• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್..

By Super Admin
|

ಜಗತ್ತಿನ ಅತ್ಯಂತ ಒಳ್ಳೆ ಕಾಂಬಿನೇಶನ್ ;ಕಪ್ಪು ಮತ್ತು ಬಿಳುಪು! ಅತಿ ಕೆಟ್ಟ ಕಾಂಬಿನೇಶನ್ ಅಂದ್ರೂನೂ ಕಪ್ಪು ಮತ್ತು ಬಿಳುಪು ಎಂದೇ ಹೇಳಬೇಕಾಗುತ್ತದೆ.ಆ ಮಾತು ಬಿಡಿ, ಲೋಕೋಭಿನ್ನರುಚಿ ಎಂಬಂತೆ ಜಗತ್ತಲ್ಲಿ ಏನೇನೋ ಕಾಂಬಿನೇಶನ್ ಗಳಿವೆ. ಅವು ಒಂದೆರಡಲ್ಲ.

* ಶ್ರೀವತ್ಸ ಜೋಶಿ

ವ್ಹಾ! ಅದೊಂದು ಅದ್ಭುತವಾದ ಡೆಡ್ಲಿ ಕಾಂಬಿನೇಶನ್!" - ಎಂಬೋ ಉದ್ಗಾರವನ್ನು ನೀವು ವಿವಿಧ ಸನ್ನಿವೇಶಗಳಲ್ಲಿ ಯಾರ ಬಾಯಿಂದಲೇ ಆದರೂ ಕೇಳಿರಬಹುದು, ಅಥವಾ ನೀವೇ ಆರೀತಿ ಉಸುರಿದ್ದೂ ಇರಬಹುದು. Deadly ಎಂಬ ವಿಶೇಷಣವಿದ್ದರೂ ಬಹುತೇಕ ಸಂದರ್ಭಗಳಲ್ಲಿ ಅದು ಮಾರಣಾಂತಿಕ ಎನ್ನುವ ಭಯಾನಕ ಅರ್ಥವನ್ನೇ ಕೊಡಬೇಕೆಂದೇನಿಲ್ಲ. ಖುಶಿಕೊಡುವಂಥದಿರಬಹುದು, ಆಶ್ಚರ್ಯಸಹಿತ ಮೆಚ್ಚುಗೆಯಾಗಿ ಅಭಿವ್ಯಕ್ತವಾದದ್ದಿರಬಹುದು, ಅಂತೂ ಆ ಕಾಂಬಿನೇಶನ್ - ಅಂದರೆ, ಇದರೊಡನೆ ಅದು, ಅದರೊಡನೆ ಇದು ಸಂಯೋಗಗೊಂಡು ಹೊರಹೊಮ್ಮಿರುವ ಸಂಯುಕ್ತ ವಿದ್ಯಮಾನ ಬಲು ರೋಚಕವಾಗಿದೆ ಎಂಬ ಅಭಿಪ್ರಾಯ.

ಯಾವುದೇ ತರಹದ ಕಾಂಬಿನೇಶನ್ - ಅದು ವಸ್ತುಗಳದಿರಲಿ, ವ್ಯಕ್ತಿಗಳದಿರಲಿ, ವಿಷಯಗಳದಿರಲಿ, ವೇಷಭೂಷಣಗಳದಿರಲಿ - ಅಲ್ಲೊಂದು ರೋಚಕತೆ ಸುಪ್ತವಾಗಿ ಇದ್ದೇ‌ಇರುತ್ತದೆ. ಪಿಯುಸಿಯಲ್ಲಿ ಸೈನ್ಸ್ ಓದುತ್ತಿರುವ ವಿದ್ಯಾರ್ಥಿಯನ್ನು ಏನು ಕಾಂಬಿನೇಶನ್ ತಗೊಂಡಿದ್ದೀಯಪ್ಪಾ?" ಎಂದು ಕೇಳಿ ನೋಡಿ. ಪಿ.ಸಿ.ಎಂ.ಬಿ" ಎಂಬ ಉತ್ತರ ಬಂದರೆ ಮುಂದೆ ಡಾಕ್ಟರಾಗುವ ಅವನ(ಳ) ಕನಸಿನ ರೋಚಕತೆ, ಪಿ.ಸಿ.ಎಮ್.ಸಿ" ಎಂದರೆ ಮುಂದೆ ಕಂಪ್ಯೂಟರ್ ಕ್ಷೇತ್ರದಲ್ಲಿ ಚಾಣಾಕ್ಷನಾಗುವ ಗುರಿಯ ರೋಚಕತೆ ಆ ಕಾಂಬಿನೇಶನನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದರಲ್ಲೇ ಹುದುಗಿರುತ್ತದೆ. ವಿದ್ಯಾರ್ಥಿಯ ಮಟ್ಟಿಗೆ ತಾನು ಆಯ್ಕೆಮಾಡಿದ್ದು, ತನಗೆ ಸಿಕ್ಕಿದ್ದು ಡೆಡ್ಲಿ ಕಾಂಬಿನೇಶನ್.

ಮೂರಂಕಿಗಳ ಕಾಂಬಿನೇಶನ್ ಲಾಕ್ ಇರುವ ಸೂಟ್‌ಕೇಸ್‌ಗಳನ್ನು ಅಥವಾ ಸ್ಪೆಷಲ್ ಬೀಗಗಳನ್ನು ನೀವು ನೋಡಿರಬಹುದು. ಸೊನ್ನೆಯಿಂದ ಒಂಬೈನೂರತೊಂಬತ್ತೊಂಬತ್ತರವರೆಗಿನ ಯಾವುದೋ ಒಂದು ನಿರ್ದಿಷ್ಟ ಸಂಖ್ಯೆ (ಅಂದರೆ ಅಂಕಿಗಳ ಕಾಂಬಿನೇಶನ್) ರೂಪುಗೊಂಡಾಗ ಮಾತ್ರ ಬಲುರೋಚಕವಾಗಿ ಲಾಕ್ ಓಪನ್ ಆಗುತ್ತದೆ. ಕಳ್ಳನಿಗೇನಾದರೂ ಆ ಸಂಖ್ಯೆ ಗೊತ್ತಾಯಿತೋ ಅವನಿಗೆ ಅದು ಡೆಡ್ಲಿ ಕಾಂಬಿನೇಶನ್!

ಉಡುಪಿಗೆ ಸಂಬಂಧಿಸಿದಂತೆ (ಕೃಷ್ಣದೇಗುಲವಿರುವ ಉಡುಪಿ ಅಲ್ಲ, ಮೈಮೇಲೆ ಧರಿಸುವ ಉಡುಪು) ಕಾಂಬಿನೇಶನ್ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಯಾವುದೇ ಡ್ರೆಸ್ ಧರಿಸಲಿ ಅದು ಸಾಧ್ಯವಾದಷ್ಟು ಡೆಡ್ಲಿಯಾಗಿರಲಿ, ಮೊದಲನೋಟಕ್ಕೇ ಮನಸೆಳೆಯುವಂತಿರಲಿ ಎಂಬ ಆರೋಗ್ಯಕರ ಹುಚ್ಚು - ಹುಡುಗಿಯರಿಗೆ/ಹೆಂಗಸರಿಗೆ ಸ್ವಲ್ಪ ಹೆಚ್ಚು. ಚೂಡಿದಾರ್ ಹಾಕ್ಕೊಳ್ಲಾ ಅಥವಾ ಲಂಗದಾವಣಿ ತೊಟ್ಟುಕೊಳ್ಲಾ, ಜೀನ್ಸು-ಟಾಪು ಆಗ್ಬಹುದಾ ಅಥವಾ ಕಾಂಜೀವರಂ ರೇಷ್ಮೆಸೀರೆ ಉಟ್ಕೊಳ್ಲಾ... ಹೀಗೆ ಡ್ರೆಸ್ ಯಾವುದಾಗಬಹುದೆಂಬ ಸಮಸ್ಯೆಯನ್ನು ಎಡ್ರೆಸ್ ಮಾಡುವಾಗ ಎಷ್ಟು ಪರ್ಮ್ಯುಟೇಶನ್ಸ್ ಎಷ್ಟು ಕಾಂಬಿನೇಶನ್ಸ್! ಸೀರೆಗೆ ಮ್ಯಾಚಿಂಗ್ ಬ್ಲೌಸ್ ಆದ್ರೆ ಮಾತ್ರ ಮುಗೀತೇ? ಕೇಶವಿನ್ಯಾಸ, ಚಪ್ಪಲಿ, ಕೈಗಡಿಯಾರ, ನೈಲ್‌ಪಾಲಿಶ್, ಜಂಬದಚೀಲ... ಕಾಂಬಿನೇಶನ್ನು ಡೆಡ್ಲಿಯಾಗುತ್ತಾ ಹೋಗುತ್ತದೆ.

ಸಿನೆಮಾರಂಗದಲ್ಲಿ ಕಾಂಬಿನೇಶನ್-ಕಾ-ಕಮಾಲ್ ಎಷ್ಟಿರುತ್ತದೆಯೆಂಬ ವಿಷಯ ನಮಗೆಲ್ಲ ಗೊತ್ತೇ ಇದೆ. ಒಂದೊಂದು ಕಾಲಕ್ಕೆ ಒಂದೊಂದು ಕಾಂಬಿನೇಶನ್ ಡೆಡ್ಲಿ ಆಗಿದ್ದು ಆ ಚಿತ್ರಗಳನ್ನೆಲ್ಲ ಸುಪರ್‌ಹಿಟ್ ಆಗಿಸುವುದರಲ್ಲಿ ಮ್ಯಾಜಿಕ್ ಮಾಡಿರುತ್ತದೆ. ಪುಟ್ಟಣ್ಣಕಣಗಾಲ್ ಚಿತ್ರಗಳ ಹಾಡುಗಳು ಈಗಲೂ ಯಾಕೆ ಅತಿಮಧುರವೆನಿಸುತ್ತವೆಯೆಂದರೆ ಅದಕ್ಕೆ ಪುಟ್ಟಣ್ಣ-ವಿಜಯನಾರಸಿಂಹ-ವಿಜಯಭಾಸ್ಕರ್ ಡೆಡ್ಲಿ ಕಾಂಬಿನೇಶನ್ ಕಾರಣ! ಭಕ್ತಿಲೋಕವಾದರೆ ಹುಣಸೂರುಕೃಷ್ಣಮೂರ್ತಿ-ಟಿಜಿಲಿಂಗಪ್ಪ-ಪಿಬಿಶ್ರೀನಿವಾಸ್, ಪ್ರೇಮಲೋಕವಾದರೆ ರವಿಚಂದ್ರನ್-ಹಂಸಲೇಖ, ತಮಿಳಿನಲ್ಲಾದರೆ ಮಣಿರತ್ನಂ-ಕಮಲಹಾಸನ್-ಇಳಯರಾಜಾ, ಹಿಂದಿಯಲ್ಲಾದರೆ ಮುಖೇಶ್-ರಾಜಕಪೂರ್... ಹೀಗೆ ಡೆಡ್ಲಿ ಕಾಂಬಿನೇಶನ್ಸ್ ಒಂದೆರಡಲ್ಲ.

ಲೇಟೆಸ್ಟಾಗಿ ಯೋಗರಾಜ್‌ಭಟ್-ಗಣೇಶ್-ಮನೋಮೂರ್ತಿ-ಜಯಂತ್‌ಕಾಯ್ಕಿಣಿ-ಸೋನುನಿಗಮ್ ಪಂಚಪ್ರತಿಭೆಗಳ ಡೆಡ್ಲಿ ಕಾಂಬಿನೇಶನ್ ನಮ್ಮೆಲ್ಲರ ಕಣ್ಮುಂದೆಯೇ ಇತಿಹಾಸ ಬರೆಯಿತಲ್ಲ! ಚಲನಚಿತ್ರರಂಗಕ್ಕೆ ಸಂಬಂಧಿಸಿದಂತೆಯೇ ಇನ್ನೊಂದು, ಆಡಿಯೊಕ್ಯಾಸೆಟ್‌ನಲ್ಲಿ ಎರಡು-ಮೂರು ಸಿನೆಮಾಗಳ ಕಾಂಬಿನೇಶನ್. ನನ್ನ ನೆನಪಿನ ಪ್ರಕಾರ ತೇಜಾಬ್ - ಕಯಾಮತ್ ಸೆ ಕಯಾಮತ್ ತಕ್ ಡೆಡ್ಲಿಯೆಸ್ಟ್ ಕಾಂಬಿನೇಶನ್ ಎಂದು ಲಕ್ಷಗಟ್ಟಲೆ ಮಾರಾಟವಾದ ಹಿಂದಿ ಕ್ಯಾಸೆಟ್.

ಇದಿಷ್ಟು ಇವತ್ತಿನ ಹರಟೆಯ ಪೂರ್ವಾರ್ಧಭಾಗ. ಮುಂದಿನದು ಇಡ್ಲಿ ಕಾಂಬಿನೇಶನ್ - ಹೆಸರೇ ಸೂಚಿಸುವಂತೆ ಬಾಯಲ್ಲಿ ನೀರೂರಿಸುವಂಥ, ಮೆಲುಕು ಹಾಕುವಂಥ ಡೆಡ್ಲಿ ಡಿಸ್ಕಶನ್.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vichitranna Columnist Srivathsa Joshi writes on Combination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more