ಮಗುವಿನ ಮುಖದಲ್ಲಿ ನಗು ಅರಳಿಸಿದ ಪುಣ್ಯ ನಿಮ್ಮದಾಗಲಿ...


ಎಲ್ಲಕ್ಕಿಂತ ಪ್ರಾಣ ದೊಡ್ಡದು. ಈ ಮಗುವಿನ ತಾಯಿಗೆ, ಅವಳ ಕರುಳಿನಕರೆ ಇನ್ನೂ ದೊಡ್ಡದು! ಕರುಳು-ಬಳ್ಳಿಗಳ ಕಾಯುವ ನಿಮ್ಮಂತಹ ದಾನಿಗಳ ದಯೆ; ಇನ್ನೂ ದೊಡ್ಡದು!

You can bring the smile back on her face‘ನನ್ನ ಮಗಳು ಲಾರಿಸ್ಸಾ ಸಿಕ್ವೇರ 6 ವರ್ಷದವಳಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಎಲುಬಿನ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ ನರಳುತ್ತಿದ್ದಾಳೆ. ಇದೀಗ ರೋಗ ಉಲ್ಬಣಗೊಳ್ಳುತ್ತಿದೆ. ಚಿಕಿತ್ಸೆಗಾಗಿ ಇದುವರೆವಿಗೆ ನಾವು 4 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುತ್ತೇವೆ. ಇದೀಗ ಮುಂಬಯಿಯ ಟಾಟಾ ಆಸ್ಪತ್ರೆಯ ವೈದ್ಯರ ಪ್ರಕಾರ ಮುಂದಾಗಬೇಕಾದ ಎಲುಬಿನ ರಂಧ್ರದ ಟ್ರಾನ್ಸ್‌ಪ್ಲಾಂಟ್‌ ಚಿಕಿತ್ಸೆಗೆ (Autologous Peripheral Blood Stem Cell Transplantaion PBSCT)ಅಂದಾಜು 8 ಲಕ್ಷರೂಪಾಯಿ ಖರ್ಚಾಗಬಹುದು ಎಂದಿದ್ದಾರೆ.’

‘ಅವಳನ್ನು ಉಳಿಸಿಕೊಳ್ಳುವುದಕ್ಕೆ ನಮ್ಮ ಸರ್ವಸ್ವವನ್ನೂ ಮುಡಿಪಿಟ್ಟರೂ ಕೂಡ, ಆಸ್ಪತ್ರೆಯ ವೆಚ್ಚವನ್ನು ತೂಗಿಸುವುದು ಸಾಧ್ಯವಿಲ್ಲ . ಕೈ ಬಟ್ಟಬರಿದಾಗಿದೆ. ನನ್ನ ಪ್ರಯತ್ನಕ್ಕೆ ನೀವುಗಳೆಲ್ಲ ದಯಮಾಡಿ ಕೈಜೋಡಿಸಿ, ಬಲಪಡಿಸಿರಿ. ಪ್ರೀತಿಯ ನನ್ನ ಮಗಳನ್ನು ಉಳಿಸಿಕೊಡಿ.’

-ಕಳಸ ಸಮೀಪದ ಶ್ರೀ ಅನ್ನಪೂರ್ಣೆಶ್ವರಿ ಕ್ಷೇತ್ರದ ಹೊರನಾಡು ವಾಸಿ ಹೆಣ್ಣುಮಗಳು ನನಗೆ ಬರೆದ ಈ ಮೇಲಿನ ಪತ್ರ ಓದಿದ ಒಂದು ಕ್ಷಣ ಮೈ ಝುಂ ಎಂದಿತು. ಆಕೆ ಈಗ ಮುಂಬಯಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಗಳನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ.

ಅಲ್ಲಿಂದ ನನಗೆ ಬರೆದಿರುವ ಈ ಪತ್ರದ ಜತೆ ಟಾಟಾ ಆಸ್ಪತ್ರೆಯ ರಿಜಿಸ್ಟ್ರಾರ್‌ ಡಾ. ಎಚ್‌.ಕೆ.ವಿ.ನಾರಾಯಣ್‌ ಮತ್ತು ಮೆಡಿಕಲ್‌ ಆನ್‌ಕಾಲಜಿಸ್ಟ್‌ ಫಿಸಿಶಿಯನ್‌ ಡಾ.ಆಶೀಶ್‌ ಭಕ್ಷಿ ಅವರುಗಳು ಜಂಟಿಯಾಗಿ ಕೊಟ್ಟಿರುವ ಮೆಡಿಕಲ್‌ ರಿಪೋರ್ಟ್‌ ಮತ್ತು ಚಿಕಿತ್ಸೆಗೆ ತಗಲುವ ಖರ್ಚುವೆಚ್ಚದ ಅಧಿಕೃತ ವಿವರಗಳನ್ನು ಲಗತ್ತಿಸಿದ್ದಾರೆ.

ಅಂತೆಯೇ, ದಾನಿಗಳು ಚೆಕ್‌ ಅಥವಾ ಡಿಮಾಂಡ್‌ ಡ್ರಾಫ್ಟ್‌ ಮೂಲಕ ಹಣಕಳಿಸುವ ಮಾರ್ಗಗಳನ್ನೂ ತಿಳಿಸಿಕೊಟ್ಟಿದ್ದಾರೆ. ಚೆಕ್‌, ಡ್ರಾಫ್ಟ್‌ ಪೋಸ್ಟ್‌ ಮಾಡುವಾಗ ನಿಮ್ಮ ಕವರಿಂಗ್‌ ಲೆಟರ್‌ನಲ್ಲಿ ಮಗುವಿನ ಹೆಸರು ಮತ್ತು ಕೇಸ್‌ ನಂ. ಸ್ಪಷ್ಟವಾಗಿ ನಮೂದಿಸಿರಿ.

ಅದು ಇಂತಿದೆ :

How to Send Money

Dear Friends,

We appreciate your warm response to help support Baby Larissa in the grip of Bone Cancer. We have made a case study about various modes of transfering money to reach the patient admitted to the hospital in Mumbai.

Simple, effective and safe mode of money transfer is a follows :

Please write a crossed cheque favoring :
TATA MEMORIAL HOSPITAL, MUMBAI

If you prefer to raise a Demand Draft then also raise it in favor of

TATA MEMORIAL HOSPITAL MUMBAI
(payable at Central Bank of India, Naigaun Extn counter, Mumbai.)

Then the Check or Draft should be sent by courier/post/Airmail addressed to:

The Medical Superintendent
TATA Memorial Hospital,
Case No: BX18320, A/C No : 13854
Dr. Ernest Borges Marg, Parel,
Mumbai- 400012, India

Kindly write a covering letter explaining info about the beneficiary, like:

Dear Sir,

Here with I am sending a Check/Draft to your hospital in response to an appeal published on www.Thatskannada.com, Bangalore

(/column/sham/
211206Larissa_Sequeira.html
)

This amount xxxx is towards the treatment of the baby
Larissa Sequeira, Case No : BX 18320, Hospital A/C No. 13854

Kindly Acknowledge receipt of the same.

Thank you
xxxxx

*Dear Browser please note : Online money Transfer is not prefered and advised for logistical reasons....


ದಟ್ಸ್‌ಕನ್ನಡ ಚಾರಣಿಗ ಬಳಗದವರು ಈ ವಿನಂತಿಗೆ ಓಗೊಡುತ್ತಾರೆಂಬ ವಿಶ್ವಾಸ ನನ್ನದು. ನೀವು ಹಣ ಕಳಿಸಿದರೆ ದಯವಿಟ್ಟು ಆ ಬಗ್ಗೆ ನನಗೂ ಒಂದು ಮಾತು ಬರೆದು ಇ-ಮೇಲ್‌ ಮೂಲಕ ತಿಳಿಸಿರಿ. ಮಗುವಿನ ಚಿಕಿತ್ಸೆ ಆರೈಕೆ ಮತ್ತು ಪುನರಾರೋಗ್ಯದ ಬಗ್ಗೆ ನಾನು ಗಮನ ಇಡಬೇಕು. ಮಗು ಹೊರನಾಡಿಗೆ ಮರಳಿದ ನಂತರ ಅಲ್ಲಿಗೆ ಹೋಗಿ ಮತ್ತೆ ನಗುವ ಲಾರಿಸ್ಸಾಳ ಫೋಟೋ ತೆಗೆದು ತಂದು ನಿಮಗೆ ತೋರಿಸಬೇಕು...

ಇನ್ನಷ್ಟು ವಿವರ ಮತ್ತು ಈಗಿನ ಸಮಾಚಾರ :

ಲೇಖನ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಓದುಗರು ಜಾಗೃತರಾಗಿದ್ದಾರೆ. ಸಂಕಷ್ಟದಲ್ಲಿರುವ ಮಗು ಲಾರಿಸ್ಸಾಳಿಗೆ ಸಹಾಯ ಮಾಡಿ ಎಂಬ ಕರೆಗೆ ಪ್ರತಿಸ್ಪಂದನ ಉತ್ತಮವಾಗಿದೆ. ಈ ಬಗ್ಗೆ ಇನ್ನಷ್ಟು ವಿವರಗಳನ್ನು ಕೋರಿ, ಓದುಗರು ಪತ್ರ ಬರೆಯುತ್ತಿದ್ದಾರೆ. ಆನ್‌ಲೈನ್‌ ಮೂಲಕ ಹಣ ರವಾನೆ ಮಾಡಬಹುದೆ? ಯಾವ ಬ್ಯಾಂಕಿನ ಮೂಲಕ ಹಣ ಕಳುಹಿಸಬಹುದು ಎನ್ನುವಂತಹ ಪ್ರಶ್ನೆಗಳನ್ನು ನಮ್ಮ ಮುಂದಿದ್ದಾರೆ. ಈ ಬಗ್ಗೆ ಅಗತ್ಯ ವಿವರಗಳು ಹೀಗಿವೆ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+