• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಗರೇಟ್‌ ಬಿಡಬಹುದು; ಇ-ಸಂಗ ಬಿಡಲಾಗದು!

By Staff
|

ಒಂದೊಂದು ಸಲ ದಿಗಿಲಾಗುತ್ತದೆ. ಈ ಇಂಟರ್‌ನೆಟ್ಟು, ವೆಬ್‌ಸೈಟು, ಇ-ಮೇಲುಗಳ ಪ್ರಪಂಚದಲ್ಲಿ ನಾವೆಲ್ಲಿ ಕಳೆದು ಹೋಗುವೆವೋ ಅನ್ನುವುದು ದಿಗಿಲಿಗೆ ಕಾರಣ. ಆದರೂ ಆ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿನ್ನೆ ಎಂದಿನಂತೆ ಇ-ಲೋಕದಲ್ಲಿ ಮುಳುಗಿದ್ದಾಗ...

Round the clock!‘ಅವರಿಗೆ ಕಂಪ್ಯೂಟರ್‌ ಖಯ್ಯಾಲಿ ಅಂಟಿಕೊಂಡ ನಂತರ ಬರವಣಿಗೆ ನಿಂತು ಹೋಯಿತು’ - ಹಾಗಂತ ರವಿ ಬೆಳಗೆರೆ ಮೊನ್ನೆ ತೇಜಸ್ವಿ ಬಗೆಗೆ ಬರೆದಿದ್ದಾರೆ. ಜೀವನಶೈಲಿ ಮತ್ತು ಆಲೋಚನೆ ಕ್ರಮಗಳ ಜತೆಗೆ ಅಳಿದುಳಿದ ಆಸೆನಿರಾಸೆಗಳನ್ನೆಲ್ಲ ಏಕಪ್ರಕಾರವಾಗಿ ಆಪೋಶನ ಪಡೆಯುವ ಶಕ್ತಿ ಕಂಪ್ಯೂಟರ್‌ಗೆ ಇದೆ ಎನ್ನುವುದು ಅವರ ಮಾತಿನ ಇಂಗಿತ.

ಬರೀ ಕಂಪ್ಯೂಟರ್‌ ಆದರೆ ಪರವಾಗಿಲ್ಲ, ಇಂಟರ್‌ನೆಟ್‌ ಅಭ್ಯಾಸವಾದರೆ ಗುಣವಾಚಕವನ್ನು ಲಗತ್ತಿಸಿಕೊಳ್ಳದ ಒಂದು ಚಟಚಕ್ರದಲ್ಲಿ ಯಾರೇಆಗಲಿ ಸುರುಳಿಸುತ್ತಿಕೊಳ್ಳುವುದು ನಿಶ್ಚಿತ. ನಮ್ಮ ಅನೇಕ ಆಸಕ್ತಿಗಳನ್ನು ಉಮೇದುಗಳನ್ನು ಬಸಿದು ಬರಿದಾಗಿಸಿಬಿಡುವ ಶಕ್ತಿ ಇಂಟರ್‌ನೆಟ್ಟಿಗೆ ಇದೆ. ಅದು ಎಂಥಾ ಚಟವೆಂದರೆ ಮದ್ಯ-ಮಹಿಳೆ-ಮಾಂಸಕ್ಕಿಂತ ..ನಿಕೊಟಿನ್‌ಗಿಂತ ದೊಡ್ಡದು.

ಫಾಂಟು, ಪ್ರೊಗ್ರಾಮು, ಫೋಟೋಶಾಪು ಮೋಹಕ್ಕೆ ತೇಜಸ್ವಿಯಂಥವರೆ ಸಿಲುಕಿ ವರ್ಡ್‌ಪ್ಯಾಡ್‌ನ್ನೇ ಮರೆತರೆಂದರೆ ನನ್ನದೇನು ಮಹಾ. ಟೂತ್‌ಬ್ರಷ್‌ ಎಲ್ಲಿಟ್ಟಿದೀನೀಂತಲೇ ಗೊತ್ತಿರಲ್ಲ, ಟೈಂಗೆ ಕರೆಕ್ಟಾಗಿ ಊಟ ತಿಂಡಿ ಮಾಡಕ್ಕಾಗಲ್ಲ. ಅವಳನ್ನು ನೆನೆಸಿಕೊಳ್ಳುತ್ತಾ ಒಂದು ಮುಖೇಶ್‌ ಹಾಡು ಕೇಳೋಣ ಅಂದ್ರೆ ಸಿಡಿ ಇರುವಲ್ಲಿಗೆ ಬೆರಳು ಹೋಗಲ್ಲ.

ನಮ್ಮ ಮನೆಯಲ್ಲಿ ನನ್ನ ಕಸಿನ್‌ ಆಸೆಯಿಂದ ತಂದು ಪ್ರೀತಿಯಿಂದ ಜೋಡಿಸಿಟ್ಟಿರುವ 1000 ಆಡಿಯೋ ಕ್ಯಾಸೆಟ್‌ಗಳು, ಸಿಡಿ, ಎಂಪಿ 3, ಎಲ್ಲಕಾಲಕ್ಕೂ ಸಲ್ಲುವ ಸಿನಿಮಾ ಡಿವಿಡಿಗಳು ಇವೆ. ನಾಳೆ ಕೇಳಿದರಾಯಿತು, ನಾಡಿದ್ದು ನೋಡಿದರಾಯಿತು ಅಂದುಕೊಳ್ಳುತ್ತಲೇ ನನಗೆ ಎರಡೂವರೆ ಕತ್ತೆ ವಯಸ್ಸಾಯಿತು. ಆದರೂ ನಾನೇನೂ ಖಿನ್ನನಾಗಿಲ್ಲ ಬಿಡಿ. ಆಸೆಗಳ ಫ್ರೆಂಡ್‌ಶಿಪ್‌ನಲ್ಲಿ ಆಕಾಂಕ್ಷೆಗಳು ಹಾಗೇ ಜೋಪಾನವಾಗಿವೆ. Life begins Now or later ಅಂದುಕೊಳ್ಳುತ್ತಾ ನಿನ್ನೆ ರಾತ್ರಿ ಯಥಾಪ್ರಕಾರ ಲಾಗ್‌ ಆನ್‌ ಮಾಡಿದಾಗ ಗಂಟೆ ಎಂಟಾಗಿತ್ತು.

ನನಗೆ ತುಂಬಾ ಬೇಕಾದವರು ಇವತ್ತು ಈಮೇಲ್‌ ಕಳಿಸೋದಿಲ್ಲ ಹಾಗೂ ನಾನು ಬರೆದರೆ ಅವರು ಓದಿ ರಿಪ್ಲೈ ಮಾಡಲ್ಲ ಎಂದು ವಿಶ್ವಸನೀಯವಾಗಿ ಗೊತ್ತಿದ್ದರಿಂದ ಇ-ಮೇಲ್‌ ಓಪನ್‌ ಮಾಡಲಿಲ್ಲ. ಅನ್ಯಮನಸ್ಕನಾಗಿ ಹಳೆ ಗಂಡನ ಪಾದವೇ ಗತಿ ಅಂದುಕೊಂಡು ದಟ್ಸ್‌ಕನ್ನಡದ ಬಾಗಿಲು ತೆರೆದುಕೊಂಡು ಕುಳಿತೆ.

ಅಮೆರಿಕಾದ ಎಫ್‌ಎಂ ರೇಡಿಯೋದಲ್ಲಿ ನನ್ನ ಸ್ನೇಹಿತ ಮಧು ಕೃಷ್ಣಮೂರ್ತಿ ನಡೆಸಿಕೊಡುವ ಕನ್ನಡ ಕಾರ್ಯಕ್ರಮದ ಬಗ್ಗೆ ಒಂದು ಸುದ್ದಿ ಪ್ರಕಟವಾಗಿದ್ದುದು ಕಣ್ಣಿಗೆ ಬಿತ್ತು. ಬಿಟ್‌ಸ್ಟ್ರೀಮ್‌ ಓಪನ್‌ಮಾಡಿ ಕಾರ್ಯಕ್ರಮ ಕೇಳುತ್ತಾ ಕುಳಿತೆ. ಒಂದು ಗಂಟೆ ಹೇಗೆ ಸರಿದುಹೋಯಿತೋ ಗೊತ್ತಾಗಲಿಲ್ಲ.

ಸ್ಟ್ಯಾನ್‌ಫರ್ಡ್‌ ವಿಶ್ವವಿದ್ಯಾಲಯದ kzsu FM 90.1 ಬಾನುಲಿಯಲ್ಲಿ ಮಧು ಯುಗಾದಿ ಹಬ್ಬದ ಅರ್ಥ ಸಂಕೇತಗಳ ಬಗ್ಗೆ ವಿವರಗಳನ್ನು ಕೊಟ್ಟರು. ವಿವರಣೆಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಹರಿದುಬಂದುದು ಜಾಗತಿಕ ಮಾಧ್ಯಮ ವೇದಿಕೆಗೆ ತಕ್ಕುದಾಗಿತ್ತು. ಯುಗಾದಿ ನಿಮಿತ್ತ ಹಮ್ಮಿಕೊಂಡ ಕನ್ನಡ ಹಾಸ್ಯ ಚಿತ್ರಗೀತೆಗಳ ಮಾಲಿಕೆ ಲವಲವಿಕೆಯಿಂದಿತ್ತು. ಹಾಸ್ಯ ಎನ್ನುವುದಕ್ಕಿಂತ ಅವರು ಆಯ್ದುಕೊಂಡ ಹಾಡುಗಳು ರಾಗಸಂಯೋಜನೆಯಿಂದಾಗಿ ಮನಸೂರೆಗೊಂಡವು.

ಕನ್ನಡ ಚಿತ್ರಗಳು, ನಟ ನಟಿಯರು, ಹಿನ್ನೆಲೆ ಸಂಗೀತ ಮತ್ತು ಹಾಡುಗಾರರ ಕುರಿತು ಅವರು ನೀಡುತ್ತಿದ್ದ ಲಘು ಟಿಪ್ಪಣಿಗಳು ಇಷ್ಟವಾದವು. ತುಂಬಾ ಹೋಂ ವರ್ಕ್‌ ಮಾಡಿದಂತೆ ಕಂಡರೂ ಕಾರ್ಯಕ್ರಮ ಸಾದರಪಡಿಸುವಾಗ ಎಲ್ಲೂ ಎಡವದೆ ತೊದಲದೆ ಆವೇಶಕ್ಕೆ ಒಳಗಾಗದೆ ವಿಷಯ ನಿರೂಪಣೆ ಮಾಡುವ ಮಧು ಅವರ ವಿಧಾನವನ್ನು ನಮ್ಮ ಬೆಂಗಳೂರು ಎಫ್‌ಎಂನ ಜಾಕಿಗಳು ಕೇಳಬಾರದಿತ್ತೆ ಅನಿಸುತ್ತಿತ್ತು.

ಅಮೆರಿಕಾದ ನಾನಾ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು ಈ ಕಾರ್ಯಕ್ರಮಕ್ಕೆ ನಿಧಾನವಾಗಿ ಅಂಟಿಕೊಳ್ಳುತ್ತಿರುವಂತೆ ಕಾಣಿಸುತ್ತಿದೆ. ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌ ಕುರಿತಾದ ಕಾರ್ಯಕ್ರಮಗಳ ನಂತರದ ಸಾಲಿನಲ್ಲಿ ಹೊಮ್ಮಿಬಂದ ಬುಧವಾರದ ಕಾರ್ಯಕ್ರಮ, ಯುಗಾದಿ ಕನ್ನಡ ಚಿತ್ರಗೀತೆಗಳ ತೋರಣವನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿತ್ತು. Thank you itsdiff.com

ಎಂಟ್ಹತ್ತು ಕನ್ನಡಹಾಡುಗಳನ್ನು ಕೇಳಿಸಿದ್ದಕ್ಕಾಗಿ itsdiff.comಗೆ ಥ್ಯಾಂಕ್ಸ್‌ ಹೇಳುವ ಪರಿಸ್ಥಿತಿ ನನಗೆ ಬಂದದ್ದು ಯಾತಕ್ಕೆ ಎಂದು ನಿಮಗೆ ಗೊತ್ತಾಗಿರಬಹುದು. ಜಗತ್ತು ದುಂಡಗಿದೆ. ತಿರುಗಿ ತಿರುಗಿ ಕೊನೆಗದು ನಾನಿರುವೆಡೆಗೇ ಬಂದು ನಿಲ್ಲುತ್ತೆ. ಅದೇ ರೀತಿ ಇಂಟರ್‌ನೆಟ್ಟು ನಾವು ಬೇಡವೆಂದರೂ ಎಲ್ಲವನ್ನು ಕೊಡುತ್ತದೆ. ಹಾಗೆ ಸುಮ್ಮನೇ..

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more