ಕರ್ನಾಟಕ ಚುನಾವಣೆ ಮೇಲೆ 800 ಕೋಟಿ ಬೆಟ್ಟಿಂಗ್, ಫೇವರಿಟ್ ಯಾರು?

ಕರ್ನಾಟಕದಲ್ಲಿ ಈಗ ಚುನಾವಣೆ ಜ್ವರ. ಬೆಟ್ಟಿಂಗ್ ಕಟ್ಟಿಸಿಕೊಳ್ಳುವ ಬುಕ್ಕಿಗಳು ತಮ್ಮ ದಂಧೆ ಮತ್ತೆ ಶುರು ಮಾಡಿದ್ದಾರೆ. ಯಾವ ಪಕ್ಷಕ್ಕೆ ಯಾವ ರೇಟು ಬುಕ್ಕಿಗಳು ನಿಗದಿ ಮಾಡಿದ್ದಾರೆ ಗೊತ್ತಾ? ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಟ್ಟಿಂಗ್ ಮಾರ್ಕೆಟ್ ಮೌಲ್ಯ ಅಂದಾಜು 800 ಕೋಟಿ ರುಪಾಯಿ.

ಈ ಬೆಟ್ಟಿಂಗ್ ದಂಧೆಯಲ್ಲೂ ಹಲವು ತಿರುವುಗಳಾಗಿವೆ. ವಿವಿಧ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಎಂದು ಬಂದಾಗಿನಿಂದ 95 ಪೈಸೆಯಷ್ಟು ಕಡಿಮೆಯಾಗಿದೆಯಂತೆ ಪಂಥದ ಮೊತ್ತ. ಆರಂಭದಲ್ಲಿ ಬೆಟ್ಟಿಂಗ್ ಹೇಗಿತ್ತು ಅಂದರೆ ಬಿಜೆಪಿ ಸರಳ ಬಹುಮತ ಪಡೆಯುವ ನಿರೀಕ್ಷೆಯಿತ್ತು.

ಆದ್ದರಿಂದ ಬಿಜೆಪಿ ಕನಿಷ್ಠ 113 ಸ್ಥಾನಗಳಲ್ಲಿ ಗೆದ್ದು, ಬಹುಮತ ಪಡೆದರೆ, ಬಿಜೆಪಿ ಪರವಾಗಿ ಹಣ ಕಟ್ಟಿದವರಿಗೆ ಪ್ರತಿ 10 ರುಪಾಯಿ ಬೆಟ್ಟಿಂಗ್ ಗೆ 11 ರುಪಾಯಿ ಸಿಗುತ್ತದೆ. ಅಂದರೆ ಪ್ರತಿ ಹತ್ತು ರುಪಾಯಿಗೆ ಒಂದು ರುಪಾಯಿ ಹೆಚ್ಚು ಸಿಗುತ್ತದೆ. ಇನ್ನು ಕಾಂಗ್ರೆಸ್ ಪರವಾಗಿ ಬೆಟ್ಟಿಂಗ್ ಕಟ್ಟಿ, ಅದು ಜಯ ಗಳಿಸಿದರೆ, ಪ್ರತಿ 1 ರುಪಾಯಿಗೆ 2.5 ರುಪಾಯಿ ಸಿಗುತ್ತದೆ.

In poll bound Karnataka, bookies bet on Rs 800 crore as odds are stacked in BJP’s favour

ಇನ್ನು ಜೆಡಿಎಸ್ ಪರವಾಗಿ ಬೆಟ್ಟಿಂಗ್ ಕಟ್ಟಿದವರಿಗೆ ಅದು ಬಹುಮತ ಪಡೆದಲ್ಲಿ ಪ್ರತಿ 1 ರುಪಾಯಿಗೆ 6 ರುಪಾಯಿ ಕೊಡಲಾಗುತ್ತದೆ. ಹಲವು ಬುಕ್ಕಿಗಳ ಪ್ರಕಾರ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ. ಆದರೆ ಈ ವರೆಗಿನ ಸಮೀಕ್ಷೆಗಳು, ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಗೆಲ್ಲುತ್ತದೆ. ಅಲ್ಲಿಗೆ ಸಮೀಕ್ಷೆಗಳು ಏನು ಹೇಳುತ್ತಿವೆಯೋ ಅದರ ವಿರುದ್ಧವಾಗಿದೆ ಬೆಟ್ಟಿಂಗ್ ಪಂಟರ್ ಗಳ ಲೆಕ್ಕಾಚಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+