• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಥರ್ವಶೀರ್ಷ ಎಂಬ ಗಣೇಶಸೂಕ್ತ

By Staff
|
Srivathsa Joshi *ಶ್ರೀವತ್ಸ ಜೋಶಿ

ಶ್ರೀಗಣಪತಿ ಅಥರ್ವಶೀರ್ಷವು ಅಥರ್ವವೇದದಲ್ಲಿ ಬರುವ ಒಂದು ಸೂಕ್ತ. ಗಣೇಶನ ಸ್ತೋತ್ರಗಳಲ್ಲೆಲ್ಲ ಇದು ಶ್ರೇಷ್ಠವೆಂಬ ನಂಬಿಕೆಯಿದೆ. ಅಥರ್ವ ಎಂದರೆ ನಿಶ್ಚಲತೆ, ಧ್ಯೇಯದ ಕಡೆ ಏಕಾಗ್ರತೆಯೆಂಬ ಅರ್ಥವಿದೆ. ಶೀರ್ಷ ಅಂದರೆ ತಲೆ ಅಥವಾ ಬೌದ್ಧಿಕ ಜ್ಞಾನ. ನಾಲ್ಕೂ ವೇದಗಳ ಸಾರವನ್ನು ಹೇಳುವ ಈ ಸೂಕ್ತವೇ ಸಣ್ಣದೊಂದು ಉಪನಿಷತ್‌; ಅನರ್ಘ್ಯ ರತ್ನ. ಇದರ ನಿತ್ಯಪಠಣ ಮಾಡುವವರು ಅನೇಕರಿದ್ದಾರೆ. ಮುಂಬಯಿಯ ಪ್ರಭಾದೇವಿ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪ್ರತಿ ತಿಂಗಳ ವಿನಾಯಕ ಚೌತಿ (ಶುಕ್ಲಪಕ್ಷದ ನಾಲ್ಕನೇ ದಿನ) ಮತ್ತು ಸಂಕಷ್ಟ ಚತುರ್ಥಿ (ಕೃಷ್ಣಪಕ್ಷದ ನಾಲ್ಕನೇ ದಿನ) ಈ ಸೂಕ್ತವನ್ನು 1000 ಸಲ ಪಠಿಸುತ್ತಾರೆ.

ಅಂತರ್ಜಾಲವನ್ನು ಅಷ್ಟಿಷ್ಟು ಜಾಲಾಡಿಸಿದರೂ ಕನ್ನಡ ಲಿಪಿಯಲ್ಲಿ ಅಥರ್ವಶೀರ್ಷ ನನ್ನ ದೃಷ್ಟಿಗೆ ಬೀಳಲಿಲ್ಲ. ಹೇಗಿದ್ದರೂ ನಮ್ಮ-ನಿಮ್ಮ ‘ವಿಚಿತ್ರಾನ್ನ’ ಅಂಕಣ ಗಜಮುಖನ ಅನವರತ ದಯೆಯಿಂದಲೇ ಮುಂದುವರಿಯುತ್ತಿರುವುದು. ಹಾಗಾಗಿ ಗಣೇಶಸೂಕ್ತ ಅಂತರ್ಜಾಲದಲ್ಲಿ ಕನ್ನಡಲಿಪಿಯಲ್ಲಿ ಲಭ್ಯವಾಗಲು ವಿಚಿತ್ರಾನ್ನದ ಈ ಅಂಕವೇ ಸೂಕ್ತ ಎಂದುಕೊಂಡು ಇದನ್ನಿಲ್ಲಿ ಪ್ರಕಟಿಸುತ್ತಿದ್ದೇನೆ. ಗಣೇಶಚೌತಿಯ ಮೋದಕ - ಕಡುಬುಗಳ ರುಚಿ ಇನ್ನೂ ಇರುವಾಗಲೇ ಈ ಸಲದ ವಿಚಿತ್ರಾನ್ನ ಸ್ಪೆಷಲ್‌ - ಗಣಪತ್ಯಥರ್ವಶೀರ್ಷ.

ವೇದಮಂತ್ರಗಳನ್ನು ಉಚ್ಚರಿಸುವಾಗ ಪ್ರತಿಯಾಂದು ಅಕ್ಷರದ ಉಚ್ಚಾರಣೆಯಲ್ಲಿರಬೇಕಾದ ಏರಿಳಿತಕ್ಕೆ ಅನುಗುಣವಾಗಿ ‘ಸ್ವರ’ಗಳನ್ನು ಬಳಸಲಾಗುತ್ತದೆ. ‘ಬರಹ’ ತಂತ್ರಾಂಶವನ್ನುಪಯೋಗಿಸಿ ಈ ‘ಸ್ವರ’ ಚಿಹ್ನೆಗಳನ್ನು ಮೂಡಿಸುವ ಅನುಕೂಲವಿದೆಯಾದರೂ ದಟ್ಸ್‌ಕನ್ನಡ.ಕಾಂ ಉಪಯೋಗಿಸುವ ‘ಶ್ರೀಲಿಪಿ’ಯಲ್ಲಿ ಅದು ಕಷ್ಟಸಾಧ್ಯ. ಹಾಗಾಗಿ ಅಥರ್ವಶೀರ್ಷ ಸೂಕ್ತವನ್ನು ಸಸ್ವರವಾಗಿ ಇಲ್ಲಿ ಮುದ್ರಿಸಲಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಗಣಪತಿ ನಮ್ಮನ್ನು ಕ್ಷಮಿಸುತ್ತಾನೆಂದುಕೊಳ್ಳೋಣ. ಪೂರ್ಣವಾಗಿ ಕನ್ನಡ ಅನುವಾದವನ್ನು ಕೊಟ್ಟಿಲ್ಲವಾದರೂ ಸೂಕ್ತದ ಯಾವ ಭಾಗ ಏನನ್ನು ವಿವರಿಸುತ್ತದೆ ಎಂಬ ಉಪಶೀರ್ಷಿಕೆಗಳನ್ನು ನೀಡಿದ್ದೇನೆ.

*

- ಶಾಂತಿ ಪಾಠ -

ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ । ಭದ್ರಂ ಪಶ್ಯೇಮಾಕ್ಷ ಭಿರ್ಯಜತ್ರಾಃ ।। ಸ್ಥಿರೈರಂಗೈಸ್ತುಷ್ಟುವಾಗ್‌ಂಸಸ್ತನೂಭಿಃ । ವ್ಯಶೇಮ ದೇವಹಿತಂ ಯದಾಯುಃ ।।

ಓಂ ಸ್ವಸ್ತಿ ನ ಇಂದ್ರೊ ವೃದ್ಧಶ್ರವಾಃ । ಸ್ವಸ್ತಿ ನಃ ಪೂಷಾ ವಿಶ್ವವೇದಾಃ ।। ಸ್ವಸ್ತಿ ನಸ್ತಾರ್ಕ್ಷ್ಯೊ ಅರಿಷ್ಟನೇಮಿಃ । ಸ್ವಸ್ತಿ ನೊ ಬೃಹಸ್ಪತಿರ್ದಧಾತು ।। ಓಂ ತನ್ಮಾಮವತು ತದ್ವಕ್ತಾರಮವತು ಅವತು ಮಾಮ್‌ ಅವತು ವಕ್ತಾರಂ । ಓಂ ಶಾಂತಿಃ ಶಾಂತಿಃ ಶಾಂತಿಃ ।।

- ಉಪನಿಷತ್‌ -

ಹರಿಃ ಓಂ। ನಮಸ್ತೆ ಗಣಪತಯೆ । ತ್ವಮೇವ ಪ್ರತ್ಯಕ್ಷಂ ತತ್ತ್ವಮಸಿ । ತ್ವಮೇವ ಕೇವಲಂ ಕರ್ತಾಸಿ । ತ್ವಮೇವ ಕೇವಲಂ ಧರ್ತಾಸಿ । ತ್ವಮೇವ ಕೇವಲಂ ಹರ್ತಾಸಿ । ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ । ತ್ವಂ ಸಾಕ್ಷಾದಾತ್ಮಾಸಿ ನಿತ್ಯಮ್‌ ।।

- ಸ್ವರೂಪ ತತ್ವ -

ಋತಂ ವಚ್ಮಿ । ಸತ್ಯಂ ವಚ್ಮಿ । ಅವ ತ್ವಂ ಮಾಮ್‌ । ಅವ ವಕ್ತಾರಮ್‌ । ಅವ ಶ್ರೋತಾರಮ್‌ । ಅವ ದಾತಾರಮ್‌ । ಅವ ಧಾತಾರಮ್‌ । ಅವಾನೂಚಾನಮವ ಶಿಷ್ಯಮ್‌ ।

ಅವ ಪಶ್ಚಾತ್ತಾತ್‌ । ಅವ ಪುರಸ್ತಾತ್‌ । ಅವೋತ್ತರಾತ್ತಾತ್‌ । ಅವ ದಕ್ಷಿಣಾತ್ತಾತ್‌ । ಅವ

ಚೋರ್ಧ್ವಾತ್ತಾತ್‌ । ಅವಾಧರಾತ್ತಾತ್‌ । ಸರ್ವತೋ ಮಾಂ ಪಾಹಿ ಪಾಹಿ ಸಮಂತಾತ್‌ ।

ತ್ವಂ ವಾಙ್ಮಯಸ್ತ್ವಂ ಚಿನ್ಮಯಃ । ತ್ವಮಾನಂದಮಯಸ್ತ್ವಂ ಬ್ರಹ್ಮಮಯಃ। ತ್ವಂ ಸಚ್ಚಿದಾನಂದಾದ್ವಿತೀಯೋಸಿ । ತ್ವಂ ಪ್ರತ್ಯಕ್ಷಂ ಬ್ರಹ್ಮಾಸಿ । ತ್ವಂ ಜ್ಞಾನಮಯಾ ವಿಜ್ಞಾನಮಯೋಸಿ ।।

ಸರ್ವಂ ಜಗದಿದಂ ತ್ವತ್ತೊ ಜಾಯತೆ । ಸರ್ವಂ ಜಗದಿದಂ ತ್ವತ್ತಸ್ತಿಷ್ಠತಿ । ಸರ್ವಂ ಜಗದಿದಂ ತ್ವಯಿ ಲಯಮೇಷ್ಯತಿ ।

ಸರ್ವಂ ಜಗದಿದಂ ತ್ವಯಿ ಪ್ರತ್ಯೇತಿ । ತ್ವಂ ಭೂಮಿರಾಪೊನಲೊನಿಲೊ ನಭಃ । ತ್ವಂ ಚತ್ವಾರಿ ವಾಕ್ಪದಾನಿ ।।

ತ್ವಂ ಗುಣತ್ರಯಾತೀತಃ । ತ್ವಂ ಅವಸ್ಥಾತ್ರಯಾತೀತಃ । ತ್ವಂ ದೇಹತ್ರಯಾತೀತಃ । ತ್ವಂ ಕಾಲತ್ರಯಾತೀತಃ । ತ್ವಂ ಮೂಲಾಧಾರಸ್ಥಿತೋಸಿ ನಿತ್ಯಮ್‌ । ತ್ವಂ ಶಕ್ತಿತ್ರಯಾತ್ಮಕಃ । ತ್ವಾಂ ಯೋಗಿನೊ ಧ್ಯಾಯಂತಿ ನಿತ್ಯಮ್‌ । ತ್ವಂ ಬ್ರಹ್ಮಾ ತ್ವಂ ವಿಷ್ಣುಸ್ತ್ವಂ ರುದ್ರಸ್ತ್ವಮಿಂದ್ರಸ್ತ್ವಮಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮ ಭೂರ್ಭುವಃ ಸ್ವರೋಮ್‌ ।।

- ಗಣೇಶ ಮಂತ್ರ -

ಗಣಾದಿಂ ಪೂರ್ವಮುಚ್ಚಾರ್ಯ ವರ್ಣಾದೀಂ ತದನಂತರಮ್‌ । ಅನುಸ್ವಾರಃ ಪರತರಃ । ಅರ್ಧೇಂದುಲಸಿತಮ್‌ । ತಾರೇಣ ಋದ್ಧಮ್‌ । ಏತತ್ತವ ಮನುಸ್ವರೂಪಂ । ಗಕಾರಃ ಪೂರ್ವರೂಪಮ್‌ । ಅಕಾರೊ ಮಧ್ಯಮರೂಪಮ್‌ । ಅನುಸ್ವಾರಶ್ಚಾಂತ್ಯರೂಪಮ್‌ । ಬಿಂದುರುತ್ತರರೂಪಮ್‌ । ನಾದಃ ಸಂಧಾನಮ್‌ । ಸಗ್‌ಂಹಿತಾ ಸಂಧಿಃ । ಸೈಷಾ ಗಣೇಶವಿದ್ಯಾ । ಗಣಕ ಋಷಿಃ । ನಿಚೃದ್ಗಾಯತ್ರೀಚ್ಛಂದಃ । ಗಣಪತಿರ್ದೇವತಾ । ಓಂ ಗಂ ಗಣಪತಯೇ ನಮಃ ।।

- ಗಣೇಶ ಗಾಯತ್ರೀ -

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ । ತನ್ನೋ ದಂತಿಃ ಪ್ರಚೋದಯಾತ್‌ ।।

- ಗಣೇಶ ರೂಪ -

ಏಕದಂತಂ ಚತುರ್ಹಸ್ತಂ ಪಾಶಮಂಕುಶಧಾರಿಣಂ । ರದಂ ಚ ವರದಂ ಹಸ್ತೈರ್ಬಿಭ್ರಾಣಂ ಮೂಷಕಧ್ವಜಮ್‌ । ರಕ್ತಂ ಲಂಬೋದರಂ ಶೂರ್ಪಕರ್ಣಕಂ ರಕ್ತವಾಸಸಮ್‌ । ರಕ್ತಗಂಧಾನುಲಿಪ್ತಾಙ್ಗಂ ರಕ್ತಪುಷ್ಪೈಃ ಸುಪೂಜಿತಮ್‌ । ಭಕ್ತಾನು ಕಂಪಿನಂ ದೇವಂ ಜಗತ್ಕಾರಣಮಚ್ಯುತಮ್‌ । ಆವಿರ್ಭೂತಂ ಚ ಸೃಷ್ಟ್ಯಾದೌ ಪ್ರಕೃತೇಃ ಪುರುಷಾತ್ಪರಮ್‌ । ಏವಂ ಧ್ಯಾಯತಿ ಯಾ ನಿತ್ಯಂ ಸ ಯೋಗೀ ಯೋಗಿನಾಂ ವರಃ ।।

- ಅಷ್ಟ ನಾಮ ಗಣಪತಿ -

ನಮೊ ವ್ರಾತಪತಯೆ । ನಮೊ ಗಣಪತಯೆ । ನಮಃ ಪ್ರಮಥಪತಯೆ । ನಮಸ್ತೆ ಅಸ್ತು ಲಂಬೋದರಾಯೈಕದಂತಾಯ ವಿಘ್ನನಾಶಿನೆ ಶಿವಸುತಾಯ ವರದಮೂರ್ತಯೆ ನಮಃ ।।

- ಫಲಶ್ರುತಿ -

ಏತದಥರ್ವಶೀರ್ಷಂ ಯೋಧೀತೆ ಸ ಬ್ರಹ್ಮಭೂಯಾಯ ಕಲ್ಪತೆ । ಸ ಸರ್ವವಿಘ್ನೖರ್ನಬಾಧ್ಯತೆ । ಸ ಸರ್ವತ್ರ ಸುಖಮೇಧತೆ । ಸ ಪಂಚಮಹಾಪಾಪಾತ್‌ ಪ್ರಮುಚ್ಯತೆ । ಸಾಯಮಧೀಯಾನೊ ದಿವಸಕೃತಂ ಪಾಪಂ ನಾಶಯತಿ । ಪ್ರಾತರಧೀಯಾನೊ ರಾತ್ರಿಕೃತಂ ಪಾಪಂ ನಾಶಯತಿ । ಸಾಯಂ ಪ್ರಾತಃ ಪ್ರಯುಞ್ಜಾನೊ ಅಪಾಪೊ ಭವತಿ । ಸರ್ವತ್ರಾಧೀಯಾನೋಪವಿಘ್ನೋ ಭವತಿ । ಧರ್ಮಾರ್ಥಕಾಮಮೊಕ್ಷಂ ಚ ವಿಂದತಿ । ಇದಮಥರ್ವಶೀರ್ಷಮಶಿಷ್ಯಾಯ ನ ದೇಯಮ್‌ । ಯಾ ಯದಿ ಮೋಹಾದ್‌ ದಾಸ್ಯತಿ ಸ ಪಾಪೀಯಾನ್‌ ಭವತಿ । ಸಹಸ್ರಾವರ್ತನಾದ್ಯಂ ಯಂ ಕಾಮಮಧೀತೆ ತಂ ತಮನೇನ ಸಾಧಯೇತ್‌ ।।

ಅನೇನ ಗಣಪತಿಮಭಿಷಿಂಚತಿ ಸ ವಾಗ್ಮೀ ಭವತಿ । ಚತುರ್ಥ್ಯಾಮನಶ್ನನ್‌ ಜಪತಿ ಸ ವಿದ್ಯಾವಾನ್‌ ಭವತಿ । ಇತ್ಯಥರ್ವಣವಾಕ್ಯಮ್‌ । ಬ್ರಹ್ಮಾದ್ಯಾಚರಣಂ ವಿದ್ಯಾನ್ನ ಬಿಭೇತಿ ಕದಾಚನೇತಿ ।।

ಯೋ ದೂರ್ವಾಂಕುರೈರ್ಯಜತಿ ಸ ವೈಶ್ರವಣೋಪಮೊ ಭವತಿ । ಯಾ ಲಾಜೈರ್ಯಜತಿ ಸ ಯಶೋವಾನ್‌ ಭವತಿ । ಸ ಮೇಧಾವಾನ್‌ ಭವತಿ । ಯೋ ಮೋದಕಸಹಸ್ರೇಣ ಯಜತಿ ಸ ವಾಂಚಿತ ಫಲಮವಾಪ್ನೋತಿ । ಯಃ ಸಾಜ್ಯಸಮಿದ್ಭಿರ್ಯಜತಿ ಸ ಸರ್ವಂ ಲಭತೆ ಸ ಸರ್ವಂ ಲಭತೆ ।।

ಅಷ್ಟೌ ಬ್ರಾಹ್ಮಣಾನ್‌ ಸಮ್ಯಗ್‌ ಗಾಹಯಿತ್ವಾ ಸೂರ್ಯವರ್ಚಸ್ವೀ ಭವತಿ । ಸೂರ್ಯಗ್ರಹೆ ಮಹಾನದ್ಯಾಂ ಪ್ರತಿಮಾಸನ್ನಿಧೌ ವಾ ಜಪ್ತ್ವಾ ಸಿದ್ಧಮಂತ್ರೊ ಭವತಿ । ಮಹಾವಿಘ್ನಾತ್‌ ಪ್ರಮುಚ್ಯತೆ । ಮಹಾದೋಷಾತ್‌ ಪ್ರಮುಚ್ಯತೆ । ಮಹಾಪ್ರತ್ಯವಾಯಾತ್‌ ಪ್ರಮುಚ್ಯತೆ । ಸ ಸರ್ವವಿದ್ಭವತಿ ಸ ಸರ್ವವಿದ್‌ ಭವತಿ । ಯ ಎವಂ ವೇದ । ಇತ್ಯುಪನಿಷತ್‌ ।।

- ಶಾಂತಿ ಮಂತ್ರ-

ಓಂ ಸಹನಾವವತು । ಸಹನೌಭುನಕ್ತು । ಸಹ ವೀರ್ಯಂ ಕರವಾವಹೈ । ತೇಜಸ್ವಿನಾವಧೀತಮಸ್ತು ಮಾ ವಿದ್ವಿಶಾವಹೈ । ಓಂ ಶಾಂತಿಃ ಶಾಂತಿಃ ಶಾಂತಿಃ ।।

।। ಇತಿ ಶ್ರೀಗಣಪತ್ಯಥರ್ವಶೀರ್ಷಂ ಸಮಾಪ್ತಂ ।।

*

ಅಂತರ್ಜಾಲದಲ್ಲಿ ಗಣಪತ್ಯಥರ್ವಶೀರ್ಷ ಸೂಕ್ತ :

ಆಡಿಯೋ ಇಲ್ಲಿ ಲಭ್ಯ: http://www.sanatan.org/downloads/audio/

ಇಂಗ್ಲೀಷ್‌ನಲ್ಲಿ ಪ್ರತಿಪದದ ಅನುವಾದ:

http://sanskrit.gde.to/all_sa/saarthaatharva_sa.html

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more