ಸಪ್ತಪದಿ ತುಳಿಯಲು ಸಜ್ಜಾದ 'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಪ್ರಶಾಂತ್ ಗೌಡ: ತಾರೆಯರ ಸಮ್ಮುಖದಲ್ಲಿ ಅದ್ಧೂರಿ ನಿಶ್ಚಿತಾರ್ಥ
'ಗಿಚ್ಚಿ ಗಿಲಿಗಿಲಿ' ಹಾಗೂ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಗಳಿಸಿರುವ ಪ್ರಶಾಂತ್ ಗೌಡ ಮನೆಯಲ್ಲಿ ಈಗ ಮದುವೆಯ ಸಂಭ್ರಮ ಕಳೆಗಟ್ಟಿದೆ. ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಹಾಸ್ಯ ಕಲಾವಿದ ಪ್ರಶಾಂತ್ ಗೌಡ ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಮದುವೆಯ ಮೊದಲ ಹಂತವಾಗಿ ನಡೆಯುವ ಸಂಪ್ರದಾಯಬದ್ಧ 'ಹೂವು ಮುಡಿಸುವ ಶಾಸ್ತ್ರ' ಹಾಗೂ ನಿಶ್ಚಿತಾರ್ಥದ ಕಾರ್ಯಕ್ರಮವು ಕುಟುಂಬಸ್ಥರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿದೆ.
ನಿಶ್ಚಿತಾರ್ಥದ ಫೋಟೋ ವೈರಲ್
ಈ ಸಂಭ್ರಮದ ಸುಂದರ ಕ್ಷಣಗಳ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ನಟ ಹಾಗೂ ನಿರ್ದೇಶಕ ಸೃಜನ್ ಲೋಕೇಶ್, ಹಿರಿಯ ನಟಿ ಶ್ರುತಿ, ಜನಪ್ರಿಯ ನಿರೂಪಕಿ ಅನುಪಮಾ ಗೌಡ, ನಿವೇದಿತಾ ಗೌಡ ಹಾಗೂ ಭವ್ಯಾ ಗೌಡ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಯಾರು ಈ ಕೃತಿ ಗೌಡ?
ಪ್ರಶಾಂತ್ ಗೌಡ ಅವರ ಕೈ ಹಿಡಿಯಲಿರುವ ಹುಡುಗಿ ಕೂಡ ಚಿತ್ರರಂಗದ ಹಿನ್ನೆಲೆ ಹೊಂದಿದ್ದಾರೆ ಎಂಬುದು ವಿಶೇಷ. ಅವರ ಹೆಸರು ಕೃತಿ ಗೌಡ. ಕೃತಿ ಅವರು ಈಗಾಗಲೇ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದು, 'ಬ್ರೇಕ್ ಫೇಲ್ಯೂರ್' ಎಂಬ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಈ ಜೋಡಿಯ ಪರಿಚಯ ಹೇಗಾಯಿತು ಮತ್ತು ಪ್ರೇಮ ವಿವಾಹವೇ ಅಥವಾ ದೊಡ್ಡವರು ನಿಶ್ಚಯಿಸಿದ ಮದುವೆಯೇ ಎಂಬ ಕುತೂಹಲಕ್ಕೆ ಪ್ರಶಾಂತ್ ಅವರೇ ಶೀಘ್ರದಲ್ಲಿ ಉತ್ತರ ನೀಡಬೇಕಿದೆ. ಸದಾ ನಗುನಗುತ್ತಾ ಪರದೆಯ ಮೇಲೆ ಕಾಣಿಸಿಕೊಳ್ಳುವ ಪ್ರಶಾಂತ್, ಈಗ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಸದ್ಯದಲ್ಲೇ ಮದುವೆಯ ದಿನಾಂಕ ಹಾಗೂ ಇತರೆ ವಿವರಗಳು ಹೊರಬೀಳಲಿವೆ.
ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ಕಿರುತೆರೆಯ ಜನಪ್ರಿಯ ನಟ ಪ್ರಶಾಂತ್ ಗೌಡ ಅವರ ಮನೆಯಲ್ಲಿ ಈಗ ಕಲ್ಯಾಣ ಸಂಭ್ರಮ ಶುರುವಾಗಿದೆ. ಬಣ್ಣದ ಲೋಕದ ಪ್ರತಿಭಾವಂತ ಕಲಾವಿದೆ ಕೀರ್ತಿ ಗೌಡ ಅವರೊಂದಿಗೆ ಪ್ರಶಾಂತ್ ಗೌಡ ಉಂಗುರ ಬದಲಿಸಿಕೊಂಡಿದ್ದು, ಹೊಸ ಜೀವನದತ್ತ ಹೆಜ್ಜೆ ಇಟ್ಟಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ಸುಂದರ ಸಮಾರಂಭಕ್ಕೆ ಕಿರುತೆರೆಯ ದಿಗ್ಗಜರು ಆಗಮಿಸಿ ಶುಭ ಹಾರೈಸಿದ್ದಾರೆ.
ರೀಲ್ಸ್ ಹಾಗೂ ಗಿಚ್ಚಿ ಗಿಲಿಗಿಲಿ ಮೂಲಕ ಖ್ಯಾತಿ
'ಗಿಚ್ಚಿ ಗಿಲಿಗಿಲಿ' ಶೋನ ಸೀಸನ್ 1ರಿಂದ ಸೀಸನ್ 3ರವರೆಗೆ ಪ್ರೇಕ್ಷಕರನ್ನು ರಂಜಿಸಿದ ಪ್ರಶಾಂತ್, ವೈವಿಧ್ಯಮಯ ಕಾಮಿಡಿ ಸ್ಕಿಟ್‌ಗಳ ಮೂಲಕ ಮನೆಮಾತಾದವರು. 'ಕ್ವಾಟ್ಲೆ ಕಿಚನ್' ಕಾರ್ಯಕ್ರಮದಲ್ಲಿ 'ಕ್ವಾಟ್ಲೆ ಆಫ್ ದಿ ಸೀಸನ್' ಪ್ರಶಸ್ತಿ ಮುಡಿಗೇರಿಸಿಕೊಂಡ ಇವರು, 'ಬಾಯ್ಸ್ ವರ್ಸಸ್ ಗರ್ಲ್ಸ್' ಶೋನಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಶಾಂತ್ ಅವರು ಐಷಾರಾಮಿ ಟಾಟಾ ಕರ್ವ್ ಕಾರನ್ನು ಖರೀದಿಸಿದ್ದರು. ಮದುವೆಯ ಸಂಭ್ರಮದ ಪ್ರಯುಕ್ತವೇ ಅವರು ಈ ಕಾರನ್ನು ತಮ್ಮ ಮನೆಗೆ ತಂದಿದ್ದಾರೆಯೇ ಎಂಬ ಚರ್ಚೆ ಈಗ ಅಭಿಮಾನಿ ವಲಯದಲ್ಲಿ ಜೋರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಈ "ಟ್ಯಾಲೆಂಟೆಂಡ್ ಕಲಾವಿದ", ತಮ್ಮನ್ನು ಗುರುತಿಸಿದ ಕಲಾ ಪ್ರಪಂಚದ ಮಿತ್ರರ ಸಮ್ಮುಖದಲ್ಲಿ ಕೀರ್ತಿ ಅವರ ಕೈ ಹಿಡಿಯುತ್ತಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದು, ಮದುವೆ ದಿನಾಂಕದ ಅಧಿಕೃತ ಪ್ರಕಟಣೆಯ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.












Click it and Unblock the Notifications