ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ

Posted By: ನಾಗನೂರಮಠ ಎಸ್ಎಸ್
Subscribe to Oneindia Kannada

ಇಂದಿನ ಯುವತಿಯರು ಮತ್ತು ಮಧ್ಯವಯಸ್ಸಿನ ಮಹಿಳೆಯರು ಸುಂದರವಾಗಿ ಕಾಣಲು ಹಲವಾರು ರಾಸಾಯನಿಕ ಬಳಸಿ ಉತ್ಪಾದಿಸಿದ ಕಾಸ್ಮೆಟಿಕ್ಸ್‌ಗಳ ಮೊರೆ ಹೋಗುತ್ತಿದ್ದಾರೆ. ಇವುಗಳಿಂದ ಅವರು ತಮ್ಮಲ್ಲಿದ್ದ ನೈಸರ್ಗಿಕ ಸೌಂದರ್ಯವನ್ನು ಹಾಳು ಮಾಡಿಕೊಂಡು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಅಪಾಯವನ್ನು ಆಹ್ವಾನ ಮಾಡಿಕೊಳ್ಳುತ್ತಿದ್ದಾರೆ. ನಿರಾಶೆಯಿಂದ ಜೀವನೋತ್ಸಾಹವನ್ನೇ ಕಳೆದುಕೊಂಡಿರುತ್ತಾರೆ.

ಸೌಂದರ್ಯಕ್ಕೆ ಇದನ್ನೆಲ್ಲಾ ಯಾಕೆ ಮಾಡಬೇಕು? ದಿನನಿತ್ಯ ಕೇವಲ 20ರಿಂದ 40 ನಿಮಿಷ ಯೋಗಾಭ್ಯಾಸದಿಂದ (ಯೋಗವನ್ನು ಜಗತ್ತಿಗೆ ಪರಿಚಯಿಸಿದವರೇ ನಮ್ಮ ದೇಶದ ಮಹರ್ಷಿ ಪತಂಜಲಿ ಗುರುಗಳು.) ಯಾವುದೇ ಕಾಸ್ಮೆಟಿಕ್ಸ್ಗಳ ಬಳಕೆಯಿಲ್ಲದೆಯೂ ಅತೀ ಸುಂದರವಾಗಿ ಕಾಣಬಹುದು ಜೊತೆಗೆ ಆರೋಗ್ಯವಂತರಾಗಿ ಚಿರಯೌವನಿಗರಾಗಿ ಪ್ರತಿಕ್ಷಣವೂ ಉತ್ಸುಕತೆಯಿಂದ ಇರಬಹುದು.

ಇಂದು ಮಹಿಳೆಯರು ಪುರುಷರಿಗೆ ಸಮಾನ ಎನ್ನುವ ಈ ಕಾಲದಲ್ಲಿ ತಮ್ಮ ಆರೋಗ್ಯದೆಡೆಗೆ ತಮಗೇ ಅರಿವಿಲ್ಲದಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಎಷ್ಟೋ ಮಹಿಳೆಯರು ಯೋಗಾಭ್ಯಾಸವು ಕೇವಲ ಮುದುಕರಿಗೆ, ಮಕ್ಕಳಿಗೆ, ರೋಗಿಗಳಿಗೆ ಮಾತ್ರ ಎಂಬ ಬಗ್ಗೆ ತಪ್ಪು ತಿಳಿವಳಿಕೆಯಿಂದ ಯೋಗ ಮಾಡುವ ಬಗ್ಗೆ ಮನಸ್ಸು ಮಾಡುತ್ತಿಲ್ಲ. ಇನ್ನು ಕೆಲವರಂತೂ ಯೋಗಾಭ್ಯಾಸ ಮಾಡಿ ಸನ್ಯಾಸಿಯಾಗಬೇಕೆ? ಎನ್ನುತ್ತಾರೆ. ಏನು ಹೇಳೋಣ ಇಂಥವರಿಗೆ? [ಚಿತ್ರಗಳು : ಯೋಗದ ಮಹಿಮೆಗೆ ತಲೆಬಾಗಿದ ವಿಶ್ವ]

Yoga tips for women for natural beauty

ಇಂದ್ರಿಯಗಳ ಮೇಲೆ ನಿಯಂತ್ರಣ : ಮನಸ್ಸನ್ನು ನಿಯಂತ್ರಿಸುವ ಯೋಗದ ಬಗ್ಗೆ ತಮ್ಮ ಮನಸ್ಸನ್ನು ವಾಲಿಸಿಕೊಳ್ಳದಿರುವವರೇ ಈಗ ಜಾಸ್ತಿಯಾಗಿದ್ದಾರೆ. ಇಂದ್ರೀಯ ನಿಗ್ರಹವನ್ನು ಮಾಡುವ ಏಕೈಕ ಸಾಧನವೆಂದರೆ ಅದು ಯೋಗ ಮಾತ್ರ. ಇಂದಿನ ದಿನಗಳಲ್ಲಿ ಇಂದ್ರೀಯಗಳ ಮೇಲೆ ನಿಯಂತ್ರಣವಿಲ್ಲದೇ ಬೇಕಾಬಿಟ್ಟಿ ಜೀವನಶೈಲಿ ಅಳವಡಿಸಿಕೊಂಡು, ಎಷ್ಟೋ ಜನರು ತಮ್ಮ ಜೀವನವನ್ನು ಅಸ್ತವ್ಯಸ್ತ ಮಾಡಿಕೊಂಡು, ಆತಂಕ, ಭಯ, ಉದ್ವೇಗದಿಂದಿದ್ದು ಹಲವಾರು ರೋಗಗಳಿಗೆ ಆಹ್ವಾನ ಮಾಡಿಕೊಳ್ಳುತ್ತಿದ್ದಾರೆ.

ಸತತ ಯೋಗಾಭ್ಯಾಸದಿಂದ ಸಸ್ಯಾಹಾರಿಗಳಾಗಲು ಸಹಕಾರಿಯಾಗುತ್ತದೆ. ಏಕೆಂದರೆ ಮಾಂಸಾಹಾರದಿಂದ ದೇಹದ ಅಂಗಾಂಗಗಳು ಮನಸ್ಸಿನ ನಿಯಂತ್ರಣದಲ್ಲಿ ಇರುವುದಿಲ್ಲ. ಅಲ್ಲದೇ ಸತತ ಆಗುವ ಸುಸ್ತು, ಆಯಾಸ ಮತ್ತು ಆಲಸ್ಯಕ್ಕೆ ಮಾಂಸಾಹಾರವೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. [ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ]

Yoga tips for women for natural beauty

ಈ ಹಿಂದೆ ಗೃಹಿಣಿಯರು ಸಮಯ ಕಳೆಯಲು ಕಾದಂಬರಿ ಓದುತ್ತಿದ್ದರು. ಅಲ್ಲದೇ ಅಡುಗೆ ಮುಂತಾದ ದೈನಂದಿನ ಚಟುಚಟಿಕೆಗಳನ್ನು ಉತ್ಸಾಹದಿಂದ ಮಾಡಿ ಮುಗಿಸುತ್ತಿದ್ದರು. ಆದರೆ ಇಂದು ಕಾದಂಬರಿ ಬದಲು ಟಿವಿ, ಮೊಬೈಲ್ಗೆ ಮೊರೆ ಹೋಗಿದ್ದಾರೆ. ದೈನಂದಿನ ಚಟುವಟಿಕೆಗಳಿಗೆ ಎಲೆಕ್ಟ್ರಾನಿಕ್ ವಸ್ತುಗಳಿದ್ದಾವೆ. ಇಂತಹ ಸಮಯದಲ್ಲಿ ಇಂದಿನ ಮಹಿಳೆಯರಲ್ಲಿ ದೈಹಿಕ ಜಡತ್ವದೊಂದಿಗೆ ಮಾನಸಿಕ ಜಡತ್ವವೂ ಸೇರಿಕೊಂಡಿದೆ. [ಸ್ಮಾರ್ಟ್ ಫೋನ್ ತರುವ ನೋವು ಶಮನಕ್ಕೆ ಯೋಗಾಸನ]

ಈ ದಿನಗಳಲ್ಲಿ ಮಳೆಗಾಲ ಮತ್ತು ಮುಂದೆ ಚಳಿಗಾಲ ಆರಂಭವಾಗುತ್ತದೆ. ಈ ಸಮಯದಲ್ಲಿ ಮಹಿಳೆಯರಿಗೆ ಏಕಾಂತ ಕಾಡಲು ಆರಂಭವಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಆದರೆ ಈ ಏಕಾಂತ ಹೋಗಲಾಡಿಸಲು ಯೋಗವೊಂದೇ ಉತ್ತಮ ಮಾರ್ಗವೆನ್ನುತ್ತಾರೆ ಬೆಂಗಳೂರಿನ ಅಂತಾರಾಷ್ಟ್ರೀಯ ಮಹಿಳಾ ಯೋಗ ಚಾಂಪಿಯನ್ ಶಿಪ್ ಪ್ರಶಸ್ತಿ ವಿಜೇತೆ ಮತ್ತು ಯೋಗರತ್ನ ಬಿರುದು ಪಡೆದ ಲತಾ ಶೇಖರ್.

ನಿಯಮಿತ ಯೋಗಾಭ್ಯಾಸವನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಒಂದಾಗಿಸಿಕೊಂಡರೆ ಮಾನಸಿಕ ಸ್ಥಿತಿ ಮತ್ತು ದೈಹಿಕ ಸ್ಥಿತಿ ಉತ್ತಮವಾಗಿರುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಾರೆ ಲತಾ.

Yoga tips for women for natural beauty

ಯೋಗಾಸನ ಯಾವಾಗ ಮಾಡಬೇಕು? : ಇನ್ನು ಕೆಲವರು ಬೆಳಗಿನ ಸಮಯದಲ್ಲೇ ಯೋಗಾಸನ ಮಾಡಬೇಕು ಎಂದುಕೊಂಡಿರುವುದು ತಪ್ಪು. ಆದಷ್ಟು ಶುದ್ಧ ಗಾಳಿ, ಬೆಳಕು ಮತ್ತು ನಿಶ್ಯಬ್ದ ಸ್ಥಳದಲ್ಲಿ ಮೆದುವಾದ ಹಾಸಿನ ಮೇಲೆ ಬರೀ ಹೊಟ್ಟೆಯಲ್ಲಿ ಯೋಗಾಭ್ಯಾಸವನ್ನು ದಿನದ ಯಾವುದೇ ಸಮಯದಲ್ಲೂ ಮಾಡಬಹುದು. ಆದರೆ ಊಟ ಮಾಡಿದ ನಂತರ 4 ಗಂಟೆಗಳ ಅಂತರವಿರಬೇಕು. ಅಲ್ಲದೇ ಒಂದೇ ದಿನವೇ ಎಲ್ಲ ಆಸನಗಳನ್ನು ಮಾಡುವುದು ಬೇಡ. ದಿನಗಳೆದಂತೆ ಸಮಯ ಹೆಚ್ಚಿಸುತ್ತ ಹೋಗುವುದು ಒಳ್ಳೆಯದು.

ಕ್ರಮೇಣ ಯೋಗಾಭ್ಯಾಸ ಮಾಡುತ್ತ ಏಕಾಗ್ರತೆ, ಲವಲವಿಕೆ, ನೆನಪಿನ ಶಕ್ತಿಯ ಬೆಳವಣಿಗೆ, ಹೊಸ ಹೊಸ ವಿಚಾರಗಳು, ಮುಖದಲ್ಲಿ ಕಾಂತಿ, ತೇಜಸ್ಸು, ಚಿರಯೌವನ, ಆಯುಷ್ಯವೃದ್ಧಿಯಾಗುವುದು ಮನವರಿಕೆಯಾಗುತ್ತದೆ. [ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]

Yoga tips for women for natural beauty

ಯೋಗಾಸನಗಳ ಕ್ರಮ : ಮೊದಲಿಗೆ 12 ಆಸನಗಳನ್ನು ಹೊಂದಿರುವ ಸೂರ್ಯ ನಮಸ್ಕಾರದಿಂದ ಯೋಗಾಭ್ಯಾಸ ಆರಂಭಿಸಬೇಕು ಎನ್ನುವ ಲತಾ ಅವರು, ನಂತರ ಕುಳಿತು ಮಾಡುವ ಆಸನಗಳನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ. ಕ್ರಮೇಣ ನಿಂತು ಮಾಡುವ ಆಸನಗಳು, ತದ ನಂತರ ಬೆನ್ನ ಮೇಲೆ (ಅಂಗಾತ) ಮಲಗಿ ಮಾಡುವ ಆಸನಗಳು, ಕ್ರಮೇಣ ಹೊಟ್ಟೆ ಮೇಲೆ ಮಲಗಿ ಮಾಡುವ ಆಸನಗಳನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಮತ್ತು ಹೊಂದಿ ಸೌಂದರ್ಯ ಹೆಚ್ಚಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ ಎಂಬುದು ಲತಾ ಶೇಖರ್ ಅವರ ಅನುಭವದ ಮಾತು.

ಸಂಪೂರ್ಣ ಯೋಗಾಭ್ಯಾಸ ನಿರತರಾದ ಮೇಲೆ ಕ್ರಮೇಣ ಕೈ ಮೇಲೆ ಮಾಡುವ ಆಸನಗಳು, ಒಂಟಿ ಕಾಲ ಮೇಲೆ ಮಾಡುವ ಆಸನಗಳನ್ನು ಆರಂಭಿಸಬಹುದು. ನಂತರದ ದಿನಗಳಲ್ಲಿ ದೇಹವು ರೋಗನಿರೋಧಕ ಶಕ್ತಿ ಹೊಂದಿ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಹೋಗುತ್ತದೆ. [ಯೋಗದ ಬಗ್ಗೆ ಖ್ಯಾತ ಮಾನಸಿಕ ತಜ್ಞರು ಹೀಗಂತಾರೆ]

Yoga tips for women for natural beauty

ಇನ್ನು ಹಲವಾರು ರೋಗಗಳಿಗೆ ಯೋಗವೇ ಉತ್ತಮ ಮದ್ದು ಎನ್ನುವ ಲತಾ ಅವರು, ನಿಯಮಿತ ಯೋಗಾಭ್ಯಾಸದಿಂದ ಹಲವಾರು ರೋಗಗಳನ್ನು ಯಾವುದೇ ಚಿಕಿತ್ಸೆಯಿಲ್ಲದೇ ಹೋಗಲಾಡಿಸಬಹುದು ಈ ಬಗ್ಗೆ ವೈದ್ಯಕೀಯ ಕ್ಷೇತ್ರವೂ ಒಪ್ಪುತ್ತದೆ.

ಸಾಮಾನ್ಯವಾಗಿ ಮಹಿಳೆಯರಲ್ಲಿ ಏಕಾಗ್ರತೆ ಸಮಸ್ಯೆ, ಮಾನಸಿಕ ಖಿನ್ನತೆ, ಅನಿಯಮಿತ ಉಸಿರಾಟದ ತೊಂದರೆಯಿಂದ ನಿದ್ರಾಹೀನತೆ, ಮುಟ್ಟಿನ ತೊಂದರೆ, ಬೊಜ್ಜು ರಕ್ತದೊತ್ತಡದ ಏರಿಳಿತ, ಕೀಲು ನೋವು, ಮಂಡಿನೋವು, ಅರ್ಧ ತಲೆನೋವು, ಆಲಸ್ಯ, ಗ್ಯಾಸ್ಟ್ರಿಕ್ ತೊಂದರೆ, ಬಲಹೀನತೆ, ರಕ್ತಹೀನತೆ, ಸೊಂಟ ನೋವು ಇವೆಲ್ಲವೂ ಒಂದಿಲ್ಲೊಂದು ಒಂದು ದಿನ ಬರುವುದು ನಿಶ್ಚಿತ ಎಂಬುದು ಕಟುಸತ್ಯ.

Yoga tips for women for natural beauty

ಅದಕ್ಕೆಂದೇ ಮಹಿಳೆಯರು ದೈನಂದಿನ ಚಟುವಟಿಕೆಗಳಲ್ಲಿ ಯೋಗಾಭ್ಯಾಸವನ್ನು ರೂಢಿಸಿಕೊಂಡಲ್ಲಿ ಸೌಂದರ್ಯ ಜೊತೆಗೆ ಆರೋಗ್ಯ ಮತ್ತು ಮಾನಸಿಕ ಸ್ಥೈರ್ಯ ಹೊಂದಿ, ಕಾಸ್ಮೆಟಿಕ್ಸ್ ಮತ್ತು ವೈದ್ಯರನ್ನು ದೂರವಿಡಬಹುದು.

ಮುಂದಿನ ಲೇಖನದಲ್ಲಿ : ಆಸನಗಳ ವಿವರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Yoga is the best and natural cosmetic to look beautiful for women. Better stay away from cosmetics to look beautiful. Make it a habit to practice yoga on a daily basis. This kind exercise keeps you healthy and look beautiful too.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ