• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಫಿ ಜತೆಗೆ ಬನ್ಸ್‌ - ಟೇಸ್ಟ್‌ ಅಟ್‌ಲೀಸ್ಟ್‌ ವನ್ಸ್‌ !

By Staff
|

*ಶ್ರೀವತ್ಸ ಜೋಶಿ

Buns‘ಹಾಟ್‌ ಕ್ರಾಸ್‌ ಬನ್ಸ್‌ ಹಾಟ್‌ ಕ್ರಾಸ್‌ ಬನ್ಸ್‌... ವನ್‌ ಎ ಪೆನ್ನಿ ಟೂ ಎ ಪೆನ್ನಿ ಹಾಟ್‌ ಕ್ರಾಸ್‌ ಬನ್ಸ್‌...’- ಈ ನರ್ಸರಿ ರೈಮು ನಿಮಗೆ ಗೊತ್ತಿದೆ. ನಮ್ಮ ಮಂಗಳೂರು ಕಡೆ ‘ಬನ್ಸ್‌’ ಎಂಬ ಒಂದು ತಿಂಡಿ ಇದೆ, ಅದು ನಿಮಗೆ ಗೊತ್ತಿದೆಯೋ ಇಲ್ಲವೋ ಮಾರಾಯ್ರೆ? ಈ ‘ಮಂಗಳೂರು ಬನ್ಸ್‌’ ಇದುವರೆಗೆ ನೀವು ತಿಂದಿಲ್ಲವಾದರೆ ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ನಿಮಗಿದ್ದೇ ಇರುತ್ತದೆ. ನಿಮಗೆ ಬಾಯಲ್ಲಿ ನೀರೂರಿದರೆ, ಒಮ್ಮೆ ಟ್ರೈ ಮಾಡೋಣ ಎಂದೆನ್ನಿಸಿದರೆ ಅನುಕೂಲವಾಗಲೆಂದು ಬನ್ಸ್‌ನ ‘ರೆಸಿಪಿ’ ಕೂಡ ಕೊನೆಯಲ್ಲಿ ಬರೆದಿದ್ದೇನೆ. ಇದು ಈ ಸಲದ ವಿಚಿತ್ರಾನ್ನದ ಸಾಮಗ್ರಿ.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಂದರೆ ಈಗಿನ ಉಡುಪಿ ಜಿಲ್ಲೆಯ ಕುಂದಾಪುರದಿಂದ ಹಿಡಿದು ದ.ಕ ಜಿಲ್ಲೆಯ ಸುಳ್ಯದವರೆಗೂ ಹೊಟೇಲುಗಳಲ್ಲಿ , ಸಣ್ಣಪುಟ್ಟ ಕಾಫಿ-ಚಾ ರೆಸ್ಟೋರೆಂಟ್‌ಗಳಲ್ಲೂ ಬೆಳಗಿನ ಹೊತ್ತು ಲಭ್ಯವಿರುವ ತಿಂಡಿ ಬನ್ಸ್‌. ಕಾಫಿ ಜತೆ ಬಿಸಿಬಿಸಿ ಬನ್ಸ್‌ ಮೆಲ್ಲುವುದೆಂದರೆ, ರಸಮಂಜರಿಯಲ್ಲಿ ಅಣ್ಣಾವ್ರ ಹಾಡಿಗೆ ‘ವನ್ಸ್‌ ಮೋರ್‌ ವನ್ಸ್‌ ಮೋರ್‌...’ ಕೇಳಿಬಂದಂತೆ ‘ಬನ್ಸ್‌ ಮೋರ್‌ ಬನ್ಸ್‌ ಮೋರ್‌...’ ಎಂದು ನಿಮ್ಮ ಮನಸ್ಸು , ಹೊಟ್ಟೆ , ಮತ್ತು ನಾಲಿಗೆ ಡಿಮಾಂಡಿಸಿದರೆ ಆಶ್ಚರ್ಯವಿಲ್ಲ !

ನಾನು ಪಿಯೂಸಿ ವಿದ್ಯಾಭ್ಯಾಸದ ನಂತರ ಇಂಜನಿಯರಿಂಗ್‌ ಶಿಕ್ಷಣಕ್ಕಾಗಿ ಮತ್ತು ಆ ಬಳಿಕ ಉದ್ಯೋಗ ನಿಮಿತ್ತ ದ.ಕ.ದಿಂದ ಹೊರಗೇ ಇದ್ದೆ/ಇದ್ದೇನೆ. ವರ್ಷಕ್ಕೊಮ್ಮೆಯೋ ಅಥವಾ ಈಗ ಅಮೆರಿಕದಲ್ಲಿರುತ್ತ ಎರಡು ವರ್ಷಗಳಿಗೊಮ್ಮೆಯೋ ಊರಿಗೆ ಹೋದರೂ ಹಿಂದಿರುಗುವುದರೊಳಗೆ ಕಾರ್ಕಳದ ಶ್ರೀಕೃಷ್ಣ ಭವನದಲ್ಲಿ (ನಾವೆಲ್ಲ ಉಡುಪಿಹೊಟೇಲ್‌ ಎಂದು ಕರೆಯುವುದು) ಒಂದು ಪ್ಲೇಟ್‌ ಬನ್ಸ್‌ ಮತ್ತು ಒಂದು ಕಾಫಿ ಕನಿಷ್ಠ ಒಮ್ಮೆಯಾದರೂ ಆಗದಿದ್ದರೆ ಊರಿಗೆ ಭೇಟಿ ಅಪೂರ್ಣ. ಇದು ನನ್ನ ಅಭಿರುಚಿ ಮಾತ್ರ ಅಲ್ಲ . ಮುಂಬಯಿಯಲ್ಲಿರುವ ನಮ್ಮ ಅಣ್ಣನಿಗೂ ಊರಿಗೆ ಬಂದಾಗ ‘ಬನ್ಸ್‌ ಅಟ್‌ಲೀಸ್ಟ್‌ ವನ್ಸ್‌ ’ ಆದರೂ ತಿಂದರೇನೇ ಸಂತೋಷ. ಹಾಗೆಯೇ ನನ್ನ ಅನೇಕ ಬಾಲ್ಯಸ್ನೇಹಿತರೂ ಸಹಪಾಠಿಗಳೂ ಬನ್ಸ್‌ಪ್ರಿಯರೆಂದು ನಾನು ಬಲ್ಲೆ. ಬೆಂಗಳೂರಲ್ಲಿ ಹುಟ್ಟಿ ಬೆಳೆದ ನನ್ನ ಸಹಧರ್ಮಿಣಿಗೂ ಬನ್ಸ್‌ ಇಷ್ಟವಾಗಿವೆ; ಅವಳು ಕಾರ್ಕಳದಿಂದ ಪಾರ್ಸೆಲ್‌ ಕಟ್ಟಿಕೊಂಡು ಬೆಂಗಳೂರಿಗೆ ತಂದದ್ದೂ ಇದೆ. ಹೈದರಾಬಾದ್‌ನಿಂದ ನಮ್ಮೂರಿಗೆ ಭೇಟಿ ನೀಡಿದ್ದ ನನ್ನ ಆಪ್ತ ಸ್ನೇಹಿತರೊಬ್ಬರಿಗೆ ಬನ್ಸ್‌ ಪರಿಚಯಿಸಿದ್ದೆ , ‘ಚಾಲಾ ಬಾಗುಂದಿ...’ ಎಂದು ಚಪ್ಪರಿಸಿದ್ದರು!

ಈ ಸಲ ಊರಿಗೆ ಹೋಗಿದ್ದಾಗ ನಮ್ಮೂರು ಮಾಳಕ್ಕೆ ಸಮೀಪದಲ್ಲಿ ಕುದುರೆಮುಖ ರಸ್ತೆಯಲ್ಲೇ ‘ಹೊಟೇಲ್‌ ಟೂರಿಸ್ಟ್‌’ ಎಂಬಲ್ಲಿ ಬಹಳ ಚೆನ್ನಾದ ಬನ್ಸ್‌ ಸಿಗುತ್ತವೆ, ಬೆಳಿಗ್ಗೆ ಎಂಟು-ಒಂಬತ್ತರ ಹೊತ್ತಿಗೆ ಹೋದರೆ ಬಿಸಿಬಿಸಿ ಫ್ರೆಷ್‌ ಬನ್ಸ್‌ ಸಿಗುತ್ತವೆ, ಕುದುರೆಮುಖ-ಶೃಂಗೇರಿ ಕಡೆಗೆ ಹೋಗುವ ಬಸ್ಸುಗಳೆಲ್ಲ ಅಲ್ಲಿ ಟಿಫಿನ್‌ಗೆ ನಿಂತೇ ಹೋಗುವುದು ಎಂಬ ವಿಚಾರ ಮನೆಯವರಿಂದ ತಿಳಿಯಿತು. ಸರಿ, ನಮ್ಮ ಮನೆಯಲ್ಲೂ ನೆಂಟರೆಲ್ಲ ಇದ್ದುದರಿಂದ ಟೂರಿಸ್ಟ್‌ ಹೊಟೇಲ್‌ನ ‘ವೆರಿ ವೆರಿ ಟೇಸ್ಟಿ ಟೇಸ್ಟಿ’ ಬನ್ಸ್‌ಗೆ ಡಿಮಾಂಡಪ್ಪೋ ಡಿಮಾಂಡು!

ಇಷ್ಟೆಲ್ಲ ಬನ್ಸಾಯಣದ ನಂತರ ಈಗ ಅದರ ರೆಸಿಪಿ.
ಕೊನೇಪಕ್ಷ ಇದನ್ನು ಓದಿಯಾದರೂ ಬನ್ಸ್‌ ಎಂದರೆ ಏನು, ಹೇಗೆ ಇರಬಹುದು ಎಂಬುದು ನಿಮ್ಮ ಕಲ್ಪನೆಗೆ ಬರಲಿ.

ಸುಮಾರು ಎಂಟು ಬನ್ಸ್‌ ಮಾಡಲು ಬೇಕಾಗುವ ಪದಾರ್ಥಗಳು :
ಕಾಲು ಕೇಜಿ ಮೈದಾಹಿಟ್ಟು , ಐದು ಚಮಚ ಗೋಧಿಹಿಟ್ಟು , ಒಂದು ದೊಡ್ಡ ಬಾಳೆಹಣ್ಣು , ಒಂದು ಚಮಚ ಜೀರಿಗೆ, ಅರ್ಧ ಚಮಚ ಅಡಿಗೆ ಸೋಡಾ, ಎಂಟು ಚಮಚ ಸಕ್ಕರೆ ಮತ್ತು ಎಂಟು ಚಮಚದಷ್ಟು ಗಟ್ಟಿ ಮೊಸರು. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ನಾದಿಕೊಳ್ಳಿ (ಹಿಟ್ಟನ್ನು ಕಲಸುವುದಕ್ಕೆ ‘ನಾದುವುದು’ ಎನ್ನುತ್ತಾರೆ). ಸ್ವಲ್ಪವೂ ನೀರು ಹಾಕುವ ಅವಶ್ಯವಿಲ್ಲ . ಹೀಗೆ ಕಲಸಿದ ಹಿಟ್ಟನ್ನು ಒಂದು ಇಡೀ ಮುದ್ದೆಯಾಗಿಸಿ ರಾತ್ರೆಯಿಡೀ ಫರ್ಮೆಂಟ್‌ ಆಗಲು ಬಿಡಿ. ಮಾರನೆ ದಿನ ಬನ್ಸ್‌ ತಯಾರಿಸಲು ಈ ಹಿಟ್ಟಿನ ಮುದ್ದೆಯನ್ನು ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ ಕೈಯಿಂದಲೇ ಸ್ವಲ್ಪ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಪೂರಿಯಂತೆ ಲಟ್ಟಿಸಿ ತೆಳುವಾಗಿಸುವುದು ಬೇಡ. ಕೆಂಪಾಗಿ ಎರಡೂ ಭಾಗ ಉಬ್ಬುವಂತೆ ಹದವಾದ ಉರಿಯಲ್ಲಿ ಕರಿಯಬೇಕು. ಅಂದಹಾಗೆ This part (Buns recipe) of Vichitranna is brought to you by Sahana, my wife.

ಹಾಗಾದರೆ, ಮುಂದಿನ ವಾರಾಂತ್ಯಕ್ಕೆ ನೀವು ಮಾಡಲಿರುವ ಹೊಸ ಸ್ನ್ಯಾಕ್ಸ್‌ ‘ಬನ್ಸ್‌ ’ ಎಂದುಕೊಳ್ಳೋಣವೇ? ಒಂದೊಮ್ಮೆ ಈ ರೆಸಿಪಿಯನ್ನು ಆಧರಿಸಿ ನೀವು ತಯಾರಿಸಿದ ಬನ್ಸ್‌ ಚೆನ್ನಾಗಿ ಆದರೆ ನನಗೆ ಥ್ಯಾಂಕ್ಸ್‌ ಹೇಳಲು ಅಥವಾ ಚೆನ್ನಾಗಿ ಆಗದಿದ್ದರೆ ಹಿಡಿಶಾಪ ಹಾಕಲು ಪತ್ರ ಬರೆಯುವುದನ್ನು ಮರೆಯಬೇಡಿ. ವಿಳಾಸ - sjoshim@hotmail.com

ಅಂದಹಾಗೆ ನಮ್ಮ ಮಂಗಳೂರಿನ ಬನ್ಸ್‌ ಉತ್ತರ ಭಾರತಕ್ಕೂ ವ್ಯಾಪಿಸಿದರೆ, ಹರಿಯಾಣ/ಪಂಜಾಬ್‌ನಲ್ಲಿ ಬನ್ಸ್‌ ಇಷ್ಟಪಡುವ ಒಬ್ಬ ಝಾಟ್‌ ಇದ್ದರೆ ಅವನನ್ನು ಏನೆನ್ನಬಹುದು ?
ಉತ್ತರ : ಬನ್ಸೀಲಾಲ್‌!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+135217352
CONG+375289
OTH8417101

Arunachal Pradesh

PartyLWT
BJP121224
CONG022
OTH437

Sikkim

PartyLWT
SKM4812
SDF639
OTH101

Odisha

PartyLWT
BJD1100110
BJP23023
OTH13013

Andhra Pradesh

PartyLWT
YSRCP9258150
TDP16824
OTH101

TRAILING

Priya Dutt - INC
Mumbai North Central
TRAILING
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more