ಅನುವಾದಿಸಿ ಹಣ ಗಳಿಸಲು ಸುವರ್ಣ ಅವಕಾಶ!
ಮನೆಯಲ್ಲಿ ಕುಳಿತು ಅಥವಾ ಅವಕಾಶವಿದ್ದರೆ ಕಚೇರಿಯಲ್ಲಿ ಕುಳಿತು ಹಣ ಗಳಿಸಲು ಒನ್ಇಂಡಿಯಾ ಸಂಸ್ಥೆ ಫ್ರೀಲಾನ್ಸ್ ಪತ್ರಕರ್ತರಿಗೆ ಅಥವಾ ಬರಹಗಾರರಿಗೆ ಸುವರ್ಣ ಅವಕಾಶ ಒದಗಿಸಿಕೊಟ್ಟಿದೆ. ಪೂರ್ಣ ಪ್ರಮಾಣದ ಕೆಲಸ ಮಾಡುತ್ತಲೇ ಬಿಡುವಿದ್ದಾಗ ಸಮಯ ವಿನಿಯೋಗಿಸಿಕೊಂಡು ಈ ಭಾಷಾಂತರದ ಕೆಲಸ ಅಚ್ಚುಕಟ್ಟಾಗಿ ಮಾಡಿ ನಾಲ್ಕು ಕಾಸು ಜೇಬಿಗೆ ಇಳಿಸಬಹುದು.
ಈ ದುಬಾರಿ ಜಮಾನಾದಲ್ಲಿ ಒಂದಿಷ್ಟು ಕಾಸು ಗಳಿಸುವ ಅವಕಾಶವಿದ್ದರೆ ಮತ್ತು ಆ ಅವಕಾಶ ತಾನಾಗಿಯೇ ಬಂದರೆ ಯಾರು ಬೇಡವೆನ್ನುತ್ತಾರೆ? ಕನ್ನಡದ ಮೇಲೆ ಪ್ರಭುತ್ವ, ಆಂಗ್ಲ ಭಾಷೆಯ ತಿಳಿವಳಿಕೆ, ಅಚ್ಚುಕಟ್ಟಾಗಿ ಭಾಷಾಂತರ ಮಾಡುತ್ತೇನೆಂಬ ವಿಶ್ವಾಸ ಮತ್ತು ಕೆಲಸದ ಮೇಲೆ ಶ್ರದ್ಧೆಯಿದ್ದರೆ ಈ ಕೆಲಸ ನಿಮಗೆ ಹೇಳಿ ಮಾಡಿಸಿದ್ದು. ಇಂಟರ್ನೆಟ್ ಸಂಪರ್ಕವಿದ್ದರೆ ಸಾಕು ಎಲ್ಲಿಂದ ಬೇಕಾದರೂ ಕೆಲಸ ಮಾಡಿ ಹಣ ಗಳಿಸಬಹುದು.

ಕೆಲಸ ಏನು? : ಒನ್ಇಂಡಿಯಾ ಕನ್ನಡಕ್ಕಾಗಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಲೇಖನಗಳನ್ನು ಭಾಷಾಂತರಿಸುವ ಫ್ರೀಲಾನ್ಸ್ ಭಾಷಾಂತರಕಾರ.
ಕನಿಷ್ಠ ಅನುಭವ : ವೆಬ್ ಸೈಟ್ ಅಥವಾ ಆನ್ ಲೈನ್ ಮೀಡಿಯಾ ಸಂಸ್ಥೆಗೆ ಕನಿಷ್ಠ 6 ತಿಂಗಳು ಲೇಖನಗಳನ್ನು ಬರೆದು ಅಥವಾ ಭಾಷಾಂತರಿಸಿ ಅನುಭವವಿರಬೇಕು. ಇದು ಪಾರ್ಟ್ ಟೈಂ ಕೆಲಸವಾಗಿರುತ್ತದೆ.
ನಿಮಗೆ ಆಸಕ್ತಿಯಿದ್ದರೆ, ಹೆಚ್ಚು ಹಣ ಗಳಿಸುವ ಇರಾದೆಯಿದ್ದರೆ ತಡಮಾಡದೆ ಲೇಖಕ ವೆಬ್ ಸೈಟಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಿ.
ನೋಂದಾಯಿಸಿಕೊಂಡ ಮೇಲೆ ಒನ್ಇಂಡಿಯಾ ಕನ್ನಡ ಸಂಪಾದಕರು ನೀಡುವ ಪರೀಕ್ಷೆಯನ್ನು ತೆಗೆದುಕೊಂಡು ತೇರ್ಗಡೆಯಾಗಬೇಕು. ಆನ್ ಲೈನ್ ಮುಖಾಂತರ ಈ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ನಿಮ್ಮ ಭಾಷಾಂತರದ ಪ್ರೌಢಿಮೆಯನ್ನು ನೋಡಿ ನೀವು ಆಯ್ಕೆಯಾಗಿದ್ದೀರಾ, ತಿರಸ್ಕೃತರಾಗಿದ್ದೀರಾ ಎಂಬುದನ್ನು ತಿಳಿಸಲಾಗುವುದು. ಇನ್ನೇಕೆ ತಡ, ಕೂಡಲೆ ಲೇಖಕ ವೆಬ್ ಸೈಟಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಿ. (ನಮ್ಮ ಕರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದ ಕಾರಣ ಸದ್ಯಕ್ಕೆ ನೋಂದಾವಣೆಯನ್ನು ನಿಲ್ಲಿಸಲಾಗಿದೆ. ಧನ್ಯವಾದಗಳು.)
ಗಮನಿಸಬೇಕಾದ ಅಂಶಗಳು
* ಕನ್ನಡ ಭಾಷೆಯ ಮೇಲೆ ಪ್ರಭುತ್ವವಿರಬೇಕು.
* ಆಂಗ್ಲ ಭಾಷೆಯ ಲೇಖನ ಓದಿ ಚೆನ್ನಾಗಿ ಅರ್ಥೈಸಿಕೊಳ್ಳುವ ಜಾಣ್ಮೆಯಿರಬೇಕು.
* ವ್ಯಾಕರಣ ಶುದ್ಧವಾಗಿರಬೇಕು.
* ತಪ್ಪಿಲ್ಲದೆ ಬರೆಯುವಂಥ ನೈಪುಣ್ಯತೆಯಿರಬೇಕು.
* ವೇಗವಾಗಿ ಭಾಷಾಂತರಿಸಿಕೊಡುವ ಚಾಕಚಕ್ಯತೆಯಿರಬೇಕು.
* ಈಮೇಲ್ ಮುಖಾಂತರ ಕಳಿಸಿದ ಬಯೋಡೇಟಾಗಳನ್ನು ಪರಿಗಣಿಸಲಾಗುವುದಿಲ್ಲ. ಎಲ್ಲವೂ ಆನ್ ಲೈನ್ ಮುಖಾಂತರವೇ ನಡೆಯಬೇಕು.












Click it and Unblock the Notifications