ಆ ಆ ಆ.. ಆಕ್ಷಿ, ಕಮಲಾಕ್ಷಿ

Sneeze sounds your personality
ಚಳಿಗಾಲ ಶುರು ಆಗಿದೆ, ಅದ್ಯಾಕೋ ಗೊತ್ತಿಲ್ಲ, ರಾಜ್ಯದ ರಾಜಕಾರಣದ ಬಿಸಿ ಸ್ವಲ್ಪ ಕಡಿಮೆ ಆದಂಗೆ ವರುಣರಾಯನ ಆರ್ಭಟ ಜೋರಾಗಿದೆ. ಮನೆಯಲ್ಲಿ ಕುಳಿತು ಬಿಸಿಯಾಗಿ, ರುಚಿಯಾಗಿ ಊಟ ಉಪಚಾರಗಳನ್ನು ಮಾಡಿಕೊಂಡು ಹಾಯಾಗಿ ಇರೋಣ ಅಂತ ಅಂದ್ರೆ ವಾರದ ಎಲ್ಲ ದಿನವು ಭಾನುವಾರ ಅಲ್ಲ, ಈ ಸತ್ಯವನ್ನು ಪ್ರತಿಯೊಬ್ಬರೂ ಅರಿಯಲೇಬೇಕು.

* ಧವಳ

ಈ ಮಳೆಯ ಜೊತೆಗೆ ಎಲ್ಲರಿಗು ನೆಗಡಿ ಹಾಗೂ ಕೆಮ್ಮಿನ ಭಕ್ಷೀಸು! ಖೊಕ್...! ಖೊಕ್....! ಎಂದು ಕೆಮ್ಮುತ್ತ, ಆ..ಆ...ಕ್ಷಿ..! ಎಂದು ಸೀನುತ್ತಾ 'ಮುಂದೆ ನಡೆಯಿರೋ ಹುಚ್ಚಪ್ಪಗಳಿರ ಮನುಷ್ಯನ ಕೈಲಿ ಏನಿದೆ' ಅನ್ನುವ ಫಿಲಾಸಫಿಯನ್ನು ಜೊತೆಯಾಗಿಟ್ಟುಕೊಂಡಿರುವ ಮಂದಿಗೇನು ನಮ್ಮಲ್ಲಿ ಕೊರತೆ ಇಲ್ಲ.

ಸೀನಿನ ವಿಷಯಕ್ಕೆ ಸಂಬಂಧಪಟ್ಟಂತೆ ಮನೋವಿಜ್ಞಾನದಲ್ಲಿ ಕೆಲವು ಸಂಗತಿಗಳಿವೆ. ಒಂದು ಸೀನು ಏನು ಅರ್ಥೈಸುತ್ತದೆ, ಎರಡರ ಮೀನಿಂಗ್ ಏನು.! ಹೀಗೆ ಅದರ ಬಗ್ಗೆ ಸಣ್ಣ ಮಟ್ಟದ ಮಾಹಿತಿ ಇಲ್ಲಿದೆ. ಅದನ್ನು ಓದಿ ನೀವು ಯಾವ ಸೀನಿನ ಒಡೆಯರೆಂದು ತಿಳಿಯಿರಿ.. ಆನಂತರ ಧೈರ್ಯವಾಗಿ ಮತ್ತಷ್ಟು ಆಕ್ಷಿ.....!

* ಕೆಲವರು ಒಂದು ಸೀನಿಗೆ ತೃಪ್ತರಾಗುತ್ತಾರೆ, ಕಿರಿಕಿರಿ ಉಂಟು ಮಾಡುವಂತೆ ಸೀನುವುದಿಲ್ಲ, ಈ ರೀತಿಯ ಗುಣ ಇರುವವರು ಸದಾ ಮತ್ತೊಬ್ಬರಿಗೆ ಸಹಾಯ ಮಾಡುವುದಕ್ಕೆ ಸಿದ್ಧರಾಗಿರುತ್ತಾರೆ, ಪ್ರೋತ್ಸಾಹಿಸುವ ನೇಚರನ್ನು ಹೊಂದಿರುತ್ತಾರೆ.

* ಯಾ..ಆ..ಕ್ಷೀ ..ಈ ...! ಇಡಿ ಭೂಮಂಡಲವೇ ನಡುಗುವ ರೀತಿಯಲ್ಲಿರುತ್ತದೆ, ಅದೆಷ್ಟು ಸ್ಪೀಡ್ ಅಂದ್ರೆ ಆಕಾಶದಲ್ಲಿ ಹಾರ್ತಾ ಇರುವ ವಿಮಾನವನ್ನು ಟಚ್ (ವಿಮಾನ ಇಲ್ಲಾ ಅಂದ್ರು ಆಕಾಶ ಮುಟ್ಟಿ ಬರುವಷ್ಟು ಹೈ ಸ್ಪೀಡು) ಮಾಡಿ ಬಂದು ಬಿಡುವಷ್ಟು! ಇಂತಹವರು ಫಟಾಫಟ್ ಎಂದು ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಆಲೋಚನೆಗಳು ಸಹ ಹೈ ಸ್ಪೀಡಿನಲ್ಲಿ ಇರುತ್ತವೆ. ಒಟ್ಟಾರೆ, ಉತ್ತಮ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತಾರೆ.

* ಸೀನು ಬರ್ತಾ ಇರುವ ಲಕ್ಷಣ ಕಾಣಿಸಿದೊಡನೆ ಮೂಗು ಹಾಗೂ ಬಾಯಿ ಅಡ್ಡವಾಗಿ ಬಟ್ಟೆಯನ್ನು ಇಟ್ಟುಕೊಳ್ತಾರೆ. ಅಂತಹವರು ಎಲ್ಲ ವಿಷಯಗಳ ಜೊತೆ ಅತ್ಯಂತ ಎಚ್ಚರಿಕೆಯಿಂದ ವ್ಯವಹರಿಸ್ತಾರೆ. ಇವತ್ತು ನೀವು ಕರವಸ್ತ್ರ ಇಟ್ಟುಕೊಳ್ಳುವುದು ಮರೆತಿಲ್ಲ ತಾನೆ?

* ಆ... ಒಂದು..ಆ... ಎರಡು...ಆ..ಮೂರು...ಹೀಗೆ ಒಂದು ಸೀನಿಗೆ ತೃಪ್ತರಾಗದೆ ಅಕ್ಕಪಕ್ಕ ಹಾಗೂ ಎದರುಬದರು ಯಾರನ್ನು ಲೆಕ್ಕಿಸದೆ ಭಯದ ಧ್ವನಿಯಲ್ಲಿ ಸೀನ್ ಮೇಲ್ ಸೀನುವವರು ಬೇಜಾರಾಗುವ ಅಗತ್ಯ ಇಲ್ಲ. ಯಾಕೆ ಅಂದ್ರೆ ಇವರು ಹಾಸ್ಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರ ಜೊತೆಗಾರರಿಗೆ ಸೀನು ಮಾತ್ರವಲ್ಲ ಜೋಕುಗಳ ಸುರಿಮಳೆ! ಅಷ್ಟೇ ಅಲ್ಲದೆ ಅತ್ಯಂತ ಪ್ರಭಾವಿಯುತ ವ್ಯಕ್ತಿತ್ವ ಹೊಂದಿರುತ್ತಾರೆ..

ಹೌದು, ನೀವು ಯಾವ ರೀತಿಯ ಆಕ್ಷೀ..ಇ...ಇ...ಇ! ಕೆಟಗಿರಿಯವರು?!!

* ಔಚ್ : River is full of water, book is full of story, sky is full of stars.. My heart is full of...BLOOD, ಇನ್ನೇನು ಇರತ್ತೆ ಅಲ್ಲಿ, ಅಲ್ವ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+