ನಾನೆಂದೂ ತಂದೆ ಮಾತನ್ನು ಮೀರುವುದಿಲ್ಲ: ಎಚ್ ಡಿ ಕುಮಾರಸ್ವಾಮಿ

By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ತೀರ್ಥಹಳ್ಳಿ (ಶಿವಮೊಗ್ಗ), ಫೆಬ್ರವರಿ 12 : ರಾಜ್ಯದಲ್ಲಿ ಕುಮಾರಸ್ವಾಮಿಗೆ ಒಂದು ಅವಕಾಶ ಕೊಡೋಣ ಎಂವ ಭಾವನೆ ಇದೆ. ಹೋದ ಕಡೆ ಜೆಡಿಎಸ್ ಗೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ. ಜೆಡಿಎಸ್ 120 ಸ್ಥಾನಕ್ಕಿಂತ ಮುಂದೆ ಹೋದರೆ ನಿಮ್ಮ ಕೆಲಸ ಮಾಡಬಹುದು. ಸಾಲ ಮನ್ನಾ ಕೂಡ ಮಾಡಬಹುದು ಎಂದು ಮಾಜಿ ಪ್ರಧಾನಿ- ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಇಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು. ನೀವು ನಮಗೆ ಶಕ್ತಿ ಕೊಡಬೇಕು. ಆ ಬಳಿಕ ಕುಮಾರಣ್ಣನ ತೆಗಳಬೇಡಿ. ಎಂಬತ್ತೈದನೇ ವಯಸ್ಸಿನಲ್ಲಿ ನನಗೆ ಛಲ ಇದೆ. ನಾವು ರೈತರ ಮಕ್ಕಳು. ದೇಶಕ್ಕೆ ಅನ್ನ ಹಾಕುವ ರೈತ ಕೈ ಚಾಚಬೇಕಾ? ಯಾವ ಕೈಗಾರಿಕೋದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ? ಆದರೆ ನಮ್ಮ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದಾರೆ ಎಂದರು.

ಕಾಂಟ್ರೋವರ್ಸಿ ಯಾಕೆ, ನನ್ನ ಕನಸುಗಳನ್ನು ಜನರಿಗೆ ತಿಳಿಸಿ: ಎಚ್ ಡಿಕೆ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಮೂರೂವರೆ ತಿಂಗಳು ಕಾಯಿರಿ. ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಯೊಳಗೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇನೆ. ಸರಕಾರದ ವತಿಯಿಂದ ಸಾಲ ಒದಗಿಸುವ ಹೊಸ ಯೋಜನೆ ತರುತ್ತೇನೆ ಎಂದು ಹೇಳಿದರು.

I will never disobey my father words: HD Kumaraswamy

ತಂದೆಯ ಮಾತನ್ನು ಧಿಕ್ಕರಿಸಿ ಬಿಜೆಪಿ ಜೊತೆ ಕೈ ಜೋಡಿಸಿ ಮುಖ್ಯಮಂತ್ರಿಯಾದೆ. ಅದೇ ಕೊನೆ. ನಾನೆಂದೂ ತಂದೆಯ ಮಾತನ್ನು ಮೀರುವುದಿಲ್ಲ. ರೈತರ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕ ಸ್ಥಿತಿ ಹಾಳಾಗುತ್ತದೆ ಅಂತಿದ್ದಾರೆ. ಕೈಗಾರಿಕೋದ್ಯಮಿಗಳು ಮಾಡಿರುವ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದರು.

ಜೆಡಿಎಸ್ ನ ಆಯ್ಕೆ ಮಾಡಿ, ಕಳಿಸಿಕೊಡಿ. ರಾಷ್ಟ್ರೀಯ ಪಕ್ಷಗಳು ಬಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ನಿಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಜೆಡಿಎಸ್ ಸರಕಾರ. ಹಸಿವು ಮುಕ್ತ, ಭಯ ಮುಕ್ತ ರಾಜ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಅನ್ನಭಾಗ್ಯ ಯೋಜನೆ ಜಾರಿಯಾಗಿದ್ದು ರಾಮಕೃಷ್ಣ ಹೆಗಡೆ ಅಧಿಕಾರಾವಧಿಯಲ್ಲಿ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I joined hands with BJP against to my father will. after that, I never disobey his words, says former chief minister HD Kumaraswamy in Tirthahalli (Shivamogga district) JDS rally on Monday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ