ಸಿ.ವಿ.ರಾಮನ್ ನಗರ ಆಪ್ ಅಭ್ಯರ್ಥಿ ಮೋಹನ ದಾಸರಿ ಪರಿಚಯ

'ಜನ ಮೊದಲು ರಾಜಕೀಯ ನಂತರ' ಎಂಬ ಧ್ಯೇಯದೊಂದಿಗೆ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಮೋಹನ ದಾಸರಿ. ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದಿಂದ ಅವರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಎನ್‌ಐಟಿಕೆ ಸುರತ್ಕಲ್‌ನಿಂದ ಇಂಜಿನಿಯರಿಂಗ್ ಮತ್ತು ಬಿಐಟಿಎಸ್‌ ಪಿಲಾನಿಯಿಂದ ಎಂಎಸ್ ಮಾಡಿರುವ ಮೋಹನ ದಾಸರಿ ಅವರು, 14 ವರ್ಷಗಳಿಂದ ಸಾಫ್ಟ್‌ವೇರ್ ಡೆವಲಪರ್‌ನಿಂದ ಹಿಡಿದು ಟೆಕ್ ಮ್ಯಾನೇಜರ್‌ ತನಕ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಎನ್‌ಐಟಿಕೆ ಸುರತ್ಕಲ್‌ನ ಸ್ನೇಹಿತರ ಜೊತೆ ಸೇರಿ ಆರುಷಿ ಫೌಂಡೇಷನ್ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯನ್ನು ಹುಟ್ಟ ಹಾಕಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸಲು ಫೌಂಡೇಷನ್ ಕೆಲಸ ಮಾಡುತ್ತಿದೆ.

CV Raman Nagar AAP candidate Mohan Dasari profile

'ಕಗ್ಗದಾಸಪುರ ಕೆರೆ ಉಳಿಸಿ' ಎಂಬ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ. ಕಾನೂನು ಬಾಹಿರ ಕಬಳಿಕೆಯಿಂದ ಮತ್ತು ಕಸ ಸುರಿಯವುದರಿಂದ ಕೆರೆಯನ್ನು ಉಳಿಸಲು ನಡೆದಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಹದಗೆಟ್ಟು ಹೋಗಿದ್ದ ಕಗ್ಗದಾಸಪುರ ಮುಖ್ಯ ರಸ್ತೆಯ ದುರಸ್ತಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಅವರು ಆಂದೋಲನ ನಡೆಸಿದ್ದರು.

ರಾಜಕೀಯ ಪ್ರವೇಶ : 2014ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಚಿತ್ರದುರ್ಗದಲ್ಲಿ ಸ್ಪರ್ಧೆ ಮಾಡಿದ್ದರು. ಲೋಕಾಯುಕ್ತ ಉಳಿಸಿ ಎಂದು 5 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು.

ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ, ಸೂರು ಮತ್ತು ನೆಲೆಯಿಲ್ಲದವರಿಗಾಗಿ ರಾಜ್ಯಾದ್ಯಂತ ಹೋರಾಟ ಮಾಡಿದ್ದರು. ಚಲೋ ಉಡುಪಿ, ಚಲೋ ತುಮಕೂರು, ಚಲೋ ಗುಡಿಬಂಡೆ ಮುಂತಾದ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+