ವಾಟ್ಸಾಪ್ ಪ್ಲಸ್ ಎನ್ನು ಹೊಸ ಫೀಚರ್ ಪರಿಚಯಿಸಿದ ಮೆಟಾ: ಸಬ್‌ಸ್ಕ್ರೈಬ್ ಆಗಬೇಕಾದರೆ ಎಷ್ಟು ಹಣ ಪಾವತಿಸಬೇಕು?
ಮೆಟಾ ಅಧಿಕೃತವಾಗಿ ವಾಟ್ಸಾಪ್ ಪ್ಲಸ್ ಎಂಬ ಆಪ್ಶನಲ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಟೈರ್ ಪರೀಕ್ಷೆ ಪ್ರಾರಂಭಿಸಿದೆ. ಕಸ್ಟಮ್ ಅಪ್ಲಿಕೇಶನ್ ಐಕಾನ್‌ಗಳು, ವಿಶೇಷ ರಿಂಗ್‌ಟೋನ್‌ಗಳನ್ನು ಸೇರಿಸುವ ಆಯ್ಕೆಯನ್ನು ಇದು ಬಳಕೆದಾರರಿಗೆ ನೀಡುತ್ತದೆ. ವರದಿಯ ಪ್ರಕಾರ, ವಾಟ್ಸಾಪ್ ಚಂದಾದಾರಿಕೆ ಯೋಜನೆಯು ಪ್ರಸ್ತುತ ಆಂಡ್ರಾಯ್ಡ್‌ನಲ್ಲಿ ಸೀಮಿತ ಸಂಖ್ಯೆಯ ಬೀಟಾ ಪರೀಕ್ಷಕರಿಗೆ ಬಿಡುಗಡೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು iOS ಬಳಕೆದಾರರಿಗೂ ಪರಿಚಯಿಸಲಾಗುವುದು.
ವಾಟ್ಸಾಪ್ ಪ್ಲಸ್ ಚಂದಾದಾರಿಕೆಯನ್ನು ಸಕ್ರಿಯವಾಗಿ ಪರೀಕ್ಷಿಸುತ್ತಿದೆ ಎಂದು ಮೆಟಾ ಕೂಡಾ ದೃಢಪಡಿಸಿದೆ. ಹೊಸ ಫೀಚರ್‌ಗಳಿಗಾಗಿ ಮತ್ತು ಹೆಚ್ಚು ವೈಯಕ್ತಿಕ ಅನುಭವಗಳಿಗಾಗಿ ವಾಟ್ಸಾಪ್ ಪ್ಲಸ್ಅನ್ನು ವಿನ್ಯಾಸಗೊಳಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

"ವಿಸ್ತೃತ ಪಿನ್ ಮಾಡಿದ ಚಾಟ್‌ಗಳು, ಕಸ್ಟಮ್ ಲಿಸ್ಟ್‌ಗಳು, ಹೊಸ ಚಾಟ್ ಥೀಮ್‌ಗಳು ಸೇರಿದಂತೆ ಇನ್ನೂ ಅನೇಕ ಫೀಚರ್‌ಗಳನ್ನು ಪ್ರೀಮಿಯಂ ವೈಶಿಷ್ಟ್ಯಗಳಲ್ಲಿ ಸೇರಿಸಲಾಗಿದೆ. ಜನರ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಮತ್ತು ನಿಜವಾಗಿಯೂ ಜನರಿಗೆ ಅನುಕೂಲವಾಗುವಂಥಹ ಹೊಸ ವೈಶಿಷ್ಟ್ಯವನ್ನು ನಾವು ಪರಿಚಯಿಸುತ್ತಿದ್ದೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಪರೀಕ್ಷೆಯನ್ನು ಪ್ರಾರಂಭಿಸುತ್ತಿರುವುದಾಗಿ ಕಂಪನಿ ಹೇಳಿದೆ.
WhatsApp Premium ನಲ್ಲಿ ಹೊಸತೇನಿದೆ?:
ವಿಸ್ತೃತ ಪಿನ್ ಮಾಡಿದ ಚಾಟ್‌ಗಳು: ಈ ವೈಶಿಷ್ಟೈದ ಮೂಲಕ ಪ್ರೀಮಿಯಂ ಬಳಕೆದಾರರು ತ್ವರಿತ ಅಕ್ಸೆಸ್‌ಗಾಗಿ 20 ಚಾಟ್‌ಗಳನ್ನು ಪಿನ್ ಮಾಡಬಹುದು. ಪ್ರಸ್ತುತ ಕೇವಲ ಮೂರು ಚಾಟ್‌ಗಳನ್ನು ಮಾತ್ರ ಪಿನ್ ಮಾಡಬಹುದಾಗಿದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.
ಕಸ್ಟಮ್ ಅಪ್ಲಿಕೇಶನ್ ಥೀಮ್‌ಗಳು: ಬಳಕೆದಾರರು ವೈಬ್ರಂಟ್ ಬ್ಲೂ, ರಾಯಲ್ ಪರ್ಪಲ್, ಫಾರೆಸ್ಟ್ ಗ್ರೀನ್ ಮತ್ತು ಫ್ಯೂಷಿಯಾ ಪಿಂಕ್ ಸೇರಿದಂತೆ 18 ಹೊಸ ಆಯ್ಕೆಗಳನ್ನು ಆರಿಸಿಕೊಳ್ಳುವ ಮೂಲಕ ಸಂಪೂರ್ಣ ಅಪ್ಲಿಕೇಶನ್ ಇಂಟರ್ಫೇಸ್‌ನಾದ್ಯಂತ ಬಣ್ಣವನ್ನು ಅನ್ವಯಿಸಬಹುದು.
ಕಸ್ಟಮ್ ಅಪ್ಲಿಕೇಶನ್ ಐಕಾನ್‌ಗಳು: ಈ ಯೋಜನೆಯು 14 ಹೊಸ ಪರ್ಯಾಯ ಅಪ್ಲಿಕೇಶನ್ ಐಕಾನ್‌ಗಳನ್ನು ನೀಡುತ್ತದೆ. ನೀಲಿಬಣ್ಣದ ವೃತ್ತಗಳಿಂದ ಹಿಡಿದು ಕಾಸ್ಮಿಕ್ ನೆಬ್ಯುಲಾ ಥೀಮ್‌ನಂತಹ ಸೃಜನಾತ್ಮಕ ವಿನ್ಯಾಸಗಳು, ಸ್ಪಾರ್ಕ್ಲಿಂಗ್ ಗ್ಲಿಟರ್ ಫಿನಿಶ್ ಮತ್ತು ಗ್ರೀನ್ ಕ್ಲೇ ಅಪಿಯೆರೆನ್ಸ್ ನೀಡುತ್ತದೆ.
ವಿಶೇಷ ರಿಂಗ್‌ಟೋನ್‌ಗಳು: ಒಳಬರುವ ಕರೆಗಳನ್ನು ಸುಲಭವಾಗಿ ಗುರುತಿಸುವಂತೆ ವಿನ್ಯಾಸಗೊಳಿಸಲಾದ 10 ವಿಶೇಷ ರಿಂಗ್‌ಟೋನ್‌ಗಳಿಗೂ ಆಕ್ಸೆಸ್ ಸಿಗುತ್ತದೆ.
ಪ್ರೀಮಿಯಂ ಸ್ಟಿಕ್ಕರ್‌ಗಳು: ಈ ಸ್ಟಿಕ್ಕರ್ ಸ್ಟೋರ್ಸ್ ಪರದೆಯನ್ನು ವಿಸ್ತರಿಸುವ ಓವರ್‌ಲೇ ಪರಿಣಾಮಗಳೊಂದಿಗೆ ವಿಶೇಷ ಅನಿಮೇಟೆಡ್ ಪ್ಯಾಕ್‌ಗಳನ್ನು ಹೊಂದಿರುತ್ತದೆ. WhatsApp ಪ್ಲಸ್ ಚಂದಾದಾರಿಕೆಯನ್ನು ಹೊಂದಿಲ್ಲದಿದ್ದರೂ ಸಹ ಈ ಓವರ್‌ಲೇಗಳು ಅವರಿಗೆ ಗೋಚರಿಸುತ್ತವೆ.
ಬಲ್ಕ್ ಚಾಟ್ ಪಟ್ಟಿಯ ಅಪ್‌ಗ್ರೇಡ್‌ಗಳು: ಬಳಕೆದಾರರು ತಮ್ಮ ಕಸ್ಟಮ್ ಪಟ್ಟಿಗಳಲ್ಲಿ ಸೇರಿಸಲಾದ ಎಲ್ಲಾ ಸಂಭಾಷಣೆಗಳಿಗೆ ಕಸ್ಟಮ್ ಥೀಮ್‌ಗಳು, ಅಲರ್ಟ್ ಟೋನ್‌ಗಳು ಮತ್ತು ರಿಂಗ್‌ಟೋನ್‌ಗಳಂತಹ ನಿರ್ದಿಷ್ಟ ಸಂರಚನೆಗಳನ್ನು ಸ್ವಯಂಚಾಲಿತವಾಗಿ ಅನ್ವಯಿಸಬಹುದು.
ವಾಟ್ಸಾಪ್ ನಲ್ಲಿ ಯಾವುದು ಬದಲಾಗುವುದಿಲ್ಲ?
ವರದಿಯ ಪ್ರಕಾರ, WhatsApp ನ ಪ್ರಮುಖ ಸಂದೇಶ ಕಳುಹಿಸುವ ರೀತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಸಂದೇಶ ಕಳುಹಿಸುವ ರೀತಿ, ಧ್ವನಿ ಕರೆಗಳು ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಂತಹ ಅಗತ್ಯ ಗೌಪ್ಯತೆ ರಕ್ಷಣೆಗಳು ಎಲ್ಲಾ ಬಳಕೆದಾರರಿಗೆ ಸಂಪೂರ್ಣವಾಗಿ ಉಚಿತವಾಗಿಯೇ ಸಿಗಲಿವೆ.
ಇದಲ್ಲದೆ, ಹೊಸ ಚಂದಾದಾರಿಕೆ ಶ್ರೇಣಿಯು ಗ್ರಾಹಕ-ಮುಖಿ WhatsApp ಅಪ್ಲಿಕೇಶನ್‌ಗೆ ಸೀಮಿತವಾಗಿದೆ ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಟೆಕ್ಕ್ರಂಚ್ ತನ್ನ ಆದಾಯವನ್ನು ಹೆಚ್ಚಿಸುವ ಸಲುವಾಗಿ ಕಳೆದ ವರ್ಷ ಕಂಪನಿಯು ಘೋಷಿಸಿದ ಸ್ಟೇಟಸ್ ವೈಶಿಷ್ಟ್ಯದಿಂದ ಜಾಹೀರಾತುಗಳನ್ನು ತೆಗೆದುಹಾಕುವುದನ್ನು ಕೂಡಾ ಈ ಚಂದಾದಾರಿಕೆಯು ಒಳಗೊಂಡಿಲ್ಲ ಎಂದು ದೃಢಪಡಿಸಿದೆ.
ವಾಟ್ಸಾಪ್ ಪ್ಲಸ್ ಬೆಲೆ:
ಚಂದಾದಾರಿಕೆಯ ಅಧಿಕೃತ ಬೆಲೆಯನ್ನು ಮೆಟಾ ಇನ್ನೂ ದೃಢೀಕರಿಸಿಲ್ಲ. ಆದರೆ, ವರದಿಯ ಪ್ರಕಾರ, ಕಂಪನಿಯು ಕಡಿಮೆ-ವೆಚ್ಚದ ಚಂದಾದಾರಿಕೆ ಮಾದರಿಯನ್ನು ಅನುಸರಿಸುತ್ತದೆ. ಯುರೋಪ್‌ನಲ್ಲಿ WhatsApp Plusನ ಬೆಲೆ ತಿಂಗಳಿಗೆ €2.49 ಆಗುವ ನಿರೀಕ್ಷೆಯಿದೆ. ಈ ಮಧ್ಯೆ, ಚಂದಾದಾರಿಕೆಗೆ ಪಾಕಿಸ್ತಾನದಲ್ಲಿ ತಿಂಗಳಿಗೆ PKR 229.00 ಮತ್ತು ಮೆಕ್ಸಿಕೊದಲ್ಲಿ ತಿಂಗಳಿಗೆ $29.00 ವೆಚ್ಚವಾಗಲಿದೆ ಎಂದು ಹೇಳಲಾಗುತ್ತದೆ.
ವರದಿಯ ಪ್ರಕಾರ, ವಾಟ್ಸಾಪ್ ಕೆಲವು ಬಳಕೆದಾರರಿಗೆ ಸೇವೆಗೆ ಚಂದಾದಾರರಾಗುವ ಮೊದಲು ಹೊಸ ವೈಶಿಷ್ಟ್ಯಗಳನ್ನು ಪರೀಕ್ಷಿಸಲು ಒಂದು ತಿಂಗಳ ಉಚಿತ ಪ್ರಯೋಗವನ್ನು ಸಹ ನೀಡುತ್ತಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications