ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯೇ ಮಂತ್ರಾಲಯ ಮನವೇ ದೇವಾಲಯ

By Staff
|
Google Oneindia Kannada News


ಗುರುಹಿರಿಯರ ಸಮ್ಮುಖದಲ್ಲಿ ನಿಂತು ಮನಸ್ಸಿನಲ್ಲೇ ನಾನು ಹೀಗೆಲ್ಲಾ ಯೋಚಿಸುತ್ತಾ ಹೆಣ್ತನಕ್ಕೇ ಪಾದಪೂಜೆ ಮಾಡುತ್ತಿದ್ದೆ. ನನ್ನದೇ ಆದ ಗತಿತಾರ್ಕಿಕ ಪಥದಲ್ಲಿ ಏನನ್ನೋ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ.

God fearing women and her wish listಈ ಕೆಲಸ ಮಾಡಿದ್ದು ನಾನು ಇದೇ ಮೊದಲು. ಮಾಡಬಾರದ್ದು ಅಂತೇನೂ ಇರಲಿಲ್ಲ. ಆದರೆ ಕರೆದು ಅವಕಾಶ ಕೊಟ್ಟಿದ್ದೂ ಯಾರೋ ಇದೇ ಮೊದಲು! ಶುರುವಾಯಿತು ಇವಳ ಪೀಠಿಕೆ ಅಂದ್ಕೋತ್ತಿದ್ದೀರಾ? ನಿಮಗೆ ‘ಪಾದ ಪೂಜೆ’ custom ಗೊತ್ತಲ್ಲ? ಮೊನ್ನೆ ಯಾರೋ ಸಜ್ಜನರು, ಸಂಭಾವಿತರು ಅವರ ಮನೆಯಲ್ಲಿ ಈ ವಿಧಿ ವಿಧಾನದಲ್ಲಿ ಪಾಲ್ಗೊಳ್ಳಲೇಬೇಕೆಂದು ಸೌಜನ್ಯದ ಒತ್ತಡ ಹಾಕಿಬಿಟ್ಟಿದ್ದರು. ನನಗೆ ಹೊಸದುತಾನೆ ಲವಲವಿಕೆಯಿಂದಲೇ ಹೋಗಿದ್ದೆ.

ಪೂಜ್ಯರು ಪೀಠ ಅಲಂಕರಿಸಿದರು. ಒಬ್ಬೊಬ್ಬರೇ ಬಂದು ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ತಿದ್ದರು. ಎಲ್ಲರಿಗೂ ಸ್ವಾಮೀಜಿಗಳು ಅಕ್ಷತೆಯೊಂದಿಗೆ ಮಾವಿನ ಹಣ್ಣುಕೊಡ್ತಿದ್ದರು. ಕಾರ್ಯಕ್ರಮದ ಕೊನೆಕೊನೆಗೆ ಆ ಶೆಖೆಯಲ್ಲಿ ನನ್ನ ತಲೆಗೂ ಬಿಸಿ ಏರಿಬಿಟ್ಟಿತು! ಯಾಕೆ ಗೊತ್ತಾ, ಶ್ರೀಯವರ ಮುಂದೆ ಅಳಲು ತೋಡಿಕೊಳ್ಳುತ್ತಿದ್ದವರೆಲ್ಲಾ ಹೆಂಗಸರು.

ಆ ಹೆಂಗಸರ ಅಳಲು ಎಂತಹದ್ದು ಗೊತ್ತಾ? ‘ನನ್ನ ತಮ್ಮ ಮನೆಗೇ ಸರಿಯಾಗಿ ಬರೋಲ್ಲ. ನಮ್ಮ ತಂದೆಯವರಿಗೆ ಅದೇ ಕೊರಗು’ ಅಂತ ಒಬ್ಬಾಕೆ ಕಣ್ಣೊರೆಸಿಕೊಂಡರೆ, ಪಕ್ಕದಲ್ಲಿದ್ದ ಪತಿಯನ್ನು ತೋರಿಸಿ ‘ನಮ್ಮೆಜಮಾನರಿಗೆ ಆಫೀಸ್‌ನಲ್ಲಿ ತೊಂದರೆಯಾಗ್ಬಿಟ್ಟಿದೆ’ ಅಂತ ಜೋರಾಗಿ ಅತ್ತೇಬಿಟ್ಟ್ರು ಮತ್ತೊಬ್ಬಾಕೆ. ಇನ್ನೊಬ್ಬಾಕೆ ‘ನನ್ನ ಮಗನಿಗೆ ಸಿಇಟಿ ಪರೀಕ್ಷೆ tension ಅಂತ ಗಾಬರಿಯಾಗಿ ಹೇಳಿದರೆ, ಮತ್ತೊಬ್ಬಾಕೆ ‘ನಮ್ಮ ಮಾವನವರು ಅವರಣ್ಣನ ಜೊತೆ ಜಗಳ ಮಾಡಿಕೊಂಡ್ಬಿತ್ತಿದ್ದಾರೆ’ ಅಂತ ಕೊರಗಿದರು.

ಎಲ್ಲರಿಗೂ ಆ ಹಿರಿಯರು ನೀಡಿದ ಪರಿಹಾರ ‘ಭಗವಂತನ ಧ್ಯಾನ ಮಾಡಿ ಎಲ್ಲಾ ಸರಿಹೋಗುತ್ತೆ’. ಉತ್ತರ ಒಂದೇ ಆದರೂ, ದುಗುಡ ದುಮ್ಮಾನಗಳನ್ನು ಸಂದೂಕಿನಿಂದ ತೆರೆದಿಟ್ಟ ಹೆಂಗಸರ ಮುಖದಲ್ಲಿ ಸಂತೃಪ್ತಿ. ಯಾಕೆ ಹೀಗೆ? ಆ ಸಮಸ್ಯೆಗಳೆಲ್ಲಾ ಅವಳಿಗೆ ಮಾತ್ರವೇ? ಗಂಡಿಗೆ ಏನೂ ಸಂಕಷ್ಟವೇ ಇಲ್ಲವೇ? ಅಥವಾ ಅವನಿಗೆ ಹೇಳಿಕೊಳ್ಳುವುದು ಬೇಡವೇ? ಬಹದ್ದೂರ್‌ ಗಂಡು ಅನ್ನಿಸಿಕೊಳ್ಳಲೇ ಬೇಕೆನ್ನುವ ಛಲವೇ? ಯಾವುದೀ ವರಸೆ? ನನಗಂತೂ ಅರ್ಥವಾಗದ್ದೇ ಅನ್ನಿಸಿತು.

ಆದರೂ ಸವರಿಸಿಕೊಂಡೆದ್ದೆ. ನಾನು ಓದಿದ, ಪರೋಕ್ಷವಾಗಿ ನೋಡಿದ್ದ ಎಲ್ಲಾ ಧಾರ್ಮಿಕ ಸಭೆಗಳಲ್ಲೂ ಮಹಿಳೆಯರದ್ದೇ sensitive participation ಯಾಕೇಂತ ಎಷ್ಟೋ ದಿನಗಳಿಂದ ಕಾಡುತ್ತಿದ್ದ ನನ್ನ ಅನುಮಾನಕ್ಕೆ ಸನ್ನೆಕೋಲು ಸಿಕ್ಕಂತಾಯಿತು! ಅದು ಏನು ಗೊತ್ತಾ? ಸಂಬಂಧ ಹತ್ತುವ ಏಣಿಯಾಗಬಾರದು. ಬೀಸಿದ ಬಲೆಯಂತಿರಬೇಕು ಅಂತ ಪ್ರತೀ ಹೆಣ್ಣಿಗೂ ಗೊತ್ತು. ಯಾವುದೊಂದೋ ನೆಂಟಸ್ಥಿಕೆಗೆ ಅಂಟಿಕೊಂಡು ತಾನು ಉಳಿಯಬೇಕು ಎನ್ನುವುದಷ್ಟನ್ನೇ ಅವಳು ನೋಡಲಾರಳು. ಅವಳು ಬಾಂಧವ್ಯ ಬೆಸೆದು, ಬೆಳೆಸುವ ಮೀಮಾಂಸೆಯ ಅವಿಭಾಜ್ಯ element.

ಅವಳು ತೇಪೆ ಹಾಕಿಬಿಟ್ಟರೆ ಸಂಸಾರದ ಯಾವ ಐಬು ಕೂಡ ಒಂದು ರಂಗು ರಂಗಾದ ಕೌದಿಯೇ! ಗುರುಹಿರಿಯರ ಸಮ್ಮುಖದಲ್ಲಿ ನಿಂತು ಮನಸ್ಸಿನಲ್ಲೇ ನಾನು ಹೀಗೆಲ್ಲಾ ಯೋಚಿಸುತ್ತಾ ಹೆಣ್ತನಕ್ಕೇ ಪಾದಪೂಜೆ ಮಾಡುತ್ತಿದ್ದೆ. ನನ್ನದೇ ಆದ ಗತಿತಾರ್ಕಿಕ ಪಥದಲ್ಲಿ ಏನನ್ನೋ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ.

ಅಯ್ಯೋ, ನೋಡಿ ನಾನು ಯಾವ ಸ್ವಾಮೀಜಿಗಳನ್ನು ಹಳಿದಿಲ್ಲ. ಯಾವ ಧರ್ಮವನ್ನು ಅಲ್ಲಗೆಳೆದಿಲ್ಲ. ಯಾರ ನಂಬಿಕೆಯನ್ನೂ ಕೀಳಾಗಿಕಂಡಿಲ್ಲ. ತಪ್ಪು ತಿಳಿದು ಮೋರ್ಚಾ ತೊಗೊಂಡು ಬೀದಿರಂಪ ಹಾದಿರಂಪ ಮಾಡೋದಿಲ್ಲ ತಾನೆ ನೀವು? ಅದು ಸರೀ, ನೀವೇನು ಅಷ್ಟು ದಡ್ಡರೇ? ನಾನು ಎಂತಹ ದೈವ ಭಕ್ತೆ ಅಂತ ನನ್ನ ಮನೆ ದೇವರ ಕೋಣೆಯಲ್ಲಿ ಇರುವ ಅಶ್ವತ್ಥ ಚಕ್ಕೆ, ಗಂಗೆ ಸ್ಥಾಲಿ, ತಾಮ್ರದ ಸೂರ್ಯ ಚಕ್ರ, ಪಂಚಲೋಹದ ಅನ್ನಪೂರ್ಣೆ ವಿಗ್ರಹ, ಹಿತ್ತಾಳೆ ನಂದಾ ದೀಪ. . . . . .ಇವೆಲ್ಲಾ ನೋಡಿದರೆ ನಿಮಗೆ ಗೊತ್ತಾಗುತ್ತಲ್ಲ?

ಆದರೆ ನಿಮ್ಮೊಡನೆಯ ಸಂವಾದದಲ್ಲಿ ನಾನು ಗಮನವೇ ಹರಿಸದಿದ್ದ ಒಂದು ಸಿಹಿ ವಿಷಯ ಅಂದರೆ, ಮಾವಿನ ಹಣ್ಣುಗಳು ಮಾರ್ಕೆಟ್ಟಿಗೆ ಬಂದು ಒಂದಷ್ಟು ದಿನಗಳು ಕಳೆದಿವೆ ಅನ್ನುವುದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X