• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿರಿಯೂರಿನಲ್ಲಿ ಕಮಲ ಅರಳಿಸಲು ನಾನಾ ಕಸರತ್ತು

By ಚಿದಾನಂದ್ ಹಿರಿಯೂರು
|

ಕಾಡುಗೊಲ್ಲರ ಕಾಶಿ ಎಂದು ಪ್ರಸಿದ್ಧಿ ಪಡೆದಿದ್ದು ಜೊತೆಗೆ ಸಾಕಷ್ಟು ಇತಿಹಾಸವಿರುವ ಅನೇಕ ದೇವಸ್ಥಾನಗಳು. ಒಂದೆರಡು ಪ್ರೇಕ್ಷಣೀಯ ಸ್ಥಳಗಳು ಸೇರಿದಂತೆ ಕಲೆಯಲ್ಲಿ ಶ್ರೀ ಮಂತಿಕೆಯನ್ನು ಹೊಂದಿರುವ ಕ್ಷೇತ್ರ ಹಿರಿಯೂರು. ಸತತವಾಗಿ ಮೂರ್ನಾಲ್ಕು ವರ್ಷಗಳ ಬರಗಾಲಕ್ಕೆ ತುತ್ತಾಗಿದ್ದರು ರಾಜಕೀಯ ಚುನಾವಣೆಗೆ ಜಿದ್ದಾ ಜಿದ್ದಿಯ ಕಣವಾಗಿದೆ..

ಹಿರಿಯೂರು ಬಿಜೆಪಿಯ ರಾಜಕೀಯ ಚಿತ್ರಣ

ಒಂದಾನೊಂದು ಕಾಲದಲ್ಲಿ ಹಿರಿಯೂರಿನಲ್ಲಿ ಬಿಜೆಪಿಯ ವಾಸನೆ ಇರಲಿಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇಂದು ಜಿಲ್ಲಾ ಪಂಚಾಯಿತಿ ಒಂದು ಸ್ಥಾನ. ತಾಲೂಕು ಪಂಚಾಯಿತಿ ಎರಡು ಸ್ಥಾನಗಳು.

ಕ್ಷೇತ್ರ ಪರಿಚಯ : ತ್ರಿಕೋನ ಸ್ಪರ್ಧೆಯಲ್ಲಿ ಹಿರಿಯೂರು

ಒಂದಿಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಇದ್ದು ಮೊದಲನೇ ಬಾರಿಗೆ ಹಿರಿಯೂರು ನಗರಸಭೆಯನ್ನು ತನ್ನ ಹಿಡಿತಕ್ಕೆ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು ಹಿರಿಯೂರಿನಲ್ಲಿ ತನ್ನದೆ ಆದ ವಾಸನೆಯ ಬಿರುಗಾಳಿ ಬಿಸಿದೆ...

ಹಿರಿಯೂರು ಕೋಟೆ ಬೇಧಿಸಲು ಬಂದ ಬಿಜೆಪಿಯ ಅಶ್ವಮೇಧ

ಕ್ಷೇತ್ರ: ಬರದ ನಾಡಿನ ವೈವಿಧ್ಯಮಯ ಕ್ಷೇತ್ರ ಹಿರಿಯೂರು

ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರ ಬುನಾದಿ ಎಂದೇ ಬಿಂಬಿತವಾಗಿರುವ ಹಿರಿಯೂರು ಕ್ಷೇತ್ರವನ್ನು ತಳ ಮಟ್ಟದಿಂದ ಪ್ರತಿಯೊಂದು ಹಂತದಲ್ಲೂ ಪಕ್ಷ ಸಂಘಟನೆ ಮಾಡಿಕೊಂಡು ಮೊದಲ ಬಾರಿಗೆ ನಗರಸಭೆಯನ್ನು ಆಡಳಿತಕ್ಕೆ ಪಡೆದುಕೊಂಡಿದ್ದು. ಯುವಕರನ್ನು ಸಂಘಟನೆ ಮಾಡಿಕೊಂಡು ಕೆಲವು ಸಮಾಜದ ಘಟಾನುಘಟಿ ನಾಯಕರನ್ನು ತನ್ನ ಪಕ್ಷಕ್ಕೆ ಸಳೆದುಕೊಂಡು. ಕೇಂದ್ರದಲ್ಲಿ ಮೋದಿಯವರ ಉತ್ತಮ ಆಡಳಿತ.

ಬಿಜೆಪಿಯ ಪರಿವರ್ತನಾ ಯಾತ್ರೆ

ಬಿಜೆಪಿಯ ಪರಿವರ್ತನಾ ಯಾತ್ರೆ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಕೆ.ಎಸ್ ಈಶ್ವರಪ್ಪ, ನಾಯಕ ಜನಾಂಗದ ಸಂಸದ ಶ್ರೀರಾಮುಲು, ಶಾಸಕ ತಿಪ್ಪೇಸ್ವಾಮಿ, ಜಿ.ಎಚ್. ತಿಪ್ಪಾರೆಡ್ಡಿ, ಸಿದ್ದೇಶ್ ಯಾದವ್ ಇನ್ನಿತರ ಬಿಜೆಪಿಯ ಪ್ರಬಲ ಮುಖಂಡರು ಕ್ಷೇತ್ರಕ್ಕೆ ಆಗಮಿಸಿ ಬಲ ತುಂಬಿದ್ದಾರೆ. ಕೇಂದ್ರದ ಜನಪ್ರಿಯ ಯೋಜನೆಗಳು ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಡಲಾಗಿದೆ.

ಹಿರಿಯೂರಿನಲ್ಲಿ ಜನವರಿ 10 ರಂದು ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಂಡಿದ್ದರು. ಅಪಾರ ಜನಸ್ತೋಮ ಗೆಲುವಿಗೆ ಹೊಸ ವರ್ಷದ ಚಿಗುರು ನೀಡಿದೆ ಎನ್ನಬಹುದು.

ಜನಮನ್ನಣೆಗಾಗಿ ಬಿಜೆಪಿ ಅಭ್ಯರ್ಥಿ ಕಸರತ್ತು

ಜನಮನ್ನಣೆಗಾಗಿ ಬಿಜೆಪಿ ಅಭ್ಯರ್ಥಿ ಕಸರತ್ತು

ಶ್ರೀಕೃಷ್ಣ ಜನ್ಮಾಷ್ಟಮಿ, ವಾಲ್ಮೀಕಿ ಜಯಂತಿ, ಅಂಬೇಡ್ಕರ್ ಜಯಂತಿ. ಸಿದ್ದರಾಮೇಶ್ವರ ಜಯಂತಿ ಇನ್ನು ವಿವಿಧ ಜಯಂತಿಗಳಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಅವರು ಪಾಲ್ಗೊಂಡು ಜನಮನ್ನಣೆ ಗಳಿಸಿದ್ದಾರೆ.

ಕ್ಷೇತ್ರದಲ್ಲಿ ನಡೆಯುವ ಮದುವೆ, ನಾಮಕರಣ, ಜಾತ್ರೆ, ಪೂಜೆ ಪುನಸ್ಕಾರಗಳು, ಹಬ್ಬ ಹರಿದಿನಗಳಲ್ಲಿ ಪಾಲ್ಗೊಳ್ಳುವುದು, ನಿರುದ್ಯೋಗಿಗಳಿಗೆ ಉದ್ಯೋಗ ಮೇಳ, ಕ್ರಿಕೆಟ್ ಟೂರ್ನಿಮೆಂಟ್ ಏರ್ಪಡಿಸುವುದರ ಮೂಲಕ ತನ್ನ ಮತದಾರರನ್ನು ಸೆಳೆಯುತ್ತಿರುವುದು ಕಂಡು ಬಂದಿದೆ.

ಬರಗಾಲದಲ್ಲಿ ಅನ್ನ, ನೀರು ಕೊಟ್ಟು ದಾಹ ನೀಗಿಸಿದರು

ಬರಗಾಲದಲ್ಲಿ ಅನ್ನ, ನೀರು ಕೊಟ್ಟು ದಾಹ ನೀಗಿಸಿದರು

ಬರಗಾಲಕ್ಕೆ ಬಳಲಿದ ಹಿರಿಯೂರು ತಾಲ್ಲೂಕಿನ ಸುಮಾರು ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಯಿತು ಇಂತಹ ಒಂದು ಸಂಧರ್ಭದಲ್ಲಿ ಪ್ರತಿಯೊಂದು ಹಳ್ಳಿಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಿ ಜೊತೆಗೆ ಗೋಶಾಲೆ ಯಲ್ಲಿ ಪ್ರತಿನಿತ್ಯ ಅನ್ನ ನೀಡಿ ಹಸಿವನ್ನು ನೀಗಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಭೇಟಿ, ಪ್ರಗತಿಪರ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ಬೆಳೆ ಹಾನಿಯಾದ ಹೊಲಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಲು ಸಹಾಯವಾದ ಇಂಥವರಿಗೆ ಒಂದು ಬಾರಿ ಅಧಿಕಾರ ಕೊಡಬೇಕು ಎಂಬುದು ಕೆಲವು ಮತದಾರರ ಮನದಾಳದ ಮಾತುಗಳಾಗಿವೆ

ಪತಿಯ ಗೆಲುವಿಗಾಗಿ ಕೈ ಜೋಡಿಸಿದ ಪೂರ್ಣಿಮಾ

ಪತಿಯ ಗೆಲುವಿಗಾಗಿ ಕೈ ಜೋಡಿಸಿದ ಪೂರ್ಣಿಮಾ

ಕಳೆದ ಬಾರಿ ಕೇವಲ ಕೂದಲಳೆ ಅಂತರದಲ್ಲಿ ಸೋತಿದ್ದ ಪೂರ್ಣಿಮಾ ನವರ ತಂದೆ ದಿ /ಎ. ಕೃಷ್ಣಪ್ಪ ನವರು. ಬದಲಾದ ಸಮಯದಲ್ಲಿ ಅವರು ಅಕಾಲಿಕ ಮರಣಕ್ಕೆ ತುತ್ತಾದರು. ತಂದೆಯ ಸಾವಿನ ಅನುಕಂಪ ನಮ್ಮ ಕುಟುಂಬದ ಮೇಲೆ ತೊರಿಸಿ ಒಂದು ಸಾರಿ ಅವಕಾಶ ಕೊಡಿ ಎಂದು ಪ್ರತಿ ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿರುವುದು ಮಹಿಳೆಯರಿಗೆ ಕಷ್ಟ ಕಾಲದಲ್ಲಿ ಸ್ಪಂದಿಸುತ್ತಿರುವುದು. ಇದರ ಜೊತೆಗೆ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸೇರಿ ಹಿರಿಯೂರಿನಲ್ಲಿ ಕಮಲ ಬಾವುಟ ಹಾರಿಸಲು ಸಾಕಷ್ಟು ಪ್ರಯತ್ನಗಳು ನೆಡೆಯುತ್ತಿದ್ದು ಡಿ.ಟಿ ಶ್ರೀನಿವಾಸ್ ಗೆಲುವಿಗಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಬದಲಾವಣೆ ಬಯಸಿದ್ದಾರೆ ಹಿರಿಯೂರು ಮತದಾರರು

ಬದಲಾವಣೆ ಬಯಸಿದ್ದಾರೆ ಹಿರಿಯೂರು ಮತದಾರರು

ಒಂದು ಸಾರಿ ಕ್ಷೇತ್ರದ ಅಧಿಕಾರವನ್ನ ಬದಲಾವಣೆ ಬಯಸಿದ್ದು ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮರಳು ಮಾಫಿಯಾ, ದಬ್ಬಾಳಿಕೆ, ಸರಿಯಾದ ರಸ್ತೆ ಸಂಪರ್ಕ ಇಲ್ಲ,. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಉದ್ಯೋಗ ಸೃಷ್ಟಿಯಾಗಿಲ್ಲ, ನಿರುದ್ಯೋಗ, ಜನರು ಗೂಳೆ ಹೋಗುವ ಪರಿಸ್ಥಿತಿ ಎದುರಾಗಿದ್ದು ಮತದಾರರು ಹಿರಿಯೂರು ಬದಲಾವಣೆ ತರಬೇಕು ಎಂಬ ನಿರ್ಣಯಕ್ಕೆ ಬಂದಿದ್ದು ಹಿರಿಯೂರಿನಲ್ಲಿ ಬಿಜೆಪಿಯ ಬಗ್ಗೆ ಎಲ್ಲ ಸಮುದಾಯದ ಬೆಂಬಲ ಇದೆ ಎಂಬುದು ಬಿಜೆಪಿ ಮುಖಂಡರ ಅಭಿಪ್ರಾಯವಾಗಿದೆ.

ಒಟ್ಟಾರೆಯಾಗಿ ಚುನಾವಣೆ ದಿನದಿಂದ ದಿನಕ್ಕೆ ಬಿಸಿ ಹೆಚ್ಚಾಗಿದ್ದು ಈ ಬಾರಿ ಹಿರಿಯೂರಿನಲ್ಲಿ ಕೇಸರಿ ಬಣ್ಣದ ಬಾವುಟ ಹಾರುತ್ತಾ ಹಾಗೂ ಅನುಕಂಪದ ಅಲೆ ಬೀಸುತ್ತಾ ಎಂಬುದಕ್ಕೆ ಮೇ 15 ತನಕ ಕಾದು ನೋಡಬೇಕಿದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Elections 2018 : Bharatiya Janata Party(BJP) is trying hard to ge t hold off Hiriyuru constituency in Chitradurga. BJP candidate D.T Srinivas had visited all possible functions, event to keep in touch with his voters. Senior BJP leaders also visited constituency to boost the campaign.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more