• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವರ ತೀರ್ಪು ಒಪ್ಪಿಕೊಳ್ಳುವಷ್ಟು ನಮ್ಮ ತಲೆ ಬಾಗಬೇಕು?

By Staff
|

Feminism v/s Feminality? ಗಗನಸಖಿಯ ನಿಲುವು ಏನು?

Should we accept Final Judgement?ಈ ವಿಷಯ ಗೊತ್ತಾದ್ಮೇಲೆ ನೀವು ನನ್ನ ಕೈಬಿಡಲ್ಲ ಅನ್ನುವ ನಂಬಿಕೆ ನನಗಿದೆ. ಡಾ.ಶುಭ ಗೊತ್ತಲ್ಲಾ? ಇಲ್ಲ ಬಿಡಿ ನಿಮಗೆ ಗೊತ್ತಿಲ್ಲ. ನನಗೆ ಮಾತ್ರ ಅವಳ ಪರಿಚಯವಿದೆ! ಸದಾಕಾಲವೂ ವ್ಯಸ್ತವಾಗಿರುವ Gynecologist. ತುಂಬಾ ಮೃದು ಭಾಷಿ. ಅವಳ ಜೊತೆ ಕಾಲ ಕಳೆಯೋದೇ ಈ ಮನಸ್ಸಿಗೆ ಆಹ್ಲಾದಕರ. ಅವಳ ಯಂತ್ರದಿಂದ ನಮ್ಮ ಕಣ್ಣಿಗೆ ಕಾಣುವ ನಮ್ಮದೇ ಮಗುವಿನ ಚಲನವಲನ- ಜೀವನ ನಮ್ಮೊಳಗೇ. . . . ಪರೀಕ್ಷಿತನ ಹಾಗೆ ಅನ್ನಿಸುತ್ತೆ!

ಕಳೆದ ವಾರ ಸಿಕ್ಕಿದ್ದಾಗ ಅದರ ಬಗ್ಗೆಯೇ ಮಾತನಾಡುತ್ತಾ, ಅನುಭವಕ್ಕೆ ಬಾರದ್ದನ್ನೂ ಅನುಭಾವಿಸಿಕೊಳ್ಳುತ್ತಾ ಬಹಳ ಹೊತ್ತು ಕಳೆದೆ. ಅಂತಹ ಸಮಯದಲ್ಲಿ ನಿಮ್ಮ ನೆನಪಾಗದೇ ಇರುತ್ತಾ ಹೇಳಿ? ಅವಳಿಗೆ ನಿಮ್ಮ ಪರಿಚಯ ಮಾಡಿಕೊಟ್ಟಿದ್ದೇ ತಡ ನನ್ನಿಂದ ನಿಮ್ಮಿಂದ ಅವಳಿಗೊಂದು ಸಹಾಯ ಆಗಬೇಕು ಅಂತ ಕೇಳಿದಳು. ನೀವಿರುವಾಗ ನಾನ್ಯಾಕೆ ಮೀನ ಮೇಷ ಎಣಿಸಲಿ? ತಟಕ್ಕೆಂದು ‘ಅದೇನು ಹೇಳು’ ಅಂತ ಅಂದೇ ಬಿಟ್ಟೇ.

ಅವಳಿಗೆ ಧರ್ಮಸಂಕಟ. ನನಗಂತೂ ಎಲ್ಲಿಂದ ವಿಷಯ ಶುರು ಮಾಡ್ಲೀ ಅಂತಾನೇ ಗೊತ್ತಾಗುತ್ತಿಲ್ಲ! ಒಂದು ದಿನಕ್ಕೆ ನೂರಾರು ಗರ್ಭಿಣಿಯರನ್ನು attend ಮಾಡ್ತಾಳೆ. ಹತ್ತಾರು delivery ಮಾಡಿಸ್ತಾಳೆ. ಒಂದ್ನಾಲ್ಕಾರು operation ಮಾಡ್ತಾಳೆ. ‘ಅಯ್ಯೊ, ಅದರಲ್ಲೆನು? ಎಲ್ಲಾ ಡಾಕ್ಟರ್ಗಳು ಮಾಡೋದನ್ನೆ ಅವಳೂ ಮಾಡ್ತಾಳೆ ಅಂತಿದ್ದೀರಾ?’ ಅಷ್ಟೇ ಆಗಿದ್ದಿದ್ದ್ರೆ ಅವಳು ನಮ್ಮ ನಡುವಿನ ವಾಕ್‌ವಸ್ತು ಹೇಗಾಗುತ್ತಿದ್ದಳು?! ಅವಳೂ ಸಹ ನನ್ನ ನಿಮ್ಮಗಳತರಹ!. ಅವಳ ಬಳಿ ಬರುವ ಹೆಂಗಸರ ಕಷ್ಟ ಸುಖವನ್ನು ಕೂಲಂಕಷವಾಗಿ ವಿಚಾರಿಸ್ತಾಳೆ. ಅವರೊಂದಿಗೆ ಮರುಗುತ್ತಾಳೆ. ಸೋನೋಗ್ರಫಿಯುಲ್ಲಿ ಮಗು ಹೆಣ್ಣು ಅಂತ ಗೊತ್ತಾದಾಗ ಆ prospective ತಾಯಿ ಮತ್ತವಳ ಮನೆಯವರ ಮನೋಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಾಳೆ. ಅದೇನ್ಹೇಳ್ಬೇಕು ಅಂತಿದ್ದೀನೋ ಅದನ್ನು ಸ್ಪಷ್ಟವಾಗಿ ಹೇಳ್ಮುಗಿಸ್ಬಾರ್ದೇ ಅಂತನ್ನಿಸ್ತ್ತಿದ್ದ್ಯಾ? ಯಾಕೋ ಗೊತ್ತಿಲ್ಲ, ಈ ದಿನ ಏನನ್ನೂ ಬೇಗ್ಬೇಗ ಹೇಳಕ್ಕಾಗ್ತಿಲ್ಲ. ಬಹುಶಃ ಅದು ಶತ ಶತಮಾನಗಳಷ್ಟು ಪುರಾತನ ವಿಷಯ ಅಲ್ಲ್ವಾ ಅದಕ್ಕೇ ಇರಬೇಕು!

ಇದೇ ಗೊಂದಲವನ್ನು ಅವಳು Head of the Department ಬಳಿ ಹೇಳಿದ್ದಕ್ಕೆ ಆತ ‘ಮೇಡಂ ಸಮಾಜ ಸೇವೆ, ಕಾನೂನು, ಸ್ತ್ರೀವಾದ ಎಲ್ಲಾ ಬಿಟ್ಹಾಕಿ ಬದುಕೋದು ನೋಡಿ’ ಅಂದರಂತೆ! ಹೀಗೂ ಇರುತ್ತಾ . . . . . . . ಅವಳ ಕನಲುವಿಕೆ ಇನ್ನೂ ಹೆಚ್ಚಾಯ್ತು. ಅದೇನಪ್ಪಾ ಅಂಥಾದ್ದು ಹೇಳಬಾರದಾ ಅಂದ್ಕೊಳ್ಳ್ತಿದ್ದೀರಾ? ಹೂಂ, ಹೇಳಿಯೇ ಬಿಡ್ತೀನಿ ಕೇಳಿ. . . ಅವಳ ಹತ್ತಿರ ಬರುವ ಗರ್ಭಿಣಿ ಹೆಂಗಸರು most of the time ಅವರ ವೈಯಕ್ತಿಕ ಕಷ್ಟ, ಸುಖ, ಅನಿಸಿಕೆ, ಅಭಿಪ್ರಾಯ, ಆರ್ಥಿಕ ಸ್ಥಿತಿಗತಿ, ಕುಟುಂಬದ ವಾತಾವರಣ, ಗಂಡ ಮತ್ತವನೊಡನೆಯ ಸಂಬಂಧ, ಆರೋಗ್ಯ ಎಲ್ಲವನ್ನೂ ಚಾಚೂ ತಪ್ಪದೆ ಹೇಳಿಕೊಂಡಿರ್ತಾರಂತೆ.

ಹುಟ್ಟುವ ಮಗು ಹೆಣ್ಣಾದರೆ ಅವರು ಏನೇನು ಸಂಕಷ್ಟ ಎದುರಿಸಬೇಕಾಗುತ್ತೆ ಅಂತ ಶುಭಾಗೆ ನೆನೆಸಿಕೊಂಡರೆ ಮೈ ಝುಂ ಅನ್ತಿರತ್ತಂತೆ. ಸರಿ, ಈ ಬಾರಿಯೂ ಹೆಣ್ಣು ಮಗು ಅಂತ ತಾಯಿಯಾಗಲಿರುವವಳಿಗೆ ಹೇಳಿ abortion ಸಲಹೆ ಕೊಟ್ಟು ಅವಳಿಗೆ ಸ್ವಲ್ಪಾನಾದ್ರೂ ನೆಮ್ಮದಿ ಕೊಡೋಣಾ ಅಂದ್ರೆ ಹೊಟ್ಟೇಲಿರೋ ಜೀವದ ಆರ್ತನಾದ ಕೇಳುತ್ತೆ. . . . .ಹಾಗಂತ ಏನೂ ಹೇಳದೆ ಪ್ರಸವ ಮಾಡಿಸಿಬಿಡೋಣಾ ಅಂದ್ರೆ, ಬದುಕಿದ್ದೂ ಬಾಳಿನುದ್ದಕ್ಕೂ ಸಾಯಬೇಕಿರುವ ಹೆಣ್ಣಿನ ರೋಧನ, ಹಿಂಸೆ ಮಾಡುತ್ತೆ! ಈಗೇನ್ಮಾಡೋದು? ನನ್ನ ಡಾಕ್ಟರ್‌ ಗೆಳತಿ ಮುಂದೆ ಬರೀ ಪ್ರಶ್ನಾರ್ಥಕಗಳು!

ಇದನ್ನೆಲ್ಲಾ ಕೇಳಿಸಿಕೊಂಡ ನಮ್ಮ ಸುಲೋಚನಾ ಮಹಿಳಾ ಸಂಘದ ಮಂಗಳ ಮೇಡಂ ಏನಂದ್ರು ಗೊತ್ತಾ? ‘ಪ್ರತೀ ಹೆಣ್ಣಿಗೂ ಅವಳಿಗೆ ಮಗು ಬೇಕೇ ಬೇಡವೇ ಎನ್ನುವ ನಿರ್ಧಾರ ಮಾಡುವ ಸ್ವಾತಂತ್ರ್ಯ ಸಿಕ್ಕೋವರೆಗೂ ಈ ಕಷ್ಟ ತಪ್ಪಿದ್ದಲ್ಲಾ’ ನನಗ್ಯಾಕೋ ಅವರ ಮಾತು ಹಿತವೆನಿಸಲಿಲ್ಲ.

ಪಾಪ, ಹಾಗಾದ್ರೆ ಅಪ್ಪನಾಗೋನ ಆಸೆ ಆಕಾಂಕ್ಷೆಗಳಿಗೆ ಮೂರ್ಕಾಸಿನ ಬೆಲೆಯೂ ಇಲ್ಲವಾ?! ಬದಲಿಗೆ ನನಗನ್ನಿಸಿತು ‘ನಮಗೆ ಎಂಥಾ ಮಗು ಕೊಡಬೇಕೆನ್ನುವ ಅಂತಿಮ ನಿರ್ಧಾರ ಆ ಕಾಣದ ಕೈಗಳದ್ದಾಗಿರಬೇಕು!’ ನೀವು ಅದನ್ನು ದೇವರು ಅಂತಾನಾದ್ರು ಅನ್ನಿ, ಪ್ರಕೃತಿ ಅಂತಾನಾದ್ರೂ ಅನ್ನಿ. . . . ಒಟ್ಟಿನಲ್ಲಿ Final Judgementಅನ್ನು ಒಪ್ಪಿಕೊಳ್ಳುವಷ್ಟು ನಮ್ಮ ತಲೆ ಬಾಗಬೇಕು. ಅದೇ ಈ ಪ್ರಶ್ನೆಗೆ ಉತ್ತರ ಅನ್ನಿಸಿತು.

ಆದರೆ ಶುಭಾಳ ಮನಸ್ಸಿನ ದ್ವಂದ್ವ feminism ಗೆ ಸಂಬಂಧಪಟ್ಟಿದ್ದಲ್ಲಾ feminality ಯದ್ದು ಅಂತ ಹೇಗೆ ಅರ್ಥ ಮಾಡಿಸುವುದು? ಪ್ಲೀಸ್‌ ಹೇಳ್ತೀರಾ? ನಿಮಗೂ ಗೊಂದಲಾನಾ? ನಾನು ಅವಳ ಕ್ಲಿನಿಕ್‌ನಿಂದ ಹೊರಬರುತ್ತಿದ್ದಾಗ, ರಿಸೆಪ್ಶನಿಸ್ಟ್‌ನ ಹಿಂದಿದ್ದ ಗೋಡೆಮೇಲೆ ಕಂಡದ್ದು ಏನು ಗೊತ್ತಾ? ನೋಡಿ. . . . . ಈಗ ಸ್ವಲ್ಪ ನಿರಾಳ. ನಿಮ್ಮ ಉತ್ತರಕ್ಕಾಗಿ ಕಾಯ್ತಿರ್ತೀನಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X