ಹಿಸ್ಟರಿ ರಿಪೀಟ್ಸ್‌?!


ನೆನಪುಗಳ ಮಾತು ಮಧುರ. . . ಮೌನಗಳ ಹಾಡು ಮಧುರ. . . ಕನಸೇ ಇರಲೀ; ನನಸೇ ಇರಲೀ ಪ್ರೀತಿಕೊಡುವ ಕನಸೇ ಮಧುರ! ಶಬ್ದವಿರಲೀ; ನಿಶ್ಶಬ್ದವಿರಲೀ ಪ್ರೀತಿಕೊಡುವ ಶಬ್ದ ಮಧುರ. . . . ಸ್ವಾರ್ಥವಿರಲೀ; ನಿಸ್ವಾರ್ಥವಿರಲೀ ಪ್ರೀತಿಕೊಡುವ ಸ್ವಾರ್ಥ ಮಧುರ. . . . ... ಒಟ್ಟಿನಲ್ಲಿ ನೆನಪುಗಳ ಹಿಸ್ಟರಿ ರಿಪೀಟ್‌ ಆಗುವುದೂ ಮಧುರ! ಏನಂತೀರ?

Memories are always wonderful

ಈಗಲೂ ಅವಳಿಗೆ ನೆನಪಿದೆ
ಅಜ್ಜಿ ಹೇಳುತ್ತಿದ್ದ ಮಾತದೇ. . . .

ಮನೆಮುಂದೊಂದು ಬೇವಿದ್ರೆ ಚರ್ಮಕ್ಕಾಯ್ಲೆ ಅಂಟಲ್ಲ. . .
ಪಕ್ಕದಲ್ಲೊಂದು ನೀಲಗಿರಿ ಇದ್ರೆ ಶೀತದ ಗಾಳಿ ಸೋಂಕಲ್ಲ. . .
ಹಿತ್ಲಲೊಂದು ನಾಗದಾಳಿ ಇದ್ರೆ ನಾಗರಧಾಳಿ ಇರೊಲ್ಲ. . .
ಮುಂದ್ಗಡೆಗೊಂದು ಬಿಲ್ಲ್ವ ಇದ್ರೆ ನೆತ್ತಿಗ್ನೋವು ಬರಲ್ಲ. . .
ಹೀಗೆ. . . . . . . . .
ಈಗಲೂ ಅವಳಿಗೆ ನೆನಪಿದೆ
ಅಜ್ಜಿ ಹೇಳುತ್ತಿದ್ದ ಮಾತದೇ. . . .

ಈಗವಳ ಹಾಸಿಗೆ ಕಿಟಕಿತಡಿಯಲ್ಲೇ;
ನೆನಪುಗಳ ಚೊಂಬು ಲೋಟ ಪಕ್ಕದಲ್ಲೇ. . .
ಸರಳುಗಳ ನಡುವೆ ತೂರಿ ಬರುವ ಅಜ್ಜಿ ಮರಗಳ ಗಾಳಿ;
ಅವಳೊಂದಿಗಿಲ್ಲ ಯಾವುದೇ ರೋಗಗಳ ಪಾಳಿ. . .
ಈಗಲೂ ಅವಳಿಗೆ ನೆನಪಿದೆ
ಅಜ್ಜಿ ಹೇಳುತ್ತಿದ್ದ ಮಾತದೇ. . . .

ಅಜ್ಜಿ ಹೇಳಿದ ಮಾತು ನೆನಪಿದೆ;
ಅದರವಳಿಗೀಗ ಜನ್ಮಕ್ಕಂಟಿದ ಬಾಧೆ. . .
ನೆನಪುಗಳ ಕದ ಚಚ್ಚಿ ಚುಚ್ಚುವ ನೆನಪುಗಳ ಕಾಟ;
ನೆನಪಿನಾಗಸದಿ ನೆನಪಿನ ರೆಕ್ಕೆ ಬಿಚ್ಚಿ
ಬಾರದಿರುವ ನೆನಪುಗಳದ್ದೇ ಹಾರಾಟ. . . .
ನೀಲ ಬೇವು ಆಲ ಬಿಲ್ವ ಯಾವ ಎಲೆಯದ್ದೂ ಮದ್ದಾಗುತ್ತಿಲ್ಲ;
ಬೇಡಿದರೂ ಬಾಡದ ನೆನಪುಗಳ ಸದ್ದಡಗುತ್ತಿಲ್ಲ. . . .
ಈಗಲೂ ಅವಳಿಗೆ ನೆನಪಿದೆ
ಅಜ್ಜಿ ಹೇಳುತ್ತಿದ್ದ ಮಾತೂ ಅದೇ. . . .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+