Pet Care: ಬೇಸಿಗೆಯಲ್ಲಿ ನಿಮ್ಮ ಮುದ್ದಿನ ಬೆಕ್ಕಿನ ಆರೈಕೆ ಹೀಗಿರಲಿ! ಆರೋಗ್ಯದ ವಿಚಾರದಲ್ಲಿ ಪಾಲಿಸಲೇಬೇಕಾದ ಈ ಏಳು ಅಂಶಗಳು

ಬೇಸಿಗೆ ನಮಗಷ್ಟೇ ಅಲ್ಲ. ನಮ್ಮ ಮನೆಯಲ್ಲಿರುವ ಮುದ್ದಿನ ಸಾಕು ಪ್ರಾಣಿಗಳಿಗೂ ಸಾಕಷ್ಟು ತೊಂದರೆ ಸೃಷ್ಟಿಸುತ್ತದೆ. ಮನುಷ್ಯನಾದ್ರೂ ತನಗಾಗುತ್ತಿರುವ ಅನಾನುಕೂಲತೆಗಳನ್ನು ಹೇಳಿಕೊಳ್ಳುತ್ತಾನೆ. ಅದಕ್ಕೊಂದು ಪರಿಹಾರ ಹುಡುಕುತ್ತಾನೆ. ಆದರೆ, ನಮ್ಮ ಜೊತೆಗೆ ಬದುಕುವ ಸಾಕು ಪ್ರಾಣಿಗಳ ಕತೆ ಏನು? ಅವುಗಳಿಗೆ ಮಾತು ಬರಲ್ಲ. ಜೀವದಲ್ಲಿ ಏನಾಗುತ್ತಿದೆ ಎಂಬುದು ಹೇಳಲು ಸಾಧ್ಯವಿಲ್ಲ. ಈ ಬಿರುವೈಶಾಖದಲ್ಲಿ ಅವುಗಳ ಕಷ್ಟ ಬಗೆಹರಿಸುವುದು ಹೇಗೆ ಅನ್ನೋದೇ ಚಿಂತೆ. ಅದಕ್ಕಾಗಿಯೇ ಬಿರುಬೇಸಿಗೆಯ ದಿನಗಳಲ್ಲಿ ನಿಮ್ಮ ಮುದ್ದಿನ ಬೆಕ್ಕಿನ ಆರೈಕೆ ಹೇಗೆ? ಬೆಕ್ಕಿನ ಆರೋಗ್ಯದ ವಿಚಾರದಲ್ಲಿ ಐದು ಮಹತ್ವಪೂರ್ಣ ಅಂಶಗಳನ್ನು ಇಲ್ಲಿ ಹೇಳುತ್ತಿದ್ದೇವೆ. ಮಾರ್ಜಾಲ ಆರೋಗ್ಯದ ವಿಚಾರದಲ್ಲಿ ಇದು ಅತಿ ಹೆಚ್ಚು ಸಹಕಾರಿ.

ಉರಿಬೇಸಿಗೆಯಲ್ಲಿ ಬೆಕ್ಕಿನ ಆರೋಗ್ಯ ಕಾಪಾಡುವುದು ಹೇಗೆ?

1 . ಬೆಕ್ಕನ್ನು ಬೇಸಿಗೆಯಲ್ಲಿ ನಿರ್ಲಕ್ಷಿಸಬೇಡಿ,ಅದರ ಮೇಲೆ ಕಣ್ಣಿಡಿ: ಬೆಕ್ಕು ಗಾಳಿಯಾಡುತ್ತಿರುವ ಜಾಗದಲ್ಲಿ ವಿಶ್ರಾಂತಿ ಪಡೆಯುತ್ತಿದೆಯೆಂದರೆ ಅದಕ್ಕೆ ತೊಂದರೆಕೊಡಬೇಡಿ. ಬೆಕ್ಕು ಬೆಳಗ್ಗಿನ ಸೂರ್ಯಕಿರಣಗಳನ್ನು ಅಸ್ವಾಧಿಸುತ್ತಿದೆಯೆಂದರೆ ಹಾಗೇ ಬಿಟ್ಟು ಬಿಡಿ. ಆದರೆ, ನಡು ಮಧ್ಯಾಹ್ನ ಮಾತ್ರ ಎಚ್ಚರವಿರಲಿ. ನಡುಮಧ್ಯಾಹ್ನ ಸೂರ್ಯನ ಬಿಸಿಲು ಅದಕ್ಕೆ ಸೋಂಕದಂತೆ ಎಚ್ಚರ ವಹಿಸಿ.

Summer

2. ಬೆಕ್ಕುಗಳಿಗೆ ಸನ್‌ ಬರ್ನ್‌ ತಪ್ಪಿಸಿ: ಬೆಕ್ಕುಗಳು ಸಾಮಾನ್ಯವಾಗಿ ಚಳಿಯನ್ನು ಅಸ್ವಾಧಿಸುತ್ತವೆ. ಚಳಿ ಅಂದರೆ ಅವುಗಳಿಗೆ ಪರಮಪ್ರಿಯ. ಬೆಕ್ಕಿನ ತುಪ್ಪಳ, ರೋಮ ಇತ್ಯಾದಿ ನಾಜೂಕು ಮತ್ತು ಚಳಿಗೆ ಹೇಳಿ ಮಾಡಿಸಿದಂತಿವೆ. ಅವುಗಳ ತುಪ್ಪಳ ಮೃದುವಾಗಿರುವ ಕಾರಣಕ್ಕೆ ಬೆಕ್ಕುಗಳಿಗೆ ಬೇಸಿಗೆಯಲ್ಲಿ ಬೇಗನೇ ಸನ್‌ ಬರ್ನ್‌ ಆಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ಬೆಕ್ಕಿನ ಮೈಮೇಲಿನ ತುಪ್ಪಳ, ಮುಖದ ಚರ್ಮದ ಬಣ್ಣದ ಮೇಲೆ ನಿಗಾ ಇಡಿ. ಸನ್‌ ಬರ್ನ್‌ ಆಗುವುದನ್ನು ತಪ್ಪಿಸಿ.

ಬೇಸಿಗೆಯಲ್ಲಿ ಈ ಹೊತ್ತಿನಲ್ಲಿ ಗಿಡಗಳಿಗೆ ನೀರುಣಿಸಿದರೆ ಸಸಿಗಳು ಸದಾ ಹಸಿರಾಗಿರುವುದು! ಕೈತೋಟ ನಳನಳಿಸುವುದು
ಬೇಸಿಗೆಯಲ್ಲಿ ಈ ಹೊತ್ತಿನಲ್ಲಿ ಗಿಡಗಳಿಗೆ ನೀರುಣಿಸಿದರೆ ಸಸಿಗಳು ಸದಾ ಹಸಿರಾಗಿರುವುದು! ಕೈತೋಟ ನಳನಳಿಸುವುದು

3. ಬೆಕ್ಕುಗಳು ಹೆಚ್ಚು ನೀರು ಕುಡಿಯುವಂತೆ ಮಾಡಿ: ಸಾಮಾನ್ಯವಾಗಿ ಬೆಕ್ಕುಗಳು ಹೆಚ್ಚು ನೀರು ಕುಡಿಯುವುದಿಲ್ಲ. ಒಣ ಆಹಾರಗಳನ್ನೇ ಬೆಕ್ಕುಗಳು ಇಷ್ಟ ಪಡುತ್ತವೆ. ಹಾಗಾಗಿ, ಬೇಸಿಗೆಯಲ್ಲಿ ಬೆಕ್ಕುಗಳಿಗೆ ಬೇಗ ಡಿಹೈಡ್ರೇಶನ್‌ ಆಗುತ್ತದೆ. ಹಾಗಾಗಿ, ಮನೆಯ ಮೂಲೆ ಮೂಲೆಯಲ್ಲೂ ಬೆಕ್ಕುಗಳಿಗೆ ನೀರುಣಿಸುವ ತಟ್ಟೆಗಳನ್ನಿಡಿ. ಕೇವಲ ಒಂದು ತಟ್ಟೆಗಳಿಡುವ ಬದಲು, ಮನೆಯಲ್ಲಿ ನಾಲ್ಕೈದು ತಟ್ಟೆಗಳನ್ನಿಡಿ. ಇದರಿಂದ ಬೆಕ್ಕುಗಳು ನೀರಡಿಕೆಯಾದಕ್ಷಣ ನೀರು ಕುಡಿಯುತ್ತವೆ.

4. ಬೆಕ್ಕುಗಳಿಗೆ ಹಸಿ ಆಹಾರ ಕೊಡಿ: ಮೊದಲೇ ಹೇಳಿದಂತೆ ಬೆಕ್ಕುಗಳು ಇಷ್ಟಪಟ್ಟು ನೀರು ಕುಡಿಯುವುದಿಲ್ಲ. ಹಾಗಾಗಿ, ಡಿಹೈಡ್ರೇಶನ್‌ ತಪ್ಪಿಸಲು ಸಾಧ್ಯವಾದಷ್ಟು ಹಸಿ ಆಹಾರಗಳನ್ನು ಅಥವಾ ನೀರಿನ ಅಂಶ ಹೆಚ್ಚು ಇರುವ ಆಹಾರಗಳನ್ನು ಬೆಕ್ಕಿಗೆ ಕೊಡಿ. ಮೀನು ಮತ್ತು ಕೋಳಿಯ ಜೆಲ್ಲಿ ಮತ್ತು ಗ್ರೇವಿ ಇರುವ ಸಾಕಷ್ಟು ಆಹಾರಗಳು ಮಾರುಕಟ್ಟೆಯಲ್ಲಿವೆ. ಅದನ್ನೇ ಬೆಕ್ಕಿಗೆ ನೀಡಿ.

5. ಬೆಕ್ಕಿನ ರೋಮಗಳನ್ನು ಟ್ರಿಮ್‌ ಮಾಡಿ: ರೋಮಗಳು ಬೆಕ್ಕನ್ನು ಚಳಿಗಾಲದಲ್ಲಿ ಬೆಚ್ಚಗೆ ಹಾಗೂ ಬೇಸಿಗೆಯಲ್ಲಿ ತಂಪಾಗಿಡಲು ಸಹಾಯ ಮಾಡುತ್ತದೆ. ಆದರೆ, ಬಿರುಬೇಸಿಗೆಯಲ್ಲಿ ರೋಮಗಳೇ ಬೆಕ್ಕಿನ ದೇಹವನ್ನು ಬೆಚ್ಚಗೆ ಮಾಡಬಹುದು. ಹಾಗಾಗಿ, ವೈಶಾಖದಲ್ಲಿ ಬೆಕ್ಕಿನ ರೋಮಗಳನ್ನು ಟ್ರಿಮ್‌ ಮಾಡಿಸಿ.

6. ಕಾರುಗಳಲ್ಲಿ ಬೆಕ್ಕನ್ನು ಏಕಾಂಗಿಯಾಗಿ ಬಿಡಬೇಡಿ: ಕೆಲವರಿಗೆ ಬೆಕ್ಕನ್ನು ಕಾರುಗಳಲ್ಲಿ ಕರೆದುಕೊಂಡು ಹೋಗುವ ಅಭ್ಯಾಸವಿರುತ್ತವೆ. ಬೇಸಿಗೆಯಲ್ಲಿ ಅದು ಸರಿಯಲ್ಲ. ಕಾರಿನ ಒಳಾಂಗಣ ಬಲುಬೇಗ ಬೆಚ್ಚಗಾಗುತ್ತದೆ.ಇಂಜಿನ್‌ ಹೀಟ್‌ ಕೂಡಾ ಬೆಕ್ಕಿಗೆ ಮಾರಕವಾಗಬಹುದು. ನೀವು ಕಾರು ಬಿಟ್ಟು ದೂರ ಹೋದಾಗ ಬೆಕ್ಕು ಅನಗತ್ಯವಾಗಿ ಆತಂಕ ಪಡಬಹುದು. ಹಾಗಾಗಿ, ಬೇಸಿಗೆಯಲ್ಲಿ ಬೆಕ್ಕಿನ ಕಾರಿನ ಪ್ರಯಾಣ ಬೇಡವೇ ಬೇಡ.

ಬಿರು ಬೇಸಿಗೆಯಲ್ಲಿಯೂ ಎಸಿ, ಕೂಲರ್‌ ಇಲ್ಲದೆ ಮನೆಯನ್ನು ತಂಪಾಗಿರಿಸಲು ಇಲ್ಲಿದೆ ಟಿಪ್ಸ್‌
ಬಿರು ಬೇಸಿಗೆಯಲ್ಲಿಯೂ ಎಸಿ, ಕೂಲರ್‌ ಇಲ್ಲದೆ ಮನೆಯನ್ನು ತಂಪಾಗಿರಿಸಲು ಇಲ್ಲಿದೆ ಟಿಪ್ಸ್‌

7. ಪಶು ವ್ಯದ್ಯರ ಜೊತೆ ಸಂಪರ್ಕದಲ್ಲಿರಿ: ಒಂದು ವೇಳೆ ಬೆಕ್ಕು ಸುಸ್ತಾಗಿದ್ದರೆ, ಅದರ ನಾಲಗೆ ಕೆಂಪಾಗಿದ್ದರೆ, ಆಹಾರದಿಂದ ದೂರ ಹೋದರೆ ಕೂಡಲೇ ಒದ್ದೆ ಟವೆಲಿನಿಂದ ಬೆಕ್ಕಿನ ಮೈ ಒರೆಸಿರಿ. ಜೊತೆಗೆ ತಕ್ಷಣದಲ್ಲಿ ಪಶುವೈದ್ಯರ ಸಂಪರ್ಕ ಮಾಡಿ.

(ಬರಹ : ರಂಜಿತಾ ಆರ್‌.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+