• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

*ಎಸ್ಕೆ.ಶಾಮಸುಂದರಆಳದನುಭವವನ್ನುಮಾತುಕೈ ಹಿಡಿದಾಗಕಾವು ಬೆಳಕಾದಾಗಬಂದ ಕವನ-ಕೆ. ಎಸ್‌. ನರಸಿಂಹಸ್ವಾಮಿ

By Staff
|
ದಟ್ಸ್‌ಕನ್ನಡ ದೀಪಾವಳಿ

ಕವನ ಸ್ಪರ್ಧೆ-2002 !!

Sampige marada hasirele naduve... *ಎಸ್ಕೆ.ಶಾಮಸುಂದರ

ಆಳದನುಭವವನ್ನು

ಮಾತು

ಕೈ ಹಿಡಿದಾಗ

ಕಾವು ಬೆಳಕಾದಾಗ

ಬಂದ

ಕವನ

-ಕೆ. ಎಸ್‌. ನರಸಿಂಹಸ್ವಾಮಿ

ಕವಿತೆ !

ಹಾಗಂದರೇನು ? Spontaneous overflow of powerful feelings ಎನ್ನುತ್ತಾರೆ ಕವಿತೆಯ ಒಳಹೊಕ್ಕು ಬೆಳಕ ತಂದವರು. Emotions recollected in tranquility ಎನ್ನುತ್ತಾನೆ ಶೇಕ್ಸ್‌ಪಿಯರ್‌. ಅಂಥ ಪ್ರಖರ ಬೆಳಕನ್ನು, ಪ್ರಶಾಂತ ಭಾವಗಳನ್ನು ಹೊತ್ತ ಕವನಗಳನ್ನು ಇಲ್ಲಿಯ ತನಕ ಮತ್ತೆ ತರುವ ಪ್ರೀತಿ ಮತ್ತೆ ನಿಮ್ಮದಾಗಲಿ ! ಈ ದೀಪಾವಳಿಯಲ್ಲಿ ಕವಿತೆಯ ಪುಟ್ಟ ಪುಟ್ಟ ಹಣತೆಗಳು ಸೈಬರ್‌ ಮಾರ್ಗದಲ್ಲಿ ಬೆಳಕನ್ನು ಚೆಲ್ಲಲಿ.

**

ಈ ಬಾರಿಯ ದೀಪಾವಳಿಗೆ ನೀವು ಕವನ ಸ್ಪರ್ಧೆ ಯಾಕೆ ಏರ್ಪಡಿಸಬಾರದು ಎಂಬ ಸಲಹೆಯನ್ನು ಸ್ವತಃ ಕವಿಯಲ್ಲದ ಬೆಂಗಳೂರಿನ ಓದುಗ ಮಿತ್ರರೊಬ್ಬರು ನಿನ್ನೆ ರಾತ್ರಿ ನನಗೆ ಕೊಟ್ಟರು. ಇದ್ದಕ್ಕಿದ್ದಂತೆ ಈ ಸಲಹೆ ಎಲ್ಲಿಂದ ಬಂತೋ... ಎಂದು ಕೇಳಿದೆ. ‘ ನಿಮ್ಮ ವೆಬ್‌ ಸೈಟ್‌ ನೋಡುತ್ತಿದ್ದೆ , ಕವನ ಸಿಂಚನ ಸೆಕ್ಷನ್‌ ನೋಡಿದಾಗ ಅನ್ನಿಸಿತು ’ ಎಂದರು. ‘ ನಿಮ್ಮ ಅಂತರ್‌ಜಾಲ ತಾಣದಲ್ಲಿ ಆಗಾಗ್ಗೆ ಕವಿತೆಗಳು ಪ್ರಕಟವಾಗುತ್ತಲೇ ಇರುವುದರಿಂದ ಓದುಗರು ಕವಿತೆ ಬರೆಯುವುದನ್ನು, ಓದುವುದನ್ನೂ ಇಷ್ಟಪಡುತ್ತಾರೆ. ಹಿತವಾದ, ಮಧುರವಾದ ಮತ್ತು ಸೃಜನಶೀಲ ಸ್ಪರ್ಧೆಯಾಂದು ಆಗಲಿ , ಹೇಗಿದ್ದರೂ ದೀಪಾವಳಿ ಬರುತ್ತಿದೆ ತಾನೆ’ ಎಂಬ ಸಮಜಾಯಿಷಿಯನ್ನೂ ಅವರು ಮುಂದಿಟ್ಟರು.

**

ಕತೆ, ಕವನ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುವ ಪರಿಪಾಠ ಭಾಷಾ ಪತ್ರಿಕೋದ್ಯಮದಲ್ಲಿ ಹುಲುಸಾಗಿ ಬೆಳೆದು ಬಂದಿದೆ. ವಿಶೇಷವಾಗಿ ಮರಾಠಿ, ಹಿಂದಿ, ತೆಲುಗು ಮತ್ತು ಕನ್ನಡದಲ್ಲಿ ಇದು ಪರಂಪರೆಯೂ ಹೌದು. ಆದರೆ, ಅಂತರ್‌ಜಾಲ ತಾಣದಲ್ಲಿ ಇಂಥ ಉಮೇದನ್ನು ನಾನಂತೂ ಕಂಡಿಲ್ಲ. ಹೊಸಹೊಸ ಪ್ರಯೋಗಗಳನ್ನು ಕೈಗೆತ್ತಿಕೊಳ್ಳಲು ಇವತ್ತಿನ ಜಾಗತಿಕ ಮಾರುಕಟ್ಟೆ-ಮನೋಭಾವ ಉತ್ಸಾಹಿಗಳಿಗೆ ಬೆಂಬಲ ಕೊಡುತ್ತಿಲ್ಲ. ಇರಲಿ. ಹೊಸ ಮಾಧ್ಯಮದಲ್ಲಿ ನಾವೇಕೆ ಅಂಥ ಪ್ರಯತ್ನ ಮಾಡಬಾರದು ಎಂಬ ಆಲೋಚನೆಗೆ ಇವತ್ತು ನಾನೂ ಪಕ್ಕಾದೆ. ಕವಿಗಳಿಗೆ (Common gender) ಆದರದ ಆಹ್ವಾನ :

ನೀವು ಮಾಡಬೇಕಾದುದಿಷ್ಟು :

ನೀವು ಮನಸಾಗಿ, ಮನಸ್ಸಿಟ್ಟು ಬರೆದ ಕವಿತೆಯನ್ನು ಈ ಸ್ಪರ್ಧೆಗೆ ಕಳಿಸಿಕೊಡಬೇಕು. ದೀಪಾವಳಿ ಹಬ್ಬ ನವೆಂಬರ್‌ 3 ರಿಂದ 5 ರವರೆಗೆ ಇರುತ್ತದೆ. ಹಾಗಾಗಿ ನಿಮ್ಮ ಕವನ ನಾಲ್ಕು ದಿನ ಮುಂಚೆ , ಅಂದರೆ ಅಕ್ಟೋಬರ್‌ 30ರ ಒಳಗೆ ನಮಗೆ ತಲುಪಲಿ.

 • ಕವಿತೆ ನಮ್ಮ ಅಂತರಜಾಲ ತಾಣದಲ್ಲಿ ಈಗಾಗಲೇ ಪ್ರಕಟವಾಗಿರಬಾರದು.
 • ಅನುವಾದಿತ ಕವನಗಳಿಗೆ ಪ್ರವೇಶವಿಲ್ಲ.
 • ಕವಿತೆಯನ್ನು ಬರಹ ಅಥವಾ ಶ್ರೀಲಿಪಿ ತಂತ್ರಾಂಶದಲ್ಲಿ ಬರೆದು ಇ-ಮೇಲ್‌ ಅಟಾಚ್‌ಮೆಂಟ್‌ ಮೂಲಕ ರವಾನಿಸಬೇಕು.
 • ಅಂಚೆಯ ಮೂಲಕವೂ ಕಳಿಸಬಹುದು.
 • ನಿಮ್ಮ ಹೆಸರು, ವಿಳಾಸ , ಉದ್ಯೋಗವನ್ನು ಪತ್ರದಲ್ಲಿ ನಮೂದಿಸಬೇಕು. ನಿಮ್ಮ ಇತ್ತೀಚಿನ ಭಾವ ಚಿತ್ರ ಲಗತ್ತಿಸಲು ಮರೆಯದಿರಿ.
 • ಪರಿಣತ ತೀರ್ಪುಗಾರ ಬಳಗವು ಸ್ಪರ್ಧಾತ್ಮಕ ಕವಿತೆಗಳನ್ನು ಪರಿಶೀಲಿಸುವುದು.
 • ಅತ್ಯುತ್ತಮವಾದ ಮೊದಲ ಮೂರು ಕವಿತೆಗಳಿಗೆ ಮೊದಲ ಮೂರು ಪುರಸ್ಕಾರ.
 • ಪುರಸ್ಕೃತ ಕವಿತೆಗಳ ಜೊತೆಗೆ ತೀರ್ಪುಗಾರರು ಮೆಚ್ಚಿದ ಕವಿತೆಗಳನ್ನು ಯಥಾವಕಾಶ ನಮ್ಮ ಅಂತರ್‌ಜಾಲದಲ್ಲಿ ಪ್ರಕಟಿಸಲಾಗುವುದು.
 • ಸ್ಪರ್ಧೆಗೆ ಬಂದ ಎಲ್ಲ ಕವಿತೆಗಳ ಕುರಿತು ಪರಿಣತರಿಂದ ಸಿಂಹಾವಲೋಕನ.
 • ಮೊದಲ ಪುರಸ್ಕಾರ ಪಡೆದ ಕವಿತೆಯ ವಸ್ತುನಿಷ್ಠ ವಿಮರ್ಶೆ.

ಹೆಚ್ಚಿನ ವಿವರಗಳಿಗೆ ನಿರೀಕ್ಷಿಸಿ

Thank you for choosing Thatskannada.com

shami.sk@greynium.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more