ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾರ್ಮಾಡಿ ಘಾಟಿನಲ್ಲಿ ರಾಜಕೀಯದ ಉಗಿಬಂಡಿ

By * ಶಾಮ್
|
Google Oneindia Kannada News

SK Shama Sundara
ಬಿಜೆಪಿ ಸರಕಾರದ ಎರಡನೇ ಬಾರಿಯ ವಿಶ್ವಾಸಮತ ಯಾಚನೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು ಬುಧವಾರ ದಿನವಿಡೀ ನಡೆದ ರಾಜಕೀಯ ದೊಂಬರಾಟಗಳು ಮತ್ತು ನ್ಯಾಯಾಲಯದ ತೀರ್ಮಾನಗಳು ಈ ಕೆಳಗಿನಂತಿವೆ: ಯಡಿಯೂರಪ್ಪ ಅವರು ರಾಜಕೀಯ ಪಗಡೆಯಾಟದಲ್ಲಿ ಗುರುವಾರ ಗೆಲ್ಲುತ್ತಾರಾ? ಅಥವಾ ಅವರ ವಿರೋಧಿಗಳು ಮತ್ತೇನಾದರೂ ಹೊಸ ಅಸ್ತ್ರ ಪ್ರಯೋಗಿಸಿ ಅವರಿಗೆ ಮಣ್ಣು ಮುಕ್ಕಿಸುವಲ್ಲಿ ಗೆಲವು ಸಾಧಿಸುತ್ತಾರಾ? ಎಂಬಂತಹ ಗೊಂದಲದ ವಾತಾವರಣದಲ್ಲಿ ಈ ಚುಕ್ಕಿ ಟಿಪ್ಪಣಿಗಳ ಮೇಲೆ ಕಣ್ಣಾಡಿಸಲು ನಿಮಗೆ ಸ್ವಾಗತ.

* ಐವರು ಪಕ್ಷೇತರರು ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ - ಹೈಕೋರ್ಟ್. [ಹೆಚ್ಚಿನ ವಿವರ]
* ಅಷ್ಟೇ ಅಲ್ಲ. ಐವರು ಪಕ್ಷೇತರರು ವಿಧಾನಸೌಧ ಪ್ರವೇಶಿಸುವಂತೆಯೂ ಇಲ್ಲ - ಹೈಕೋರ್ಟ್.
* ಮುಚ್ಚಿದ ಲಕೋಟೆಯಲ್ಲಿ ಪಕ್ಷೇತರರು ಮತದಾನ ಮಾಡಲು ಅವಕಾಶ ಮಾಡಬೇಕೆಂಬ ಜೆಡಿಎಸ್ ಅರ್ಜಿಗೆ ಕೋರ್ಟ್ ನಕಾರ - ಬಿಜೆಪಿ ವಕೀಲ.
* ಅಂಚೆ ಲಕೋಟೆಯೂ ಇಲ್ಲ, ಮುಚ್ಚಿದ ಲಕೋಟೆಯೂ ಇಲ್ಲ - ಕಾನೂನು ಸಚಿವ ಸುರೇಶ್ ಕುಮಾರ್.
* ಗುರುವಾರ ವಿಶ್ವಾಸಮತದ ನಿರ್ಧಾರ ಏನೇ ಆದರೂ ಅದು ಮೂಲ ಅರ್ಜಿಯ ವಿಚಾರಣೆ ಮತ್ತು ತೀರ್ಮಾನಕ್ಕೆ ಬದ್ಧ - ಸರ್ವವಿದಿತ.
* ಉಲ್ಟಾ ಹೊಡೆದ ಕೋಲಾರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ - ಜನಾರ್ಧನ ರೆಡ್ಡಿಯ ಕೊನೆ ಕ್ಷಣದ ದಾಳ. [ಹೆಚ್ಚಿನ ವಿವರ]
* ದಿನ ಬೆಳವಣಿಗೆಗಳಿಂದ ಬಿಜೆಪಿ ಪಾಳೆಯದಲ್ಲಿ ಉಬ್ಬಿದ ಆತ್ಮ ವಿಶ್ವಾಸ. ಗೆಲವು ತಮ್ಮದೇ - ಸಿಟಿ ರವಿ ಘೋಷಣೆ.
* ಕಾಂಗ್ರೆಸ್ ಪಾಳೆಯದಲ್ಲಿ ಮಂಕು ಕವಿದ ವಾತಾವರಣ. ಕಾಂಗ್ರೆಸ್ ಶಾಸಕರಿಗೆ ಹೈಕಮಾಂಡ್ ಮತ್ತು ರಾಜ್ಯಪಾಲರ ಮೇಲೆ ಈಗ ಕೋಪ. [ಹೆಚ್ಚಿನ ವಿವರ]
* ರಾಜ್ಯ ಕಾಂಗ್ರೆಸ್ ಶಾಸಕರನ್ನು ನಡು ನೀರಿನಲ್ಲಿ ಕೈ ಬಿಟ್ಟ ಕಾಂಗ್ರೆಸ್ ಹೈಕಮಾಂಡ್ - ಆಶಾವಾದಿ ಶಾಸಕರ ಪರಿತಾಪ.
* ಎಲ್ಲಾ 73 ಕಾಂಗೈ ಶಾಸಕರು ಹೋಲ್ ಸೇಲ್ ರಾಜೀನಾಮೆ ಕೊಟ್ಟರೆ ಹೇಗೆ? - ಶಾಸಕಾಂಗ ಸಭೆಯಲ್ಲಿ ಕೇಳಿಸಿದ್ದು.
* ರಾಜ್ಯಪಾಲರ ಮೇಲೆ ಬಿಜೆಪಿ ಹೈಕಮಾಂಡ್ ಗಂಭೀರ ಆರೋಪಗಳ ಸರಮಾಲೆ - ಅರುಣ್ ಜೇಟ್ಲಿ ಅವರಿಂದ, ನವದೆಹಲಿಯಲ್ಲಿ. [ಹೆಚ್ಚಿನ ವಿವರ]
* ವಿಧಾನಸಭೆಯಲ್ಲಿ ಮೊನ್ನೆ ನಡೆದ ಅಧ್ವಾನಗಳು ಮರುಕಳಿಸದಂತೆ ಸಭಾಧ್ಯಕ್ಷ ಬೋಪಯ್ಯ ಖಡಕ್ ಕ್ರಮಗಳು - ಅನುಭವಿ. [ಹೆಚ್ಚಿನ ವಿವರ]
* ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಗಪ್ ಚುಪ್, ಒಂದೂ ಮಾತೇ ಇಲ್ಲ - ಕರ್ನಾಟಕ ಮಾಧ್ಯಮ ಲೋಕ.
* ಗೋಧೂಳಿ ಸಮಯದಲ್ಲಿ ಸಿದ್ದು ಮತ್ತು ಕುಮಾರಸ್ವಾಮಿ ಅವರಿಂದ ರಾಜ್ಯಪಾಲರ ಭೇಟಿ - ಕಡೇ ಗಳಿಗೆ ಪ್ರಯತ್ನ. [ಹೆಚ್ಚಿನ ವಿವರ]
* ಚಾರ್ಮಾಡಿ ಘಾಟಿನಲ್ಲಿ ಚಲಿಸುತ್ತಿರುವ ರಾಜ್ಯ ರಾಜಕೀಯದ ಉಗಿಬಂಡಿ - ದಟ್ಸ್ ಕನ್ನಡ.

ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X