ಬಿಟ್‌ಕಾಯಿನ್ ಹಗರಣ ತನಿಖೆ ಇನ್ನೇನು ಪೂರ್ಣ: ಪೊಲೀಸ್ ಕಿರುಕುಳ ಬಗ್ಗೆ ಪರಮೇಶ್ವರ್ ಹೇಳಿದ್ದೇನು?

ಬೆಂಗಳೂರು: ಕರ್ನಾಟಕದಲ್ಲಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಮಾಡಲಾಗಿತ್ತು. ತನಿಖೆ ಕೊನೆ ಹಂತದಲ್ಲಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪ್ತಿ ಹೊಂದಿರುವ ಪ್ರಕರಣಗಳಲ್ಲಿ ಮಾಹಿತಿ ಕಲೆ ಹಾಕಿ ಅಂತಿಮ ವರದಿ ಕೊಡಬೇಕು. ಅದೆಲ್ಲವು ಅಂತಿಮ ಹಂತದಲ್ಲಿದ್ದು, ಮಧ್ಯಂತರ ಚಾರ್ಜ್ ಶೀಟ್ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದ ಅಗತ್ಯ ಮಾಹಿತಿ ಸಿಗುವವರೆಗೂ ತನಿಖೆ ನಡೆಸುತ್ತಾರೆ. ಟೆಕ್ನಿಕಲ್ ಆಗಿರುವುದರಿಂದ ಮಾಹಿತಿಗಳನ್ನು ಕಲೆ ಹಾಕುವುದರಲ್ಲಿ ವಿಳಂಬವಾಗಿದೆ ಎಂದು ಅನ್ನಿಸುತ್ತದೆ. ಶೀಘ್ರವಾಗಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದರು.

ED Raids- Bitcoin Scam

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯವರು ಪೊಲೀಸ್ ಇಲಾಖೆಯಿಂದ ಮಾಹಿತಿ ತೆಗೆದುಕೊಂಡಿದ್ದರೆ ರಾಜ್ಯದಿಂದ ಮಾಹಿತಿ ನಾವು ಮಾಹಿತಿ ನೀಡಲು ಆಗುವುದಿಲ್ಲ. ಅವರಿಗೆ ಮಾಹಿತಿ ತೆಗೆದುಕೊಳ್ಳಲು ಅಧಿಕಾರ ಇದೆ.‌ ಇದೇ ವಿಚಾರದಲ್ಲಿ ಮಾಹಿತಿ ತೆಗೆದುಕೊಂಡಿರಬಹುದು. ಯಾವುದೇ ವಿಚಾರಗಳಿದ್ದು ಅದನ್ನು ಇಡಿ ಅಧಕಾರಿಗಳೇ ಹೇಳಬೇಕಾಗುತ್ತದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಸಕರಾದ ಎನ್.ಎ.ಹ್ಯಾರೀಸ್ ಅವರ ಮಕ್ಕಳ ನಿವಾಸಗಳ ಮೇಲೆ ದಾಳಿ ನಡೆಸಿರುವ ಒಳ ವಿಚಾರಗಳು ನಮಗೆ ತಿಳಿದಿಲ್ಲ. ಯಾವ ಕಾರಣಕ್ಕೆ ದಾಳಿ ನಡೆದಿದೆ, ಅಲ್ಲಿ ಏನೆಲ್ಲ ಸಿಕ್ಕಿದೆ‌ ಎಂಬುದನ್ನು ಇಡಿ ಅಧಿಕಾರಿಗಳು ತಿಳಿಸಬೇಕು. ಅವರೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಅಲ್ಲಿಯವರೆಗೂ ಕಾಯಬೇಕು. ಇದರ ನಡುವೆ ನಾವು ಹೇಳಿಕೆಗಳನ್ನು ಕೊಟ್ಟರೆ ಅಪ್ರಸ್ತುತ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಇನ್‌ಸ್ಪೆಕ್ಟರ್‌ಗೆ ಮೇಲಧಿಕಾರಿಗಳ ಕಿರುಕುಳ?

ಡಿಸಿಆರ್‌ಇ ಇನ್‌ಸ್ಪೆಕ್ಟರ್‌ಗೆ ಮೇಲಧಿಕಾರಿಗಳ ಕಿರುಕುಳ ಆರೋಪ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರ್ ವಿರುದ್ಧ ಡಿಜಿಪಿಗೆ ಎಸ್‌ಪಿ ಕಾಶಿನಾಥ್ ಅವರಿಗೆ ಪತ್ರ ಬರೆದಿರುವ ಕುರಿತು ವರದಿ ನೀಡುವಂತೆ ಸೂಚಿಸಿದ್ದೇನೆ. ಸದ್ಯ ಡಿಸಿಆರ್‌ಇ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮಾಡಿರುವ ಹಲವು ಆರೋಪ ಹಾಗೂ ಪತ್ರ ಕುರಿತು ಡಿಜಿಪಿಯವರನ್ನು ವರದಿ ಕೇಳಿದ್ದೇನೆ. ವರದಿ ಬಂದ ಬಳಿಕೆ ಮುಂದಿನ ಕ್ರಮ ಜರುಗಿಸುವುದಾಗಿ ಸಚಿವರು ಭರವಸೆ ನೀಡಿದರು.

ಶ್ರೀಕಿ‌ ಜೊತೆಗೆ ಪ್ರಭಾವಿಗಳ ಸಂಪರ್ಕ

ನಿಟ್ ಕಾಯಿನ್ ಹಗರಣದ ಪ್ರಮುಖ ಅರೋಪಿ ಹ್ಯಾಕರ್ ಶ್ರೀಕಿ‌ ಜೊತೆಗೆ ಪ್ರಭಾವಿಗಳು ಸಂಪರ್ಕ ಹೊಂದಿರುವ ಪ್ರಶ್ನೆಗೆ ಅವರು, ಈ ವಿಚಾರದಲ್ಲಿ ತನಿಖೆಯಾದ್ರೆ ಎಲ್ಲವೂ ಹೊರಗೆ ಬರುತ್ತದೆ. ಯಾರೆಲ್ಲ ಸಂಪರ್ಕದಲ್ಲಿದ್ದರೂ, ಅವರ ಪಾತ್ರ ಏನು ಅನ್ನುವುದೆಲ್ಲ‌ ಗೊತ್ತಾಗುತ್ತದೆ. ನಾವು ಮಾತಾಡುವುದಕ್ಕು, ತನಿಖೆಯಲ್ಲಿ ಗೊತ್ತಾಗುವ ವಿಚಾರಗಳು ಬೇರೆ ಬೇರೆ ಇರುತ್ತದೆ. ಅನೇಕ ಸಂದರ್ಭಗಳಲ್ಲಿ ನಾವು ರಾಜಕೀಯವಾಗಿ ಏನೇನೋ ಮಾತಾಡಿರುತ್ತೇವೆ, ಅದು ತನಿಖೆಯಲ್ಲಿ ಹೊರಬರಬೇಕಿದೆ ಎಂದು ತಿಳಿಸಿರು.

ಮುಸ್ಲಿಂ ನಾಯಕರು ಪಕ್ಷದ ವರಿಷ್ಟರಿಗೆ ಪತ್ರ ಬರೆದಿದ್ದಾರೆ. ಆ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುತ್ತಾರೆ. ನಾಯಕ ರಾಹುಲ್ ಗಾಂಧಿ ಅವರು ಸೂಚನೆ ನೀಡುತ್ತಾರೆ. ನಾವು ಯಾವತ್ತು ಕೂಡ ಚುನಾವಣೆಗಳಲ್ಲಿ ಸ್ಪರ್ಧಿಸಲು ಮುಸ್ಲಿಂ ಸಮುದಾಯದವರಿಗೆ ಪ್ರಾಧನ್ಯತೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನಲ್ಲಿ ಈ ಪದ್ಧತಿ ಇದೆ

ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಮೃತಪಟ್ಟ ಕುಟುಂಬದವರಿಗೆ ಟಿಕೆಟ್ ನೀಡುವ ಪದ್ಧತಿ ಇದೆ‌. ಇದನ್ನು ಬೇರೆ ರೀತಿ ಅರ್ಥೈಸಿಕೊಳ್ಳಲಾಗಿದೆ. ಮತದಾರರು ಜಾಸ್ತಿ ಇದ್ದೇವೆ ಎಂದು ಟಿಕೆಟ್ ಕೇಳಿದ್ದಾರೆ. ಅದು ಕೂಡ ತಪ್ಪಲ್ಲ. ಕಾರಣಾಂತರಗಳಿಂದ ಶಿವಶಂಕರಪ್ಪ ಅವರ ಮನೆಯವರಿಗೆ ಟಿಕೆಟ್ ಕೊಟ್ಟಿರುವುದನ್ನು ಬೇರೆ ರೀತಿ ಅರ್ಥೈಸಿಕೊಳ್ಳುವುದು ಸರಿಯಲ್ಲ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಪಕ್ಷದ‌ ಅಧ್ಯಕ್ಷರು, ಮುಖ್ಯಮಂತ್ರಿಗಳು ಸೇರಿದಂತೆ ನಾವೆಲ್ಲ ಸರಿಪಡಿಸುತ್ತೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+