ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಜಾಣತನದ್ದೆ? ಮುಂದೇನಾಗಲಿದೆ?

By Prasad
|
Google Oneindia Kannada News

ಬೆಂಗಳೂರು, ಮೇ 15 : ಕೇವಲ 38 ಸೀಟು ಗೆದ್ದು ಸರಕಾರ ರಚಿಸಲು ಮುಂದಾಗಿರುವ ಜಾತ್ಯತೀತ ಜನತಾದಳಕ್ಕೆ ಕರ್ನಾಟಕದಲ್ಲಿ ಭವಿಷ್ಯವಿದೆಯೆ? ಈಗ ಇರಲಿ ಮುಂದಿನ ಐದು ವರ್ಷಗಳ ಕಾಲ ಕಾಂಗ್ರೆಸ್ ಜೊತೆ ಆಡಳಿತ ನಡೆಸಿದ ನಂತರ ಬಹುಮತಕ್ಕೆ ಬೇಕಾದ ಸೀಟುಗಳನ್ನು ಏಕಾಂಗಿಯಾಗಿ ಗೆಲ್ಲುವ ತಾಕತ್ತಾದರೂ ಇದೆಯಾ?

ತಮಾಷೆ ಅಂದ್ರೆ, ಹಾವು ಮುಂಗುಸಿಯಂತೆ ಕಿತ್ತಾಡಿದ ಕುಮಾರಸ್ವಾಮಿ ಮತ್ತು ಚಾಮರಾಜಪೇಟೆಯಲ್ಲಿ ಗೆದ್ದಿರುವ ಜಮೀರ್ ಅಹ್ಮದ್ ಖಾನ್ ಅವರು ಮತ್ತೆ ಒಂದೇ ಸರಕಾರದಲ್ಲಿ ಒಗ್ಗಟ್ಟಿನಿಂದ, ಸಾಮರಸ್ಯದಿಂದ, ಕರ್ನಾಟಕದ ಅಭಿವೃದ್ಧಿಗಾಗಿ, ಕರ್ನಾಟಕದ ಜನತೆಯ ಒಳಿತಿಗಾಗಿ ಕೆಲಸ ಮಾಡಬೇಕು.

ಕಾಂಗ್ರೆಸ್‌ ಜೊತೆ ಮೈತ್ರಿಗೆ ಜೆಡಿಎಸ್‌ ಒಪ್ಪಿಗೆ,ಬಿಎಸ್‌ವೈ ಕನಸು ಭಗ್ನಕಾಂಗ್ರೆಸ್‌ ಜೊತೆ ಮೈತ್ರಿಗೆ ಜೆಡಿಎಸ್‌ ಒಪ್ಪಿಗೆ,ಬಿಎಸ್‌ವೈ ಕನಸು ಭಗ್ನ

ಅಷ್ಟು ಸಾಲದೆಂಬಂತೆ, ನಾನು ರಾಜಕೀಯವಾಗಿ ಮೇಲೆ ಬಂದಿದ್ದು ದೇವೇಗೌಡರಿಂದಲ್ಲ, ಜೆಡಿಎಸ್ ಅನ್ನು ನಂಬಬೇಡಿ, ಅವರು ಅವಕಾಶವಾದಿಗಳು ಎಂದು ಗೌಡರ ವಿರುದ್ಧ ಕೆಂಡ ಕಾರುವ ಸಿದ್ದರಾಮಯ್ಯ, ಗೌಡರ ಕುಟುಂಬದ ವಿರುದ್ಧ ಅಪಾರ ದ್ವೇಷ ಕಟ್ಟಿಕೊಂಡಿದ್ದ ಡಿಕೆ ಶಿವಕುಮಾರ್ ಅವರು ಇದೀಗ ಕುಮಾರಸ್ವಾಮಿ ನಡೆಸಲಿರುವ ಸರಕಾರದೊಂದಿಗೆ ಹೆಜ್ಜೆ ಹಾಕಲಿದ್ದಾರೆ.

ದೇವೇಗೌಡರ ಮನೆ ಬಾಗಿಲು ತಟ್ಟಿದ ಸಿದ್ದರಾಮಯ್ಯದೇವೇಗೌಡರ ಮನೆ ಬಾಗಿಲು ತಟ್ಟಿದ ಸಿದ್ದರಾಮಯ್ಯ

ಇದು ಪ್ರಜಾಪ್ರಭುತ್ವದ ಅಣಕವೋ, ರಾಜ್ಯದ ಜನತೆಯ ಹಣೆಬರಹವೋ, ಪರಿಸ್ಥಿತಿಯ ವೈಚಿತ್ರ್ಯವೋ, ವಿಧಿಯ ಅಟ್ಟಹಾಸವೋ ಅಥವಾ ಯಡಿಯೂರಪ್ಪನವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಅದೃಷ್ಟವೇ ಇಲ್ಲವೋ, ಅಂತೂ ಅತೀಹೆಚ್ಚು ಸ್ಥಾನ ಗಳಿಸಿದ ಭಾರತೀಯ ಜನತಾ ಪಕ್ಷವನ್ನು ಹೊರಗಿಟ್ಟು ಕರ್ನಾಟಕದಲ್ಲಿ ಹೊಸ ಸರಕಾರ ರಚನೆಯಾಗುತ್ತಿದೆ.

ಕೈಕಟ್ಟಿ ಹಿಂದೆ ನಿಂತುಬಿಟ್ರು ಸಿಎಂ ಸಿದ್ದು: ಛೇ.. ಹೀಗಾಗಬಾರದಿತ್ತು.!ಕೈಕಟ್ಟಿ ಹಿಂದೆ ನಿಂತುಬಿಟ್ರು ಸಿಎಂ ಸಿದ್ದು: ಛೇ.. ಹೀಗಾಗಬಾರದಿತ್ತು.!

ಕುಮಾರಸ್ವಾಮಿಯವರಿಗೆ ಅಭಿನಂದನೆಗಳು, ಅವರಿಗೆ ಬೆಂಬಲಿಸಿದ ಸಿದ್ದರಾಮಯ್ಯ ಅಭಿನಂದನಾರ್ಹರು, ಬಿಜೆಪಿಯನ್ನು ಹೊರದಬ್ಬುವಲ್ಲಿ ಯಶಸ್ವಿಯಾದ ದೇವೇಗೌಡರಿಗೆ ಕೂಡ ಅಭಿನಂದನೆ ಸಲ್ಲಿಸಲೇಬೇಕು. ಆದರೆ, ಇದು ಜಾಣತನದ ನಡೆಯೆ? ಮುಂದೆ ಏನಾಗಲಿದೆ?

ರೈತರ ಸಾಲಮನ್ನಾಕ್ಕೆ, ಅಭ್ಯದಯಕ್ಕೆ ಕೇಂದ್ರದ ಸಹಕಾರ

ರೈತರ ಸಾಲಮನ್ನಾಕ್ಕೆ, ಅಭ್ಯದಯಕ್ಕೆ ಕೇಂದ್ರದ ಸಹಕಾರ

ಕುಮಾರಸ್ವಾಮಿಯವರು ಜೆಡಿಎಸ್ ನ ಚುನಾವಣಾ ಪ್ರಣಾಳಿಕೆಯಲ್ಲಿ 24 ಗಂಟೆಗಳಲ್ಲಿ ಕರ್ನಾಟಕದ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದಾರೆ. ನೀರಾವರಿ ಕ್ಷೇತ್ರದ ಅಭಿವೃದ್ಧಿಗಾಗಿ 1.5 ಲಕ್ಷ ಕೋಟಿ ಅನುದಾನ ನೀಡುವುದಾಗಿ ಹೇಳಿದ್ದಾರೆ. ರೈತರ ಅಭ್ಯುದಯ ಕಾಪಾಡುವುದಾಗಿ ವಾಗ್ದಾನ ನೀಡಿ ಗೆದ್ದು ಬಂದಿರುವ ಕುಮಾರಸ್ವಾಮಿಯವರು ಕೇಂದ್ರ ಸರಕಾರದ ಬೆಂಬಲವಿಲ್ಲದೆ ಇದನ್ನೆಲ್ಲ ಹೇಗೆ ಮಾಡುತ್ತಾರೆ?

ಮೊಮ್ಮಗನ ಭವಿತವ್ಯದ ದೃಷ್ಟಿಯಿಂದ

ಮೊಮ್ಮಗನ ಭವಿತವ್ಯದ ದೃಷ್ಟಿಯಿಂದ

ಇನ್ನು ಕೆಲವೇ ತಿಂಗಳಲ್ಲಿ 2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ದೇವೇಗೌಡರು ತಾವು ಇನ್ನೆಂದು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರೂ ತಮ್ಮ ಮೊಮ್ಮಗ ಮತ್ತು ಸೊಸೆಯಂದಿರನ್ನು ನಿಲ್ಲಿಸಲು ಚಿಂತಿಸುತ್ತಿದ್ದಾರೆ. ಕನಿಷ್ಠಪಕ್ಷ ತಮ್ಮ ಮೊಮ್ಮಗನ ಭವಿತವ್ಯದ ದೃಷ್ಟಿಯಿಂದ ದೇವೇಗೌಡರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಿದ್ದರೆ ಜಾಣತನ ತೋರಿದಂತಾಗುತ್ತಿತ್ತು.

ಕರ್ನಾಟಕದಲ್ಲಿ ಭವಿಷ್ಯವೇ ಇಲ್ಲ ಎಂದಿದ್ದ ಮೋದಿ

ಕರ್ನಾಟಕದಲ್ಲಿ ಭವಿಷ್ಯವೇ ಇಲ್ಲ ಎಂದಿದ್ದ ಮೋದಿ

ತಮ್ಮ ಪ್ರಚಾರ ಭಾಷಣದಲ್ಲಿ ದೇವೇಗೌಡರನ್ನು ಅಪ್ಪಿತಪ್ಪಿಯೂ ಪ್ರಸ್ತಾಪಿಸದಿದ್ದ ನರೇಂದ್ರ ಮೋದಿಯವರು ಒಂದು ಪ್ರಚಾರ ಸಭೆಯಲ್ಲಿ ಇದ್ದಕ್ಕಿದ್ದಂತೆ ದೇವೇಗೌಡರನ್ನು ವಾಚಾಮಗೋಚರವಾಗಿ ಹೊಗಳಿದ್ದರು. ನಂತರ ಮರುದಿವೇ, ಮತ್ತೊಂದು ಸಮಾವೇಶದಲ್ಲಿ ಜೆಡಿಎಸ್ ಗೆ ಮತ ಹಾಕುವುದೇ ವೇಸ್ಟ್, ಅದಕ್ಕೆ ಕರ್ನಾಟಕದಲ್ಲಿ ಭವಿಷ್ಯವೇ ಇಲ್ಲ ಎಂದು ಹೀಗಳೆದಿದ್ದರು. ಇದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡ ದೇವೇಗೌಡರು ಬಿಜೆಪಿಯನ್ನು ಮೈತ್ರಿಯಿಂದ ಹೊರಗಿಟ್ಟಿದ್ದಾರೆ.

ಗಾಯದ ಮೇಲೆ ಖಾರ ಇಷ್ಟಪಡುತ್ತಿದೆ ಜೆಡಿಎಸ್

ಗಾಯದ ಮೇಲೆ ಖಾರ ಇಷ್ಟಪಡುತ್ತಿದೆ ಜೆಡಿಎಸ್

ಆಂತರಿಕವಾಗಿ ಕೂಡ ಜೆಡಿಎಸ್ ಕಾರ್ಯಕರ್ತರು ಅತಂತ್ರ ವಿಧಾನಸಭೆ ಉಂಟಾದರೆ ಬಿಜೆಪಿಯೊಂದಿಗೆ ಜೆಡಿಎಸ್ ಕೈಜೋಡಿಸಬೇಕು ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣವೇನೆಂದರೆ, ಕುಮಾರಸ್ವಾಮಿ ಮತ್ತು ದೇವೇಗೌಡ ಅವರನ್ನು ವಾಚಾಮಗೋಚರವಾಗಿ ತೆಗಳುತ್ತಿದ್ದ ಭಿನ್ನಮತೀಯ 8 ಶಾಸಕರು ಜೆಡಿಎಸ್ ಅನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರಿದ್ದರು. ಇದು ಜೆಡಿಎಸ್ ಗಾಯದ ಮೇಲೆ ಸುರಿದ ಉಪ್ಪಿನಂತಾಗಿತ್ತು. ಆದರೆ, ಈಗ ಆ ಗಾಯದ ಮೇಲೆ ಖಾರದ ಪುಡಿ ಹಚ್ಚಿಕೊಳ್ಳುವುದನ್ನೇ ಜೆಡಿಎಸ್ ಇಷ್ಟಪಡುತ್ತಿದೆ.

ಬೇನಾಮಿ ಆಸ್ತಿ ಹೊಂದಿದವರ ಮೇಲೆ ದಾಳಿ

ಬೇನಾಮಿ ಆಸ್ತಿ ಹೊಂದಿದವರ ಮೇಲೆ ದಾಳಿ

ಎಲ್ಲಕ್ಕಿಂತ ಮುಖ್ಯವಾಗಿ, ಅಪನಗದೀಕರಣದ ನಂತರ ಬೇನಾಮಿ ಆಸ್ತಿಯ ಮೇಲೆ ಕೇಂದ್ರದ ನರೇಂದ್ರ ಮೋದಿ ಸರಕಾರ ಕಣ್ಣಿಟ್ಟಿದೆ. ಕಪ್ಪು ಹಣ ಇಟ್ಟುಕೊಂಡವರ ಮೇಲೆ ದೇಶದಾದ್ಯಂತ ದಾಳಿ ನಡೆಸಿದ ನಂತರ ಬೇನಾಮಿ ಆಸ್ತಿ ಹೊಂದಿದವರ ಮೇಲೆಯೂ ಹಲವಾರು ದಾಳಿ ನಡೆಸಿದೆ ಮತ್ತು ನಡೆಸಲಿದೆ. ಕರ್ನಾಟಕದಲ್ಲಿಯೂ ಸಿದ್ದರಾಮಯ್ಯ ಬೆಂಬಲಿಗರ ಮೇಲೆ, ಡಿಕೆ ಶಿವಕುಮಾರ್ ಮೇಲೆ ಕೂಡ ದಾಳಿಗಳಾಗಿವೆ.

English summary
JDS and Congress tie up : Is it intelligent move by Kumaraswamy? What consequences JDS going to face by alligning with Congress? Would it have been intelligent move had Kumaraswamy tied up with BJP? Anyway, Congratulations Kumaraswamy and Deve Gowda and all the best.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X