ಯೋಗಾಭ್ಯಾಸ ಆರಂಭಿಸುವವರಿಗೆ ಒಂದಿಷ್ಟು ಉಪಯುಕ್ತ ಟಿಪ್ಸ್
ಈ ಮೊದಲಿನಿಂದಲೂ ಯೋಗಾಸನ ಮಾಡುವವರಿಗೆ ಗೊತ್ತೇ ಇರುತ್ತದೆ. ಬೆಳಗ್ಗೆ ಆಸನಗಳನ್ನು ಮಾಡುವ ಮೊದಲು ವಹಿಸಿಕೊಳ್ಳಬೇಕಾದ ಮುಂಜಾಗ್ರತೆಗಳೇನು ಎಂಬುದರ ಬಗ್ಗೆ. ಆದರೆ ಎಷ್ಟು ಗೊತ್ತಿದ್ದರೂ ಕಮ್ಮೀನೆ. ಕೆಲವರಿಗೆ ಸಂಪೂರ್ಣ ಗೊತ್ತಿದ್ದರೆ, ಇನ್ನು ಕೆಲವರಿಗೆ ಅರ್ಧಮರ್ಧ ಗೊತ್ತಿರುತ್ತದೆ. ಇದರಿಂದಾಗಿ ಕೆಲವೊಂದು ಬಾರಿ ಅನಾನುಕೂಲತೆಗಳು ಆಗುತ್ತವೆ. ಆದ್ದರಿಂದ ಯೋಗಾಸನ ಆರಂಭಿಸುವ ಮೊದಲು ವಹಿಸಿಕೊಳ್ಳಬೇಕಾದ ಮುಂಜಾಗ್ರತೆಗಳನ್ನು ಒಮ್ಮೆ ನೋಡೋಣ.
* ಬೆಳಗಿನ ಹೊತ್ತೇ ಮಾತ್ರ ಯೋಗಾಸನ ಮಾಡಬೇಕು ಅಂತೇನಿಲ್ಲ. ಸಂಜೆ ಸಮಯದಲ್ಲೂ ಮಾಡಬಹುದು. ಬೆಳಗಿನ ಅವಸರದ ಸಮಯದಲ್ಲಿ ಆಗದವರು ಸಂಜೆ ರಾತ್ರಿ ಊಟ ಮಾಡುವುದರೊಳಗಾಗಿ ಯೋಗಾಸನಗಳನ್ನು ಮಾಡಬಹುದು.
* ಬರೀ ಹೊಟ್ಟೆಯಲ್ಲಿ ಯೋಗಾಸನ ಮಾಡುವುದು ಸೂಕ್ತವಾದರೂ ಅಶಕ್ತರಾದವರು, ವಯಸ್ಸಾದವರು ಹೊಟ್ಟೆಗೆ ಏನಾದರೂ ಉಪಹಾರ ಸೇವಿಸಿ ಒಂದು ಗಂಟೆಯ ನಂತರ ಯೋಗಾಸನಗಳನ್ನು ಮಾಡಬಹುದು. [ಖ್ಯಾತ ಯೋಗಪಟು ಕಮಲೇಶ್ ಬರ್ವಾಲ್ ಸಂದರ್ಶನ]

* ರೋಗ ಬಂದ ಮೇಲೆ, ವಯಸ್ಸಾದ ಮೇಲೆ ಯೋಗಾಸನ ಮಾಡಬಹುದು ಈಗೇನು ಅವಶ್ಯ? ಎಂಬ ನಿರ್ಲಕ್ಷ್ಯ ಬೇಡ.
* ಯೋಗಾಸನ ಮಾಡಲು ಗಾರ್ಡನ್ ಗೆ ಹೋಗಬೇಕು, ಮೈದಾನಕ್ಕೆ ಹೋಗಬೇಕು ಅಂತೇನಿಲ್ಲ. ಮನೆಯಲ್ಲಿಯೇ ಮಾಡಬಹುದು. ತಾರಸಿ ಮೇಲೆ, ಮನೆಯ ಒಂದು ಕೊಠಡಿಯಲ್ಲಿ ಮತ್ತು ಮನೆಯ ಅಂಗಳದಲ್ಲಿ. ಗಾಳಿ, ಬೆಳಕು ಸಾಕಷ್ಟು ಬರುವ ಸ್ಥಳವಿದ್ದರೆ ಸಾಕು.
* ಯೋಗಾಸನ ಮಾಡಲು ಹೊಸ ಬಟ್ಟೆಯನ್ನೆ ಅಥವಾ ಯೋಗಾಸನ ಬಟ್ಟೆಗಳನ್ನೇ ತೆಗೆದುಕೊಳ್ಳಬೇಕು ಎಂಬ ಭ್ರಮೆ ಬೇಡ. ಮನೆಯಲ್ಲಿದ್ದ ಹಳೆಯ ಬಟ್ಟೆಗಳಾದರೂ ಸರಿ, ಅವುಗಳನ್ನು ಸ್ವಚ್ಛವಾಗಿ ತೊಳೆದು ಧರಿಸಿಕೊಳ್ಳಬಹುದು. ಪ್ರತಿನಿತ್ಯ ಸ್ವಚ್ಛವಾದ ಬಟ್ಟೆಗಳನ್ನೇ ಧರಿಸಬೇಕಾಗಿರುವುದರಿಂದ ಮನೆಯಲ್ಲಿದ್ದ ಹಳೆಯ ಉಪಯೋಗಿಸದ ಬಟ್ಟೆಗಳನ್ನು ಯೋಗಾಸನ ಮಾಡಲು ಬಳಸಿಕೊಳ್ಳಬಹುದು.
* ಯೋಗಾಸನ ಮಾಡಲು ಕೆಲವರು ನಾಚುತ್ತಿರುತ್ತಾರೆ. ಯಾರಾದರೂ ನೋಡಿದರೆ ಎಂದುಕೊಳ್ಳುವ ಸ್ವಭಾವ ಇನ್ನೂ ಹಲವರಿಗಿದೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಯೋಗಾಸನದಲ್ಲಿ ಮನಸ್ಸಿನಿಂದ ತೊಡಗಿಸಿಕೊಳ್ಳಬೇಕು. [ಸೂರ್ಯ ನಮಸ್ಕಾರಕ್ಕಿಂತ ಉತ್ತಮ ವ್ಯಾಯಾಮ ಇನ್ನೊಂದಿಲ್ಲ]
* ಗರ್ಭಿಣಿಯರು, ಅಶಕ್ತರು, ವೃದ್ಧರು, ಹೃದಯ ಮತ್ತು ಉಸಿರಾಟದ ಸಮಸ್ಯೆಗಳಿಂದ ಮತ್ತಿತರ ರೋಗಗಳಿಂದ ಬಳಲುತ್ತಿರುವವರು ವೈದ್ಯರ ಸಲಹೆಯನ್ನು ಪಡೆದುಕೊಂಡೇ ಯೋಗಾಭ್ಯಾಸ ಆರಂಭಿಸಬೇಕು. ಯೋಗಾಸನ ಮಾಡಲು ಆರಂಭಿಸಿದರೆ ಒಮ್ಮೆಲೆ ರೋಗದಿಂದ ಗುಣಮುಖರಾಗುತ್ತೇವೆ ಎಂಬ ಹುಚ್ಚು ಕಲ್ಪನೆ ಬಿಡಬೇಕು. ಜೀವದಾಸೆಯಿಂದ ಹುರುಪಿನಿಂದ ಮಾಡುವ ಯೋಗಾಭ್ಯಾಸದಿಂದ ತೊಂದರೆಯೂ ಆಗಬಾರದಲ್ಲವೇ?

* ನಿತ್ಯ ಯೋಗಾಭ್ಯಾಸದ ಸಮಯವನ್ನು ನಿಗದಿ ಪಡಿಸಿಕೊಳ್ಳಬೇಕು. ಮೊದಲಿಗೆ 5 ನಿಮಿಷ, ನಂತರ 10 ನಿಮಿಷ, ತದನಂತರ 15 ನಿಮಿಷ, ನಂತರ ಅರ್ಧಗಂಟೆ ಕ್ರಮೇಣ ಒಂದು ಗಂಟೆಯವರೆಗೂ ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಬೇಕು.
* ಹೊತ್ತಿಗೆ ಸರಿಯಾದ ಊಟ ಮತ್ತು ಉಪಹಾರದಿಂದಲೂ ಆರೋಗ್ಯದಲ್ಲಿ ತೊಂದರೆ ಇರಲ್ಲ ಎಂಬುದು ನೆನಪಿರಲಿ.
* ಹೆಣ್ಣು ಮಕ್ಕಳು ಋತುವಿನ ದಿನಗಳ ಹಿಂದೆ ಮುಂದೆ ಯೋಗಾಭ್ಯಾಸ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಮಾಡಬೇಕು.
* ನಿದ್ದೆಗೆಟ್ಟಾಗ, ಅತೀ ಸುಸ್ತಾದಾಗ, ಊಟ ಮಾಡಿದ ಕೂಡಲೇ ಯೋಗಾಭ್ಯಾಸ ಮಾಡಬಾರದು.
* ಯೋಗಾಸನ ಮಾಡುವ ಮುನ್ನ ಸ್ನಾನ ಮಾಡಬಹುದು. ನಂತರವೂ ಮಾಡಬಹುದು, ಬೆವರಿನ ವಾಸನೆಯಿಂದ ಮುಜುಗರವಾಗುವುದರಿಂದ ಯೋಗಾಭ್ಯಾಸದ ನಂತರವೂ ಸ್ನಾನ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು.
* ಯೋಗಾಭ್ಯಾಸ ಮಾಡುವ ಮುನ್ನವೇ ನಿತ್ಯಶೌಚ ಕರ್ಮಗಳನ್ನು ಮುಗಿಸಿಕೊಂಡಿರಬೇಕು. (ಬಾತ್ ರೂಂ ಹೋಗಿ ಬಂದಿರಬೇಕು).
* ಯೋಗಾಭ್ಯಾಸಕ್ಕೆ ಒಂದು ದಿನವೂ ರಜೆ ಇರುವುದಿಲ್ಲ ಎಂಬುದು ಗಮನದಲ್ಲಿರಲಿ.
* ಕೈ, ಕಾಲಿನ ಉಗುರುಗಳನ್ನು ಸಂಪೂರ್ಣ ತೆಗೆದಿರಬೇಕು.
* ಯೋಗಾಸನ ಮಾಡುವಾಗ ಚೂಯಿಂಗ್ ಗಮ್ ಅಗೆಯುವುದು ಮತ್ತಿತರ ಅಭ್ಯಾಸಗಳಿದ್ದರೆ ಬಿಡಬೇಕು.
* ಆಸನಗಳನ್ನು ಮಾಡುವಾಗ ಮಂತ್ರಗಳನ್ನು ಅಥವಾ ಭಕ್ತಿಗೀತೆ, ಸುಗಮ ಸಂಗೀತ ಅಥವಾ ವಾದ್ಯಗಳ ಸಂಗೀತಗಳನ್ನು ಇಷ್ಟವಿದ್ದರೆ ಆಲಿಸಬಹುದು. (ಉದಾಃ ಇಷ್ಟವಾದ ಒಂದು ಗೀತೆಯನ್ನು ಕೇಳುತ್ತ ಕನಿಷ್ಠ 5 ಆಸನಗಳನ್ನು ಮಾಡಬಹುದು).
* ಯೋಗಾಭ್ಯಾಸ ಮಾಡಿ ಮುಗಿಸಿದ ಕೂಡಲೇ ಹೊಟ್ಟೆ ಬಿರಿಯುವಂತೆ ತಿನ್ನಬಾರದು. ಕನಿಷ್ಠ ಅರ್ಧ ಗಂಟೆ ಬಿಡಬೇಕು.
ಮುಂದಿನ ಲೇಖನ : ಸೂರ್ಯ ನಮಸ್ಕಾರ ಮಾಡುವವರು ಇದನ್ನು ಗಮನದಲ್ಲಿಡಲಿ.
-
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications