• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಬ್ರೆಸ್ಟ್‌ ಕ್ಯಾನ್ಸರ್‌?! ಉಹೂಂ.. ಅದಕ್ಕಿಂತ ಭಯಾನಕ!

By Staff
|


ಹೌದು. ಕ್ಯಾನ್ಸರ್‌ ಅಂತೂ ಹೌದು. ಅದಕ್ಕಿಂತಲೂ ಭಯಾನಕ. ಅದಕ್ಕಿಂತಲೂ ಯಾತನಾಮಯ. ಮಾರಣಾಂತಿಕ ಮಾತ್ರವಲ್ಲ, ಆತ್ಮಘಾತುಕವೂ ಹೌದು. ಕಿಮೋಥೆರಪಿಗಿಂತಲೂ ತೀಕ್ಷ್ಣವಾದ ಸ್ವಯಂಥೆರಪಿಗೆ ಬಗ್ಗಬಹುದಾದ ಖಾಯಿಲೆ!

Why she doubts him?ಗಾಯತ್ರಿ ದಡಬಡ ಬಂದವಳೇ ‘ಬೇಗ್ಬೇಗ ರೆಡಿಯಾಗು ಹೊರಡೋಣ’ ಅಂದಳು. ಎಲ್ಲಿಗೆ ಅಂತ ಕೇಳೋಕ್ಕೂ ಪುರುಸೊತ್ತು ಕೊಡದ ಅವಳ ಜೊತೆ ಕೋಲೆ ಬಸವನಂತೆ ಆಟೋ ಹತ್ತಿದೆ. ಇಳಿದು ಬ್ಯಾನರ್‌ ನೋಡಿದ್ಮೇಲೆ ಗೊತ್ತಾಯ್ತು ಅವಳಿಗೆ ನನ್ನ ಮೇಲೆ ಎಷ್ಟೊಂದು ಸಿಟ್ಟಿದೆ ಅಂತ! ಅದೊಂದು ಭಾಷಣ ಕಾರ್ಯಕ್ರಮ. ಬರೀ ಬಾಯಿಗಳಿಗೆ ಕೆಲಸ ಕೊಟ್ಟು ಗೊತ್ತಿತ್ತು ನನಗೆ! ನನ್ನ ಕಿವಿಗಳಿಗೆ ಇದಕ್ಕಿಂತ ದೊಡ್ಡ punishment ಇನ್ನೇನಿದ್ದೀತು ಹೇಳಿ?! ಹೌದು ಅವರೇ, ಮೊನ್ನೆ ನಿಮ್ಮೂರ್ನಲ್ಲಿ ಖಿನ್ನತೆ ಅದರ ನಿಭಾವಣೆ ಮಣ್ಣು ಮಸಿ ಅಂತ ಮಾತಾಡಿದ್ರಲ್ಲ ಅವರೇ ಭಾಷಣ ಮಾಡೋವ್‌ರಿದ್ರು. ಆದರೆ ನನ್ನ ಸಂಕಟ ಕೇಳೋವ್ರ್ಯಾರಿದ್ದ್ರು?!

ಏನೇ ಅನ್ನಿ ಆಕೆ ಆ ವಯಸ್ಸಿನಲ್ಲು ಏನು graceful ಅಲ್ಲ್ವಾ?ನಿವೃತ್ತಿ ಆದ್ಮೇಲೂ ಮೆಡಿಕಲ್‌ ಕಾಲೇಜಿನ ಹುಡುಗಿ ಹಾಗೆ ಕಾಣ್ತಿದ್ದ್ರು. ಅಯ್ಯಯ್ಯೋ, ಅವರ ವರ್ಣನೆ ಆಮೇಲಿರಲಿ ಮೊದಲು ಭಾಷಣ ಏನು ಮಾಡಿದ್ರು ಅಂತ ಕೇಳ್ತಿದ್ದೀರಾ? ಮೊದಲೊಂದ್ಸ್ವಲ್ಪ ಹೊತ್ತು ಅವರ ಮಾತುಗಳನ್ನು ನಾನು ಕೇಳಿಸ್ಕೊಳ್ಳಲೇ ಇಲ್ಲ ಗೊತ್ತಾ! ಆದರೆ ಅವರ ಬಾಯಿಂದ ಒಂದು ವಾಕ್ಯ ಹೊರಗ್ಬಿತ್ತು ನೋಡಿ ಎಲ್ಲಿತ್ತೋ ನಿಮ್ಮಗಳ ನೆನಪು ಎದ್ದು, ಬಿದ್ದು, ಒದ್ದ್ಕೊಂಡು, ಒದ್ದಾಡ್ಕೊಂಡು ನನ್ನನ್ನು ಆವರಿಸಿಕೊಂಡವು!

ಹದಿನೈದು ವರ್ಷಗಳ ದಾಂಪತ್ಯ ಹಂಚಿಕೊಂಡಮೇಲೂ ಹೆಂಡತಿ, ಗಂಡನ ಮೇಲೆ ಯಾಕೆ ಅನುಮಾನ ಪಡ್ತಾಳೆ? ಅದಕ್ಕೆ ಕಾರಣ ‘ಅಭದ್ರತೆ’ ಅಂದ್ರು ಆಕೆ. ಮೊದಲು ಏನು ಹೇಳಿದ್ರೋ ನಿಮಗೇ ಗೊತ್ತು ನಾನು ಕೇಳಿಸ್ಕೊಳ್ಳಲಿಲ್ಲ ಅಂತ. . . .ಆಮೇಲೆ ಏನು ಹೇಳ್ತಾಇದ್ದ್ರೋ ನನಗೆ ಕೇಳಿಸ್ಕೊಳ್ಳಕ್ಕಾಗಲೇಯಿಲ್ಲ! ಹೌದು, ಯಾಕೆ ವಿನಾಕಾರಣ ಹಾಗೆ ಅನುಮಾನಪಡ್ತಾರೆ? ಅಲ್ಲ ನನಗು ನಿಮಗು ಈ ಮಾತು ಅನ್ವಯಿಸೊಲ್ಲ ಬಿಡಿ! ಆದರೆ ಯೋಚನೆ ಮಾಡ್ಬೇಕು ಅನ್ನಿಸುತ್ತಲ್ಲ್ವಾ?

ಆಕೆ ಹೇಳಿದ್ರಲ್ಲ ‘ಅಭದ್ರತೆ’ಅಂತ ಹಾಗಂದ್ರೇನು? ಈ ಅಭದ್ರತೆ ಯಾಕೆ ಕಾಡುತ್ತೆ? ಯಾವುದರಿಂದ ಅಭದ್ರತೆ ಅನ್ನಿಸುತ್ತೆ? ಯುೌವನ ಕೈಬಿಡ್ತಿದೆ ಅನ್ನುವ ಅಭದ್ರತೆನಾ? ನಾನೇನು ಸಾಕ್ರಟೀಸ್‌ ಅಲ್ಲ. ಆದರೆ ನನಗೆ ಏನನ್ನಿಸುತ್ತೆ ಗೊತ್ತಾ ಯಾವ್ಯಾವ ವಯಸ್ಸಿನಲ್ಲಿ ದೇಹ ಮನಸ್ಸು ಯಾವ್ಯಾವ ರೀತಿಯಲ್ಲಿ ಇರಬೇಕೋ ಹಾಗೆ ಇದ್ದರೆ ಅದೇ ಯುೌವನ ಅಂತ. ನಿಮಗೂ ಹೀಗೇ ಅನ್ನಿಸುತ್ತಾ? ಎಲ್ಲರಿಗೂ ಹೀಗೆ ಅನ್ನಿಸೋ ಹಾಗಾದ್ರೆ ಮತ್ತ್ಯಾಕೆ ಅಭದ್ರತೆ?! financial ವಿಷಯ ಈ ರೀತಿ ಅಭದ್ರತಾ ಭಾವ ಕೊಡುತ್ತಾ? ಅದಕ್ಕೊಂದು ಪರ್ಯಾಯ ಮಾರ್ಗ ಇದ್ದೇ ಇರುತ್ತೆ ಅಂತ ನನ್ನ ನಂಬಿಕೆ. ನಮ್ಮ ಮಕ್ಕಳು ಮರಿ ಗತಿ ಏನು ಅನ್ನುವ ಯೋಚನೇನಾ? ಅದರ ಬಗ್ಗೆ ನೀವು ನನಗೆ ಹೇಳ್ಬೇಕು! ಇನ್ನು companionship ಇರೋಲ್ಲ ಅನ್ನುವ ಹೆದರಿಕೆನಾ? ಛೇ, ಮನಸ್ಸೇ ಇಲ್ಲದ ಮೇಲೆ ಅದ್ಯಾಕೆ ಬೇಕ್ರೀ?

ಇಷ್ಟೆಲ್ಲಾ ಕೆಲಸಕ್ಕ್ಬಾರದ ಮನೋಮಂಥನ ನಡೆಸಿಕೊಂಡು ಮತ್ತೆ ಮನೆಗೆ ಬರುವಷ್ಟರಲ್ಲಿ ಯಥಾಪ್ರಕಾರ ನನ್ನದೇ ಒಂದು ತೀರ್ಮಾನಕ್ಕೆ ಬಂದಿದ್ದೆ. ಈ ಅಭದ್ರತೆ- ಗಿಬದ್ರತೆ ಎಲ್ಲ ಬರೀ ಸುಳ್ಳು. ಬಹಳಷ್ಟು ಹೆಂಗಸರು ಗಂಡ ಅಂದ್ರೆ ಒಂದು ವ್ಯಕ್ತೀನೇ ಅಲ್ಲ ಅಂದ್ಕೊಂಡ್ಬಿಟ್ಟಿರ್ತೀವಿ. ಮದುವೆ ಆದತಕ್ಷಣ ಅವನು ಪ್ರಕೃತಿ ಸಹಜವಾಗಿ ಇರಲೇ ಬಾರದು ಅನ್ನುವ ತೀರ್ಮಾನಕ್ಕೂ ಬಂದ್ಬಿಡ್ತೀವಿ. ಕಟ್ಟ್ಕೊಂಡ ಸಂಬಂಧ ಅಂತ ನಮ್ಮ ಮೈಮೇಲೆ ಹೇರಿಕೊಂಡಿರ್ತೀವೇ ಹೊರತು ಆ ಸಂಬಂಧದ ನಡುವೆ ಮಾನವೀಯ ಸ್ಪಂದನವನ್ನು ಹುಟ್ಟುಹಾಕುವ ಆಲೋಚನೆಯನ್ನೇ ಮಾಡಿರೋದಿಲ್ಲ. ಎಲ್ಲವೂ ಕರ್ತವ್ಯ, ಕರ್ತವ್ಯ, ಕರ್ತವ್ಯ ಅಂತಾನೇ ಯೋಚನೆ ಮಾಡಿರ್ತೀವಿ!

ಒಳ್ಳೆ Constitution Law Expert ತರಹ ಸಂಬಂಧಗಳಲ್ಲೂ ಬರೀ rights-duties ಬಗ್ಗೆನೇ ಯೋಚನೆ ಮಾಡಿರ್ತೀವಿ! ಹೇ, ನಾನು ಇಲ್ಲಿ ನನ್ನ್ಬಿಟ್ಟ್ರೆ ಮತ್ತೊಬ್ಬ್ರಿಲ್ಲ ಅಂತ ಮೆರೀತಿಲ್ಲ ಬದಲಿಗೆ ಹೆಂಗಸಿರಿಗೆ compassionate ಆಗಿ ಇರುವ ಗುಣ ಅಭಿಜಾತವಾಗಿ ಬಂದಿದೆ ಅಂತ ಹೆಮ್ಮೆ ಪಡ್ತಾಯಿದ್ದೀನಿ ಹಾಗೇ, ಅದನ್ನು ನಾವು ಅರ್ಥಾನೇ ಮಾಡ್ಕೊಂಡಿಲ್ಲ ಅಂತ ವಿಷಾದಾನೂ ಪಡ್ತಾಯಿದ್ದೀನಿ!

ಹೆಸರಾಂತ ಲೇಖಕರೊಬ್ಬರು ತಮ್ಮ ಅತೀ ಇಳಿವಯಸ್ಸಿನಲ್ಲಿ ವಾಕಿಂಗ್‌ಗೆ ಹೋಗಿದ್ದಾಗ ಅಪಘಾತಕ್ಕೊಳಗಾಗಿ ಮನೆಗೆ ಬರುವಾಗ ಮೈ ಕೈಗೆಲ್ಲಾ ಬ್ಯಾಂಡೇಜ್‌ ಹಾಕಿಸ್ಕೊಂಡ್ಬಂದ್ರಂತೆ. ಬಾಗಿಲು ತೆಗೆದ ಅವರ ಪತ್ನಿ ಗಂಡನನ್ನು ನೋಡಿದ ಕೂಡಲೆ ‘ಇದೇನೋ ಮಗು ಹೀಗ್ಮಾಡ್ಕೊಂಡಿದ್ದೀಯಾ’ಅಂದ್ರಂತೆ. ಒಂದು ಸಂಬಂಧ ಈ ಮನೋಸ್ಥಿತಿಗೆ ತಲುಪಬೇಕು ಅಂದ್ರೆ ಎಷ್ಟೊಂದು ನವಿರತೆಯ ಬೀಜಕ್ಕೆ ನೀರೆರೆದು ಪೋಷಿಸಿರಬೇಕು ಅಲ್ಲ್ವಾ? ಅದು ಬಿಟ್ಟು, ‘ಅನುಮಾನ ಪಡೋದು ಹೆಂಗಸಿನ ಮೂಲಭೂತ ಸ್ವಭಾವ’, ‘ಪೊಸ್ಸೆಸಿವ್‌ ಆಗಿಲ್ಲದಿದ್ದ್ರೆ ಅವಳು ಹೆಣ್ಣೇ ಅಲ್ಲ’ ಅಂತೆಲ್ಲಾ ಹೇಳುವ ಕಳಪೆ statementsಅನ್ನು ಒಪ್ಪಿಕೊಂಡು, ಪ್ರೂವ್‌ ಮಾಡ್ತಾನೇ ಇರ್ತೀವಲ್ಲ ನಾವೆಂತಹ ಹೆಂಗಸರಪ್ಪಾ ದೇವರೇ!

‘ಅನುಮಾನ ಕ್ಯಾನ್ಸರಿದ್ದಂತೆ’ ಅನ್ನುವ ಒಂದು ವಾಕ್ಯವನ್ನು ಯಾವುದೋ ಪುಸ್ತಕದಲ್ಲಿ ನಾನು ಮೊದಲು ಓದ್ದಿದ್ದಾಗ ನನಗೆ ಕ್ಯಾನ್ಸರ್‌ ಜೀವಕೋಶಕ್ಕೆ ಬರುವ ಒಂದು ರೋಗ ಅಂತ ತಿಳಿದಿತ್ತು. ಆದರೆ ಈಗ ಅರ್ಥವಾಗಿದೆ ಈ ಅನುಮಾನ ಅನ್ನುವ ಕ್ಯಾನ್ಸರ್‌ ಜೀವಕ್ಕೇ ಬರುವ ಖಾಯಿಲೆ ಅಂತ. ನೀವು ಏನೇ ಅಂದ್ರೂ ನಾನು ತೆಪ್ಪಗಿರಬೇಕು ಅನ್ನುವ ಷರತ್ತಿನ ಮೇಲೆ ತಾನೆ ನಾನು ನಿಮ್ಮೊಡನೆ ಮಾತು ಶುರುಮಾಡಿದ್ದು? ಹಾಗಿದ್ದ ಮೇಲೆ ಅಂಜಿಕೆ ಇಲ್ಲದೆ ಒಂದ್ಮಾತನ್ನು ಹೇಳೆಯೇ ಬಿಡ್ತೀನಿ ಕೇಳಿ.

ಅದೇನುಗೊತ್ತಾ?. . . .ಅವನು ಅವಳ ಮೇಲೆ ವಿನಾಕಾರಣ ಅನುಮಾನ ಪಡುತ್ತಿದ್ದಾನೆ ಅಂದರೆ ನನಗೆ ಅವಳ ಬಗ್ಗೆ ಅಯ್ಯೋ ಪಾಪ ಅನ್ನಿಸುತ್ತೆ. ಅದೇ ಅವಳ ವರ್ತನೆ ಹೀಗಾದಾಗ ನನಗೆ ಅವಳ ಬಗ್ಗೆ ಅಸಹ್ಯ ಹುಟ್ಟುತ್ತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more