ಯೋಗವೆಂದರೆ ದೇಹ, ಮನಸ್ಸು, ಆತ್ಮದ ಸಂಯೋಗ
(ಸಂದರ್ಶನದ ಮುಂದುವರಿದ ಭಾಗ)
ಪ್ರಶ್ನೆ : ಯೋಗ ಸಾಧನೆಯ ಹಿಂದೆ ಯಾರ್ಯಾರ ಸ್ಫೂರ್ತಿಯಿದೆ?
ಕಮಲೇಶ್ ಬರ್ವಾಲ್ : ದೈಹಿಕ ಆರೋಗ್ಯಕ್ಕಾಗಿ ಸುದರ್ಶನ ಕ್ರಿಯಾ ಯೋಗ ಮಾಡಲು ನನ್ನ ನರರೋಗ ತಜ್ಞರಾದ ಡಾ. ರೂಪಕ್ ಪ್ರೇರೇಪಿಸಿದರು. ಆದರೆ, ನಾನು ಕಾಲೇಜಿನಲ್ಲಿದ್ದಾಗಲೇ ಆರ್ಟ್ ಆಫ್ ಲಿವಿಂಗ್ ನಲ್ಲಿ ಕೋರ್ಸ್ ತೆಗೆದುಕೊಳ್ಳಲು ನನ್ನಲ್ಲಿ ಸ್ಫೂರ್ತಿ ತುಂಬಿ, ಅಕ್ಷರಶಃ ಬಲವಂತವಾಗಿ ನನ್ನನ್ನು ಮುನ್ನುಗ್ಗಿಸಿದ್ದು ನನ್ನ ತಾಯಿ. ಒಂದು ಬಾರಿ ಕೋರ್ಸ್ ಆರಂಭಿಸಿದ ಮೇಲೆ ಹಿಂದೆ ನೋಡಿದ್ದೇ ಇಲ್ಲ.
ಪ್ರಶ್ನೆ : ಸಾಂಪ್ರದಾಯಿಕ ಯೋಗಕ್ಕೂ ಆರ್ಟ್ ಆಫ್ ಲಿವಿಂಗ್ ನಲ್ಲಿ ಕಲಿಸುವ ಯೋಗಕ್ಕೂ ವ್ಯತ್ಯಾಸವಿದೆಯೆ?
ಕಮಲೇಶ್ ಬರ್ವಾಲ್ : ಯೋಗದ ಅರ್ಥ ಐಕ್ಯವಾಗುವುದು, ಒಗ್ಗಟ್ಟಾಗುವುದು. ಹಾಗಾಗಿ, ವಿಭಿನ್ನ ಬಗೆಯ ಯೋಗಗಳಲ್ಲಿನ ವ್ಯತ್ಯಾಸ ಕಂಡುಕೊಳ್ಳಲು ಪ್ರಯತ್ನಿಸುವುದರಿಂದ ಆ ಅರ್ಥವೇ ಕೆಡುತ್ತದೆ. ಬೇರೆ ಬಗೆಯ ಯೋಗಗಳ ಬಗ್ಗೆ ನಾನು ಮಾತನಾಡಲು ಯತ್ನಿಸುವುದಿಲ್ಲ. ಆದರೆ, ಆರ್ಟ್ ಆಫ್ ಲಿವಿಂಗ್‌ನ ಯೋಗಗಳಲ್ಲಿ, ಭಕ್ತಿ ಯೋಗ, ಜ್ಞಾನ ಯೋಗ, ಹಠ ಯೋಗ ಮತ್ತು ಧ್ಯಾನಕ್ಕೆ ಮಾರ್ಗ ತೋರುವ ರಾಜ ಯೋಗಗಳೆಂಬ ವಿಧಾನಗಳಿವೆ.

ಆರ್ಟ್ ಆಫ್ ಲಿವಿಂಗ್‌ನ ಯೋಗ ದೇಹ, ಮನಸ್ಸು ಮತ್ತು ಆತ್ಮವನ್ನು ಒಗ್ಗೂಡಿಸಿ, ಯೋಗದ ಬಗೆಗಿರುವ ಪ್ರಾಚೀನ ಜ್ಞಾನವನ್ನು ಎರಕಹೊಯ್ದು ಬದುಕನ್ನು ಪರಿಪೂರ್ಣವಾಗಿಸುವ ಅದ್ಭುತ ವಿಧಾನ. ಅತ್ಯಂತ ಸರಳವಾದ ಆದರೆ ಅಷ್ಟೇ ಪರಿಣಾಮಕಾರಿಯಾದ ಆಸನ ಮತ್ತು ಉಸಿರಾಟದ ವಿಧಾನಗಳ ಮುಖಾಂತರ, ಸುಪ್ತ ಮನಸ್ಸಿನ ಸ್ವಾಸ್ಥ್ಯಕ್ಕಾಗಿ, ಧ್ಯಾನದ ಆಂತರಿಕ ಅನುಭವ ಪಡೆಯಲು ಹೆಚ್ಚು ಒತ್ತು ನೀಡುತ್ತದೆ.
ತನ್ನೊಳಗಿನ ಸಾಮರಸ್ಯವನ್ನು ಹೊಂದಿದಾಗ, ಜೀವನದ ಪಯಣ ಸುಸೂತ್ರವಾಗಿರುತ್ತದೆ, ಸಂತೋಷದಾಯಕವಾಗಿರುತ್ತದೆ ಮತ್ತು ಸಂತೃಪ್ತಿದಾಯಕವಾಗಿರುತ್ತದೆ ಎಂಬುದು ನಮ್ಮ ನಂಬುಗೆ. ಯಾರಲ್ಲಿ ಹೆಚ್ಚಿನ ಶಕ್ತಿ ಮತ್ತು ಉತ್ಸಾಹವಿರುತ್ತದೋ ಅವರು ಜೀವನದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಸ್ವಾರ್ಥವಿಲ್ಲದ ಮಾನವೀಯತೆ ಮತ್ತು ಕರ್ಮಯೋಗದಲ್ಲಿ ಆರ್ಟ್ ಆಫ್ ಲಿವಿಂಗ್ ಬಲವಾದ ತಳಹದಿ ಹೊಂದಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications