Bhagya Lakshmi Serial: ಭಾಗ್ಯಲಕ್ಷ್ಮೀ ಸೀರಿಯಲ್: ಭಾಗ್ಯಗೆ ತಪ್ಪದ ಹೊಸ ಸಂಕಷ್ಟ - ಹೊಸ ಮನೆಯಲ್ಲೂ ಸಾಲು ಸಾಲು ಸವಾಲು
Bhagya Lakshmi Serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯಾಗೆ ಸಂಕಷ್ಟ ತಪ್ಪುತ್ತಿಲ್ಲ. ಈಚೆಗೆ ಭಾಗ್ಯ ಎರಡನೇ ಮದುವೆಯಾಗಿದ್ದರು. ಭಾಗ್ಯ ಬಾಳಲ್ಲಿ ಸಂತೋಷ - ಹೊಸ ಬೆಳಕು ಮೂಡಲಿದೆ. ಇನ್ಮುಂದಾದರೂ ಭಾಗ್ಯ ಸಂಕಷ್ಟ ಇಲ್ಲದೆ ನೆಮ್ಮದಿಯ ಜೀವನ ನಡೆಸಬಹುದು ಅಂತ ಪ್ರೇಕ್ಷಕರು ಲೆಕ್ಕಾಚಾರ ಹಾಕಿದ್ದರು. ಆದರೆ ಇದೀಗ ಪ್ರೇಕ್ಷಕರ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಸ ಮನೆಯಲ್ಲೂ ಭಾಗ್ಯಾಗೆ ಸರಣಿ ಸಂಕಷ್ಟಗಳು ಎದುರಾಗಿವೆ. ಈ ಸಂಕಷ್ಟಗಳಿಂದಾಗಿ ಭಾಗ್ಯ ನೋವು ಅನುಭವಿಸುವಂತೆ ಆಗಿದೆ. ಭಾಗ್ಯಗೆ ಎದುರಾಗಿರುವ ಸಂಕಷ್ಟವೇನು ಇದಕ್ಕೆ ಪ್ರೇಕ್ಷಕರು ಹೇಳುತ್ತಿರುವುದೇನು ಎನ್ನುವ ವಿವರ ಈ ಲೇಖನದಲ್ಲಿ ನೋಡೋಣ.
ಈಚೆಗೆ ಭಾಗ್ಯ ಹಾಗೂ ಆದಿ ಮದುವೆಯಾಗಿದೆ. ಹಲವು ಸಂಕಷ್ಟಗಳು ಹಾಗೂ ರೋಚಕ ತಿರುವಿನ ನಂತರ ಭಾಗ್ಯ - ಆದಿ ಕೈಹಿಡಿದಿದ್ದರು. ತಾಂಡವ್‌ನ ಕಳ್ಳಾಟಗಳು ಮದುವೆ ಮಂಟಪದಲ್ಲೇ ಬಯಲಾಗಿತ್ತು. ತಾಂಡವ್‌ನಿಂದ ವಿಪರೀತ ಸಂಕಷ್ಟಕ್ಕೆ ಒಳಗಾಗಿದ್ದ ಭಾಗ್ಯ, ಆದಿಯನ್ನು ಮದುವೆಯಾದ ಮೇಲೆ ಸುಖ ಸಂಸಾರ ನಡೆಸಲಿದ್ದಾಳೆ. ಇಷ್ಟು ದಿನಗಳ ಕಾಲ ಭಾಗ್ಯ ಅನುಭವಿಸಿದ ಸಂಕಷ್ಟಗಳಿಗೆ ಬ್ರೇಕ್ ಬೀಳಿದೆ ಎಂದೇ ಪ್ರೇಕ್ಷಕರು ಅಂದಾಜಿಸಿದ್ದರು. ಆದರೆ ಪ್ರೇಕ್ಷಕರ ಲೆಕ್ಕಾಚಾರಗಳು ಎಲ್ಲವೂ ತಲೆಕೆಳಗಾಗಿವೆ. ಇದೀಗ ಭಾಗ್ಯಗೆ ಹೊಸ ಮನೆಯಲ್ಲೂ ಸಾಲು ಸಾಲು ಸಂಕಷ್ಟಗಳು ಶುರುವಾಗಿವೆ.

ಹೊಸ ಮನೆಯಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದು, ಪೂಜೆಗೆ ಭಾಗ್ಯ ಹಾಗೂ ಆದಿ ಕುಳಿತುಕೊಳ್ಳುವಂತೆ ಹಿರಿಯರು ಹೇಳಿದ್ದಾರೆ. ಆದರೆ ಭಾಗ್ಯಗೆ ಎದುರಾಳಿಗಳು ಶಾಕ್ ಕೊಟ್ಟಿದ್ದಾರೆ. ಇದೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕೇಡು ಬಯಸುವವರಿಗೆ ಭಾಗ್ಯ ಸರ್ಪ್ರೈಸ್ ಕೊಟ್ಟುಬಿಟ್ಟಳು. ಆದರೆ ಅವಳ ಮುಂದಿರುವ ಸವಾಲಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಆಗುತ್ತದೆಯೇ ಅಂತ ಪ್ರಶ್ನೆ ಮಾಡಲಾಗಿದೆ. ಭಾಗ್ಯ ಇನ್ನೇನು ಪೂಜೆಗೆ ಹೋಗಬೇಕು ಎನ್ನುವಾಗಲೇ ಭಾಗ್ಯ ಸೀರೆಯನ್ನು ಸುಟ್ಟಿರುವಂತೆ ತೋರಿಸಲಾಗಿದೆ. ಹೀಗಾಗಿ, ಇನ್ನೇನು ಪೂಜೆ ಪ್ರಾರಂಭವಾಗುತ್ತಿದ್ದು ಪೂಜೆಗೆ ಭಾಗ್ಯ ಹೇಗೆ ರೆಡಿ ಆಗಲಿದ್ದಾರೆ ಎನ್ನುವುದು ಇದೀಗ ಎದುರಾಗಿರುವ ಕುತೂಹಲವಾಗಿದೆ.
Bhagya Lakshmi Serial: ಭಾಗ್ಯಲಕ್ಷ್ಮೀ ಸೀರಿಯಲ್: ಪ್ರೇಕ್ಷಕರು ಏನಂದ್ರು
ಇನ್ನು ಭಾಗ್ಯಲಕ್ಷ್ಮೀ ಸೀರಿಯಲ್ ನೋಡಿ ಪ್ರೇಕ್ಷಕರು ಸಹ ಶಾಕ್‌ಗೆ ಒಳಗಾಗಿದ್ದಾರೆ. ಶ್ಯಾಮಲಾ ಸತ್ಯ ಎನ್ನುವವರು, ಒಂದು ಹೆಣ್ಣಿಗೆ ಎಷ್ಟು ಸಾಧ್ಯವೋ ಅಷ್ಟು ಕಷ್ಟ ಕೊಡುವುದು ಬೇಕಾಗಿತ್ತಾ. ಹೆಣ್ಣು ಎಂದರೆ ಏನು ಅಂತ ತಿಳಿದುಕೊಂಡಿದ್ದಾರೆ ಈ ಧಾರಾವಾಹಿಯವರು, ನಾವು ನೋಡುವವರೂ ಪೆದ್ದರೆ ಅಂತ ಖಾರವಾಗಿ ಪ್ರಶ್ನೆ ಮಾಡಿದ್ದಾರೆ. ವಿನೀತಾ ಶಿವರಾಮ್ ಎನ್ನುವವರು, ಭಾಗ್ಯಳನ್ನು ಬಲಿಷ್ಠ - ಧೈರ್ಯವಂತೆಯಂತೆ ತೋರಿಸಿ ಮತ್ತು ಹಳೆಯ ಸನ್ನಿವೇಶಗಳಿಂದ ಬೇಸತ್ತು ಕೆಲವು ಸಕಾರಾತ್ಮಕ ವಿಷಯಗಳು ನಡೆಯಲಿ ಎಂದು ಆಶಿಸಿದ್ದಾರೆ. ಅವಿನಾಶ್ ಗೌಡ ಎನ್ನುವವರು, ಈ ಕಷ್ಟಗಳನ್ನು ಭಾಗ್ಯ ಅವರ ಮನೆಯಲ್ಲೇ ಅನುಭವಿಸಬಹುದಿತ್ತು. ಈ ಸುಖಕ್ಕೆ ಯಾಕೆ ಮದುವೆ ಮಾಡ್ಸುಬೇಕಿತ್ತು ಎಂದು ಕೇಳಿದ್ದಾರೆ.













Click it and Unblock the Notifications