ಲಕ್ಷಾಂತರ ಸಂಬಳವಿದ್ದರೂ ವೀಕೆಂಡ್‌ನಲ್ಲಿ ರ‍್ಯಾಪಿಡೋ ಓಡಿಸುವ ಟೆಕ್ಕಿ: ಬೆಂಗಳೂರಿನಲ್ಲಿ ಬದುಕು ಇಷ್ಟೊಂದು ದುಬಾರಿಯಾಯ್ತಾ?

ಬೆಂಗಳೂರಿನಂತಹ ಮಹಾನಗರಗಳಲ್ಲಿ ಬದುಕುವವರ ಜೀವನ ದೂರದಿಂದ ನೋಡಲು ಚಂದ, ಆದರೆ ಅನುಭವಿಸಿದಾಗಲೇ ಅದರ ಅಸಲಿ ಮುಖ ತಿಳಿಯುವುದು. ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರನ್ನು ಕಂಡರೆ ಎಲ್ಲರಿಗೂ ಅದೇನೋ ಒಂದು ತರಹದ ಆಕರ್ಷಣೆ. ಆದರೆ, ತಿಂಗಳಾಂತ್ಯದಲ್ಲಿ ಮನೆ ಬಾಡಿಗೆ, ಮಕ್ಕಳ ಸ್ಕೂಲ್ ಫೀಸ್, ದಿನಸಿ, ಇಎಂಐ ಸೇರಿದಂತೆ ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಅನೇಕರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಉತ್ತಮ ಸಂಬಳವಿದ್ದರೂ ಕುಟುಂಬದ ಭವಿಷ್ಯಕ್ಕಾಗಿ, ಸಂತೋಷಕ್ಕಾಗಿ ತಮ್ಮ ವಿರಾಮದ ಸಮಯವನ್ನೂ ತ್ಯಾಗ ಮಾಡುವ ಅದೆಷ್ಟೋ ಮುಗ್ಧ ಜೀವಗಳು ನಮ್ಮ ನಡುವೆ ಇವೆ. ಇಂತಹದ್ದೇ ಒಂದು ನೈಜ ಹಾಗೂ ಮನಕಲಕುವ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬನ್ನೇರುಘಟ್ಟಕ್ಕೆ ಹೋಗುವಾಗ ಸಿಕ್ಕ ರ‍್ಯಾಪಿಡೋ ಚಾಲಕ

ಶಬಾಜ್ ಎಂಬುವವರು ಇತ್ತೀಚೆಗೆ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದು ಈಗ ಭಾರಿ ವೈರಲ್ ಆಗುತ್ತಿದೆ. ಶಬಾಜ್ ಅವರು ಬನ್ನೇರುಘಟ್ಟಕ್ಕೆ ಹೋಗಲು ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ಬೈಕ್ ಚಲಾಯಿಸುತ್ತಿದ್ದ 35 ವರ್ಷದ ಚಾಲಕ, ಮೊದಲು ಶಬಾಜ್ ಅವರೊಂದಿಗೆ ಕನ್ನಡದಲ್ಲಿ ಮಾತನಾಡಲು ಶುರು ಮಾಡಿದರು. ಆದರೆ ಶಬಾಜ್ ಅವರಿಗೆ ಕನ್ನಡ ಅಷ್ಟಾಗಿ ಬರುವುದಿಲ್ಲ ಎಂದು ತಿಳಿದಾಗ, ಅವರು ಇಂಗ್ಲಿಷ್‌ನಲ್ಲಿ ಮಾತನಾಡಲು ಆರಂಭಿಸಿದರು.

Bengaluru Techie

ಮಾತಿನ ನಡುವೆ ಚಾಲಕ, "ನೀವು ಏನು ಕೆಲಸ ಮಾಡುತ್ತಿದ್ದೀರಾ?" ಎಂದು ಕೇಳಿದರು. ಶಬಾಜ್ ಅವರು ತಾವು 'ಸಾಫ್ಟ್‌ವೇರ್ ಎಂಜಿನಿಯರ್' ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಾಲಕ, ತಾವೂ ಸಹ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ (ಎಮ್‌ಎನ್‌ಸಿ) ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹಾಗೂ ತಿಂಗಳಿಗೆ ಆರು ಅಂಕಿಗಳ ಸಂಬಳ ಪಡೆಯುತ್ತಿರುವುದಾಗಿ ತಿಳಿಸಿದರು.

ವೀಕೆಂಡ್‌ನಲ್ಲಿ ರ‍್ಯಾಪಿಡೋ ಓಡಿಸಲು ಕಾರಣವೇನು?

ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿರುವ ವ್ಯಕ್ತಿ, ವಾರಾಂತ್ಯದಲ್ಲಿ ಯಾಕೆ ರ‍್ಯಾಪಿಡೋ ಓಡಿಸುತ್ತಿದ್ದಾರೆ ಎಂಬ ಪ್ರಶ್ನೆ ಯಾರಿಗಾದರೂ ಬರುವುದು ಸಹಜ. ಇದಕ್ಕೆ ಉತ್ತರಿಸಿದ ಆ ಟೆಕ್ಕಿ, "ನನಗೆ ಮದುವೆಯಾಗಿದ್ದು, ಒಂದು ಸಣ್ಣ ಮಗುವಿದೆ. ನನ್ನ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಲು ಮತ್ತು ಹೆಚ್ಚುವರಿ ಆದಾಯ ಗಳಿಸಲು ನಾನು ವೀಕೆಂಡ್‌ನಲ್ಲಿ ರ‍್ಯಾಪಿಡೋ ಓಡಿಸುತ್ತೇನೆ" ಎಂದು ಅತ್ಯಂತ ಸರಳವಾಗಿ ವಿವರಿಸಿದರು. ಈ ಮಾತು ಶಬಾಜ್ ಅವರನ್ನು ತೀವ್ರವಾಗಿ ಚಿಂತಿಸುವಂತೆ ಮಾಡಿತು.

"ಉತ್ತಮ ಟೆಕ್ ಉದ್ಯೋಗ ಮತ್ತು ಆರು ಅಂಕಿಗಳ ಸಂಬಳ ಹೊಂದಿರುವ ವ್ಯಕ್ತಿಗೂ ವಾರಾಂತ್ಯದಲ್ಲಿ ಸೈಡ್ ಹಸ್ಲ್ ಮಾಡುವ ಅಗತ್ಯವಿದೆ ಎಂದಾದರೆ, ಬೆಂಗಳೂರು ಮತ್ತು ಇತರ ಟೈರ್-1 ನಗರಗಳಲ್ಲಿ ಜೀವನ ಎಷ್ಟು ದುಬಾರಿಯಾಗಿದೆ?" ಎಂದು ಶಬಾಜ್ ತಮ್ಮ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆಗಳು

ಶಬಾಜ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜೀವನ ವೆಚ್ಚ ಮತ್ತು ಆರ್ಥಿಕ ಒತ್ತಡಗಳ ಬಗ್ಗೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, "ಒಬ್ಬನೇ ಸಂಪಾದನೆ ಮಾಡುವ ವ್ಯಕ್ತಿಯ ಮೇಲೆ ಇಡೀ ಕುಟುಂಬದ ಜವಾಬ್ದಾರಿ ಇದ್ದಾಗ, ಎಷ್ಟೇ ಸಂಬಳವಿದ್ದರೂ ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ವಿಮೆ ಮತ್ತು ಇಎಂಐ ಕಟ್ಟಿದ ನಂತರ ಉಳಿಯುವುದು ಬಹಳ ಕಡಿಮೆ" ಎಂದು ಅನೇಕರು ಆ ಟೆಕ್ಕಿಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ.

"ಇದು ನಮ್ಮಂತಹ ಮಧ್ಯಮ ವರ್ಗದ ಉದ್ಯೋಗಿಗಳ ನೈಜ ಪರಿಸ್ಥಿತಿಯನ್ನು ಬಿಂಬಿಸುತ್ತದೆ. ದೊಡ್ಡ ನಗರಗಳಲ್ಲಿ ಬದುಕು ಸಾಗಿಸುವುದು ನಿಜಕ್ಕೂ ಸವಾಲಾಗಿದೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಆದಾಗ್ಯೂ, ಕೆಲವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, "ರ‍್ಯಾಪಿಡೋ ಓಡಿಸುವ ಬದಲು ಹೊಸ ಸ್ಕಿಲ್‌ಗಳನ್ನು ಕಲಿತುಕೊಂಡರೆ ಭವಿಷ್ಯದಲ್ಲಿ ಹೆಚ್ಚು ಸಂಬಳ ಪಡೆಯಬಹುದು. ಎಐ ಅಥವಾ ಹೊಸ ತಂತ್ರಜ್ಞಾನಗಳತ್ತ ಗಮನ ಹರಿಸುವುದು ಉತ್ತಮ" ಎಂದು ಸಲಹೆ ನೀಡಿದ್ದಾರೆ.

ಒಟ್ಟಾರೆಯಾಗಿ, ಈ ಘಟನೆಯು ಐಟಿ ಉದ್ಯೋಗಿಗಳ ಹೊರಗಿನ ಬಣ್ಣದ ಬದುಕಿನ ಹಿಂದಿರುವ ಆರ್ಥಿಕ ಸವಾಲುಗಳನ್ನು ಹಾಗೂ ಮೆಟ್ರೋ ನಗರಗಳಲ್ಲಿ ಮಿತಿಮೀರುತ್ತಿರುವ ಜೀವನ ವೆಚ್ಚವನ್ನು ಅಚ್ಚುಕಟ್ಟಾಗಿ ತೆರೆದಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+