2018 ಚುನಾವಣೆ ಕಣದಲ್ಲಿರುವ ರಾಜಕೀಯ ಪಕ್ಷಗಳ ಪಟ್ಟಿ
ಬೆಂಗಳೂರು, ಏಪ್ರಿಲ್ 25: 2018ರ ಕರ್ನಾಟಕ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ, ಪ್ರಚಾರ ಕಾರ್ಯದಲ್ಲಿ ಪಕ್ಷಗಳು ಮಗ್ನವಾಗಿವೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಲ್ಲದೆ ಸರಿ ಸುಮಾರು 28ಕ್ಕೂ ಅಧಿಕ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
2013ರ ಚುನಾವಣೆಯಲ್ಲಿ 6 ರಾಷ್ಟ್ರೀಯ, ಏಳು ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ, ಬಿ.ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.
ಕನ್ನಡ ಚಳವಳಿ ವಾಟಾಳ್ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ಎಐಎಡಿಎಂಕೆ, ಡಿಎಂಕೆ ಮುಂತಾದ ಪಕ್ಷಗಳ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಲೇ ಇರುತ್ತಾರೆ. ಈ ಬಾರಿ ವಾಟಾಳ್ ಹೊಸ ಪಕ್ಷದೊಂದಿಗೆ ಕಣದಲ್ಲಿದ್ದಾರೆ. ಗಿನ್ನಿಸ್ ದಾಖಲೆ ಬರೆದ ಹೊಟ್ಟೆ ಪಕ್ಷ ಈಗ ರಂಗಸ್ವಾಮಿ ಇಲ್ಲದೆ ಪರಂಧಾಮ ಸೇರಿದೆ.

ಈ ಬಾರಿ ಮಹಿಳಾ ಎಂಪವರ್ಮೆಂಟ್ ಪಾರ್ಟಿ(ಎಂಇಪಿ), ಪ್ರಜಾ ಪರಿವರ್ತನಾ ಪಕ್ಷ, ಕೆಪಿಜೆಪಿ, ಭಾರತೀಯ ಜನಶಕ್ತಿ ಕಾಂಗ್ರೆಸ್ ಮುಂತಾದವರು ಕಣದಲ್ಲಿರುವ ಹೊಸ ಪಕ್ಷಗಳಾಗಿವೆ.
ನಟ ಉಪೇಂದ್ರ ಅವರು ಕೆಪಿಜೆಪಿಯಿಂದ ಹೊರ ಬಂದು ಘೋಷಿಸಿದ ಪ್ರಜಾಕೀಯ ಪಕ್ಷ ಸದ್ಯಕ್ಕೆ ಚುನಾವಣಾ ಆಯೋಗದ ಮಾನ್ಯತೆ ಗಳಿಸಲು ಸಮಯ ಸಾಲದ ಕಾರಣ, ಈ ಬಾರಿ ಸ್ಪರ್ಧೆಗಿಳಿಯುತ್ತಿಲ್ಲ.
2018ರ ಕಣದಲ್ಲಿರುವ ಪಕ್ಷಗಳು:
1. BJP - ಭಾರತೀಯ ಜನತಾ ಪಕ್ಷ
2. BSP - ಬಹುಜನ ಸಮಾಜ ಪಕ್ಷ
3. CPI- ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ
4. CPM- ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ)
5. INC- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
6. NCP- ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಪ್ರಾದೇಶಿಕ ಪಕ್ಷಗಳು
* JD(S)- ಜಾತ್ಯಾತೀತ ಜನತಾ ದಳ
* KPJP - ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ
* BJC- ಭಾರತೀಯ ಜನಶಕ್ತಿ ಕಾಂಗ್ರೆಸ್
* KPSR-ಕರ್ನಾಟಕ ಪ್ರಜಾ ಸಂಯುಕ್ತ ರಂಗ
* JSP - ಜನ ಸಾಮಾನ್ಯರ ಪಕ್ಷ
* KRRS- ಕರ್ನಾಟಕ ರಾಜ್ಯ ರೈತ ಸಂಘ
* AAP- ಆಮ್ ಆದ್ಮಿ ಪಕ್ಷ
* AIMEP-ಆಲ್ ಇಂಡಿಯಾ ಮಹಿಲಾ ಎಂಪವರ್ ಮೆಂಟ್ ಪಾರ್ಟಿ
* JDU -ಸಂಯುಕ್ತ ಜನತಾದಳ
ಇತರೆ ರಾಜ್ಯಗಳ ಪಕ್ಷಗಳು
* ADMK- ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ
* IUML-ಭಾರತೀಯ ಯೂನಿಯನ್ ಮುಸ್ಲಿಮ್ ಲೀಗ್
* JD(U)- ಜನತಾ ದಳ(ಸಂಯುಕ್ತ)
* SR- ಸ್ವರಾಜ್ ಇಂಡಿಯಾ












Click it and Unblock the Notifications