ಹೊಸವರ್ಷ 2007ರ ಮಡಿಲಲ್ಲಿ ಒಂದು ಹಿಡಿ ಆತ್ಮವಿಶ್ವಾಸ...

Telling with Roses ಮುಳುಗದಿರು; ಜೀವನದ ತೆರೆಯ ಮೇಲಿಜುತಿರು
ಒಳಿತನಾಗಿಸು. ಕೊಡುತ ಕೊಳುತ ಸಂತಸವ
ಕಸವಳಂಬಡತೆ ನಡೆ ಕಡೆಯ ಕರೆ ಬಂದಂದು
ಮಿಳಿತನಿರು ವಿಶ್ವದಲಿ -ಮಂಕುತಿಮ್ಮ

2006ಕ್ಕೆ ವಿದಾಯ ಹೇಳಿ, 2007ನ್ನು ಸ್ವಾಗತಿಸುವ ಖುಷಿ, ಸಡಗರ, ಸಂಭ್ರಮ, ಸಂತೋಷ, ರೋಮಾಂಚನ ಎಲ್ಲರದು. ನಮ್ಮೆಲ್ಲರದು. ಕರ್ನಾಟಕ ಸೇರಿದಂತೆ, ಹೊಸವರ್ಷ ಸ್ವಾಗತಿಸಲು ಜಗತ್ತು ಸಜ್ಜಾಗಿದೆ. ರಂಗುರಂಗಿನ ಪೋಷಾಕು ತೊಟ್ಟು ‘2007’ ಕಣ್‌ಕುಕ್ಕುತ್ತಿದೆ!

‘ಹೊಸ ವರ್ಷ ಭಾಗ್ಯ ತರಲಿ, ಶುಭ ತರಲಿ’ ಎನ್ನುವ ಪ್ರೀತಿಯ ಹಾರೈಕೆ, ಮುರಿದ ಕನಸುಗಳಿಗೆ ಈ ವರ್ಷ ಜೀವ ತುಂಬುತ್ತೇನೆ ಎಂಬ ವಿಶ್ವಾಸ-ಕನಸು ಯಾರಿಗಿಲ್ಲ... ಅಂತಹ ಕನಸುಗಳೇ ಅಲ್ಲವೇ ಎಲ್ಲರನ್ನೂ ಜೀವಂತವಾಗಿಡುವುದು... ಇವುಗಳ ಜೊತೆಗೆ ನಾನೇನು ಎಂಬುದನ್ನು ಜಗತ್ತಿಗೆ ತೋರಿಸಿಯೇ ತೀರುತ್ತೇನೆ ಎಂಬ ಹಟ ಮತ್ತು ತಪಸ್ಸನ್ನು ದಕ್ಕಿಸಿಕೊಳ್ಳಲು ನಾವೆಲ್ಲರೂ ಪ್ರಯತ್ನಶೀಲರಾಗೋಣ.

ಕಳೆದ ವರ್ಷ ನಾವು ಪಡೆದದ್ದೇನು? ಕಳೆದುಕೊಂಡದ್ದೇನು? ಅದಕ್ಕೆ ಯಾರು ಹೊಣೆ? -ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡಾಗ, ಸುಂದರ ನಾಳೆಗಳನ್ನು ಕಟ್ಟುವ ಕೆಲಸ ಸುಲಭವಾಗುತ್ತದೆ. ನಮ್ಮಗಳ ರಗಳೆಯಲ್ಲಿಯೇ ಮೈಮರೆಯದೇ, ಜಗತ್ತಿನತ್ತಲೂ ನೋಡೋಣ. ಜಗತ್ತಿನಿಂದ ಏನೆಲ್ಲವನ್ನೂ ಪಡೆದ ನಾವು, ಒಂದಿಷ್ಟದಾದರೂ ಋಣ ತೀರಿಸಲು ಮನಸ್ಸು ಮಾಡೋಣ.

ನಿನ್ನೆ ಚೆನ್ನಾಗಿತ್ತು ಎಂದು ನಿನ್ನೆಯಲ್ಲಿ ಕಳೆದುಹೋಗದೇ, ನಾಳೆ ಹೇಗಿರುತ್ತದೆಯೋ ಎಂಬ ಕಳವಳದಲ್ಲಿ ಕಣ್ಮರೆಯಾಗದೇ, ಈದಿನದ ಈ ಕ್ಷಣಗಳನ್ನು ನಮ್ಮದಾಗಿಸಿಕೊಳ್ಳೋಣ... ಆ ಶಕ್ತಿ ಎಲ್ಲಿಂದಲೋ ಬರಲಿ ಎಂದು ಬಯಸುವುದಕ್ಕಿಂತ, ನಮಗೆ ನಾವೇ ತುಂಬಿಕೊಳ್ಳೋಣ...

ನೂತನ ವರ್ಷವನ್ನು ಪ್ರೀತಿಸೋಣ... ಸುಂದರ ಜಗತ್ತನ್ನು ಕಟ್ಟೋಣ... ಓದುಗರು, ಜಾಹೀರಾತುದಾರರು, ಲೇಖಕರು ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

-ಸಂಪಾದಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+