ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಸಂದರ್ಶನ | Oneindia Kannada

ಬಿಜೆಪಿಯಿರಲಿ, ಕಾಂಗ್ರೆಸ್ ಇರಲಿ ಅಥವಾ ಇನ್ನೊಂದು ಪಕ್ಷವಿರಲಿ, ರಾಜಕೀಯದಲ್ಲಿ ಗೆಲ್ಲುವ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ ರಾಜ್ಯ ರಾಜಕಾರಣಿಗಳ ಪೈಕಿ 'ಸೈನಿಕ' ಸಿ ಪಿ ಯೋಗೇಶ್ವರ್ ಕೂಡಾ ಒಬ್ಬರು.

1999 ರಿಂದ 2013ರ ವರೆಗೆ ನಡೆದ (ಉಪಚುನಾವಣೆಯೂ ಸೇರಿ) ಆರು ಇಲೆಕ್ಷನ್ ನಲ್ಲಿ ಯೋಗೇಶ್ವರ್ ಐದು ಬಾರಿ ಗೆದ್ದಿದ್ದಾರೆ. ಇದಕ್ಕಾಗಿ ಇವರು ಆಯ್ಕೆ ಮಾಡಿಕೊಂಡ ಪಾರ್ಟಿ ಕಾಂಗ್ರೆಸ್, ಬಿಜೆಪಿ, ಎಸ್ಪಿ ಮತ್ತು ಒಮ್ಮೆ ಪಕ್ಷೇತರರಾಗಿ ಕಣಕ್ಕಿಳಿದು ಅಲ್ಲೂ ಪ್ರಾಭ್ಯಲ್ಯ ಮೆರೆದಿದ್ದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ: ಟಾರೋ ರೀಡಿಂಗ್ಚನ್ನಪಟ್ಟಣ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ: ಟಾರೋ ರೀಡಿಂಗ್

2009 ರಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ದ 2,200 ಮತಗಳ ಅಂತರದಿಂದ ಒಮ್ಮೆ ಸೋತಿದ್ದನ್ನು ಬಿಟ್ಟರೆ ಯೋಗೇಶ್ವರ್ ಅವರ ಗೆಲುವಿನ ಓಟ ಮುಂದುವರಿಯುತ್ತಲೇ ಇದೆ. ಈ ಭಾಗದಲ್ಲಿ 'ಭಗೀರಥ' ಎಂದೇ ಕರೆಯಲ್ಪಡುವ ಯೋಗೇಶ್ವರ್ ಅವರ ವೈಯಕ್ತಿಕ ವರ್ಚಸ್ಸೇ ಅವರ ಯಶಸ್ಸಿನ ಗುಟ್ಟು ಎಂದರೆ ತಪ್ಪಾಗಲಾರದು.

ಕಳೆದ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿಯವರನ್ನು ಮಣಿಸಿದ್ದ ಯೋಗೇಶ್ವರ್, ಈ ಬಾರಿಯೂ ತಮ್ಮ ಗೆಲುವಿನ ಓಟವನ್ನು ಮುಂದುವರಿಸಿಕೊಂಡು ಹೋಗಲಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರವನ್ನು ಮತದಾರ ಸದ್ಯದಲ್ಲೇ ನೀಡಲಿದ್ದಾನೆ.

ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಚನ್ನಪಟ್ಟಣದಲ್ಲಿ ಎಚ್ಡಿಕೆ ಜಯಭೇರಿಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಚನ್ನಪಟ್ಟಣದಲ್ಲಿ ಎಚ್ಡಿಕೆ ಜಯಭೇರಿ

ಈ ಬಾರಿಯ ಚುನಾವಣೆಯಲ್ಲಿ ಯೋಗೇಶ್ವರ್ ಅವರು ಪ್ರಭಲ ಎದುರಾಳಿಗಳನ್ನು ಎದುರಿಸಬೇಕಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಖುದ್ದು ಚನ್ನಪಟ್ಟಣ ಕ್ಷೇತ್ರದಲ್ಲೂ ನಿಂತಿದ್ದರೆ, ಕಾಂಗ್ರೆಸ್ಸಿನಿಂದ ಎಚ್ ಎಂ ರೇವಣ್ಣ ಕಣಕ್ಕಿಳಿದಿದ್ದಾರೆ.

ಅಲ್ಲಿಗೆ ಯೋಗೇಶ್ವರ್ ಅವರಿಗೆ ಎದುರಾಳಿಗಳು ವಲಸಿಗರು ಎನ್ನುವ ಅಸ್ತ್ರ ಸಿಕ್ಕಂತಾಗಿದೆ. ಪ್ರಸಕ್ತ ಚುನಾವಣೆ, ಡಿಕೆಶಿ ಜೊತೆಗಿನ ವೈರತ್ವದ ಬಗ್ಗೆ ಯೋಗೇಶ್ವರ್ 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದ ವೇಳೆ ವಿವರಿಸಿದ್ದಾರೆ. ಸಂದರ್ಶನದ ಹೈಲೆಟ್ಸ್ ಮುಂದೆ ಓದಿ..

ಕಳೆದ ಚುನಾವಣೆಯನ್ನು ತುಲನೆ ಮಾಡಿ ನೋಡಲು ಆಗುವುದಿಲ್ಲ

ಕಳೆದ ಚುನಾವಣೆಯನ್ನು ತುಲನೆ ಮಾಡಿ ನೋಡಲು ಆಗುವುದಿಲ್ಲ

ಪ್ರ: ಕಳೆದ ಚುನಾವಣೆಯಲ್ಲಿ 6ಸಾವಿರ ಮತಗಳ ಅಂತರದಿಂದ ಗೆದ್ದಿದ್ರಿ, ಈ ಬಾರಿಯ ಚುನಾವಣೆ ಹೇಗಿದೆ?
ಯೋಗೇಶ್ವರ್: ಕಳೆದ ಚುನಾವಣೆಯನ್ನು ತುಲನೆ ಮಾಡಿ ನೋಡಲು ಆಗುವುದಿಲ್ಲ. ಆಯಾ ಕಾಲಮಾನಕ್ಕೆ ತಕ್ಕಂತೆ ಚುನಾವಣೆ ನಡೆಯುತ್ತೆ. ಕಳೆದ ಬಾರಿ ನೇರ ನೇರ ಪೈಪೋಟಿ ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಕೂಡಾ ಕಣದಲ್ಲಿದ್ದರು. ಈ ಬಾರಿ ತ್ರಿಕೋಣ ಸ್ಪರ್ಧೆ ನಡೆಯುತ್ತಿದೆ.

ಆದರೆ, ಇಡೀ ತಾಲೂಕಿನ ಜನ ನನ್ನ ಜೊತೆಗಿದ್ದಾರೆ. ಕರ್ನಾಟಕದಲ್ಲಿ ಆಗದೇ ಇರತಕ್ಕಂತಹ ನೀರಾವರಿ ಕೆಲಸವನ್ನು ನಾನು ಮಾಡಿದ್ದೇನೆ. ನೂರಾರು ಕೆರೆಕಟ್ಟೆಗಳು ತುಂಬಿವೆ. ಅಂತರ್ಜಲ ಈಗ ಸಾವಿರದಿಂದ ನೂರು ಅಡಿಗೆ ಬಂದು ನಿಂತಿದೆ. ಜನ ನನ್ನ ಜೊತೆಗಿದ್ದಾರೆ, ಹಾಗಾಗಿ ಪ್ರತಿಸ್ಪರ್ಧಿಗಳು ಯಾರೇ ಇರಲಿ ನನಗೆ ಅನುಕೂಲಕರ ವಾತಾವರಣವಿದೆ.

ತೊಂದರೆಯಾಗಲಿ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿದ್ದಾರೆ

ತೊಂದರೆಯಾಗಲಿ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿದ್ದಾರೆ

ಪ್ರ: ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಉದ್ದೇಶ ಮತವಿಭಜನೆಯಾ?
ಯೋಗೇಶ್ವರ್: ಚುನಾವಣೆ ಎಂದ ಮೇಲೆ ತಂತ್ರಗಾರಿಕೆ ಇದ್ದಿದ್ದೇ. ಇಲ್ಲಿ ನೇರ ಸ್ಪರ್ಧೆ ಇರುವುದು ನನಗೆ ಮತ್ತು ಕುಮಾರಸ್ವಾಮಿಗೆ. ಕಾಂಗ್ರೆಸ್ಸಿನ ಮತಗಳು ಕೊನೆಯ ಹಂತದಲ್ಲಿ ಡಿವೈಡ್ ಆಗುತ್ತದೆ. ಕಾಂಗ್ರೆಸ್ಸಿನ ಮತಗಳಿಂದ ಯಾರಿಗೆ ಲಾಭವಾಗಲಿದೆ ಎನ್ನುವುದನ್ನು ತೀರ್ಮಾನ ಮಾಡುವವನು ಮತದಾರ.

ನನಗೆ ತೊಂದರೆಯಾಗಲಿ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿದ್ದಾರೆ. ನನಗೆ ಹಿಂದುಳಿದ ಮತಗಳು ಯಾವಾಗಲೂ ಇದೆ. ಅದನ್ನು ಒಡೆಯುವ ಉದ್ದೇಶ ಕಾಂಗ್ರೆಸ್ ನವರದ್ದು. ಆದರೆ, ಕಾಂಗ್ರೆಸ್ಸಿನ ಯಾವ ಲೆಕ್ಕಾಚಾರವೂ ವರ್ಕೌಟ್ ಆಗುವುದಿಲ್ಲ, ಬಹುಪಾಲು ಮತದಾರರು ನನ್ನ ಜೊತೆಗಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ರೇವಣ್ಣ ಸಂದರ್ಶನಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ರೇವಣ್ಣ ಸಂದರ್ಶನ

ಬಿಜೆಪಿಯಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಯಾಗಿದ್ದೇನೆ

ಬಿಜೆಪಿಯಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಯಾಗಿದ್ದೇನೆ

ಪ್ರ: ಬಿಜೆಪಿ ಮುಖಂಡರ ಜೊತೆಗೆ ಕೊನೆಯ ಕ್ಷಣದಲ್ಲಿ ಸಿಟ್ಟಾಗಿದ್ದಕ್ಕೆ ಕಾರಣ?
ಯೋಗೇಶ್ವರ್: ಬೇರೆ ಕ್ಷೇತ್ರದಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲವಿದ್ದಿದ್ದು ನಿಜ. ಯಾಕೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎನ್ನುವುದರ ಬಗ್ಗೆ ನಮ್ಮ ಮುಖಂಡರು ನನಗೆ ವಿವರಿಸಿದ್ದಾರೆ. ಹಾಗಾಗಿ, ಬಿಜೆಪಿಯಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಯಾಗಿದ್ದೇನೆ.

ಯೋಗೇಶ್ವರ್ ಗೆದ್ದರೆ ನೇಣು ಹಾಕೋತೀವಿ

ಯೋಗೇಶ್ವರ್ ಗೆದ್ದರೆ ನೇಣು ಹಾಕೋತೀವಿ

ಪ್ರ: ಯೋಗೇಶ್ವರ್ ಗೆದ್ದರೆ ನೇಣು ಹಾಕೋತೀವಿ ಅಂತಾ ಜೆಡಿಎಸ್ ನವರು ಹೇಳಿದ್ದಾರಲ್ಲಾ?
ಯೋಗೇಶ್ವರ್: ಭಾವೋದ್ವೇಗಕ್ಕೊಳಗಾಗಿ ಇಂತಹ ಹೇಳಿಕೆಯನ್ನು ನೀಡುತ್ತಾರೆ. ಆದರೆ ನಮ್ಮ ತಾಲೂಕಿನ ಜನ ಎಲ್ಲಾ ತಿಳಿದವರಾಗಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಮಾತನ್ನು ತಿರುಚಿದಂತಹ ಉದಾಹರಣೆಗಳು ಇವೆ. Emotional blackmail ಮಾಡುವುದನ್ನು ನಾನು ಖಂಡಿಸುತ್ತೇನೆ. ನೂರಕ್ಕೆ ನೂರು ನಾನು ಈ ಚುನಾವಣೆಯನ್ನು ಗೆಲ್ಲುತ್ತೇನೆ.

ಪ್ರ: ಚುನಾವಣೆಯ ವೇಳೆ ನಿಮಗೆ ಐಡೆಂಟಿಟಿ ಬೇಕೆಂದು ಬಿಜೆಪಿಗೆ ಸೇರಿದ್ರಾ?
ಯೋಗೇಶ್ವರ್: ಆ ರೀತಿ ಏನೂ ಇಲ್ಲ. ಬಿಜೆಪಿಯ ಸಿದ್ದಾಂತವನ್ನು ನಂಬಿಯೇ ನಾನು ಆ ಪಕ್ಷ ಸೇರಿದ್ದು. ಹಿಂದೆ ಕೂಡಾ ನಾನು ಆ ಪಕ್ಷದಲ್ಲಿದ್ದೆ. ಇದು ನಾಲ್ಕನೇ ಬಾರಿ ಕಮಲದ ಚಿಹ್ನೆಯಲ್ಲಿ ನಾನು ಸ್ಪರ್ಧಿಸುತ್ತಿರುವುದು. ಬಿಜೆಪಿ ಒಡೆದು ಮೂರು ಭಾಗವಾದಾಗ ಅನಿರ್ವಾಯವಾಗಿ ಬಿಜೆಪಿ ಬಿಡಬೇಕಾಯಿತು. ಆಗ ನೆಪಮಾತ್ರಕ್ಕೆ ಎಸ್ಪಿ ಸಿಂಬಲ್ ಸಿಕ್ತು ಅನ್ನೋದನ್ನು ಬಿಟ್ಟರೆ, ನಾನು ಎಂದಿಂದಿಗೂ ಬಿಜೆಪಿಯವನೇ.

ಕ್ಷೇತ್ರ ಪರಿಚಯ : ಚನ್ನಪಟ್ಟಣದಲ್ಲಿ ಎಚ್ ಡಿ ಕೆ ಮತ್ತು ಸಿಪಿವೈ ನೇರ ಹಣಾಹಣಿ ಕ್ಷೇತ್ರ ಪರಿಚಯ : ಚನ್ನಪಟ್ಟಣದಲ್ಲಿ ಎಚ್ ಡಿ ಕೆ ಮತ್ತು ಸಿಪಿವೈ ನೇರ ಹಣಾಹಣಿ

ಬಲಿಷ್ಠ ನಾಯಕತ್ವವನ್ನು ಒಪ್ಪಿಕೊಂಡು ನಮಗೆ ಬೆಂಬಲ ಸೂಚಿಸುತ್ತಿದ್ದಾರೆ.

ಬಲಿಷ್ಠ ನಾಯಕತ್ವವನ್ನು ಒಪ್ಪಿಕೊಂಡು ನಮಗೆ ಬೆಂಬಲ ಸೂಚಿಸುತ್ತಿದ್ದಾರೆ.

ಪ್ರ: ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ನಿಮ್ಮ ಗೆಲುವಿಗೆ ಕಾರಣನಾ?
ಯೋಗೇಶ್ವರ್: ನನ್ನ ಜೊತೆ ಪಕ್ಷವೂ ಕೂಡಾ ನನಗೆ ಪೂರಕವಾಗಿದೆ. ಮೋದಿಯವರ ಅಭಿಮಾನಿಗಳು ಅವರ ಬಲಿಷ್ಠ ನಾಯಕತ್ವವನ್ನು ಒಪ್ಪಿಕೊಂಡು ನಮಗೆ ಬೆಂಬಲ ಸೂಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರು ರಾಜ್ಯದ ಸಿಎಂ ಆಗುತ್ತಾರೆ. ಅವರಿಗೆ ಈ ಹಿಂದೆ ಬಹಳ ಅನ್ಯಾಯವಾಗಿದೆ. ಅನಾವಶ್ಯಕವಾಗಿ ಕಾನೂನಿನ ನೆಪದಲ್ಲಿ ಅವರಿಗೆ ತೊಂದರೆಯನ್ನು ಕೊಟ್ಟಿದ್ದಾರೆ. ಅವರು ಮತ್ತೆ ಸಿಎಂ ಆಗಬೇಕು ಎನ್ನುವ ಜನಾಭಿಪ್ರಾಯವಿದೆ.

ಡಿಕೆಶಿ - ಯೋಗೇಶ್ವರ್ ರಾಜಕೀಯ ಮೇಲಾಟಕ್ಕೆ ಕಾರಣ ಇಲ್ಲಿದೆ

ಡಿಕೆಶಿ - ಯೋಗೇಶ್ವರ್ ರಾಜಕೀಯ ಮೇಲಾಟಕ್ಕೆ ಕಾರಣ ಇಲ್ಲಿದೆ

ಪ್ರ: ನಿಮ್ಮ ಮತ್ತು ಡಿ ಕೆ ಶಿವಕುಮಾರ್ ನಡುವಿನ ಸಮಸ್ಯೆಗಳೇನು?
ಯೋಗೇಶ್ವರ್: ಡಿ ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿಯವರಿಗೆ ನನ್ನ ಬೆಳವಣಿಗೆಯನ್ನು ಸಹಿಸಲು ಆಗುತ್ತಿಲ್ಲ. ರಾಜಕೀಯವಾಗಿ ಪ್ರಭಲ ಸ್ಪರ್ಧಿಯಾಗಿ ಬೆಳೆಯುತ್ತಿರುವುದರಿಂದ ಅವರಿಗೆ ತೊಂದರೆಯಾಗುತ್ತಿರಬಹುದು.

ನನ್ನ ವಿರುದ್ದ ಅವರದ್ದು ವೈಯಕ್ತಿಕ ಆಲೋಚನೆಗಳು ಇವೆ, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ನಾನು ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ.

ಹೇಳುತ್ತಾ ಹೋದರೆ, ದೊಡ್ಡ ಪಟ್ಟಿಯಾಗುತ್ತದೆ

ಹೇಳುತ್ತಾ ಹೋದರೆ, ದೊಡ್ಡ ಪಟ್ಟಿಯಾಗುತ್ತದೆ

ಪ್ರ: ಚನ್ನಪಟ್ಟಣ ಕ್ಷೇತ್ರದಲ್ಲಿ ನೀವು ಮಾಡಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ಸ್ವಲ್ಪ ವಿವರಿಸುತ್ತೀರಾ?
ಯೋಗೇಶ್ವರ್: ನಾನು ಹೇಳುತ್ತಾ ಹೋದರೆ, ದೊಡ್ಡ ಪಟ್ಟಿಯಾಗುತ್ತದೆ. ನೂರಾರು ಕೆರೆ ತುಂಬುವಂತಹ ಕೆಲಸ, ಹೊಸ ಕೆರೆಗಳನ್ನು ಕಟ್ಟಿರುವುದು, ನೀರನ್ನು ಇಂಗಿಸುವುದು, ಕೃಷಿ ಸಂಬಂಧ ಕೆಲಸಗಳನ್ನು ಹೆಚ್ಚಿಸುವುದು, ಆರ್ಥಿಕವಾಗಿ ಜನ ನೆಮ್ಮದಿಯಿಂದ ಬದುಕಲು ಪೂರಕವಾದ ಕೆಲಸವನ್ನು ಮಾಡಿದ್ದೇವೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ತುಂಬಾ ಕೆಲಸಗಳು ಆಗಿವೆ, ಶೌಚಾಲಯಗಳು ನಿರ್ಮಾಣವಾಗಿದೆ.

ಸರಕಾರದ ಪಾಲುದಾರನಾಗಿ ಕೆಲಸ ಮಾಡುತ್ತೇನೆ

ಸರಕಾರದ ಪಾಲುದಾರನಾಗಿ ಕೆಲಸ ಮಾಡುತ್ತೇನೆ

ಪ್ರ: ಚನ್ನಪಟ್ಟಣದ ಮತದಾರರಲ್ಲಿ ನಿಮ್ಮ ಮನವಿ?
ಯೋಗೇಶ್ವರ್: ಇನ್ನೂ ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡಬಹುದು. ಮುಂದೆ ಬಿಜೆಪಿ ಸರಕಾರ ಬರುತ್ತದೆ. ನಾನು ಕೂಡಾ ಸರಕಾರದ ಪಾಲುದಾರನಾಗಿ ಕೆಲಸ ಮಾಡುತ್ತೇನೆ. ನನ್ನ ಎಲ್ಲಾ ಹಳೆಯ ಅನುಭವಗಳನ್ನು ಧಾರೆ ಎರೆದು ಕೆಲಸ ಮಾಡುತ್ತೇನೆ.

ನನ್ನ ಕ್ಷೇತ್ರದ ಜೊತೆಗೆ, ರಾಜ್ಯಕ್ಕೂ ಸೇವೆ ಸಲ್ಲಿಸುವ ಅವಕಾಶ ನನಗೆ ಸಿಗಲಿದೆ. ಜನ ನನಗೆ ಇನ್ನೊಮ್ಮೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಮನವಿ ಮಾಡುತ್ತಿದ್ದೇನೆ.

English summary
An exclusive interview with Channapatna BJP candidate CP Yogeshwar. During his interview, CPY very confident that, people of Channapatna will bless me again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X