ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

*ಎಸ್ಕೆ.ಶಾಮಸುಂದರ

By Staff
|
Google Oneindia Kannada News
Sampige marada hasirele naduve...
‘ಅಕ್ಕ ’ ಅಧಿಕಾರಶಾಹಿ ವಿರುದ್ಧ ಬಂಡಾಯದ ಮೂರು ಬಾವುಟ

*ಎಸ್ಕೆ.ಶಾಮಸುಂದರ

V.N.Kumara Swamyಜಾತ್ರೆ ಮುಗಿದರೂ ನೆನಪು ಅಳಿಯುವುದಿಲ್ಲ. ಬೆಂಡು ಬತ್ತಾಸಿಗೆ ಕೊರೆ ಆಯಿತೆಂದು ಮಗ ಅಳು ನಿಲ್ಲಿಸುತ್ತಿಲ್ಲ. ಹಾದಿಯಲ್ಲಿ ಕೊಂಡ ಬಲೂನು ಒಡೆದು ಹೋಯಿತಲ್ಲಾ !! ಗಿಳಿಯು ಪಂಜರದೊಳಿಲ್ಲ, ಅಕ್ಕ ..ಗಿಳಿಯು ಪಂಜರದೊಳಿಲ್ಲ !!

ಇಂಥದೊಂದು ಹಾಡನ್ನು ವಿಷಾದರಾಗದಲ್ಲಿ ಕೇಳುವ ಸಂದರ್ಭ ಕನ್ನಡಿಗರಿಗೆ ಮತ್ತೆ ಪ್ರಾಪ್ತವಾಗಿದೆ. ವಿಶೇಷವಾಗಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಿದ್ದ ಅನಿವಾಸಿ ಕನ್ನಡಿಗರು ಪಕ್ಕ ವಾದ್ಯಗಳಿಲ್ಲದೇ ತೇಲಿ ಬರುತ್ತಿರುವ ಸೈಬರ್‌ ಗೀತ ಪುಷ್ಪಗಳನ್ನು ಆಲಿಸಬೇಕಾಗಿದೆ.

ಹೌದು. ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಅಪಸ್ವರಗಳು ಕಾರ್ಯಕ್ರಮದ ಮುಂಚೆಯೇ ಕೇಳಿ ಬಂದಿದ್ದವು. ಈಗ ಕಾರ್ಯಕ್ರಮ ಮುಗಿದು ಮೂರು ತಿಂಗಳಾಗುತ್ತ ಬಂದ ಮೇಲೆ ಅಪಸ್ವರಗಳ ಜಾಗದಲ್ಲಿ ಆರೋಪಗಳು ಕೇಳಿ ಬರುತ್ತಿವೆ.

ಅಕ್ಕ ಅಧ್ಯಕ್ಷ ಅಮರ್‌ನಾಥ್‌ ಗೌಡ ಮತ್ತು ಅವರ ತಂಡದ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡುತ್ತಿರುವವರು ಅಕ್ಕ ನಿರ್ದೇಶಕ ಮಂಡಳಿಯಲ್ಲಿ ಒಬ್ಬರಾದ ವಿ.ಎಂ. ಕುಮಾರ ಸ್ವಾಮಿ, ಮತ್ತು ನ್ಯೂಜರ್ಸಿ ಕನ್ನಡ ಕೂಟ, ತ್ರಿವೇಣಿಯ ಅಧ್ಯಕ್ಷರಾದ ಹನಸೋಗೆ ಅಶ್ವಥನಾರಾಯಣ. ಇವರಿಬ್ಬರ ಜತೆಗೆ ದನಿ ಗೂಡಿಸುತ್ತಿರುವವರು ಟೊರೊಂಟೋದ ಡಾ.ರಾಜಶೇಖರ ಮೂರ್ತಿ.

ಡಿಸೆಂಬರ್‌ 16ರ ಸೋಮವಾರ ಮಧ್ಯಾನ್ಹ ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮರ್‌ನಾಥ್‌ ಗೌಡ ಆಡಳಿತ ವೈಖರಿ ಮತ್ತು ಅಕ್ಕ ಸಂಸ್ಥೆಯ ಒಲವು ನಿಲುವುಗಳ ನಡುವೆ ತಾವು ಕಂಡಿರುವ ವಿರೋಧಾಭಾಸಗಳನ್ನು ಮೇಲಿನ ಮೂವರು ಬಿಚ್ಚಿಟ್ಟರು.

ಅಕ್ಕ ಅಧ್ಯಕ್ಷರ ವಿರುದ್ಧ ದನಿ ಎತ್ತಿರುವ ಮೂವರು ಬಂಡುಕೋರ ಕನ್ನಡಿಗರ ಆರೋಪ ಪಟ್ಟಿಯನ್ನು ಈ ಕೆಳಗೆ ಕೊಟ್ಟಿದ್ದೇನೆ. ಜತೆಗೆ ಅಮರ್‌ನಾಥ್‌ ಗೌಡ ಅವರು ಈ ಆರೋಪಗಳಿಗೆ ಸೋಮವಾರ ಸಂಜೆ ದಟ್ಸ್‌ಕನ್ನಡ ಡಾಟ್‌ಕಾಂಗೆ ನೀಡಿರುವ ಸ್ಪಷ್ಟೀಕರಣವನ್ನು ಕೊಡಲಾಗಿದೆ. ಎರಡೂ ನಿಮ್ಮ ಪಾಲಿಗೆ.

  • ಅಮರ್‌ನಾಥ್‌ ಗೌಡರು ನಮ್ಮ ಯಾವುದೇ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲ. ಇ-ಮೇಲ್‌ಗೆ ಉತ್ತರಿಸುವುದಿಲ್ಲ. ಫೋನು ಮಾಡಿದರೆ ಪಿಳ್ಳೆ ನೆವ ಹೇಳಿ ರಿಸೀವರ್‌ ಇಟ್ಟುಬಿಟುತ್ತಾರೆ. - ಹನಸೋಗೆ
  • ಆದರೆ, ಅನ್ಯಥಾ ಮಾರ್ಗವಿಲ್ಲ.ಲೆಕ್ಕ ಪತ್ರಗಳಲ್ಲಿರುವ ದೋಷದ ಪ್ರಶ್ನೆ ಕೇಳುವುದು ನಮ್ಮ ಹಕ್ಕು. Corruption ನಡೆದಿದೆ ಎಂದು ನಾವು ಹೇಳುತ್ತಿಲ್ಲ. ಆದರೆ Amarnath Gowda is very irresponsible. A president has to be accountable for everything Hanasoge
  • There are many Kannadigas who loves to help poor people back home through Tecnology Transfer, Schools, hospitals etc., But neither AKKA nor Government of Karnataka have helped them to deliver goods. Social work loving people in North American States are left in the lurch Dr.Murthy.
  • This press conference is a like a notice to Amarnath Gowda. If he does not understand our intentions and act appropriately, I will be constrained to go to the Court of Law for redressal. I am even prepared to spend the required money to get justice Hanasoge
  • ಡೆಟ್‌ರಾಯಿಟ್‌ಗೆ ಬಂದ ಕಲಾವಿದರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ . ಇಲ್ಲಿಗೆ ಬಂದು ಅವರನ್ನೆಲ್ಲ ಸನ್ಮಾನ ಮಾಡುವುದರಲ್ಲಿ ಏನಾದರೂ ಅರ್ಥವುಂಟಾ, ಸ್ವಾಮಿ - ಕುಮಾರ ಸ್ವಾಮಿ
  • ಕನ್ನಡದ ನಿಜವಾದ ಪ್ರೇಮಿಗಳಾದ ನಾವು ಈ ವಿಷಯವನ್ನು ಹಾದಿರಂಪ ಬೀದಿರಂಪ ಮಾಡುವುದಕ್ಕೆ ಇಷ್ಟಪಡುವುದಿಲ್ಲ. We donot want to wash the dirty linen in public. We are very sorry about that VMK, HA, RM
ಅಮರ್‌ನಾಥ ಗೌಡ ಅವರ ಸ್ಪಷ್ಟೀಕರಣ

Amarnath Gowda

  • ಸಮ್ಮೇಳನದ ಎಲ್ಲ ಲೆಕ್ಕಪತ್ರಗಳು ಸರಿಯಾಗೇ ಇಟ್ಟಿದ್ದೇವೆ. After Final Audit ( By IRS Internal Revenue Sourses for nonprofit Organisations ) the accounts will be placed before the Board. However we have shown every thing on a power point in Conference hall. More over Ashwatnarayana is not in the Board..
ನಾನು ಅಧ್ಯಕ್ಷನಾಗಿ ಎಲ್ಲದಕ್ಕೂ ಹೊಣೆಗಾರ ನಿಜ. ಆದರೆ, ಎಲ್ಲರೂ ಎಲ್ಲವನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ. ಹಣದ ವಿಚಾರ ನೋಡಿಕೊಳ್ಳುವುದಕ್ಕೆ Finance Committee ಇದೆ. ಅವರು ಭಿನ್ನಮತೀಯರ ಸಂಭಾವ್ಯ ಪ್ರಶ್ನೆಗಳಿಗೆ ್ಫಉತ್ತರ ಕೊಡುತ್ತಾರೆ. The Audit is being done by BBK. ( Bahadur Management services)

  • ಇವರು ( ಕುಮಾರ ಸ್ವಾಮಿ, ಹನಸೋಗೆ) ಸಮ್ಮೇಳನಕ್ಕೆ ಮುಂಚೆಯೇ ಇಲ್ಲದ ತಕರಾರು ತೆಗೆದಿದ್ದರು. ಈಗ ಮತ್ತಷ್ಟು ಪ್ರಚಾರ ಸಿಗತ್ತೆ ಅಂತ ಮಾತಾಡ್ತಾ ಇದಾರೆ. ಅವರ ವಾದದಲ್ಲಿ ಹುರುಳಿಲ್ಲ.
  • ಸಾವಿರಾರು ಜನ ಸೇರಿದ ಕಡೆ ವ್ಯವಸ್ಥೆ ಮಾಡುವಾಗ ಒಂದೆರಡು ಲೋಪಗಳು ಉಧ್ಭವಿಸುವುದು ಸಹಜ. ಅದನ್ನೇ ದೊಡ್ಡದು ಮಾಡಿಕೊಂಡು ಹೇಳುತ್ತಾ ಬಂದರೆ ಯಾರು ಕೇಳ್ತಾರೆ ?
  • ಇದೇ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ಕಲಾವಿದರಿಗೆ ಸನ್ಮಾನ ಏರ್ಪಡಿಸಿರುವುದು ನಿಜ. ಅಮೆರಿಕಾದ ತನಕ ಬಂದು ಕನ್ನಡಿಗರನ್ನು ಸಂತೋಷಪಡಿಸಲು ಮುಂದಾದ ಕಲಾವಿದರು, ಗಾಯಕರಿಗೆ ಸನ್ಮಾನ ಮಾಡುವುದು ನಮ್ಮ ಹೆಮ್ಮೆ. ಈ ಕೆಲಸವನ್ನು ನಾನೊಬ್ಬನೇ ಮಾಡುತ್ತಿಲ್ಲ. ಇತರ ಪದಾಧಿಕಾರಿಗಳಾದ ಹಳೇಕೋಟೆ ವಿಶ್ವಾಮಿತ್ರ, ಕೃಷ್ಣಮೂರ್ತಿ, ಡಾ. ಕುದೂರು ಮುರಳಿ, ಡಾ. ರೇಣುಕಾ ರಾಮಪ್ಪ ಮುಂತಾದವರೆಲ್ಲ ಬಂಗಳೂರಿಗೆ ಬಂದಿದ್ದಾರೆ, ಬರುತ್ತಿದ್ದಾರೆ . ಕಲಾಭಿರುಚಿಯಲ್ಲೂ ತಪ್ಪು ಹುಡುಕುವುದ ಕಂಡು ನನಗೆ ವ್ಯಥೆ ಆಗುತ್ತಿದೆ.
  • ಸಮ್ಮೇಳನದ ಯಶಸ್ವಿಗಾಗಿ ನೂರಾರು ಜನ ಹಗಲಿರುಳು ದುಡಿದಿದ್ದಾರೆ. ಆದರೆ, ಇವರು ಬೆಂಗಳೂರಿನಲ್ಲಿ ಕುಳಿತು ಹಗುರವಾಗಿ ಮಾತನಾಡುತ್ತಿರುವುದು ಕೆಲಸ ಮಾಡಿದ ಎಲ್ಲರಿಗೂ ಅವಮಾನ ಮಾಡಿದಂತಾಗಿದೆ. ಕನ್ನಡಿಗರು ಹಾಗೂ ಕನ್ನಡನಾಡಿನ ಬಗ್ಗೆ ಇವರ ಪ್ರೀತಿ ಇಷ್ಟೇನಾ ?

Thank you for choosing Thatskannada.com
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X