ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗಾಗಿ ಹುಡುಗಿ ಬೇಕಾಗಿದ್ದಾಳೆ!

By * ಗಗನಸಖಿ
|
Google Oneindia Kannada News

How to choose your bride?
ಏನೋ ಹುಡುಗ ಮದುವೆ ಮಾಡ್ಕೋತೀಯ? ತಪ್ಪೇನು ಮಾಡ್ಕೋ. ಒಳ್ಳೆ ಕೆಲಸ ಇದೆ. ದುಡ್ಡಿದೆ. ವಯಸ್ಸಿದೆ. ಮನಸ್ಸಿದೆ. ಮದುವೆಗೆ ಇನ್ನೇನು ಬೇಕು ಅಲ್ಲ್ವಾ? Go ahead, my dear boy. ಆದರೆ ಒಂದ್ನಿಮಿಷ ತಾಳು. ನೀನು ಮದುವೆ ಆಗೋ ಹುಡುಗಿ ಹೇಗಿರ್ಬೇಕು ಅಂತ ನಿನಗೇನಾದ್ರು ಗೊತ್ತಿದೆಯಾ?

ಓಹ್, ಬಿಡು ಮತ್ತದೇ ಹೇಳ್ಬೇಡ “ನೋಡೋಕ್ಕೆ ಸುಮಾರಾಗಿ ಚೆನ್ನಾಗಿರ್ಬೇಕು. ನಗ್ನಗ್ತಾ ಎಲ್ಲಾರ ಜೊತೆ ಹೊಂದ್ಕೊಂಡ್ಹೋಗ್ಬೇಕು. ನಮ್ಮಪ್ಪ ಅಮ್ಮನ್ನ ಚೆನ್ನಾಗಿ ನೋಡ್ಕೋಬೇಕು etc.,etc.,” ಅಂತ. ಇದು ಮಾಮೂಲು. ನಿನ್ನ ತರಹ ಮದುವೆ ಆಗಬಯಸುವ ಎಲ್ಲಾ ಹುಡುಗರ perception ಇಷ್ಟೆ. ಆದರೆ ನಮ್ಮ ಹಿರಿಯರು, ತಿಳಿದವರು, ಪ್ರಾಜ್ಞರು ನೀನು ಮದುವೆ ಆಗೋ ಹುಡುಗಿ ಹೇಗಿರಬೇಕು ಅಂತ ಹೇಳ್ತಾರೆ ಅನ್ನೋದರ ಬಗ್ಗೆ ನಿನಗೇನಾದ್ರು ಗೊತ್ತಾ? ಪಾಪ, ಹೇಗೊತ್ತಿರತ್ತೆ ಹೇಳು.

ನಾನು ಹೇಳ್ತೀನಿ ಕೇಳು. ಆಮೇಲೆ ನಿನ್ನ ಮದುವೆ ಆಗೋಳ್ಹತ್ತ್ರಾನೂ ಹೇಳ್ಬಿಡು. ಅವಳೂ ಕೂಡ ನಿನ್ನತರಹಾನೇ ಕಂಪ್ಯೂಟರ್ ಗಿಂಪ್ಯೂಟರ್ ಅಂತ ಓದ್ಕೊಂಡು, ಆಪೀಸು ಗೀಫೀಸು ಅಂತ ನಿತ್ಯ busyಯಾಗಿರ್ತಾಳೆ. ಇದೆಲ್ಲಾ ತಿಳ್ಕೊಳ್ಳಕ್ಕೆ ಅವಳಿಗ್ತಾನೆ ಪಾಪ ಟೈಂ ಎಲ್ಲಿರತ್ತೆ ಹೇಳು ?!

ನೋಡು ಹುಡುಗಾ, ನಾವು ಸುಖವಾಗಿ ಬಾಳಬೇಕಾದ್ರೆ ಅನುಸರಿಸಬೇಕಾದ ನಿಯಮಗಳನೆಲ್ಲಾ ಒಂದು ಕಡೆ ಕಲೆ ಹಾಕಿ ಮನುಧರ್ಮಶಾಸ್ತ್ರ ಅಂತ ಒಂದು ಕೃತಿ ಬರೆದಿಟ್ಟಿದ್ದಾರೋ ನಮ್ಮ ಹಿರಿಯರು, ಬಹಳಾನೇ ತಿಳಿದ್ಕೊಂಡಿದ್ದ್ರಪ್ಪ ಅವರು. ಅದರಲ್ಲಿ ನಮ್ಮ ಹೆಣ್ಣುಮಕ್ಕಳ ಸ್ವಭಾವದ ಬಗ್ಗೆ ಏನ್ಹೇಳ್ತಾರೆ ಗೊತ್ತಾ? “ಶಯ್ಯೆ, ಆಸನ, ಅಲಂಕಾರ ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ ಮತ್ತು ದುರ್ನಡತೆ ಇವು ಸಾಮಾನ್ಯವಾಗಿ ಸ್ತ್ರೀಯರಲ್ಲಿರುವ ಸ್ವಾಭಾವಿಕ ಗುಣಗಳು” so ಹುಡುಗಾ, better be careful! ಅಷ್ಟೆ ಅಲ್ಲಪ್ಪಾ “ಸ್ತ್ರೀಯರು ಸಾಮಾನ್ಯವಾಗಿ ಚಪಲಚಿತ್ತವುಳ್ಳವರು ಮತ್ತು ವ್ಯಭಿಚಾರ ಮನಸ್ಕರು” ಅಂತಾನೂ ಹೇಳಿದ್ದಾರೆ.

ಅಯ್ಯಯ್ಯೋ, ಮದುವೆ ಹೇಗೆ ಮಾಡಿಕ್ಕೊಳೋದು ಅಂತ ಯೋಚನೆ ಮಾಡ್ತಿದ್ದೀಯಾ? ಹೆದರ್ಕೋಬೇಡ. ಅವರ ಸ್ವಭಾವ ಹೇಗೇ ಇದ್ದ್ರು ನೀನು ಕೆಲವು ನಿಯಮಗಳನ್ನು ಅನುಸರಿಸಿಬಿಟ್ಟ್ರೆ ಆಯಿತು. ಅದೇನು ಗೊತ್ತಾ? “ಹಗಲಿರುಳೂ ಪುರುಷರು ಹೆಣ್ಣುಮಕ್ಕಳನ್ನು ಅಧೀನದಲ್ಲಿ ಇಟ್ಟುಕೊಳ್ಳಬೇಕು.ಸಾಮಾನ್ಯವಾಗಿ ಸುಖ ಭೋಗಾದಿ, ವಿಷಯಾಭಿಲಾಷೆಗಳಲ್ಲಿ ಪ್ರವರ್ತಿಸುವ ಸ್ತ್ರೀಯರನ್ನು ಪುರುಷರು ತಮ್ಮ ಅಂಕೆಯಲ್ಲಿರಿಸಿಕೊಳ್ಳಬೇಕು.” ನೀನು ಪುರುಷ ತಾನೇ? ಮತ್ತ್ಯಾಕೆ ಯೋಚನೆ?

ಆಮೇಲಿನ್ನೊಂದು ವಿಷಯ, ಮದುವ್ಯಾದ್ಮೇಲೆ ಅವಳ ಕೆಲಸ ಏನೇನು ಅಂತ ಮುಂಚೇನೇ ಅವಳಿಗೆ ಹೇಳ್ಬಿಡು. ಆಮೇಲ್ಯಾಕೆ ಮನಸ್ತಾಪ ಅಲ್ಲ್ವಾ? ನಮ್ಮ ಹಿರಿಯರೂ, ಪೂಜ್ಯರೂ ಏನ್ಹೇಳಿದ್ದಾರೆ ಗೊತ್ತಾ? “ಮಹಾಭಾಗ್ಯವಂತೆಯರಾದ, ಮನೆಯ ದೀಪಗಳಾದ, ಪೂಜಾರ್ಹರಾದ ಸ್ತ್ರೀಯರು ಸಂತಾನವನ್ನು ಉತ್ಪಾದಿಸಲಿಕ್ಕೆಂದೇ ಇದ್ದಾರೆ. ಪುತ್ರೋತ್ಪತ್ತಿ, ಪತಿ ಸೇವೆ, ರತಿಸುಖ ಇವುಗಳು ಆತ್ಮೋದ್ದಾರ ಮಾಡಿಕೊಳ್ಳಲು ಸ್ತ್ರೀಯರಿಗಿರುವ ಸಾಧನಗಳು” ಇಷ್ಟೇ ಅಲ್ಲ, ಒಂದ್ಸಲಿ ಮದುವೆಯಾದ್ಮೇಲೆ ಮುಗಿದ್ಹೋಯಿತು. ಅವಳಿಗೆ ಹೇಳಿಬಿಡು “ಪತಿಯಿಂದ ಮಾರಲ್ಪಟ್ಟರೂ, ತ್ಯಜಿಸಲ್ಪಟ್ಟರೂ ಹೆಂಡತಿಯೂ ಅವನಿಂದ ಬಿಡುಗಡೆ ಹೊಂದಲಾರಳು” ಅಂತ.

ನೋಡ್ನೋಡು ಇನ್ನೊಂದು ಹೇಳೋದೇ ಮರೆತೆ ಏನ್ಗೊತ್ತಾ? “ಪತಿಯ ನಡತೆ ಚೆನ್ನಾಗಿರದಿದ್ದರೂ, ಕಾಮಾತುರನಾಗಿ ಅವನು ಅನ್ಯ ಹೆಂಗಸರಲ್ಲಿ ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಹ ಹೆಂಡತಿಯೂ ಅವನನ್ನು ದೇವರೆಂದೇ ಭಾವಿಸಿ ಸೇವೆ ಮಾಡಬೇಕು”. ಇಷ್ಟೆಲ್ಲಾ ದೊಡ್ಡ ದೊಡ್ಡ ನಿಯಮಗಳನ್ನು ಪಾಲಿಸುವವಳಿಗೆ ಇನ್ನೊಂದು ಚಿಕ್ಕ ವಿಷಯ follow ಮಾಡೋದು ಏನ್ಕಷ್ಟ ಹೇಳು? ಅದೇನಂದ್ರೆ, “ಹೆಂಡತಿಯೂ ಸದಾ ಸಂತೋಷದಿಂದ ಇರಬೇಕು. ಮನೆಯ ಪಾತ್ರೆಪಡಗಗಳನ್ನು ಚೆನ್ನಾಗಿ ಉಜ್ಜಿ ಶುದ್ಧವಾಗಿಡಬೇಕು. ಮಿತವ್ಯಯ ಮಾಡಬೇಕು. ಸ್ವತಂತ್ರವಾಗಿ ಯಾವ ಕೆಲಸವನ್ನೂ ಮಾಡಬಾರದು.”

ಹೀಗೆ ಹೇಳ್ತಾಯಿದೀನಿ ಅಂತ ಮನಸ್ಸಿಗೆ ಬೇಜಾರು ಮಾಡ್ಕೋಬೇಡ. Unfortunately ನೀನೇನಾದ್ರು ಅವಳಿಗಿಂತ ಮುಂಚೆ ದೇವರಪಾದ ಸೇರ್ಕೊಂಡ್ರೆ ಅವಳು ಮರುಮದುವೆ ಮಾಡ್ಕೋಬಾರದಂತೆ. ಬದುಕಿರೋವರ್ಗೂ ಬ್ರಹ್ಮಚರ್ಯ ಪಾಲಿಸಿಕೊಂಡಿದ್ದ್ರೆ ಸೀದಾ ಸ್ವರ್ಗಕ್ಕೇ ಹೋಗ್ತಾಳಂತೆ ಕಣೋ ಹುಡುಗಾ. ಆದ್ರೆ ಒಂದು ಸಂತೋಷದ ವಿಷಯ ಏನು ಗೊತ್ತಾ? ಅಕಸ್ಮಾತ್ ನಿನಗಿಂತ ಮೊದಲು ಅವಳು ಗೊಟಕ್ ಅಂದ್ರೆ ವಿಧುರನಾದ ನೀನು ಮತ್ತೆ ಮದುವೆ ಮಾಡ್ಕೋಬಹುದಂತೆ. ಸಧ್ಯ ನಿರಾಳ ಅಲ್ಲ್ವಾ?!

ಏನೋ ಆಸೆಯಿಂದ ಮದುವೆ ಮಾಡ್ಕೋಬೇಕು ಅಂತ ಹೊರಟ ನಿನ್ನ ತಲೆ ಕೆಡಿಸ್ಲಿಲ್ಲತಾನೆ ನಾನು? ಹಾಂ, ನೋಡು ಮತ್ತೆ ಈಗ ನಿನಗೆ ಹೇಳ್ಲಿದ್ನಲ್ಲ ಯಾವ ವಿಷಯಾನೂ ನನ್ನ ಸ್ವಂತದ್ದಲ್ಲಾಪ್ಪ. ಆಮೇಲೆ ನಿನ್ನ ಮದುವೆ ತಪ್ಪಿಸೋಕ್ಕೆ ನಾನು ಹೀಗೆಲ್ಲಾ ಹೇಳಿದೆ ಅಂತ ತಿಳಿದ್ಕೊಂಬಿಟ್ಟಿಯಾ. ಒಂದೊಂದು ಅಕ್ಷರಾನೂ ನಮ್ಮ ಪೂಜ್ಯರೂ, ಹಿರಿಯರು ಬರೆದಿಟ್ಟಿರೋದೆ ಕಣೋ ಹುಡುಗಾ. ಪ್ರಮಾಣ ಮಾಡಿಹೇಳ್ತೀನಿ.

ಸರಿ ಈಗ ನೀನು ಹೊರಡು. ಯಾವ್ದಾದ್ರು matrimonial column ನಲ್ಲಿ ಜಾಹೀರಾತು ಹಾಕಿಸಿಬಿಡು. ಒಳ್ಳೆ ಹುಡುಗಿ ಸಿಕ್ಕೇ ಸಿಕ್ತಾಳೆ.. ಅಂದಹಾಗೆ, ನಿನ್ನ ಬಗ್ಗೆನೂ ದೊಡ್ಡವರು ಏನೇನೋ ಹೇಳಿದ್ದಾರಪ್ಪ. ಅದನೆಲ್ಲಾ ನಾನು ಮದುವೆ ಆಗಬಯಸುವ ಹುಡುಗಿಯರಿಗೆ ಹೇಳ್ತೀನಿ ಬಿಡು. ನಿನಗೆ ಟೈಂ ಇಲ್ಲ. ಸರಿ, ಹೋಗಿಬರ್ತೀಯಾ? Bye. ಮತ್ತೆ ಸಿಗೋಣ.

English summary
Wedding bells are ringing : How to choose your bride? parameters for our eligible boys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X