ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ಇಂಡಿಯಾದಲ್ಲಿ ಯೋಗ ಕುರಿತು ಸರಣಿ ಲೇಖನ ಆರಂಭ

By Prasad
|
Google Oneindia Kannada News

ಎಷ್ಟೋ ಜನರು ನಾನೂ ಯೋಗ ಮತ್ತು ಯೋಗಾಸಾನ ಮಾಡಬೇಕು ಎಂದು ಹಂಬಲಿಸುತ್ತಿರುತ್ತಾರೆ. ಆದರೆ, ಸಮಯಾಭಾವದ ಕೊರತೆಯ ಜೊತೆಗೆ ಇಂದಿನ ದುಬಾರಿ ದುನಿಯಾದಲ್ಲಿ ಬಹಳಷ್ಟು ಹಣ ಯೋಗ ಕಲಿಯಲೆಂದು ಖರ್ಚು ಮಾಡುವುದು ಸುಲಭದ ಮಾತಲ್ಲ.

ಇಂಥವರಿಗೆಂದೇ, ಯೋಗ ಮತ್ತು ಯೋಗಾಸನಗಳ (ಯೋಗ ಬೇರೆ ಯೋಗಾಸನ ಬೇರೆ) ಕುರಿತು ವಿಶೇಷ ಲೇಖನಗಳು ಸದ್ಯದಲ್ಲಿಯೇ ಪ್ರಕಟವಾಗಲಿವೆ. ಯೋಗದ ಜೊತೆಗೆ ಆರೋಗ್ಯ ರಕ್ಷಣೆ ಕುರಿತು ನುರಿತ ತಜ್ಞರು ಓದುಗರಿಗೆ ವಿಶೇಷವಾಗಿ ತಮ್ಮ ಲೇಖನಗಳಲ್ಲಿ ತಿಳಿಸಿ ಕೊಡಲಿದ್ದಾರೆ.

ಓದುಗರು, ನುರಿತ ತಜ್ಞರು ನೀಡುವ ಯೋಗಗಳ ಸಮಗ್ರ ಮಾಹಿತಿಯನ್ನು ನೋಟ್ ಮಾಡಿಟ್ಟುಕೊಂಡು ಮನೆಯಲ್ಲಿಯೇ ಪ್ರತಿನಿತ್ಯ ಅಭ್ಯಾಸ ಮಾಡಬಹುದು. ಯಾವುದೇ ಸೈಡ್ ಎಫೆಕ್ಟ್ ಇಲ್ಲದ ವ್ಯಾಯಾಮವೆಂದರೆ ಯೋಗ ಮಾತ್ರವೇ ಎನ್ನಬಹುದು. ಅದೂ ಅಲ್ಲದೇ, ಯೋಗವನ್ನು ಎಲ್ಲ ವಯಸ್ಸಿನವರು ಮಾಡಬಹುದು. ಇದಕ್ಕೆ ಲಿಂಗಭೇದವಿಲ್ಲ, ಜಾತಿಭೇದವಿಲ್ಲ. ಆರೋಗ್ಯ ಚೆನ್ನಾಗಿಟ್ಟುಕೊಂಡು ಉತ್ಸಾಹ, ಹುರುಪು ನಿತ್ಯದ ಯೋಗದಿಂದ ಸಾಧ್ಯ. [ಓಂ ಬದಲು ಅಲ್ಲಾಹ್ ಅನ್ನಿ]

BKS Iyengar

ವಯಸ್ಸಾಗದೇ ಇನ್ನೂ ಹರೆಯದವರ ತರಹನೇ ಕಾಣಬೇಕು, ಹೊಟ್ಟೆಯ ಬೊಜ್ಜು ಕರಗಬೇಕು, ಮುಂದಿನ ದಿನಗಳಲ್ಲಿ ಯಾವುದೇ ರೋಗಗಳು ಬರದಂತೆ ಇರಬೇಕು, ಕೂದಲುರುವುದು ನಿಲ್ಲಬೇಕು, ದೃಷ್ಟಿದೋಷ ಬರಬಾರದು, ಮಾನಸಿಕ ಸ್ಥಿರತೆ ಹೆಚ್ಚಿಸಿಕೊಳ್ಳಲು, ಕೆಲಸದಲ್ಲಿ ಏಕಾಗ್ರತೆ ಸಾಧಿಸಿಕೊಳ್ಳಬೇಕು ಎಂದುಕೊಳ್ಳುವವರು ತಪ್ಪಿಸದೇ ಯೋಗಾಭ್ಯಾಸ ಮಾಡಬಹುದು.

ಯೋಗಾಭ್ಯಾಸವು ನಿತ್ಯದ ಕರ್ಮಗಳಂತೆ ಒಂದು ಎಂದುಕೊಂಡು ಇದಕ್ಕಾಗಿ ದಿನಚರಿಯಲ್ಲಿ ಸಮಯವನ್ನು ಮೀಸಲಿಡಬೇಕು. ಹಲ್ಲುಜ್ಜುವುದು, ಸ್ನಾನ ಮಾಡುವುದು, ಮೂರೊತ್ತು ತಿನ್ನೋದು ಜೊತೆಗೆ ಒಂದೊತ್ತು ಯೋಗವೂ ನಿತ್ಯದ ದಿನಚರಿಯಲ್ಲಿಟ್ಟುಕೊಳ್ಳುವುದು ತುಂಬಾ ಅತ್ಯವಶ್ಯ.

ಗಟ್ಟಿಮುಟ್ಟಾಗಿದ್ದಾಗಲೇ ದೇಹ ದಂಡನೆ ಮಾಡಿಕೊಳ್ಳುವುದು ಒಳ್ಳೆಯದು, ದೇವರು ದೇಹ ದಂಡನೆ ಮಾಡಿದ ಬಳಿಕ ಅಂದರೆ ರೋಗಗಳು ದೇಹಕ್ಕೆ ವಕ್ಕರಿಸಿಕೊಂಡಾಗ ದೇಹ ದಂಡನೆಯ ನೋವು ತಡೆದುಕೊಳ್ಳಲಾಗುವುದಿಲ್ಲ ಎಂಬುದು ನೆನಪಿರಲಿ. [ಯೋಗಕ್ಕೆ ಮೋದಿ ಮಣೆ : ಸಿಕ್ಕಿತು ಜಾಗತಿಕ ಮನ್ನಣೆ]


ಮೊಟ್ಟ ಮೊದಲಿಗೆ ಸೂರ್ಯ ನಮಸ್ಕಾರದೊಂದಿಗೆ ಯೋಗಾಸನಗಳ ಕುರಿತು ಲೇಖನಗಳು ಆರಂಭವಾಗಲಿವೆ. ಓದುಗರು ಯೋಗಾಭ್ಯಾಸದಿಂದ ತಮ್ಮ ಮತ್ತು ಕುಟುಂಬದವರ, ಸ್ನೇಹಿತರ ಆಯುರಾರೋಗ್ಯ ಹೆಚ್ಚಿಸಿಕೊಳ್ಳುತ್ತಾರೆಂಬುದು ನಮ್ಮ ನಂಬಿಕೆ.

ಇನ್ನೊಂದು ವಿಶೇಷವಾದ ವಿಷಯವೇನೆಂದರೆ, ಓದುಗರು ಯಾವುದಕ್ಕೂ ಈ ಬಗ್ಗೆ ಏನಾದರೂ ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳನ್ನು ನಿಸ್ಸಂಕೋಚವಾಗಿ ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.

ಪರಮ ಯೋಗಗುರುವಿಗೆ ಅರ್ಪಣೆ : ಜೂನ್ 21ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಈ ಸರಣಿಯನ್ನು ಆರಂಭಿಸಲಾಗುತ್ತಿದ್ದು, ಭಾರತೀಯ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ, 2014ರ ಆಗಸ್ಟ್ 20ರಂದು ವಿಧಿವಶರಾದ ಯೋಗಗುರು ಬಿಕೆಎಸ್ ಅಯ್ಯಂಗಾರ್ ಅವರಿಗೆ ಈ ಅಂಕಣವನ್ನು ಅರ್ಪಿಸಲಾಗಿದೆ.

ಮುಂದಿನ ಲೇಖನ : ಯೋಗ ಮಾಡುವ ಮುನ್ನ ಹೀಗಿರಬೇಕು.

English summary
Oneindia Kannada presents article series in Kannada about Yoga on the occasion of International Yoga Day 21st June, 2015. Yoga expert Naganurmath S.S., who is also an astrologer, will be writing do it yourself articles on Yoga for Good health and Wellness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X