ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಕೆ. ಶಾಮಸುಂದರ

By ಎಸ್‌.ಕೆ. ಶಾಮಸುಂದರ
|
Google Oneindia Kannada News

Harihareshwara visiting California
ನಿಂದ RNRI ಪಟ್ಟಕ್ಕೆ ಪರಿವರ್ತನೆಗೊಂಡ ಹರಿ ಮತ್ತೆ ಅಮೆರಿಕಾಗೆ!! ಕನ್ನಡ ಲೇಖಕರೊಂದಿಗೆ ಇತ್ತೀಚಿನ ಒಡನಾಟ ಕುರಿತು ಅಲ್ಲಿ ಹೊಸ ಮಾತು-ಕತೆ

ಅಮೆರಿಕಾದ ನಾನಾ ಪ್ರಾಂತ್ಯಗಳಲ್ಲಿ ಸರಿಸುಮಾರು 27ವರ್ಷ ಜೀವನ ಸಾಗಿಸಿ ಸ್ವಇಚ್ಛೆಯಿಂದ ಸ್ವದೇಶ ಭಾರತಕ್ಕೆ ಮರಳಿದ ಬೆರಳಿಕೆಯಷ್ಟು ಮಂದಿಯಲ್ಲಿ ಶಿಕಾರಿಪುರ ಹರಿಹರೇಶ್ವರ ಒಬ್ಬರು. ಅವರು ಅಮೆರಿಕೆಯಲ್ಲಿ ಸಿವಿಲ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು ಎನ್ನುವ ಸಂಗತಿ ಎಷ್ಟೋ ಮಂದಿಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಅವರು ಯಾವತ್ತೂ ಡ್ರಾಯಿಂಗು, ಸೀಮೆಂಟು, ಕಾಂಕ್ರೀಟು ಅಥವಾ ಸ್ಟೀಲು ಬಗ್ಗೆ ಚಕಾರವೆತ್ತಿದವರಲ್ಲ. ಎಲ್ಲಿ ಹೋದರೂ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡ ಬರವಣಿಗೆ, ಕನ್ನಡ ಸಂಸಾರಗಳೊಂದಿಗೆ ಸ್ನೇಹ ...ಹೀಗೆ ಕನ್ನಡಮಯವೇ ಆಗಿದ್ದವರು. ಪತ್ರಕರ್ತರಾಗಿ, ಸಂಶೋಧಕರಾಗಿ, ಸಾಹಿತ್ಯ ಪರಿಚಾರಕರಾಗಿ, ಅಂಕಣಕಾರರಾಗಿ ಅವರ ಕನ್ನಡ ವಿಶ್ವ ವಿಶಾಲವಾದದ್ದು .

ಉತ್ತರ ಕ್ಯಾಲಿಫೋನಿಯಾದ ಸ್ಟಾಕ್‌ಟನ್‌ನಲ್ಲಿದ್ದ ತಮ್ಮ ಮನೆಯನ್ನು ಮಾರಿ ಗಂಟುಮೂಟೆ ಕಟ್ಟಿಕೊಂಡು ಅವರು ಮೈಸೂರಿಗೆ ಮರಳಿ ಈಗ್ಗೆ ಎರಡು ವರ್ಷ ತುಂಬುತ್ತಾ ಬಂದಿದೆ. ಅವರು ಹಾಗು ಅವರ ಹೆಂಡತಿ ನಾಗಲಕ್ಷ್ಮಿ ಮೈಸೂರಿನಲ್ಲಿ ವಾಸವಾಗಿದ್ದು ನಿವೃತ್ತ ಜೀವನವನ್ನು ಭಾರತದಲ್ಲಿ ಸಂತೋಷದಿಂದ ನೀಗಿಕೊಳ್ಳುವ ಕಾಯಕದಲ್ಲಿ ತೊಡಗಿದ್ದಾರೆ.

ನಿವೃತ್ತ ಜೀವನ ಎಂದರೆ ಈಜಿ ಛೇರ್‌ ಮೇಲೆ ಕುಳಿತು ಕಾಲು ಅಲ್ಲಾಡಿಸುತ್ತಾ ವೃತ್ತ ಪತ್ರಿಕೆ ಓದುವುದು ಎಂದು ಹರಿ ದಂಪತಿಗಳು ನಂಬಿದವರಲ್ಲ. ಭಾರತಕ್ಕೆ ಮರಳಿದ ಮೇಲೆ ಅವರ ಕನ್ನಡ ಚಟುವಟಿಕೆಗಳು ದುಪ್ಪಟ್ಟಾಗಿವೆ. ನಿತ್ಯ ಯಾವುದಾದರೊಂದು ಕನ್ನಡ ಕಾರ್ಯಕ್ರಮದಲ್ಲಿ ಭಾಷಣ, ಚರ್ಚೆ, ಹೊಸ ಪುಸ್ತಕದ ಓದಿನಲ್ಲಿ ದಂಪತಿಗಳು ಸಂತೋಷ ಕಾಣುವರು. ಊರಿನಲ್ಲಿ ಏನೂ ಕಾರ್ಯಕ್ರಮ ಇಲ್ಲದಿದ್ದರೆ ತಮ್ಮ ಮನೆಯಲ್ಲೇ ಒಂದು ಕಾರ್ಯಕ್ರಮ ಏರ್ಪಡಿಸುವರು. ಸಾಹಿತ್ಯ, ಸಂಗೀತ, ಸಂಸ್ಕೃತಿಯ ಅಭಿರುಚಿ ಇರುವ ಜನರನ್ನು ಆಹ್ವಾನಿಸಿ ಚರ್ಚೆ, ಸಂವಾದ ನಡೆಸಿ ಒಳ್ಳೆ ಊಟಹಾಕಿ ಒಂದು ಕನ್ನಡ ಪುಸ್ತಕ ಕೈಗಿಟ್ಟು ಬೀಳ್ಕೊಡುವರು.

ಇಂಥ ಹರಿ-ನಾಗ ದಂಪತಿಗಳಿಗೆ ಸುಮನಾ, ನಂದಿನಿ ಹೆಸರಿನ ಇಬ್ಬರು ಹೆಣ್ಣು ಮಕ್ಕಳು. ಅವರಿಬ್ಬರು ಅಮೆರಿಕದಲ್ಲೇ ಇದ್ದಾರೆ ಎಂದು ಹೇಳುವ ಅಗತ್ಯವಿಲ್ಲ. ತಂದೆಯ ಎದೆಮಟ್ಟಕ್ಕೆ ಬೆಳೆದು ನಿಂತಿರುವ ಮಕ್ಕಳು ವಿದ್ಯಾರ್ಜನೆ ಪೂರೈಸಿ, ಅಮೆರಿಕದಲ್ಲಿ ತಮಗೊಪ್ಪುವ ನೌಕರಿ ಕಂಡುಕೊಂಡಿರುವರು.

ಮಕ್ಕಳನ್ನು ಒಮ್ಮೆ ನೋಡಿಕೊಂಡು ಬರುವ ಜವಾಬ್ದಾರಿ ತಂದೆಯ ಕೆಲಸವನ್ನು ನಿರ್ವಹಿಸಲು ಹರಿ ಅವರು ಪ್ರಸಕ್ತ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಅವರಿಗೆ ಆಗಲೂ, ಈಗಲೂ, ಯಾವಾಗಲೂ ಕನ್ನಡದ ಕನಸುಗಳು. ಅಂತೆಯೇ ಕ್ಯಾಲಿಫೋರ್ನಿಯಾ ದ ಹಳೆ ಗೆಳೆಯರು, ಹಾಗೂ ಕನ್ನಡಾಭಿಮಾನಿಗಳ ಜತೆ ಬೆರೆತು ಇತ್ತೀಚೆಗೆ ತಾವು ಕಂಡುಂಡ ಭಾರತದ ಅನುಭವಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುತ್ತಿದ್ದಾರೆ.

ಆ ಕಾರ್ಯಕ್ರಮ ಇದೇ ಶನಿವಾರ ಮಾರ್ಚ್‌ 12ರಂದು ಬೇ ಏರಿಯಾದಲ್ಲಿ ವ್ಯವಸ್ಥೆಯಾಗಿದೆ. ಹರಿ ಅವರು ಪಾಲ್ಗೊಳ್ಳುತ್ತಿರುವ ಅನೌಪಚಾರಿಕ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಲು ಆಯ್ದುಕೊಂಡಿರುವ ವಿಷಯ ; 'ನಮ್ಮ ಕನ್ನಡ ಲೇಖಕರರೊಂದಿಗೆ ನಾನು ಕಳೆದ ಇತ್ತೀಚಿನ ದಿನಗಳು'

ಕರ್ನಾಟಕದಲ್ಲಿ ನೆಲೆಸಿರುವ ಕನ್ನಡಿಗರ ಇವತ್ತಿನ ಮನೋಧರ್ಮ, ಕನ್ನಡ ಲೇಖಕರ ಸ್ಥಿತಿ ಗತಿ, ಸಾಹಿತ್ಯ ಕೃಷಿ, ಮುದ್ರಣ, ಪ್ರಕಾಶನ ಮುಂತಾದ ವಿಷಯಗಳ ಬಗ್ಗೆ ಅವರು ಮಾತನಾಡುವರು. ಕನ್ನಡ ಭಾಷೆ, ಬರವಣಿಗೆಯಲ್ಲಿ ಆಸಕ್ತಿ ಇರುವವರು ಕನ್ನಡದ ಬಗ್ಗೆಯೂ, ಆಸಕ್ತಿ ಇಲ್ಲದವರು 'ಭಾರತಕ್ಕೆ ಮತ್ತೆ ನೀವು ಹೇಗೆ ಹೊಂದಿಕೊಂಡಿರಿ ' ಎಂಬ ಪ್ರಶ್ನೆಯಾಂದಿಗೆ ಮಾತು ಆರಂಭಿಸಿ ಚರ್ಚೆ ಬೆಳೆಸಬಹುದು.

Venue : Cedar Room, Santa Clara Central Library,
2635 Homestead Road, Santa Clara, CA 95051

Time : between 10am and 12pm

Mr. Harihareshwara now staying with Raj and Vijaya Joshi in Lafayette, North California: phone: (925-934-9919)

About Harihareshwara:
/category/hellokannada/hari.html
/sahitya/nri2/1110hari.html

Thank you for choosing Thatskannada.com
[email protected]

English summary
My recent days with our Kannada writers A lecture in Kannada and an informal get together with Shri Harihareshwara in Bay Area
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X