ವಿಳಾಸ ಬದಲಾಗಿದ್ದರೆ ಹೊಸ ಐಡಿ ಕಾರ್ಡ್ ಪಡೆಯುವುದು ಹೇಗೆ?

Posted By:
Subscribe to Oneindia Kannada
   ವಿಳಾಸ ಬದಲಾಗಿದ್ದರೆ ಹೊಸ ಐಡಿ ಕಾರ್ಡ್ ಪಡೆಯುವುದು ಹೇಗೆ? | Oneindia Kannada

   ಬೆಂಗಳೂರು, ಜನವರಿ 13 : ಅಯ್ಯೋ, ಎಲೆಕ್ಷನ್ ಇನ್ನೂ ಶಾನೆ ದೂರ ಐತೆ, ಈಗ್ಲೇ ಯಾಕೆ ತಲೆ ಕೆಡಿಸಿಕೊಳ್ಳೋದು? ಚುನಾವಣೆ ಹತ್ತತ್ರ ಬರ್ತಿದ್ದಂಗೆ ಹೊಸ ಐಡಿ ಕಾರ್ಡ್ ಮಾಡಿಸಿದರಾಯ್ತು ಅಂತ ಸಾವಿರಾರು ಜನ ಮಾಗಿಯ ಚಳಿ ಕಾಯಿಸುತ್ತಿರುತ್ತಾರೆ.

   ಈ ಬಗೆಯ ನಿರ್ಲಕ್ಷ್ಯದಿಂದಲೇ ಲಕ್ಷಾಂತರ ಜನ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು, ವಿಳಾಸ ಬದಲಾಯಿಸಲು, ಹೆಸರನ್ನು ಕಿತ್ತುಹಾಕಲು, ತಪ್ಪಾದ ಹೆಸರನ್ನು ತಿದ್ದುಪಡಿ ಮಾಡಲು ವಿಫಲರಾಗಿರುತ್ತಾರೆ ಮತ್ತು ತಮ್ಮ ಅತ್ಯಮೂಲ್ಯವಾದ ಮತವನ್ನು ಚಲಾಯಿಸಲು ಸೋತಿರುತ್ತಾರೆ.

   ಮತದಾರರರ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕುವುದು ಹೇಗೆ?

   ಇದರಿಂದ ನಷ್ಟ ಆಗುವುದು ರಾಜ್ಯಕ್ಕೆ ಮಾತ್ರವಲ್ಲ, ಪ್ರತಿ ನಾಗರಿಕನಿಗೂ. ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ಕರ್ನಾಟಕದ ನಾಗರಿಕರಾಗಿ, ಮತ ಚಲಾಯಿಸುವ ನಿಮ್ಮ ಕರ್ತವ್ಯವನ್ನು ನಿಭಾಯಿಸಿ, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತ್ತು ಉತ್ತಮ ಸರಕಾರ ಸ್ಥಾಪಿಸಲು ಸಹಾಯ ಮಾಡಿ.

   ನೆನಪಿಡಿ, ಹೊಸ ಮತದಾರರು ನೋಂದಾಯಿಸಿಲು ಜನವರಿ 22ರವರೆಗೆ ಗಡುವನ್ನು ವಿಸ್ತರಿಸಲಾಗಿದೆ. ಅಷ್ಟರೊಳಗೆ ನೀವು 18ನೇ ವರ್ಷಕ್ಕೆ ಕಾಲಿಡುತ್ತಿದ್ದರೆ, ಕರ್ನಾಟಕಕ್ಕೆ ಹೊಸಬರಾಗಿದ್ದರೆ, ಇನ್ನೂ ಹೆಸರು ನೋಂದಾಯಿಸಿಕೊಳ್ಳದಿದ್ದರೆ ಈಗಲೇ ನೋಂದಾಯಿಸಿ. ಫೆಬ್ರವರಿ 28ರಂದು ಅಂತಿಮ ಪಟ್ಟಿ ಹೊರಬೀಳಲಿದೆ.

   ಈಗ ನಿಮ್ಮ ವಿಳಾಸ ಬದಲಾಗಿದ್ದರೆ, ಗುರುತಿನ ಚೀಟಿಯಲ್ಲಿ ಹೊಸ ವಿಳಾಸವನ್ನು ನಮೂದಿಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಿ.

   ವಿಳಾಸ ಬದಲಾಗಿದ್ದರೆ ಹೊಸ ಗುರುತಿನ ಚೀಟಿ

   ವಿಳಾಸ ಬದಲಾಗಿದ್ದರೆ ಹೊಸ ಗುರುತಿನ ಚೀಟಿ

   1) ವಿಳಾಸ ಬದಲಾಗಿದ್ದರೆ, ಹೊಸ ವಿಳಾಸವನ್ನು ಗುರುತಿನ ಚೀಟಿಯಲ್ಲಿ ನಮೂದಿಸುವುದು ಹೇಗೆ ಮತ್ತು ಹಳೆ ವಿಳಾಸದಿಂದ ಹೆಸರನ್ನು ತೆಗೆಯುವುದು ಹೇಗೆ?

   ಅದೇ ವಿಧಾನಸಭೆ ಕ್ಷೇತ್ರದಲ್ಲಿ ವಿಳಾಸವನ್ನು ಬದಲಾಯಿಸಿದ್ದರೆ, ಫಾರ್ಮ್ 8ಎ (ಅದೇ ವಿಧಾನಸಭಾ ಕ್ಷೇತ್ರ) ಅಥವಾ ಫಾರ್ಮ್ 6ನ್ನು (ಹೊಸ ವಿಧಾನಸಭಾ ಕ್ಷೇತ್ರ) ಭರ್ತಿ ಮಾಡಿ, ಚುನಾವಣಾ ನೋಂದಣಾಧಿಕಾರಿ (ERO) ಅಥವಾ ಸಹಾಯಕ ಚುನಾವಣಾ ನೋಂದಣಾಧಿಕಾರಿಗೆ ಸಲ್ಲಿಸಬೇಕು.

   ಪ್ರಸ್ತುತ ವಿಳಾಸಕ್ಕೆ ಹೊಸ ಕಾರ್ಡ್ ಪಡೆಯಬಹುದಾ?

   ಪ್ರಸ್ತುತ ವಿಳಾಸಕ್ಕೆ ಹೊಸ ಕಾರ್ಡ್ ಪಡೆಯಬಹುದಾ?

   2) ಇತ್ತೀಚೆಗೆ ಮನೆ ಬದಲಾಯಿಸಿದ್ದೇವೆ. ಹಳೆ ವಿಳಾಸದಲ್ಲಿ ಫೋಟೋ ಐಡಿ ಕಾರ್ಡ್ ಇದೆ. ಪ್ರಸ್ತುತ ವಿಳಾಸಕ್ಕೆ ಹೊಸ ಕಾರ್ಡ್ ಪಡೆಯಬಹುದಾ?

   ಮೊದಲನೆಯದಾಗಿ, ನಿಮ್ಮ ಹೆಸರು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದೆಯಾ ಚೆಕ್ ಮಾಡಿ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಈಗಾಗಲೆ ಇದ್ದರೆ, ಪ್ರಸ್ತುತ ವಿಳಾಸಕ್ಕೆ ಮೊದಲನೇ ವಿಧಾನದ ಮೂಲಕ ಹೊಸ ಕಾರ್ಡನ್ನು ಪಡೆಯಲು ಸಾಧ್ಯವಿದೆ.

   ವಿಳಾಸ ಬದಲಾವಣೆಗೆ ಎಷ್ಟು ಶುಲ್ಕ ತೆರಬೇಕು?

   ವಿಳಾಸ ಬದಲಾವಣೆಗೆ ಎಷ್ಟು ಶುಲ್ಕ ತೆರಬೇಕು?

   3) ಇದಕ್ಕೆ ಹಣ ಎಷ್ಟು ತೆರಬೇಕಾಗುತ್ತದೆ?

   ಬೇರೆ ವಿಧಾನಸಭೆ ಕ್ಷೇತ್ರದಲ್ಲಿ ವಿಳಾಸ ಬದಲಾಗಿದ್ದು, ಗುರುತಿನ ಚೀಟಿಯಲ್ಲಿ ಹೊಸ ವಿಳಾಸವನ್ನು ನಮೂದಿಸಬಯಸಿದ್ದರೆ, 25 ರುಪಾಯಿಯನ್ನು ನೀಡಿ, ಚುನಾವಣಾ ನೋಂದಣಾಧಿಕಾರಿಗೆ ಅರ್ಜಿಯನ್ನು ಸಲ್ಲಿಸಬೇಕು. ಆದರೆ, ಇಲ್ಲಿ ನಿಮ್ಮ EPIC ಸಂಖ್ಯೆ ಬದಲಾಗುವುದಿಲ್ಲ, ಹಳೆ ಸಂಖ್ಯೆಯೇ ಮುಂದುವರಿಯುತ್ತದೆ.

   ಕರ್ನಾಟಕಕ್ಕೆ ವಲಸೆ ಬಂದಿದ್ದರೆ ಐಟಿ ಕಾರ್ಡ್ ಪಡೆಯುವುದು ಹೇಗೆ?

   ಕರ್ನಾಟಕಕ್ಕೆ ವಲಸೆ ಬಂದಿದ್ದರೆ ಐಟಿ ಕಾರ್ಡ್ ಪಡೆಯುವುದು ಹೇಗೆ?

   4) ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದರೆ?

   ಹೀಗಿದ್ದ ಪಕ್ಷದಲ್ಲಿ ಅನ್ಯ ರಾಜ್ಯದಲ್ಲಿ ನೋಂದಾಯಿಸಲಾದ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಸಿ ಹಾಕಬೇಕು. ನಂತರ ಫಾರ್ಮ್ 6ರನ್ನು ಭರ್ತಿ ಮಾಡಿ, ಸೂಕ್ತ ಶುಲ್ಕ ಮತ್ತು ಹಳೆ ಪಟ್ಟಿಯಿಂದ ಹೆಸರು ತೆಗೆಸಿಹಾಕಿದ ದಾಖಲೆಯನ್ನು ಚುನಾವಣಾ ನೋಂದಣಾಧಿಕಾರಿಗೆ ಸಲ್ಲಿಸಬೇಕು. ಇಲ್ಲಿ ಕೂಡ ಅದೇ ಕಾರ್ಡ್ ಮುಂದುವರಿಯುತ್ತದೆ, ಆದರೆ ವಿಳಾಸ ಹಿಂಬದಿಯಲ್ಲಿ ನಮೂದಾಗಿರುತ್ತದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka Assembly Elections 2018 : I have shifted my residence recently. How do I ensure that I am enrolled in my new place of residence and my name is deleted from the old place? How to submit to Electoral Registration Officer?

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ