ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಈಡಿಯಟ್ಸ್ ಚೇತನ್ ಭಗತ್, ಪುಸ್ತಕಗಳು 95 ರೂಗೆ ಒಂದು!

By Super
|
Google Oneindia Kannada News

Chetan Bhagat
ಚೇತನ್ ಭಗತ್ ಎಂದರೆ ಯಾರು? ಇಂಗ್ಲಿಷ್ ಪುಸ್ತಕ ಓದುವವರನ್ನು ಬಿಟ್ಟು ಬೇರೆ ಯಾರಿಗಾದರೂ ಈ ಪ್ರಶ್ನೆ ಹಾಕಿದರೆ, 'ಯಾವೋನಾದ್ರೆ ನನಗೇನು?' ಎಂಬಂತಹ ಪ್ರಶ್ನೆ ನಮಗೇ ವಾಪಸ್ ಎಸೆಯುತ್ತಿದ್ದರು. ಆದರೆ, ತ್ರೀ ಈಡಿಯಟ್ಸ್ ಚಿತ್ರ ನೋಡಿದವರಾದರೆ, ಅದರ ಬಗ್ಗೆ ಕೇಳಿದವರಾದರೆ, yes, I wanna meet Chetan one day, where can I ? can you give me the list of his works? where can I find his books? ಎನ್ನುತ್ತಾರೆ.

*ಶಾಮಿ

ಭಾರತೀಯ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಕ್ರಾಂತಿ ಮಾಡಿದ, ಗಲ್ಲಾಪೆಟ್ಟಿಗೆಯಲ್ಲಿ ಹಿಂದಿನ ದಾಖಲೆಗಳನ್ನು ಧೂಳಿಪಟ ಮಾಡಿರುವ ವಿಧುವಿನೋದ್ ಚೋಪ್ರಾ ನಿರ್ಮಿಸಿ, ರಾಜಕುಮಾರ್ ಹಿರಾಣಿ ನಿರ್ದೇಶಿಸಿರುವ, ಅಮೀರ್ ಖಾನ್ ಪ್ರಮುಖವಾಗಿ ನಟಿಸಿರುವ 'ತ್ರೀ ಈಡಿಯಟ್ಸ್' ಬಿಡುಗಡೆಯ ನಂತರ ಚೇತನ್ ಭಗತ್ ಎಂಬ ಹೆಸರು ಮನೆಮಾತು.

ತ್ರೀ ಈಡಿಯಟ್ಸ್ ಚಿತ್ರ ಚೇತನ್ ಭಗತ್ ಬರೆದ ಬೆಸ್ಟ್ ಸೆಲ್ಲರ್ 'ಫೈವ್ ಪಾಯಿಂಟ್ ಸಮ್ವನ್ - ವಾಟ್ ನಾಟ್ ಟು ಡು ಅಟ್ ಐಐಟಿ' ಆಂಗ್ಲ ಕೃತಿ ಆಧರಿಸಿ ನಿರ್ಮಿತವಾಗಿದೆ. ಚಿತ್ರ ನಿರ್ಮಾಪಕರು ತಮ್ಮ ಹೆಸರನ್ನು ಸೂಕ್ತವಾಗಿ ಬಳಸದೇ ಅನ್ಯಾಯ ಮಾಡಿದ್ದಾರೆ, ಜ್ಯೂನಿಯರ್ ಕಲಾವಿದರ ಹೆಸರಿನ ನಂತರ ತನ್ನ ಹೆಸರನ್ನು ಟೈಟಲ್ ಕಾರ್ಡಲ್ಲಿ ನಮೂದಿಸಿ ಅವಮಾನ ಮಾಡಿದ್ದಾರೆ ಎಂದು ಚೇತನ್ ಭಗತ್ ಹುಯಿಲೆಬ್ಬಿಸಿದ್ದರು. ಚಿತ್ರ ನಿರ್ಮಿಸಿದ ದಾಖಲೆ, ವಿವಾದದಿಂದ ಅದು ಎಬ್ಬಿಸಿದ್ದ ಧೂಳು ಎಷ್ಟೇ ಇರಲಿ, ಅದರಿಂದ ಲಾಭವಾದದ್ದು ಚೇತನ್ ಭಗತ್ ಅವರಿಗೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಅವರ ಪುಸ್ತಕಗಳು ಕಾಳಸಂತೆಯಲ್ಲಿ ಕಡಿಮೆ ದರಕ್ಕೆ ಮಾರಾಟವಾಗುತ್ತಿವೆ.

ಈ ವಿವಾದವೇನೇ ಇರಲಿ, ದೆಹಲಿಯಲ್ಲಿ ಹುಟ್ಟಿ, ಬೆಳೆದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು, ಐಐಎಂ ಅಹ್ಮದಾಬಾದಿನಲ್ಲಿ 'ಅತ್ಯುತ್ತಮ ವಿದ್ಯಾರ್ಥಿಯಾಗಿ' ಹೊರಬಿದ್ದ ಚೇತನ್ ಭಗತ್ ಸರಳ ಬರವಣಿಗೆ, ನವುರಾದ ನಿರೂಪಣೆ ಮತ್ತು ವಿಶಿಷ್ಟ ಕಥನಶೈಲಿಯಿಂದ ಜಗತ್ತಿನಾದ್ಯಂತ ಮನೆಮಾತಾಗಿದ್ದಾರೆ. ಅವರ 'ಫೈವ್ ಪಾಯಿಂಟ್ ಸಮ್ವನ್ - ವಾಟ್ ನಾಟ್ ಟು ಡು ಅಟ್ ಐಐಟಿ', 'ಒನ್ ನೈಟ್ ಅಟ್ ದಿ ಕಾಲ್ ಸೆಂಟರ್', 'ದಿ ತ್ರೀ ಮಿಸ್ಟೇಕ್ಸ್ ಆಪ್ ಮೈ ಲೈಫ್ ಅಂಡ್ 2 ಸ್ಟೇಟ್ಸ್' ಮತ್ತು 'ದಿ ಸ್ಟೋರಿ ಆಫ್ ಮೈ ಮ್ಯಾರೇಜ್' ಪುಸ್ತಕಗಳು ಬೆಸ್ಟ್ ಸೆಲ್ಲರ್ ಲಿಸ್ಟಿನಲ್ಲಿ ಕಾಣಿಸಿಕೊಂಡಿವೆ.

ತ್ರೀ ಈಡಿಯಟ್ಸ್ ಚಿತ್ರ ಚೇತನ್ ಭಗತ್ ಅವರ ಕಥನ ಕಲೆಯನ್ನು ಮಾತ್ರವಲ್ಲ, ಮ್ಯಾನೇಜ್ ಮೆಂಟ್ ಸಂಸ್ಥೆಗಳಲ್ಲಿ ಇರುವ ಹುಳುಕುಗಳನ್ನು ಕೂಡ ಜಗತ್ತಿಗೆ ಪರಿಚಯಿಸಿಕೊಟ್ಟಿದೆ. 'ಫೈವ್ ಪಾಯಿಂಟ್ ಸಮ್ವನ್ - ವಾಟ್ ನಾಟ್ ಟು ಡು ಅಟ್ ಐಐಟಿ' ಕೃತಿ ಚೇತನ್ ಭಗತ್ ಅವರ ಜೀವನ ಪುಟದಿಂದ ಹೆಕ್ಕಿದ ಒಂದು ಹಾಳೆಯೂ ಹೌದು.

ಮತ್ತೊಂದು ವೈಶಿಷ್ಟ್ಯವೆಂದರೆ, ಪುಸ್ತಕಗಳ ಶೀರ್ಷಿಕೆಗಳಲ್ಲಿ ಬಳಸಿರುವ ಸಂಖ್ಯೆಗಳು. ಫೈವ್, ಒನ್, ತ್ರೀ.... ಸಂಖ್ಯೆಗಳೊಂದಿಗೆ ಅವರು ಬಿಟ್ಟೂಬಿಡದ ನಂಟು. ಪ್ರತಿಯೊಂದರಲ್ಲೂ ಲೆಕ್ಕಾಚಾರ. ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿ ಡಾಯಿಶ್ ಬ್ಯಾಂಕಿನಲ್ಲಿ 11 ವರ್ಷ ಹಾಂಗ್ ಕಾಂಗಿನಲ್ಲಿ ಕೆಲಸ ಮಾಡಿದ ಚೇತನ್, ಪುಸ್ತಕಗಳು ಬ್ಯಾಂಕಿನಲ್ಲಿ ಹೊಸ ಅಕೌಂಟು ತೆರೆಸಿದ ನಂತರ, ಬ್ಯಾಂಕಿಂಗಿಗೆ ತಿಲಾಂಜಲಿಯಿತ್ತು ಕೈಯಲ್ಲಿ ಪೆನ್ನು ಹಿಡಿದಿದ್ದಾರೆ, ಅಕ್ಷರ ದುಡಿಮೆಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಹಿಂದಿ ಚಿತ್ರ ಹಲೋ ಕೂಡ ಭಗತ್ ಅವರ ಕೃತಿ " ಒನ್ ನೈಟ್ ಅಟ್ ದಿ ಕಾಲ್ ಸೆಂಟರ್ ' ಆಧರಿಸಿದ್ದು.

ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಸಿದ ಆಂಗ್ಲ ಲೇಖಕ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಹೊಗಳಿದೆ. ಕೇವಲ 35 ವರ್ಷ ವಯಸ್ಸಿನ ಚೇತನ್ ಭಗತ್ ಯುವ ಪೀಳಿಗೆಯಲ್ಲಿ ಮತ್ತೆ ಮತ್ತೆ ಓದುವ ಗೀಳಿಗೆ ಯುವಜನತೆಯನ್ನು ಹಚ್ಚಿದ್ದಾರೆ. ದೈನಿಕ್ ಭಾಸ್ಕರ್ ಹಿಂದಿ ಪತ್ರಿಕೆ ಮತ್ತು ದಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದಾರೆ.

ಚೇತನ್ ಅಂದರೆ ನಿಜಕ್ಕೂ ಕ್ರಿಯಾಶೀಲ ಚೇತನ. ಬಾಲಕನಾಗಿದ್ದಾಗಲೇ ಬರೆಯುವ ಗೀಳು ಅಂಟಿಸಿಕೊಂಡಿದ್ದರು. ಬಾಲ್ಯದಲ್ಲಿ ಅವರು ಹೊಟೇಲ್ ಅಡುಗೆಯವ ಆಗಬೇಕೆಂದು ಅಂದುಕೊಂಡಿದ್ದರಂತೆ. ಆದರೆ, ಧಡೂತಿ ಚೆಫ್ ಗಳನ್ನು ನೋಡಿ 35 ಆಗುವುದರೊಳಗೆ ಹೃದಯಾಘಾತವಾಗಿ ಸತ್ತುಹೋಗುತ್ತೇನೆಂದು ತಮ್ಮ ಆಸೆಯ ಚಿಗುರನ್ನು ಬಾಲ್ಯದಲ್ಲಿಯೇ ಚಿವುಟಿ ಹಾಕಿದ್ದರಂತೆ.

ಚೇತನ್ ಭಗತ್ ಅವರ ಎರಡು ಶೀರ್ಷಿಕೆಗಳು ಕಡಿಮೆ ಬೆಲೆಯಲ್ಲಿ ಆನ್ ಲೈನ್ ಖರೀದಿಗೆ ಇಲ್ಲಿ ಲಭ್ಯ. ಓದಿ :

English summary
Meet Chetan Bhagat, the author of best sellers, 2 states and One Night @ the Call Center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X