ಸಿಟಿ ಬ್ಯಾಂಕಿನ ಇಮೇಲ್ ವಿಳಾಸಗಳು....
ಸಿಟಿ ಬ್ಯಾಂಕಿನ ಇಂಗ್ಲಿಷ್ ಮತ್ತು ಹಿಂದಿ ಮೋಹವನ್ನು ಕಟುವಾಗಿ ಟೀಕಿಸುವವರ ಪತ್ರಗಳು ನಮತ್ತ ಬರುತ್ತಿವೆ. ಭಾರತೀಯ ಭಾಷೆಗಳ ಬಗೆಗಿನ ಇಂಥ ತಾತ್ಸಾರ, ಅಸಡ್ಡೆ ಮತ್ತು ಅಹಂಕಾರ ನಮ್ಮ ಅನೇಕ ಓದುಗರ ಕಣ್ಣನ್ನು ಕೆಂಪಾಗಿಸಿದೆ. ಇದು ಕೇವಲ ಸಿಟಿ ಬ್ಯಾಂಕಿನ ಕಥೆಯಲ್ಲ. ಕನ್ನಡವನ್ನು , ಕನ್ನಡಿಗರನ್ನು ವ್ಯಾಪಾರಿ ಮನೋಭಾವದಿಂದ ಮಾತ್ರ ಗುರುತಿಸುವ ಕಂಪನಿಗಳು, ವ್ಯಕ್ತಿಗಳ ಪಟ್ಟಿ ಹನುಂತನ ಬಾಲದಷ್ಟು ಉದ್ದವಿದೆ ಎಂದು ಹೇಳುತ್ತಿದ್ದಾರೆ, ಜನ.
‘ಇಂಥವರ ಬಾಲ ಕಟ್ ಮಾಡಬೇಕು , ಅದಕ್ಕೆಲ್ಲ ನಾವು ಅವಿರತ ಸಾಂಘಿಕವಾಗಿ ಹೋರಾಡಬೇಕು’ ಎಂದು ನಮ್ಮ ಅನೇಕ ಓದುಗರು ಆಗ್ರಹಪಡಿಸುವುದರ ಜತೆಗೆ... ‘ಎಲ್ಲಿ ಆ ಸಿಟಿ ಬ್ಯಾಂಕಿನ ಇ-ಮೇಲ್ ವಿಳಾಸ ಕೊಡಿ ..ನಾವು ತರಾಟೆಗೆ ತೆಗೆದುಕೊಳ್ಳುತ್ತೇವೆ’ ಎಂದು ಕೇಳಿದ್ದಾರೆ. ಅಂಥವರ ಉಪಯೋಗಕ್ಕಾಗಿ ಸಿಟಿ ಬ್ಯಾಂಕಿನ ಕೆಲವು ಇ-ಮೇಲ್ ಐಡಿಗಳನ್ನು ಇಲ್ಲಿ ಕೊಡಲಾಗಿದೆ -ಸಂಪಾದಕ.
[email protected] or [email protected], or [email protected] or [email protected]












Click it and Unblock the Notifications