ನಾನು ಕಾಮದ ದೃಷ್ಟಿಯಿಂದ ತಮನ್ನಾರನ್ನ ನೋಡಲಿಲ್ಲ: "ಮಿಲ್ಕಿ ಬಾಡಿ" ವಿವಾದದ ಬಗ್ಗೆ ನಟ ಅನ್ನು ಕಪೂರ್ ಸ್ಪಷ್ಟನೆ

ಬಾಲಿವುಡ್‌ನ ಹಿರಿಯ ನಟ ಅನ್ನು ಕಪೂರ್ ಅವರು ನಟಿ ತಮನ್ನಾ ಭಾಟಿಯಾ (Tamannaah Bhatia) ಅವರ ದೇಹದ ಬಗ್ಗೆ ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಇದೀಗ ಸ್ಪಷ್ಟನೆ ನೀಡಿದ್ದಾರೆ. ಕಳೆದ ವರ್ಷ ಸಂದರ್ಶನವೊಂದರಲ್ಲಿ ತಮನ್ನಾ ಅವರ ನೃತ್ಯವನ್ನು ಮೆಚ್ಚುವ ಭರದಲ್ಲಿ "ದುಧಿಯಾ ಬದನ್" (ಹಾಲಿನಂತಹ ಮೈಬಣ್ಣ) ಎಂಬ ಪದವನ್ನು ಅನ್ನು ಕಪೂರ್ ಬಳಸಿದ್ದರು. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಅನೇಕರು ಇದನ್ನು ಅಸಭ್ಯ ವರ್ಣನೆ ಎಂದು ಟೀಕಿಸಿದ್ದರು. ಈಗ ಈ ಬಗ್ಗೆ ಮೌನ ಮುರಿದಿರುವ ನಟ, ತಮ್ಮ ಮಾತಿನ ಹಿಂದಿನ ಅರ್ಥವೇನು ಎಂದು ವಿವರಿಸುವ ಮೂಲಕ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅನ್ನು ಕಪೂರ್, ತಮನ್ನಾ ಅವರ ಸೌಂದರ್ಯವನ್ನು ವರ್ಣಿಸುವಾಗ ಹಾಲಿನಂತಹ ಮೈಬಣ್ಣ ಎಂಬ ಪದವನ್ನು ಬಳಸಿದ್ದರು. ಇದು ಮಹಿಳೆಯನ್ನು ವಸ್ತು ರೂಪದಲ್ಲಿ ಬಿಂಬಿಸುವ ಮತ್ತು ಅಸಭ್ಯವಾದ ಹೇಳಿಕೆ ಎಂದು ನೆಟ್ಟಿಗರು ಟೀಕಿಸಿದ್ದರು. ಈಗ ಸಿದ್ಧಾರ್ಥ್ ಕನ್ನನ್ ಅವರೊಂದಿಗಿನ ಸಂಭಾಷಣೆಯಲ್ಲಿ ಅನ್ನು ಕಪೂರ್ ಈ ಹೇಳಿಕೆಯ ಹಿಂದಿನ ಸಂದರ್ಭವನ್ನು ವಿವರಿಸಿದ್ದಾರೆ.

Annu Kapoor

ಕಾಮದ ಉದ್ದೇಶವಿರಲಿಲ್ಲ

ಈ ವಿವಾದದ ಕುರಿತು ಮಾತನಾಡಿರುವ ಅನ್ನು ಕಪೂರ್, ಅಮೆರಿಕಾದಲ್ಲಿ ನಡೆದ ತಮ್ಮ ಸಂಗೀತ ಕಾರ್ಯಕ್ರಮವೊಂದಕ್ಕೆ ಹಾಡುಗಳನ್ನು ಆಯ್ಕೆ ಮಾಡುವಾಗ 'ಆಜ್ ಕಿ ರಾತ್' ಹಾಡನ್ನು ವೀಕ್ಷಿಸಿದ್ದಾಗಿ ತಿಳಿಸಿದ್ದಾರೆ. ಆ ಹಾಡಿನಲ್ಲಿ ತಮನ್ನಾ ಅವರ ನೃತ್ಯ ಮತ್ತು ಅವರ ಸೌಂದರ್ಯವನ್ನು ಕಂಡು ತಾವು ಪ್ರಶಂಸಿಸಿದ್ದಾಗಿ ಹೇಳಿದ್ದಾರೆ. "ನನ್ನ ಮನಸ್ಸಿನಲ್ಲಿ ತಮನ್ನಾ ಬಗ್ಗೆ ಯಾವುದೇ ಕೆಟ್ಟ ಹಂಬಲ ಅಥವಾ ಕಾಮದ ಉದ್ದೇಶವಿರಲಿಲ್ಲ. ಅದು ಒಬ್ಬ ಸುಂದರ ನಟಿಯನ್ನು ಕಂಡಾಗ ಸಹಜವಾಗಿ ಬರುವ ಹೊಗಳಿಕೆಯ ಮಾತುಗಳಷ್ಟೇ ಆಗಿದ್ದವು" ಎಂದು ತಮ್ಮ ಮೇಲಿನ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.

ತಮನ್ನಾ ಅಂದ ಬಣ್ಣಿಸಿದೆ

ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ಅನ್ನು ಕಪೂರ್, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ನಾನು ಆಕೆಯನ್ನು ಒಬ್ಬ ಸುಂದರ ನಟಿ ಎಂದು ಹೊಗಳಿದ್ದೇನೆಯೇ ಹೊರತು ಬೇರೆ ಯಾವುದೇ ತಪ್ಪು ಉದ್ದೇಶ ನನಗಿರಲಿಲ್ಲ. ಒಬ್ಬ ಕಲಾವಿದನಾಗಿ ಇನ್ನೊಬ್ಬ ಕಲಾವಿದೆಯ ಸೌಂದರ್ಯವನ್ನು ಮೆಚ್ಚಿಕೊಂಡಿದ್ದೇನೆ ಎಂದಿದ್ದಾರೆ. ನನಗೆ ಆಕೆಯ ಬಗ್ಗೆ ಯಾವುದೇ ಲೈಂಗಿಕ ಹಂಬಲ ಅಥವಾ ಕಾಮದ ದೃಷ್ಟಿಕೋನವಿಲ್ಲ. ನಾನು ಆಕೆಯನ್ನು ಬಯಸುತ್ತಿಲ್ಲ. ಕೇವಲ ಶಬ್ದಗಳನ್ನು ಬಳಸಿ ಆಕೆಯ ಅಂದವನ್ನು ಬಣ್ಣಿಸಿದ್ದೇನೆಯೇ ಹೊರತು ನನ್ನ ಮನಸ್ಸಿನಲ್ಲಿ ಯಾವುದೇ ಕೆಟ್ಟ ಆಲೋಚನೆ ಇಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ.

Diganth: ಬಾಡಿಗೆ ಹಣದಿಂದ ಜೀವನ ನಡೆಸುವ ಸ್ಥಿತಿ, ನಟನೆ ಬಿಡುವ ಆಲೋಚನೆ: ಕನ್ನಡ ಚಿತ್ರರಂಗದ ಕಹಿ ಸತ್ಯ ಬಿಚ್ಚಿಟ್ಟ ನಟ ದಿಗಂತ್
Diganth: ಬಾಡಿಗೆ ಹಣದಿಂದ ಜೀವನ ನಡೆಸುವ ಸ್ಥಿತಿ, ನಟನೆ ಬಿಡುವ ಆಲೋಚನೆ: ಕನ್ನಡ ಚಿತ್ರರಂಗದ ಕಹಿ ಸತ್ಯ ಬಿಚ್ಚಿಟ್ಟ ನಟ ದಿಗಂತ್

ಇದೇ ವೇಳೆ ಭಾಷಾ ಬಳಕೆಯ ಬಗ್ಗೆ ಇರುವ ನಿಲುವಿನ ವಿರುದ್ಧ ಅನ್ನು ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇಂಗ್ಲಿಷ್‌ನಲ್ಲಿ ಯಾರಾದರೂ ಮಿಲ್ಕಿ ಬಾಡಿ ಎಂದು ಕರೆದರೆ ಅದು ಜನರಿಗೆ ಫ್ಯಾಶನ್ ಆಗಿ ಕಾಣುತ್ತದೆ, ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಆದರೆ ಅದೇ ಅರ್ಥ ಬರುವ ಶಬ್ದವನ್ನು ನಮ್ಮದೇ ದೇಶಿ ಭಾಷೆಯಲ್ಲಿ ಬಳಸಿದಾಗ ಅದು ಅಸಭ್ಯವಾಗಿ ಕಾಣುತ್ತದೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಭಾಷೆಯ ಕಾರಣಕ್ಕಾಗಿ ತಮ್ಮ ಉದ್ದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿರುವ ಅವರು, ಟೀಕೆ ಮಾಡುವ ಮೊದಲು ಆ ಮಾತಿನ ಹಿಂದಿನ ಅರ್ಥವನ್ನು ತಿಳಿದುಕೊಳ್ಳಬೇಕು ಎಂದಿದ್ದಾರೆ.

Annu Kapoor

ತಾವು ಬಳಸಿದ ಪದಗಳು ಹಳೆಯ ಶೈಲಿಯ ಹಿಂದಿ ಮತ್ತು ಉರ್ದು ಸಾಹಿತ್ಯದಲ್ಲಿ ಸೌಂದರ್ಯವನ್ನು ವರ್ಣಿಸಲು ಬಳಸುವ ಸಾಮಾನ್ಯ ಪದಗಳಾಗಿವೆ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸ್ಪಷ್ಟನೆ ನೀಡಿದ ಹೊರತಾಗಿಯೂ, ಅನೇಕರು ಸಾರ್ವಜನಿಕವಾಗಿ ಇಂತಹ ಪದಗಳನ್ನು ಬಳಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅನ್ನು ಕಪೂರ್ ಅವರು ತಮ್ಮ ಹೇಳಿಕೆಯನ್ನು ಪ್ರಶಂಸೆಯ ದೃಷ್ಟಿಕೋನದಿಂದ ನೋಡಬೇಕೆಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಈ ವಿವಾದದ ಬಗ್ಗೆ ನಟಿ ತಮನ್ನಾ ಭಾಟಿಯಾ ಅವರು ಸದ್ಯಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ನೋವಾಗಿದ್ರೆ ತಮನ್ನಾಗೆ ಕ್ಷಮೆ ಕೇಳುವೆ

ಇದೇ ವೇಳೆ ಮಾನವೀಯ ನೆಲೆಯಲ್ಲಿ ಮಾತನಾಡಿದ ಅವರು, "ನನ್ನ ಮಾತಿನಿಂದ ತಮನ್ನಾ ಅವರಿಗೆ ಯಾವುದೇ ರೀತಿಯಲ್ಲಿ ನೋವಾಗಿದ್ದರೆ ಅಥವಾ ಅವರ ಮನಸ್ಸಿಗೆ ಸಂಕಟವಾಗಿದ್ದರೆ, ನಾನು ಅವರಿಗೆ ಕ್ಷಮೆಯಾಚಿಸಲು ಸಿದ್ಧನಿದ್ದೇನೆ," ಎಂದು ಹೇಳಿದ್ದಾರೆ. ಉದ್ದೇಶಪೂರ್ವಕವಾಗಿ ಯಾರನ್ನೂ ಅವಮಾನಿಸುವುದು ತಮ್ಮ ಗುರಿಯಾಗಿರಲಿಲ್ಲ ಎಂದು ಹೇಳುವ ಮೂಲಕ ಅವರು ಈ ವಿವಾದಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+