Get Updates
Get notified of breaking news, exclusive insights, and must-see stories!

ದೇಹವನ್ನು ಗೌರವಿಸುವುದೇ ನಿಜವಾದ ಯೋಗ

(ಸಂದರ್ಶನದ ಮುಂದುವರಿದ ಭಾಗ)

ಪ್ರಶ್ನೆ : ಧ್ಯಾನಕ್ಕೂ ಯೋಗಕ್ಕೂ ಏನು ವ್ಯತ್ಯಾಸ?

ಕಮಲೇಶ್ ಬರ್ವಾಲ್ : ಯೋಗ ಅಂದರೆ ದೇಹ, ಮನಸ್ಸು ಮತ್ತು ಆತ್ಮದ ಸಂಯೋಗ. ಈ ಸಂಯೋಗ ಹೊಂದಲು ಅನೇಕ ಮಾರ್ಗಗಳಿವೆ. ಧ್ಯಾನ ಯೋಗಾಭ್ಯಾಸದ ಅವಿಭಾಜ್ಯ ಅಂಗ. ಇಂಥ ಪ್ರಶ್ನೆ ಉದ್ಭವವಾಗುವುದು ಯೋಗವನ್ನು ಯೋಗಾಸನದ ಜೊತೆ ತಳಕುಹಾಕಲು ಯತ್ನಿಸಿದಾಗ.

ಯೋಗ ಅಂದರೆ ಯಾಗಾಸನ ಮಾತ್ರವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮದ ಸಂಯೋಗ ಎಂದು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾದಾಗ, ನಮ್ಮ ಯೋಚನೆ, ಮಾತು ಮತ್ತು ಕೃತಿಯಲ್ಲಿ ಸಾಮಸರ್ಯವನ್ನು ಯೋಗ ತರುತ್ತದೆ. ಇಂದಿನ ಜಗತ್ತಿನಲ್ಲಿ ಯೋಗ ಅಂದರೆ ಯೋಗಾಸನ ಎಂಬಂತಾಗಿದೆ. ಆದರೆ, ಯೋಗ ತರಬೇತಿಯ ಆತ್ಮವಿರುವುದೇ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದರಲ್ಲಿ.

Art of Living Yoga expert Kamlesh Barwal interview - part 3

ಆಂತರಿಕ ಅನುಭವ ಮತ್ತು ಧ್ಯಾನ, ಯೋಗಾಭ್ಯಾಸದ ಶ್ರೇಷ್ಠತೆಯ ಸಂಕೇತ ಅಂತ ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಯಾವಾಗಲೂ ಪ್ರತಿಪಾದಿಸುತ್ತಿರುತ್ತಾರೆ. ಅಲೌಕಿಕ ಪ್ರಜ್ಞೆಯ ಗೂಡಾಗಿರುವ ದೇಹವನ್ನು ಗೌರವಿಸುವುದೇ ನಿಜವಾದ ಯೋಗ. ಆದರೆ, ಯೋಗದಲ್ಲಿ ಮನಸ್ಸಿನ ಸೌಖ್ಯ ಮತ್ತು ಮಾನವನ ಅಸ್ತಿತ್ವದ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಪ್ರಶ್ನೆ : ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿರುವುದನ್ನು ಕೆಲ ಧಾರ್ಮಿಕ ಸಂಘಟನೆಗಳು ಪ್ರತಿರೋಧಿಸುತ್ತಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಯೋಗ ಧಾರ್ಮಿಕವಾದದ್ದೆ?

ಕಮಲೇಶ್ ಬರ್ವಾಲ್ : ಜ್ಞಾನ ಯಾರ ಸ್ವತ್ತೂ ಅಲ್ಲ, ಅದು ವಿಶ್ವಕ್ಕೆ ಸೇರಿದ್ದು. ಸಂಕುಚಿತ ದೃಷ್ಟಿಕೋನ ಮತ್ತು ಕ್ಷುಲ್ಲಕ ಮನಸ್ಸಿನ ನಾವು ಎಲ್ಲವನ್ನೂ ಧರ್ಮದೊಂದಿಗೆ ತಾಳೆಹಾಕಲು ಪ್ರಯತ್ನಿಸುತ್ತೇವೆ. ಯೋಗ ಹುಟ್ಟಿದ್ದು ಭಾರತದಲ್ಲಿ ಮತ್ತು ಪ್ರಾಚೀನ ಹಿಂದೂ ಜ್ಞಾನಿಗಳು ಯೋಗದ ಹರಿಕಾರರು. ಯೋಗವೆನ್ನುವುದು ಆಂತರಿಕ ವಿಜ್ಞಾನ ಮತ್ತು ಸ್ವಾಸ್ಥ್ಯ ಪ್ರತಿಪಾದಿಸುವ ಒಂದು ಕಲೆ. ಹಲವಾರು ವರ್ಷಗಳ ಕಾಲ ಯೋಗಿಗಳು ಸ್ವಂತ ಸಂಶೋಧನೆ ಮತ್ತು ಅಧ್ಯಯನ ಮಾಡಿದ್ದರ ಫಲವೇ ಯೋಗ.

ಯೋಗ ಇಂದು ಇಡೀ ಮನುಕುಲದ ಲಾಭಕ್ಕಾಗಿ ಲಭ್ಯವಿದೆ. ಯೋಗವನ್ನು ಧಾರ್ಮಿಕ ಎಂದು ಹೇಳಿ ಕೆಲ ವರ್ಗದವರು ಲಾಭ ಪಡೆಯದಂತೆ ನೋಡಿಕೊಳ್ಳುವುದು, ನಮ್ಮ ದೇಶ ಅಭಿವೃದ್ಧಿಪಡಿಸದ ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಬಳಸಬಾರದು ಎಂದು ಹೇಳಿದಂತೆ. ಯೋಗ ಮನುಕುಲಕ್ಕೆ ಸೇರಿದ್ದು. ಚೈನೀಸ್ ಆಹಾರ ತಿಂದರೆ ನಾವು ಚೀನಾದವರು ಹೇಗೆ ಆಗುವುದಿಲ್ಲವೋ, ಯೋಗ ಮಾಡುವುದರಿಂದ ನಮ್ಮ ನಂಬಿಕೆಯಿಂದ ನಾವು ದೂರವಾಗುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+