ಚಿತ್ರ ನಟಿ ರಮ್ಯಾಳ ಜನ್ಮ ರಹಸ್ಯ

Ramyaಕನ್ನಡ ಚಿತ್ರನಟಿ ರಮ್ಯಾಗೂ ವಿವಾದಗಳಿಗೂ ಬಿಟ್ಟೂಬಿಡದ ಸಂಬಂಧ. ರಕ್ಷಿತಾ ಜೊತೆ ಕಚ್ಚಾಡಿದ್ದಾಯಿತು, ನಾನಾ ನಿರ್ಮಾಪಕ, ನಿರ್ದೇಶಕರಿಗೆ ಎಸ್ ನೋ, ಎಸ್ ನೋ ಹೇಳುತ್ತಾ ನೀರು ಕುಡಿಸಿದ್ದೂ ಆಯಿತು. ಈ ವಿವಾದಗಳು ರಮ್ಯಾ ತಾನಾಗೇ ಮೈಮೇಲೆ ಎಳೆದುಕೊಂಡಿದ್ದಾದರೆ, ಈಗ ವಕ್ಕರಿಸಿರುವುದು ಬಯಸದೇ ಬಂದದ್ದಾಗಿದೆ. ಈ ವಿವಾದವನ್ನು 'ಡಿಪ್' ಮಾಡುತ್ತಾರೋ, ಅಥವಾ ಎಂದಿನಂತೆ 'ದಿವ್ಯ' ನಿರ್ಲಕ್ಷ ವಹಿಸುತ್ತಾರೋ ಕಾದು ನೋಡಬೇಕು.

***

ವಿಷಯ ಸ್ಫೋಟಕ. ವಿಷಯ ಸೆನ್ಸಿಟಿವ್ ಕೂಡ. ಕನ್ನಡದ ಖ್ಯಾತ ನಟಿ ಮತ್ತು ಮುದ್ದು ನಟಿ ರಮ್ಯಾ ಈ ಬರಹದ ಕೇಂದ್ರ ಬಿಂದು. ಆದರೆ ಇಡೀ ಕಥಾನಕ ತಿರುವುಗಳಿಗೆ, ಏಳು ಬೀಳುಗಳಿಗೆ, ಇವತ್ತಿನ ಸ್ಥಿತಿಗತಿಗಳಿಗೆ ಇವ್ಯಾವುದಕ್ಕೂ ರಮ್ಯಾ ಜವಾಬ್ದಾರಳಲ್ಲ.

ಇವತ್ತಿಗೂ ರಮ್ಯಾ ಅಧಿಕೃತವಾಗಿ ವಾಸಿಸುವುದು ವೆಸ್ಟ್ ಎಂಡ್ ಹೊಟೇಲಿನಲ್ಲೇ. ಖ್ಯಾತ ಉದ್ಯಮಿ ಹಾಗೂ ಎಸ್.ಎಂ.ಕೃಷ್ಣ ಅವರ ಆತ್ಮೀಯರಾದ ಆರ್.ಟಿ.ನಾರಾಯಣ್ ರನ್ನು ರಮ್ಯಾ ಸಾಕು ತಂದೆ ಅಂತಲೇ ಭಾವಿಸುತ್ತಾಳೆ. ಪ್ರೀತಿಯಿಂದ 'ಗುಂಡಪ್ಪ' ಅಂತ ಕರೆಯುತ್ತಾಳೆ. ಸಿನಿಮಾ ಡೇಟ್ಸು, ಸಂಭಾವನೆ ಇತ್ಯಾದಿಗಳನ್ನು ಬಿಟ್ಟರೆ ರಮ್ಯಾಳ ಉಳಿದ ಕುಶಲೋಪರಿಯನ್ನು ನೋಡುವವರು ಆರ್.ಟಿ.ನಾರಾಯಣ್ ಅವರೇ. ರಮ್ಯಾಳ ಮನೆ ಎಲ್ಲಿದೆ? ಈ ಪ್ರಶ್ನೆಗೆ ಕೆಲವೊಮ್ಮೆ ಸ್ವತಃ ರಮ್ಯಾ ಪತ್ರಕರ್ತರಿಗೆ ಉತ್ತರ ಕೊಟ್ಟಿದ್ದಾಳೆ. ತನ್ನ ಸದಾಶಿವನಗರದ ಮನೆಗೆ ಕರೆದೊಯ್ದು 'ಪಾರ್ಟಿ'ಗಳನ್ನು ಕೊಟ್ಟಿದ್ದಾಳೆ. ಬರ್ತ್ ಡೇ ಸಂದರ್ಭಗಳಲ್ಲಿ ಪರಿಶೀಲಿಸಿ ನೋಡಿದರೆ ರಮ್ಯಾಳ ಸದಾಶಿವನಗರದ ಮನೆಯಲ್ಲಿರುವವರು ಆಕೆಯ ತಾಯಿ ರಂಜಿತಾ.

ಎಂಥ ಹುಡುಗಿ ? : ರಂಜಿತಾ ಅಲಿಯಾಸ್ ಸುನಂದ ಆಕೆಯ ಹೆಸರು. ಆಕೆಯ ಗಂಡ ಅಂತ ಹೇಳಿಕೊಳ್ಳುತ್ತಿರುವವರ ಹೆಸರು, ಅಂದರೆ ರಮ್ಯಾಳ ತಂದೆ ಅಂತ ಹೇಳಿಕೊಳ್ಳುತ್ತಿರುವವರ, ಹಾಗಂತ ಬೆಂಗಳೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿರುವವರ ಹೆಸರು ವೆಂಕಟೇಶ್ ಬಾಬು. ನಿಮಗೇ ಗೊತ್ತಿರುವಂತೆ ರಮ್ಯಾಳನ್ನು ಸಿನಿಮಾ ಇಂಡಸ್ಟ್ರಿಗೆ ತಂದವರು ರಾಜ್ ಕುಮಾರ್ ಅವರ ಮಡದಿ ಪಾರ್ವತಮ್ಮ. ದಿವ್ಯಾ ಎಂಬುದು ರಮ್ಯಾಳ ಮೂದಲಿನ ಹೆಸರು.

ಚಿತ್ರರಂಗದಲ್ಲಿ ಅನೇಕ ಸಾಧನೆಗಳು, ಗೆಲುವುಗಳು ಮತ್ತು ಕಾಂಟ್ರೋವರ್ಸಿಗಳು ಎಲ್ಲವನ್ನೂ ಮಾಡಿಕೊಂಡ ಹುಡುಗಿ ರಮ್ಯಾ. ಅಪ್ಪಿತಪ್ಪಿ ಕೂಡ ಚಾರಿತ್ರ್ಯದ ವಿಷಯದಲ್ಲಿ ಹೆಸರು ಕೆಡಿಸಿಕೊಂಡವಳಲ್ಲ. ಒಮ್ಮೆ ಸುದೀಪ್ ಜೊತೆಯಲ್ಲಿ ವಿದೇಶದಲ್ಲಿ shoot ಮಾಡುವಾಗ ಕೊರಳಪಟ್ಟಿ ಹಿಡಿದು ಜಗಳವಾಡಿದ್ದಳು. ಅದೇ ಸುದೀಪ ಜೊತೆಗೆ 'ಮುಸ್ಸಂಜೆ ಮಾತು' ಚಿತ್ರದಲ್ಲಿ ತೆಪ್ಪಗೆ ನಟಿಸಿದಳು. ಕಾಶ್ಮೀರದಲ್ಲಿ ಷೂಟಿಂಗಿಗೆ ಹೋದಾಗ ಪ್ರೊಡ್ಯೂಸರ್ ಗೆ ದಿನವಿಡೀ ಅಲೆದರೂ ಅನುಮತಿ ಸಿಕ್ಕಿರಲಿಲ್ಲ. 'ಅದೇನು ಮಹಾ'? ಅಂದವಳೇ ರಮ್ಯಾ ಅರ್ಧ ಗಂಟೆಯಲ್ಲಿ ಅನುಮತಿ ಕೊಡಿಸಿ ಸುಸೂತ್ರವಾಗಿ ಸಿನಿಮಾ ಚಿತ್ರೀಕರಣ ನಡೆಯುವಂತೆ ನೋಡಿಕೊಂಡರು.

ಯಾರ ಮಗಳಾದರೇನು ? : ಇವತ್ತಲ್ಲ ನಾಳೆ, ನಾನು ರಾಜಕೀಯ ರಂಗಕ್ಕೆ ಬರುವವಳೇ, ಮುಖ್ಯಮಂತ್ರಿಯಾಗುವವಳೇ ಅಂತ ತಮಿಳು ಪತ್ರಿಕೆಗಳಿಗೆ ಸಂದರ್ಶನ ಕೊಟ್ಟು ಬಾಂಬು ಸಿಡಿಸಿದ್ದ ರಮ್ಯಾಳ ಬಗ್ಗೆ "ಈಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರ ಮಗಳಂತೆ" ಎಂಬ ಮಾತು ಹುಟ್ಟಿಕೊಂಡಿತ್ತು. ಅದೂ ಅಲ್ಲ, "ಈಕೆ ಅವರ ತಮ್ಮನ ಮಗಳಂತೆ" ಎಂಬ ಮಾತೂ ಕೇಳಿ ಬಂದಿತ್ತು. ಅತ್ಯಂತ ಸೂಕ್ಷ್ಮ ಮನಸ್ಸಿನ, ಸುಶಿಕ್ಷಿತ ನಟಿ ಎನ್ನಿಸಿಕೊಂಡ ರಮ್ಯಾ 'ಮೀರಾ ಮಧವ ರಾಘವ' ಷೂಟಿಂಗ್ ಸಂದರ್ಭದಲ್ಲಿ ಟಿ.ಎನ್.ಸೀತಾರಾಮ್ ಕೊಟ್ಟ ಕಾಟವಿತ್ತಲ್ಲ? ಅದು ಅಷ್ಟಿಷ್ಟಲ್ಲ. ಅದೇನೇ ಇರಲಿ, ಅಭಿನೇತ್ರಿಯಾಗಿ ರಮ್ಯಾ ನಟನೆಯ ಬಗ್ಗೆ ದೂಸರಾ ಮಾತಿಲ್ಲ. ಅಂತೆಯೇ ಯಾರ ಮಗಳಾದರೇನಂತೆ ಎಂಬುದು ಕೂಡ 'ಪತ್ರಿಕೆ'ಯ ನಿಲುವಾಗಿತ್ತು. ಒಂದು ವಿವಾದ ನ್ಯಾಯಾಲಯದ ಮೆಟ್ಟಿಲೇರದೆ ಹೋಗಿದ್ದಿದ್ದರೆ ಅಸಲು ಇಂಥದೊಂದು ವರದಿ ಪ್ರಕಟವಾಗುವ ಸಂದರ್ಭವೇ ಬರುತ್ತಿರಲಿಲ್ಲ.

ಇಷ್ಟಾಗಿ ನೀವು ಪರಿಚಯ ಮಾಡಿಕೊಳ್ಳಬೇಕಾಗಿರುವುದು ಮೂದಲು, ಇವರನ್ನ. ಇವರ ಹೆಸರು ವೆಂಕಟೇಶಬಾಬು ಸದ್ಯಕ್ಕೆ ಜೆ.ಪಿ ನಗರದ ಏಳನೇ ಹಂತದ ಗೌರವ ನಗರದ ನಿವಾಸಿ. ಇವರ ತಂದೆಯ ಹೆಸರು ಬಿ. ಚಕ್ರಧರರಾವ್. ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆಯ (ನಂ.ಎಂ.ಸಿ.282/2008) ಸಾರಾಂಶವನ್ನು ಹೇಳಿಬಿಡುತ್ತೇನೆ ಕೇಳಿ.

ಬೋರೇಗೌಡರ ಮಗಳು : ಗೋಪಾಲಕೃಷ್ಣ ಟೆಕ್ಸ್ ಟೈಲ್ಸ್‌ನಲ್ಲಿ ಕೆಲ ಮಾಡುತ್ತಿದ್ದ ಚಕ್ರಧರರಾವ್ ಅವರ ಮಗನಾದ ನಾನು ಮೂದಲು ಸುಬ್ರಮಣ್ಯಪುರದ ನಿವಾಸಿಯಾಗಿದ್ದೆ. ನನ್ನ ವಿದ್ಯಾಭ್ಯಾಸ ಮುಗಿದ ಮೇಲೆ ನಾನು ಶಿವರಾಂ ಎಂಬ ಗೆಳೆಯನೊಬ್ಬನ ಜೊತೆ ಸೇರಿಕೊಂಡು ಟ್ರಾವೆಲ್ಸ್ ಬಿಜಿನೆಸ್ ಆರಂಭಿಸಿದೆ. ನಾನು ದಿನನಿತ್ಯ ತ್ಯಾಗರಾಜನಗರದ ಮೂಲಕ ಗಾಂಧಿ ಬಜಾರ್ ಗೆ ಹೋಗುತ್ತಿದ್ದೆ. ಹೋಗುವ ದಾರಿಯಲ್ಲಿ ನಿತ್ಯ ಪಟಾಲಮ್ಮನ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಅವಾಗ ನನ್ನ ವಯಸ್ಸು ಸುಮಾರು 23 ವರ್ಷವಾಗಿದ್ದು. ನಾನು ಆಗಲೇ (1979ರಲ್ಲಿ) ಜಯನಗರದ ಪಾರ್ವತಿ ಎಂಬುವವರನ್ನು ಮದುವೆಯಾಗಿದ್ದೆ. ಆದರೆ ಪಟಾಲಮ್ಮನ ದೇವಸ್ಥಾನದಲ್ಲಿ ನನಗೆ ಸುನಂದ ಎಂಬುವವರು ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತು. ಆಗ ಸುನಂದ ಅವರು ತಮ್ಮ ಸೋದರಿ (ವಿದ್ಯಾಭ್ಯಾಸ ಮಾಡುತ್ತಿದ್ದ)ಯರೊಂದಿಗೆ ತ್ಯಾಗರಾಜನಗರದಲ್ಲಿ ಮನೆ ಮಾಡಿಕೊಂಡಿದ್ದರು. ಸುನಂದ ಅವರ ತಂದೆ ಬೋರೇಗೌಡ ಎಂಬುವವರು ಮಂಡ್ಯದವರಾಗಿದ್ದು ಕೆಲ ಕಾಲ ಮುನಿಸಿಪಲ್ ಛೇರ್ಮನ್ ಆಗಿದ್ದರು.

ಮದುವೆಯಾದೆವು : ನನಗೆ ಈಗಾಗಲೇ ಪಾರ್ವತಿ ಎಂಬುವವರೊಂದಿಗೆ ಮದುವೆಯಾಗಿರುವುದಾಗಿ ನಾನು ಹೇಳಿದೆ. ಆದರ ಸುನಂದ ನನ್ನಿಂದ ಬೇರ್ಪಡಲು ಸಿದ್ಧರಿರಲಿಲ್ಲ. ನಾವು ಒಟ್ಟಿಗೆ ಸಿನಿಮಾಗಳಿಗೆ, ಪಿಕ್‌ನಿಕ್‌ಗಳಿಗೆ ಹೋಗುತ್ತಿದ್ದೆವು. ಒಬ್ಬರನ್ನೊಬ್ಬರು ಬಿಟ್ಟು ಹೋಗಲು ಸಾಧ್ಯವಿಲ್ಲ ಅಂತ ಇಬ್ಬರಿಗೂ ಅನ್ನಿಸಿದಾಗ ನಾನು ನನ್ನ ಮೂದಲನೇ ಪತ್ನಿ ಪಾರ್ವತಿಗೆ ಈ ವಿಷಯ ತಿಳಿಸಿ ಆಕೆಯ ಒಪ್ಪಿಗೆ ಕೋರಿದೆ. ಅದೇ ವೇಳೆಗೆ ಸುನಂದ ತಮ್ಮ ಮನೆ ಬಿಟ್ಟು ಹೊರಬಂದರು. ನಾನು ಆಕೆಯನ್ನು ಕರೆದೊಯ್ದು ನನ್ನ ಪತ್ನಿಗೆ ಹಾಗೂ ಕುಟುಂಬದ ಇತರೆ ಸದಸ್ಯರಿಗೆ ಸುನಂದಾರನ್ನು ಪರಿಚಯಿಸಿದೆ. ನಾವಿಬ್ಬರೂ ದಿನಾಂಕ 22 ಜೂನ್ 1981ರಂದು ಬೆಂಗಳೂರಿನ ಬನ್ನೇರುಘಟ್ಟದ ಚಂಪಕಧಾಮ ದೇವಸ್ಥಾನದಲ್ಲಿ ಹಿಂದೂ ವಿವಾಹ ಪದ್ಧತಿಯ ಅನುಸಾರ ನೆಂಟರಿಷ್ಟರ ಸಮ್ಮುಖದಲ್ಲಿ ಮದುವೆಯಾದೆವು.

"ಆ ನಂತರ ದಿನಾಂಕ 29 ಜೂನ್ 1981ರಂದು ನಾನು ಸಾರಕ್ಕಿ ಬಡಾವಣೆಯಲ್ಲಿ ಚೆಂಗಮರಾಜು ಎನ್ನುವವರ ಮನೆಯನ್ನು ಬಾಡಿಗೆ ಪಡೆದು, ಅವರ ಮನೆಯ ಮೇಲ್ಮಹಡಿಯಲ್ಲಿ ನಾನು ಮತ್ತು ಸುನಂದಾ (ಈಗ ರಂಜಿತಾ ಎಂದು ಹೆಸರು ಬದಲಾಯಿಸಲಾಗಿತ್ತು) ಸಂಸಾರ ಹೂಡಿದೆವು. ಮನೆ ಬಾಡಿಗೆಯ ಒಪ್ಪಂದ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನಾವು ಆ ಮನೆಯಲ್ಲಿ ಸಂಸಾರ ಮಾಡುತ್ತಿದ್ದಾಗ ನನ್ನ ಪತ್ನಿ ರಂಜಿತಾಳನ್ನು ಭೇಟಿಯಾಗಲು ಆಕೆಯ ಆತ್ಮೀಯ ಗೆಳತಿ ಶೈಲಜಾ ಎನ್ನುವವರು ಮನೆಗೆ ಬರುತ್ತಿದ್ದರು. ಈ ಮಧ್ಯೆ ನನ್ನ ಪತ್ನಿ ರಂಜಿತಾ ಗರ್ಭವತಿಯಾಗಿ ಸದಾಶಿವನಗರದ ಐಡಿಯಲ್ ನರ್ಸಿಂಗ್ ಹೋಮ್‌ನಲ್ಲಿ ಆಕೆಗೆ 29 ನವೆಂಬರ್ 1982ರಲ್ಲಿ ಹೆರಿಗೆಯಾಯಿತು. (ಚಿತ್ರ ನಟಿ ರಮ್ಯಾಳ ಬರ್ತಡೇ ಕೂಡ ಅದೇ ಆಗಿದೆ, ಆದರೆ ಇಸವಿ 1981 ಎಂದು ಪ್ರಕಟಗೊಂಡಿದೆ). ರಂಜಿತಾ ಮತ್ತು ನಾನು ಮಗುವಿಗೆ ದಿವ್ಯಾ ಅಂತ ಹೆಸರಿಟ್ಟೆವಾದರೂ ಮಗುವನ್ನೂ ನಾವು ಪ್ರೀತಿಯಿಂದ 'ಡಿಪ್ಪಿ' ಎಂದು ಕರೆಯತೊಡಗಿದೆವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+