ಶೀಘ್ರದಲ್ಲೇ ಇ-ಪಾಸ್‌ಪೋರ್ಟ್ ಬಿಡುಗಡೆ: ಏನಿದು?, ಇಲ್ಲಿದೆ ವಿವರ

ನವದೆಹಲಿ, ಜನವರಿ 07: ಭಾರತೀಯರಿಗೆ ಶೀಘ್ರದಲ್ಲೇ ಮೈಕ್ರೋ ಚಿಪ್‌ ಹೊಂದಿರುವ ಇ-ಪಾಸ್‌ಪೋರ್ಟ್ ಲಭ್ಯವಾಗಲಿದೆ ಎಂದು ವಿದೇಶಾಂಗ ಸಚಿವಾಲಯವು ಘೋಷಣೆ ಮಾಡಿದೆ. ಈ ಇ ಪಾಸ್‌ಪೋರ್ಟ್ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರಿಗೆ, ವಲಸಿಗರಿಗೆ ಎಲ್ಲಾ ನಾಗರಿಕರು ಲಭ್ಯವಾಗಲಿದೆ ಎಂದು ಕೂಡಾ ಸಚಿವಾಲಯ ಮಾಹಿತಿ ನೀಡಿದೆ. ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂಜಯ್‌ ಭಟ್ಟಾಚಾರ್ಯ ಈ ಬಗ್ಗೆ ಟ್ವಿಟ್ಟರ್‌ ಮೂಲಕ ಘೋಷಣೆ ಮಾಡಿದ್ದಾರೆ.

"ಈ ಹೊಸ ಇ-ಪಾಸ್‌ಪೋರ್ಟ್ ಹೊಸ ಹೊಸ ಫೀಚರ್‌ಗಳನ್ನು ಹೊಂದಿದೆ. ಇದರಲ್ಲಿ ಮೈಕ್ರೋಚಿಪ್‌ ಇರಲಿದೆ. ಇದು ಪಾಸ್‌ಪೋರ್ಟ್‌ದಾರರ ಬಯೊಮೆಟ್ರಿಕ್‌ ಡೇಟಾ, ಭದ್ರತೆಯ ವಿಚಾರಗಳು ಇರಲಿದೆ. ಇನ್ನು ಈ ಇ-ಪಾಸ್‌ಪೋರ್ಟ್‌ಅನ್ನು ನಾಸಿಕ್‌ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ನಲ್ಲಿ ತಯಾರಿ ಮಾಡಲಾಗುತ್ತದೆ.

ಮಾಧ್ಯಮಗಳ ವರದಿಯ ಪ್ರಕಾರ, ಇ ಪಾಸ್‌ಪೋರ್ಟ್‌ನಲ್ಲಿ ಚಿಪ್‌ ಇರಲಿದ್ದು ಈ ಚಿಪ್‌ನಲ್ಲಿ ಆ ಪಾಸ್‌ಪೋರ್ಟ್‌ದಾರರ ವಿವರಗಳು ಇರಲಿದೆ. ಪಾಸ್‌ಪೋರ್ಟ್‌ದಾರರ ಫೋಟೋ, ಬೆರಳಚ್ಚು, ಸಹಿ, ವಿಳಾದ, ಹೆಸರು ಇತ್ಯಾದಿ ಡೇಟಾಗಳು ಇರಲಿದೆ. ಹೀಗಾಗಿ ಅನಧಿಕೃತವಾಗಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ ಮೂಲಕ ಡೇಟಾವನ್ನು ವರ್ಗಾವಣೆ ಮಾಡುವುದು ಸಾಧ್ಯವಿಲ್ಲ.

 ಇ ಪಾಸ್‌ಪೋರ್ಟ್ ಉಪಯೋಗಗಳು ಏನು?

ಇ ಪಾಸ್‌ಪೋರ್ಟ್ ಉಪಯೋಗಗಳು ಏನು?

ಇ ಪಾಸ್‌ಪೋರ್ಟ್ ಪ್ರಯಾಣ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮಾಡಲಿದೆ. ಇನ್ನು ಇ ಪಾಸ್‌ಪೋರ್ಟ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಟ್ವೀಟ್‌ ಮಾಡಿರುವ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂಜಯ್‌ ಭಟ್ಟಾಚಾರ್ಯ, "ಭಾರತದ ನಾಗರಿಕರಿಗೆ ಮುಂದಿನ ಪೀಳಿಗೆಗೆ ತಕ್ಕುದಾದ ಇ ಪಾಸ್‌ಪೋರ್ಟ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಇದು ಬಯೋಮೆಟ್ರಿಕ್‌ ಡೇಟಾವನ್ನು ಸುರಕ್ಷತೆ ಮಾಡಲಿದೆ. ಜಾಗತಿಕವಾಗಿ ಸುಲಭವಾಗಿ ಪ್ರಯಾಣ ಮಾಡಲು ಇದು ಸಹಕಾರಿ ಆಗಲಿದೆ. ಇದನ್ನು ನಾಸಿಕ್‌ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ನಲ್ಲಿ ತಯಾರಿ ಮಾಡಲಾಗುತ್ತದೆ," ಎಂದು ತಿಳಿಸಿದ್ದಾರೆ.

 ಮೊದಲು ಅಧಿಕಾರಿಗಳಿಗೆ, ರಾಜತಾಂತ್ರಕರಿಗೆ ಇ ಪಾಸ್‌ಪೋರ್ಟ್

ಮೊದಲು ಅಧಿಕಾರಿಗಳಿಗೆ, ರಾಜತಾಂತ್ರಕರಿಗೆ ಇ ಪಾಸ್‌ಪೋರ್ಟ್

ಪ್ರಸ್ತುತ ಪಾಸ್‌ಪೋರ್ಟ್ ಮುದ್ರಿತ ಪುಸ್ತಕದ ರೂಪದಲ್ಲಿ ಇದೆ. ಕೇಂದ್ರ ಸರ್ಕಾರವು ಆರಂಭಿಕ ಹಂತದಲ್ಲಿ ಸುಮಾರು 20,000 ಅಧಿಕಾರಿಗಳು ಹಾಗೂ ರಾಜತಾಂತ್ರಕರಿಗೆ ಇ ಪಾಸ್‌ಪೋರ್ಟ್ ಅನ್ನು ವಿತರಣೆ ಮಾಡಲಿದೆ. ಉಳಿದವರು ಈ ಸಂದರ್ಭದಲ್ಲಿ ಮುದ್ರಿತ ಪಾಸ್‌ಪೋರ್ಟ್‌ಗಳನ್ನೇ ಎಂದಿನಂತೆ ಬಳಕೆ ಮಾಡಬಹುದು. ಆರಂಭಿಕ ಹಂತದಲ್ಲಿ ಇ ಪಾಸ್‌ಪೋರ್ಟ್ ಯಶಸ್ವಿಯಾದರೆ ಬಳಿಕ ನಾಗರಿಕರಿಗೂ ಕೂಡಾ ಈ ಹೊಸ ಇ ಪಾಸ್‌ಪೋರ್ಟ್ ಅನ್ನು ವಿತರಣೆ ಮಾಡಲಾಗುತ್ತದೆ. ಈ ಮೂಲಕ ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುತ್ತದೆ.

 ಇ ಪಾಸ್‌ಪೋರ್ಟ್ ನಾಶ ಸುಲಭವಿಲ್ಲ

ಇ ಪಾಸ್‌ಪೋರ್ಟ್ ನಾಶ ಸುಲಭವಿಲ್ಲ

ಇ ಪಾಸ್‌ಪೋರ್ಟ್‌ಗಳು ಇಂಟರ್‌ನ್ಯಾಷನಲ್‌ ಸಿವಿಲ್‌ ಏವಿಯೇಷನ್‌ ಆರ್ಗನೈಸೇಶನ್‌ನ (ಐಸಿಎಒ) ಮಾನದಂಡವನ್ನು ಪೂರೈಕೆ ಮಾಡುತ್ತಿದ್ದು, ಇದನ್ನು ನಾಶ ಮಾಡಲು ಸುಲಭವಿಲ್ಲ. ಭಾರತದಲ್ಲಿ ವಿದೇಶಾಂಗ ವ್ಯವಹಾರ ಇಲಾಖೆಯ ಅಡಿಯಲ್ಲಿ ಬರುವ ಎಲ್ಲ 36 ಪಾಸ್‌ಪೋರ್ಟ್ ಕಚೇರಿಗಳು ಇ ಪಾಸ್‌ಪೋರ್ಟ್ ಅನ್ನು ವಿತರಣೆ ಮಾಡಲಿದೆ. ದೇಶದಲ್ಲಿ ಪ್ರಸ್ತುತ 93 ಪಾಸ್‌ಪೋರ್ಟ್ ಕೇಂದ್ರಗಳು, 36 ಪಾಸ್‌ಪೋರ್ಟ್ ಕಚೇರಿಗಳು, 426 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಸೇರಿದಂತೆ ಒಟ್ಟು 555 ಪಾಸ್‌ಪೋರ್ಟ್ ಕೇಂದ್ರಗಳು ಇದೆ. ಈ ಕೇಂದ್ರಗಳಲ್ಲಿಯೇ ಇ ಪಾಸ್‌ಪೋರ್ಟ್ ಲಭ್ಯವಾಗಲಿದೆ ಎಂದು ಮಾಧ್ಯಮಗಳ ವರದಿಯು ಉಲ್ಲೇಖ ಮಾಡಿದೆ.

 ಇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

ಇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

ಇನ್ನು ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನವು ಸರ್ಕಾರದ ವೆಬ್‌ಸೈಟ್‌ ಮೂಲಕ ಪಾಸ್‌ಪೋರ್ಟ್‌ಗೆ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತೇವೆ ಅದೇ ರೀತಿಯಲ್ಲಿ ಇರಲಿದೆ. ನೀವು ಸರ್ಕಾರದ ಪಾಸ್‌ಪೋರ್ಟ್ ವೆಬ್‌ಸೈಟ್‌ https://www.passportindia.gov.in/AppOnlineProject/welcomeLink ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ದಾಖಲೆ ಪ್ರಮಾಣಿಕರಣ ಮಾಡಲು ನೋಂದಣಿಗಾಗಿ ನೀವು ನಿಮ್ಮ ಲೋಕೇಷನ್‌ ಹಾಗೂ ದಿನಾಂಕವನ್ನು ಗೊತ್ತು ಮಾಡಬೇಕಾಗಿದೆ. ಉಳಿದಂತೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವ ಎಲ್ಲಾ ವಿಧಾನಗಳು ಹಾಗೆಯೇ ಇದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+