• search

'ಬಡವರ ಬಂಧು' ಕುಮಾರಸ್ವಾಮಿ ಅವರ ಒಟ್ಟು ಆಸ್ತಿ ಎಷ್ಟು?

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಅನಿತಾ ಕುಮಾರಸ್ವಾಮಿಗೆ ಹೋಲಿಸಿದರೆ ಎಚ್ ಡಿ ಕುಮಾರಸ್ವಾಮಿ ಬಡವರು| Oneindia Kannada

    ತಮ್ಮ ಅಭಿಮಾನಿಗಳಿಂದ ಬಡವರ ಬಂಧು ಎಂದು ಕರೆಸಿಕೊಳ್ಳುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಅವರ ಮಡದಿಯ ಹೆಸರಲ್ಲಿರುವ ಒಟ್ಟು ಆಸ್ತಿಯ ಮೌಲ್ಯ ರೂ. 179 ಕೋಟಿ.

    ನಿನ್ನೆ ಅವರು ಚನ್ನಪಟ್ಟಣ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಅದರಲ್ಲಿ ನೀಡಿರುವ ಆಸ್ತಿ ವಿವರದಂತೆ ಕುಮಾರಸ್ವಾಮಿ ಅವರ ವಾರ್ಷಿಕ ಆದಾಯ ರೂ. 45 ಲಕ್ಷಕ್ಕಿಂತ ಸ್ವಲ್ಪವಷ್ಟೆ ಹೆಚ್ಚು.

    ರಾಜ್ಯದ ಗಮನ ಸೆಳೆದಿರುವ ಕುಮಾರಣ್ಣ ಸ್ಪರ್ಧಿಸಿರುವ ರಾಮನಗರ ರಣಾಂಗಣ

    ಆದರೆ ಕುಮಾರಸ್ವಾಮಿ ಅವರಿಗಿಂತಲೂ ಅವರ ಮಡದಿ ಅನಿತಾ ಕುಮಾರಸ್ವಾಮಿ ಶ್ರೀಮಂತರು ಅವರ ವಾರ್ಷಿಕ ಆದಾಯ ರೂ.1,08,24,600. ಅಷ್ಟೆ ಅಲ್ಲ ಸ್ಥಿರಾಸ್ಥಿ, ಚರಾಸ್ಥಿಗಳ ಲೆಕ್ಕಾಚಾರದಲ್ಲಿಯೂ ಅನಿತಾ ಅವರು ಕುಮಾರಸ್ವಾಮಿ ಅವರಿಗಿಂತಲೂ ಮುಂದೆ ಇದ್ದಾರೆ. ಆದರೆ ಗಂಡ ಹೆಂಡತಿಯ ಆಸ್ತಿಯನ್ನು ಬೇರೆ ಬೇರೆಯಾಗಿ ನೋಡುವ ಸಂಪ್ರದಾಯ ಇಲ್ಲದ ಕಾರಣ ಎರಡೂ ಸೇರಿ ಕುಮಾರಸ್ವಾಮಿ ಅವರ ಆಸ್ತಿ ಎನ್ನಬಹುದು.

    ಕುಮಾರಸ್ವಾಮಿ ದಂಪತಿಗಳ ಸ್ಥಿರಾಸ್ತಿ ಮತ್ತು ಚರಾಸ್ಥಿಗಳ ಒಟ್ಟು ಮೌಲ್ಯ ರೂ.179 ಕೋಟಿಗೂ ಹೆಚ್ಚು.

    ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

    ಕುಮಾರಸ್ವಾಮಿ ದಂಪತಿಗಳ ಚರಾಸ್ಥಿ ಹೀಗಿದೆ ನೋಡಿ
    ಕುಮಾರಸ್ವಾಮಿ ಅವರ ಬಳಿ ನಗದು ಹಣ ರೂ.12.14 ಲಕ್ಷ ಇದೆ. ಅನಿತಾ ಅವರ ಅವರ ಬಳಿ 42.36 ಲಕ್ಷ ಇದೆ. ಕುಮಾರಸ್ವಾಮಿ ಅವರು ಬ್ಯಾಂಕ್‌ನಲ್ಲಿ ಉಳಿಸಿರುವ ಹಣ 22.25 ಲಕ್ಷ ರೂಪಾಯಿಯಾದರೆ ಅನಿತಾ ಅವರು ಬ್ಯಾಂಕ್‌ನಲ್ಲಿಟ್ಟಿರುವ ಹಣ ರೂ.1,98,88,779. ಬಾಂಡು ಶೇರುಗಳಲ್ಲಿ ಆಸಕ್ತಿ ಇಲ್ಲದ ಕುಮಾರಸ್ವಾಮಿ ಇದರಲ್ಲಿ ವಿನಿಯೋಗಿಸಿರುವುದು ಕೇವಲ ರೂ.3000. ಆದರೆ ಅನಿತಾ ಅವರ ಹೆಸರಲ್ಲಿ 68 ಕೋಟಿಗೂ ಹೆಚ್ಚು (68,79,59,000) ಹಣ ವಿನಿಯೋಗಿಸಲಾಗಿದೆ.

    ಇದು ಅನಿತಾ ಹೆಸರಲ್ಲೇ ಹೆಚ್ಚು

    ಇದು ಅನಿತಾ ಹೆಸರಲ್ಲೇ ಹೆಚ್ಚು

    ಕುಮಾರಸ್ವಾಮಿ ಅವರ ಹೆಸರಲ್ಲಿ ಇರುವ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ.24.52 ಲಕ್ಷ. ಅನಿತಾ ಹೆಸರಿನಲ್ಲಿರುವ ಒಡವೆಯ ಮೌಲ್ಯ ರೂ.93.33 ಲಕ್ಷ ರೂಪಾಯಿ. ಇತರೆ ಚರಾಸ್ಥಿ ಕುಮಾರಸ್ವಾಮಿ ಅವರ ಹೆಸರಲ್ಲಿ ರೂ.23,96,337 ಇದ್ದರೆ ಅನಿತಾ ಅವರ ಹೆಸರಲ್ಲಿ ರೂ.4,56,32,021 ಮೌಲ್ಯದ ಚರಾಸ್ಥಿ ಇದೆ.

    ಸಾಲದಲ್ಲಿಯೂ ಅನಿತಾ ಅವರೇ ಮುಂದೆ

    ಸಾಲದಲ್ಲಿಯೂ ಅನಿತಾ ಅವರೇ ಮುಂದೆ

    ಕುಮಾರಸ್ವಾಮಿ ಅವರಿಗೆ ಸುಮಾರು 7 ಕೋಟಿ ಸಾಲ (6,97,99,478) ಇದ್ದರೆ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ 17 ಕೋಟಿ ಸಾಲ (17,60,42,438) ಇದೆ.

    ಸ್ಥಿರಾಸ್ಥಿ ಕಡಿಮೆ ಏನಿಲ್ಲ

    ಸ್ಥಿರಾಸ್ಥಿ ಕಡಿಮೆ ಏನಿಲ್ಲ

    ಮನೆ, ಜಮೀನು, ಫ್ಲಾಟ್‌ ಮುಂತಾದ ಸ್ಥಿರಾಸ್ತಿ ಕುಮಾರಸ್ವಾಮಿ ಅವರಿಗೆ ಹೆಚ್ಚಿದೆ, ಅನಿತಾ ಅವರ ಹೆಸರಿನಲ್ಲಿ ಸ್ವಲ್ಪ ಕಡಿಮೆ ಸ್ಥಿರಾಸ್ತಿ ಮಾಡಲಾಗಿದೆ. ಕುಮಾರಸ್ವಾಮಿ ಅವರ ಸ್ಥಿರಾಸ್ತಿ ಮೌಲ್ಯ 35 ಕೋಟಿ (35,10,26,000) ಇದ್ದರೆ, ಅನಿತಾ ಅವರ ಹೆಸರಿನಲ್ಲಿರುವ ಸ್ಥಿರಾಸ್ತಿ ರೂ.30 ಕೋಟಿ ಇದೆ.

    ದಂಪತಿಗಳ ಒಟ್ಟು ಆಸ್ತಿ ಎಷ್ಟು?

    ದಂಪತಿಗಳ ಒಟ್ಟು ಆಸ್ತಿ ಎಷ್ಟು?

    ಅನಿತಾ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿ ಮೌಲ್ಯ ರೂ.179 ಕೋಟಿ (ರೂ.179,08,04,088). ಕುಮಾರಸ್ವಾಮಿ ಒಬ್ಬರದ್ದೇ ರೂ.44,75,47,485. ಅನಿತಾ ಕುಮಾರಸ್ವಾಮಿ ಹೆಸರಲ್ಲಿರುವುದು ರೂ.134 ಕೋಟಿ (ರೂ.134,32,56,606) ಆಸ್ತಿ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    JDS president HD Kumaraswamy filed nomination yesterday from Chenpatna. He submits his and his wife's assets information to the election officer. here is the asset information of HD Kumaraswamy and his wife Anitha Kumaraswamy.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more