೇ.
ಥಳಕು ಬಳುಕಿನ ಜಗತ್ತಿಗೂ ತೆರೆದುಕೊಂಡಿರುವ ಇಲ್ಲಿ ಸಮಸ್ಯೆಗಳಿಗೆ ಕೊರತೆ ಇಲ್ಲ. ಜನಸಂಖ್ಯೆ ಒತ್ತಡ, ಕಿರಿದಾದ ರಸ್ತೆಗಳು, ಅಡ್ಡಾದಿಡ್ಡಿ ಬೆಳೆದಿರುವ ಗಲ್ಲಿಗಳು, ಸಂಚಾರ ದಟ್ಟಣೆ, ಕುಡಿಯುವ ನೀರಿನ ತತ್ವಾರ ಹೀಗೆ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ.
ಲಿಂಗರಾಜಪುರ, ಕಾಡುಗೊಂಡನಹಳ್ಳಿ, ನಾಗವಾರ, ವೆಂಕಟೇಶನಗರ ಮುಂತಾದವುಗಳಲ್ಲಿನ ಅವ್ಯವಸ್ಥೆ, ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬುದನ್ನು ಸಾರಿ ಹೇಳುತ್ತಿವೆ.
ವಿಧಾನಸಭಾ ಕ್ಷೇತ್ರ ಸಂಖ್ಯೆ: 160
ಹಾಲಿ ಶಾಸಕ: ಕೆ.ಜೆ. ಜಾರ್ಜ್ (ಕಾಂಗ್ರೆಸ್). ಸೋತ ಅಭ್ಯರ್ಥಿ: ಆರ್. ಶಂಕರ್ (ಬಿಜೆಪಿ)
2013ರ ಫಲಿತಾಂಶ: ಕೆ.ಜೆ. ಜಾರ್ಜ್ 45,488 ಮತ ಪಡೆದಿದ್ದರೆ, ಬಿಜೆಪಿಯ ಆರ್. ಶಂಕರ್ 22,880 ಮತ ಗಳಿಸಿದ್ದರು. ಒಟ್ಟಾರೆ ಮತ ಪ್ರಮಾಣದಲ್ಲಿ ಶೇ 42.14, ಜಾರ್ಜ್ ಪಾಲಾಗಿದ್ದರೆ, ಶಂಕರ್ ಅವರು ಶೇ 21.2 ಪ್ರಮಾಣದ ಮತಗಳನ್ನು ಪಡೆದಿದ್ದರು.
ಕ್ಷೇತ್ರದ ಮತದಾರರ ವಿವರ: ಪುರುಷರು: 1,69,651, ಮಹಿಳೆಯರು: 1,64,730, ಇತರೆ: 39 , ಒಟ್ಟು: 3,34420
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications