• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌.ಕೆ ಶಾಮಸುಂದರ

By Staff
|

ಉದಯ್‌ ಜಾದೂಗಾರ್‌ಗಿಂತಲೂ ಮ್ಯಾಜಿಕ್‌ ಮಾಡೋದರಲ್ಲಿ ಟಿ.ಎನ್‌.ಸೀತಾರಾಮ್‌ ಕಡಿಮೆಯೇನಿಲ್ಲ! ಅವರ ಸೀರಿಯಲ್‌ಗಳು ಶುರುವಾದರೇ, ವೀಕ್ಷಕರ ದಿನಚರಿಯೇ ಅದಲುಬದಲು. ಅವರ ಸೀರಿಯಲ್‌ ನೋಡದಿದ್ದರೇ ಏನೋ ನಷ್ಟವಾದಂತೆ ಭಾವನೆ! ಇಂಥ ಸೀತಾರಾಮ್‌ ಬೆಳ್ಳಿತೆರೆಗೆ ಮರಳಿದ್ದಾರೆ. ಕಿರುತೆರೆಯ ಯಶಸ್ಸನ್ನು ಈ ಸಲ ಹಿರಿತೆರೆಯಲ್ಲೂ ಕಾಣುತ್ತೇನೆ ಎಂಬ ಹುರುಪಿನಲ್ಲಿದ್ದಾರೆ. ಸೀತಾರಾಮ್‌ ಈ ಸಲ ಗೆದ್ದೇ ಗೆಲ್ತಾರೆ.. ಅವರ ಚಿಂತನೆ, ಆಲೋಚನೆಗಳು ಬದಲಾಗಿವೆ. ಈ ಮಾತಿಗೆ ನಾಯಕಿ ಪಾತ್ರಕ್ಕೆ ಆಯ್ಕೆಗೊಂಡಿರುವ ರಕ್ಷಿತಾನೇ ಸಾಕ್ಷಿ!

S.K.Shama Sundara ಎಸ್‌.ಕೆ ಶಾಮಸುಂದರ
shama@oneindia.in

T.N. Seetaramದೂರದರ್ಶನ ಮತ್ತು ಈಟಿವಿ ವಾಹಿನಿ ಮೂಲಕ ಕನ್ನಡಿಗರಿಗೆ ಟೆಲಿ ಧಾರಾವಾಹಿಗಳ ಬಗ್ಗೆ ಸಾಮಾಜಿಕ ಅಭಿರುಚಿಯ ಹುಚ್ಚು ಹಿಡಿಸಿದವರು ಟಿ.ಎನ್‌. ಸೀತಾರಾಮ್‌.

ಅವರ ನಿರ್ದೇಶನದಲ್ಲಿ ನಯಾಗರದಂತೆ ಸುರಿದು ಹರಿದ ಮಾಯಾಮೃಗ, ಮನ್ವಂತರ, ಮುಕ್ತ ಧಾರಾವಾಹಿಗಳು ಕರ್ನಾಟಕದಲ್ಲಿ ಮನೆಮಾತು. ಮನೆಮಾತು ಯಾಕೆಂದರೆ ರಾತ್ರಿ 9ರಿಂದ ಎಪಿಸೋಡ್‌ ಮುಗಿಯುವ ತನಕ ಯಾರ ಮನೆಗಳಲ್ಲೂ ಮಾತೇ ಇರುತ್ತಿರಲಿಲ್ಲ.

ಸಾಮಾಜಿಕ ಸಮಸ್ಯೆಗಳನ್ನು, ನಮ್ಮನಿಮ್ಮೆಲ್ಲರ ಮನೋವ್ಯಾಪಾರಗಳನ್ನು, ದ್ವಂದ್ವಗಳನ್ನು ಮತ್ತೆಲ್ಲ ಮಾನವ ಸಹಜ ಸಂಕೀರ್ಣತೆಗಳನ್ನು ಮನಮುಟ್ಟುವಂತೆ ಚಿತ್ರಿಸುವುದರಲ್ಲಿ ಅವರದು ಎತ್ತಿದ ಕೈ. ಅದರಲ್ಲೂ ಆಧುನಿಕ ಭಾರತದ ಸಂದರ್ಭದಲ್ಲಿ ನಿಸ್ಸಹಾಯಕತೆಗೆ, ಸತ್ಯಸಂಧತೆಗೆ ಯಾವತ್ತೂ ವಿರುದ್ಧವಾಗಿ ವರ್ತಿಸುವ ರಾಜಕೀಯ ಕುಟಿಲೋಪಾಯಗಳನ್ನು ಅವರು ಸಮರ್ಥವಾಗಿ ನಿರೂಪಿಸಬಲ್ಲರು. ನೀವು ಇತ್ತೀಚೆಗೆ ಮುಕ್ತಾಯಗೊಂಡ ‘ಮುಕ್ತ’ ಧಾರಾವಾಹಿ ಗಮನಿಸಿದ್ದರೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.

ಸೀತಾರಾಮ್‌ ಮೂಲತಃ ನಾಟಕಕಾರ, ಬರಹಗಾರರಾದರೂ ಅವರೊಳಗೆ ಅಡಗಿರುವನೊಬ್ಬ ಪತ್ರಕರ್ತ ಸದಾ ಜಾಗೃತನಾಗಿರುವನು. ಕಥೆ, ಸಂಭಾಷಣೆ, ಸಂಗೀತ ಮತ್ತು ಚಿತ್ರೀಕರಣ ಮಾಧ್ಯಮವನ್ನು ನಿಖರ ಉದ್ದೇಶಗಳಿಗೆ ದುಡಿಸಿಕೊಂಡ ಪ್ರಭಾವಿ ಪತ್ರಕರ್ತ ಸೀತಾರಾಮ್‌. ಅವರ ಉದ್ದೇಶವಾದರೂ ಏನು? ‘ಮನ್ವಂತರ’ ಧಾರಾವಾಹಿಯ ಈ ಶೀರ್ಷಿಕೆ ಗಾನವೇ ಸಾಕು :

ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ..
..ಹಾಡು ಬಾ ಮನ್ವಂತರವೇ ಮರೆತ ಗಾನದೆಳೆಯ..

ಇಂಥ ಸೀತಾರಾಮು ಇದೀಗ ಹಿರಿತೆರೆಗೆ ಜಂಪಾಗುತ್ತಿರುವುದು ಇದೀಗ ತಾನೇ ಲಭ್ಯವಾಗಿರುವ ಸುದ್ದಿ. ಸದ್ಯಕ್ಕೆ ಕಿರುತೆರೆಗೆ ಟಾಟಾ ಹೇಳಿರುವ ಅವರು ಕನ್ನಡ ಚಿತ್ರ ಪರದೆಯನ್ನು ಮತ್ತೆ ಜಗ್ಗಲು ಸಿದ್ಧರಾಗಿದ್ದಾರೆ.

Rakshitaಅವರ ಸಿನಿಮಾಗೆ ಅವರದ್ದೇ ಕಥೆ. ನಿಸ್ಸಂದೇಹ. ಕಥೆ, ಚಿತ್ರಕಥೆ ಸಿದ್ಧವಾಗಿದ್ದು ಚಿತ್ರೀಕರಣ ನವಂಬರ್‌ನಲ್ಲಿ ಯಾವ ದಿನವಾದರೂ ಆರಂಭವಾಗಬಹುದು. ಚಿತ್ರದ ಉಳಿದ ಅಂಶಗಳ ಬಗ್ಗೆ ಸೀತಾರಾಮ್‌ ಇನ್ನೂ ವಿವರಗಳನ್ನು ಬಹಿರಂಗ ಮಾಡಿಲ್ಲವಾದರೂ ನಾಯಕ-ನಾಯಕಿ ಪಾತ್ರಕ್ಕೆ ಆಯ್ಕೆ ಸಿಂಧುವಾಗಿದೆ. ಮೋಹಕ ಬೆಡಗಿ ರಕ್ಷಿತಾ ಮತ್ತು ಸುಂದರಾಂಗ ಮಿಥುನ್‌ ತೇಜಸ್ವಿ ಜೋಡಿ ಅಣಿಯಾಗಿದೆ.

ಎಂಟಿವಿ, ಎನ್‌ಡಿಟಿವಿ, ಇಎಸ್‌ಪಿನ್‌ ಮುಂತಾದ ಚಾನಲ್‌ಗಳನ್ನು ಬದಿಗಿಟ್ಟು ಕನ್ನಡ ಕಾರ್ಯಕ್ರಮಗಳನ್ನು ಒತ್ತಾಸೆಯಿಂದ ವೀಕ್ಷಿಸುವಂತೆ ಕನ್ನಡಿಗರನ್ನು ಹುರಿದುಂಬಿಸಿದ ಸೀತಾರಾಮ್‌ ಕೊಡುತ್ತಿರುವ ಚಲನಚಿತ್ರದ ಬಗ್ಗೆ ಸಹಜವಾಗಿಯೇ ಕುತೂಹಲ ಇರುತ್ತದೆ, ಇರಬೇಕು.

ಎಂಥ ಕುತೂಹಲವೆಂದರೆ ಕನ್ನಡಿಗರು ಪಲ್ಲವಿ, ಗ್ಯಾಲಕ್ಸಿ, ಆದರ್ಶ, ನಟರಾಜ್‌, ನಾಗ, ಅಜಂತ ಟಾಕೀಸಿಗೆ ಹೋಗುವುದನ್ನು ಒಂದು ದಿವಸವಾದರೂ ನಿಲ್ಲಿಸಿ ಕನ್ನಡ ಪ್ರೇಮಿ ಚಿತ್ರಮಂದಿರಗಳ ಕಡೆಗೆ ಹೆಜ್ಜೆ ಹಾಕುತ್ತಾರಾ? ಎನ್ನುವುದು.

ಪೂರಕ ಓದಿಗೆ :
ಛೆ, ‘ಮುಕ್ತ’ಕೂ ್ಕ ಮುಕಾ ್ತಯವೇ?

Thank you for choosing Thatskannada
shami.sk@greynium.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more