Gold Price Today: ಒತ್ತಡದಲ್ಲಿ ಚಿನ್ನದ ಬೆಲೆ, MCX ಮಾರುಕಟ್ಟೆಯಲ್ಲಿ ಬಂಗಾರ ದರ ಕುಸಿತ, ಇಲ್ಲಿದೆ ಅಪ್ಡೇಟ್ಸ್

ಬೆಂಗಳೂರು: ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಇಂದು ಮಂಗಳವಾರ (ಏಪ್ರಿಲ್ 21) MCX ಮಾರಕಟ್ಟೆಯಲ್ಲಿ ಚಿನ್ನದ ದರ ಕುಸಿದಿದೆ. ಲಾಭ ಗಳಿಕೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ, ಅಮೆರಿಕನ್ ಡಾಲರ್ ಬಲವರ್ಧನೆ ಮತ್ತು ಅಮೆರಿಕ-ಇರಾನ್ ಮಧ್ಯೆ ಮೂಡದ ಒಮ್ಮ, ಜಾಗತಿಕ ಅನಿಶ್ಚಿತತೆಯ ಜೊತೆಗೆ ಕಚ್ಚಾ ತೈಲ ಬೆಲೆ ಏರಿಕೆ ಸೇರಿ ಹಲವು ಕಾರಣಗಳಿಂದ ಬಂಗಾರದ ಬೆಲೆಯಲ್ಲಿ ಇಂತಹ ಬದಲಾವಣೆಗಳು ಆಗುತ್ತಿವೆ.

ಇಂದು ಬೆಳಗ್ಗೆ 9.10 ಗಂಟೆಗೆ ಮಲ್ಟಿ ಕಮ್ಯೂನಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಫ್ಯೂಚರ್ಸ್ ಶೇ.0.07ರಷ್ಟು ಇಳಿಕೆ ಕಂಡು, 24 ಕ್ಯಾರಟ್ ಚಿನ್ನ ಪ್ರತಿ 10 ಗ್ರಾಂಗೆ 1,53,829 ರೂಪಾಯಿ ಮುಟ್ಟಿದೆ. ಅದೇ ರೀತಿ, ಬೆಳ್ಳಿ ವಹಿವಾಟು ಶೇ.0.69ರಷ್ಟು ಕುಸಿದು ಪ್ರತಿ ಕೆಜಿಗೆ 2,50,801 ರೂಪಾಯಿಗೆ ಇಳಿಕೆ ಕಂಡಿದೆ.

Gold Prices Dip

ಚಿನ್ನದ ದರ ಏರಿಳಿತದ ಕಾರಣಗಳು

ಕಚ್ಚಾ ತೈಲ ಬೆಲೆ ಏರಿಕೆಯಿಂದ ಡಾಲರ್ ಮೌಲ್ಯದಲ್ಲಿ ಸ್ಥಿರತೆ ಇಲ್ಲದಾಗಿದೆ. ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ನಿರಂತರ ವ್ಯತ್ಯಾಸವಾಗುತ್ತಿವೆ. ತೈಲ ವಹಿವಾಟು ಮುಖ್ಯವಾಗಿ ಡಾಲರ್‌ಗಳಲ್ಲಿ ನಡೆಯುತ್ತಿದೆ. ಇದರಿಂದ, ತೈಲ ಬೆಲೆ ಏರಿದಾಗ ಡಾಲರ್‌ಗೆ ಬೇಡಿಕೆ ಹೆಚ್ಚಾಗಿ, ಇದು ಚಿನ್ನದ ದರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಬ್ರೆಂಟ್‌ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 95 ಆಸುಪಾಸಿನಲ್ಲೇ ವಹಿವಾಟು ನಡೆಸಿದೆ. ತೈಲ ಬೆಲೆಗಳು ಏರಿಕೆ ಪರಿಣಾಮ ಸಾರಿಗೆ ಮತ್ತು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಕಾಣಬಹುದಾಗಿದೆ. ಇದೆಲ್ಲವು ದೈನಂದಿನ ವ್ಯಾಪಾರ ವ್ಯವಹಾರ, ಬದುಕಿನ ಮೇಲೆ ಪ್ರಭಾವ ಬೀರುತ್ತವೆ.

ನಾಳೆ ಕದನ ವಿರಾಮ ಅಂತ್ಯ, ಇಂದು ಮತ್ತೊಂದು ಸಭೆ

ನಾಳೆ ಬುಧವಾರಕ್ಕೆ (ಏ.22) ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮವು ಅಂತ್ಯಗೊಳ್ಳುತ್ತದೆ. ಮತ್ತೆ ಯುದ್ಧ ಉಲ್ಭಣಿಸುತ್ತಾ ಎಂಬ ಆತಂಕ ಇದೆ. ಇಂದು ಮತ್ತೆ ಪಾಕ್‌ನಲ್ಲಿ ಮಹತ್ವದ ಸಂಧಾನ ಸಭೆ ನಡೆಯಲಿದೆ. ಏಪ್ರಿಲ್ 20 ರಂದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ವಿಸ್ತರಿಸದೇ ಇರಲು ನಿರ್ಧರಿಸಿದ್ದರ ಬಗ್ಗೆ ಮಾಹಿತಿ ಸಿಕ್ಕಿದೆ. ಇಂದು (ಏಪ್ರಿಲ್ 21) ಯುಎಸ್ ನ ಜೆ.ಡಿ. ವ್ಯಾನ್ಸ್ ಇರಾನ್ ಜತೆ ಮಾತುಕತೆ ಪುನರಾರಂಭಿಸಲು ಇಸ್ಲಾಮಾಬಾದ್‌ಗೆ ತೆರಳಲಿದ್ದಾರೆ.

ಈ ಮೇಲಿನ ಪ್ರಮುಖ ಕಾರಣಗಳಿಂದ MCX ಜೂನ್ ಚಿನ್ನದ ಫ್ಯೂಚರ್ಸ್ ಪ್ರತಿ 10 ಗ್ರಾಂಗೆ 1,53,000 ರೂ.ಗೆ ಕುಸಿಯುವ ಸಾಧ್ಯತೆ ಇದೆ. ಚಿನ್ನಕ್ಕೆ ಜಾಗತಿಕವಾಗಿ ಪ್ರತಿ ಔನ್ಸ್‌ಗೆ 4,864 ಡಾಲರ್ ಮತ್ತು 4,910 ಡಾಲರ್‍‌ನಷ್ಟು ಪ್ರತಿರೋಧವಿದೆ ಎಂದು ಪೃಥ್ವಿಫಿನ್‌ಮಾರ್ಟ್ ಕಮಾಡಿಟಿ ರಿಸರ್ಚ್‌ನ ಮನೋಜ್ ಕುಮಾರ್ ಜೈನ್ ತಿಳಿಸಿದ್ದಾರೆ.

MCX ನಲ್ಲಿ ಚಿನ್ನ 1,52,800 ರೂನಿಂದ 1,51,500 ರೂ. ಕುಸಿದರೆ, ಈ ಮೊದಲು 1,54,850 ರೂ.ನಿಂದ 1,55,500 ರೂಪಾಯಿಗೆ ದಾಖಲಿಸಿತು. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 2,50,000 ರೂನಿಂದ 2,46,600 ಇಳಿದಿದೆ. ಚಿನ್ನ 1,48,000 ರೂ.ಜಿಗಿತಕ್ಕೆ ಮುಕ್ತಾಯಗೊಂಡಿತು. ಬೆಳ್ಳಿ 2,45,000 ಕ್ಕಿಂತ ದರಕ್ಕೆ ಮುಕ್ತಾಯಗೊಂಡಿತು ಜೈನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+