ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯ ನಮಸ್ಕಾರಕ್ಕಿಂತ ಉತ್ತಮ ವ್ಯಾಯಾಮ ಇನ್ನೊಂದಿಲ್ಲ

By ಪ್ರಸಾದ ನಾಯಿಕ
|
Google Oneindia Kannada News

(ಸಂದರ್ಶನದ ಮುಂದುವರಿದ ಭಾಗ)

ಪ್ರಶ್ನೆ : ದೈಹಿಕ ವ್ಯಾಯಾಮಕ್ಕೆ ಯೋಗ ಪರ್ಯಾಯವೆ?

ಕಮಲೇಶ್ ಬರ್ವಾಲ್ : 2010ರಲ್ಲಿ ಮೇರಿಲ್ಯಾಂಡ್ ಸ್ಕೂಲ್ ಆಫ್ ನರ್ಸಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ಯೋಗ ಮತ್ತು ಏರೋಬಿಕ್ ವ್ಯಾಯಾಮದಿಂದ ಸಿಗುವ ಆರೋಗ್ಯ ಲಾಭದ ಕುರಿತು ತೌಲನಿಕ ಅಧ್ಯಯನ ಕೈಗೊಂಡಿತ್ತು. ದೈಹಿಕ ಶಕ್ತಿ, ಮಾನಸಿಕ ಸ್ಥಿರತೆ, ಸಮತೋಲನ, ಮೆನೊಪಾಸ್ ಸೂಚನೆಗಳು, ಸಾಮಾಜಿಕ ಜೀವನಶೈಲಿ ಎಲ್ಲದರಲ್ಲಿಯೂ ಏರೋಬಿಕ್ ವ್ಯಾಯಾಮವನ್ನು ಯೋಗ ಹಿಂದಿಕ್ಕಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡರು.

ಯೋಗಾಸನ ಆಧುನಿಕ ವ್ಯಾಯಾಮಕ್ಕೆ ಬೇಕಾದ ಎಲ್ಲ ಸಂಗತಿಗಳನ್ನು ಒಳಗೊಂಡಿರುತ್ತದೆ. ಹಲವಾರು ಆಸನಗಳಲ್ಲಿ ದೈಹಿಕ ತೂಕವನ್ನು ಸರಿಯಾಗಿ ಬಳಸುವುದರಿಂದ ತರಬೇತಿಯಲ್ಲಿ ಅದ್ಭುತ ಶಕ್ತಿಯನ್ನು ತಂದುಕೊಡುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಜಿಮ್ ನಲ್ಲಿ ಸಲಕರಣೆಗಳನ್ನು ಬಳಸುವುದಕ್ಕಿಂತ ದೈಹಿಕ ತೂಕವನ್ನೇ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂದು ನೋಡುತ್ತಿದ್ದಾರೆ. ಸೂರ್ಯ ನಮಸ್ಕಾರಕ್ಕಿಂತ ಅತ್ಯುತ್ತಮವಾದ ಏರೋಬಿಕ್ ವ್ಯಾಯಾಮ ಇನ್ನೊಂದಿಲ್ಲ.

Art of Living Yoga expert Kamlesh Barwal interview - part 4

ಸುದೀರ್ಘ ಉಸಿರಾಟದ ಜೊತೆ ಆಸನಗಳಲ್ಲಿ ಮಾಡುವ ಸ್ಟ್ರೆಚಿಂಗ್ ವ್ಯಾಯಾಮಗಳು ಸ್ನಾಯುಗಳನ್ನು ಬಲಪಡಿಸುತ್ತವೆ ಮತ್ತು ಫ್ಲೆಕ್ಸಿಬಲ್ ಆಗಿಸುತ್ತವೆ. ಯೋಗಾಸನದ ಕೊನೆಯಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಶ್ರಾಂತಿ ಧ್ಯಾನ ಮತ್ತು ಯೋಗ ನಿದ್ರೆಯಿಂದ ದೊರೆಯುತ್ತದೆ.
English summary
International Yoga Day is being observed on June 21, 2015 all over the world. On this occasion Oneindia spoke to Art of Living Yoga expert Kamlesh Barwal. She explains why she started learning Yoga and what are the health benefits of it. Here are the excerpts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X